ಸಣ್ಣ ವ್ಯಾಪಾರಿಗಳ ಪರ ನಿಂತ ದರ್ಶನ್ ಪತ್ನಿ: ಪಿಜ್ಜಾ, ಬರ್ಗರ್ ಬಿಟ್ಟು ಕಿರಾಣಿ ಅಂಗಡಿಗೆ ಹೋಗಿ ಎಂದ ವಿಜಯಲಕ್ಷ್ಮೀ
ಕೊರೊನಾ ಮಹಾಮಾರಿಯ ಹಾವಳಿಯಿಂದ ಎಲ್ಲಾ ಉದ್ಯಮಗಳು ಸಂಕಷ್ಟದಲ್ಲಿವೆ. ಅದರಲ್ಲೂ ಸಣ್ಣ-ಪುಟ್ಟ ಉದ್ಯಮಗಳು ಬದುಕುಳಿಯುವುದೇ ಕಷ್ಟವಾಗಿದೆ. ಲಾಕ್ ಡೌನ್ ನಿಂದ ಸಣ್ಣ ವ್ಯಾಪಾರಿಗಳ ಬದುಕು ಸಂಕಷ್ಟದಲ್ಲಿದೆ. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಈಗ ಸಣ್ಣ ವ್ಯಾಪಾರಿಗಳ ಪರ ನಿಂತಿದ್ದಾರೆ.
Recommended Video
ಕಿರಾಣಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪಿಜ್ಜಾ, ಬರ್ಗರ್ ಬಿಟ್ಟು ಕಿರಣಿ ಅಂಗಳಿಗೆ ಹೋಗಿ ವ್ಯಾಪಾರ ಮಾಡಿ ಅವರ ಬದುಕಿಗೂ ಸಹಾಯವಾಗುತ್ತೆ ಎಂದು ಹೇಳಿದ್ದಾರೆ. ಈ ಬಗ್ಗೆ ವಿಜಯಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಮುಂದೆ ಓದಿ...

ಪಿಜ್ಜಾ, ಬರ್ಗರ್ ಬಿಡಿ ಕಿರಾಣಿ ಅಂಗಡಿಗೆ ಹೋಗಿ
"ಅಮೆಜಾನ್, ಪಿಜ್ಜಾ, ಕೆ ಎಫ್ ಸಿ, ಮ್ಯಾಕ್ ಡೊನಾಲ್ಡ್ ಹೇಗೋ ಬದುಕುತ್ತವೆ. ಆದರೆ ಸಣ್ಣ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕಿರಾಣಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿ. ಇದರಿಂದ ಅವರ ಬದುಕಿಗೂ ಸಹಾಯ ಆಗುತ್ತೆ" ದೀರ್ಘವಾದ ಟ್ವೀಟ್ ಮಾಡುವ ಮೂಲಕ ಸಣ್ಣ ವ್ಯಾಪಾರಿಗಳ ಪರ ನಿಂತಿದ್ದಾರೆ.

ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ದರ್ಶನ್ ದಂಪತಿ
ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀವ್ ಆಗಿದ್ದಾರೆ. ಆಗಾಗ ಉತ್ತಮವಾದ ವಿಚಾರಗಳನ್ನು ಶೇರ್ ಮಾಡುತ್ತಿರುತ್ತಾರೆ. ದರ್ಶನ್ ಮತ್ತು ವಿಜಯಲಕ್ಷ್ಮೀ ದಂಪತಿ ಇತ್ತೀಚಿಗಷ್ಟೆ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಮೇ 19 ದರ್ಶನ್ ಮತ್ತು ವಿಜಯಲಕ್ಷ್ಮೀ ದಾಂಪತ್ಯ ಜೀವನಕ್ಕೆ ಕಾಲಿಟ್ಟು 17 ವರ್ಷಗಳು ಪೂರೈಸಿದೆ. ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ.


Click it and Unblock the Notifications











