Darshan Birthday: ಪತಿ ಹುಟ್ಟುಹಬ್ಬಕ್ಕೆ ವಿಜಯಲಕ್ಷ್ಮಿ ವಿಶೇಷ ಫೋಟೊ ಹಂಚಿಕೊಂಡು ವಿಶ್ ಮಾಡಿದ್ದು ಹೀಗೆ

ಇಂದು ( ಫೆಬ್ರವರಿ 16 ) ಕನ್ನಡ ಚಲನಚಿತ್ರರಂಗದ ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ತಮ್ಮ 46ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಕೊರೊನಾ ಹಾಗೂ ಗೆಳೆಯ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ಕಾರಣದಿಂದಾಗಿ ಹುಟ್ಟುಹಬ್ಬ ಆಚರಣೆಯಿಂದ ಹಿಂದೆ ಸರಿದಿದ್ದ ದರ್ಶನ್ ಹುಟ್ಟುಹಬ್ಬವನ್ನು ಈ ಬಾರಿ ಅಭಿಮಾನಿಗಳು ಭರ್ಜರಿಯಾಗಿ ಆಚರಿಸುತ್ತಿದ್ದಾರೆ.

ಹುಟ್ಟುಹಬ್ಬದಂದು ಕಳೆದೆರಡು ವರ್ಷಗಳಲ್ಲಿ ತಮ್ಮ ಸೆಲೆಬ್ರಿಟಿಗಳಿಗೆ ಸಿಗದಿದ್ದ ದರ್ಶನ್ ಈ ಬಾರಿ ತಮ್ಮ ಮನೆಗೆ ಬಂದಿರುವ ಸಹಸ್ರಾರು ಅಭಿಮಾನಿಗಳನ್ನು ಖುದ್ದಾಗಿ ಭೇಟಿ ಮಾಡಿ ಕೈಕುಲುಕಿ ಶುಭಾಶಯಗಳನ್ನು ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಸಹ ದರ್ಶನ್ ತಮ್ಮ ಅಭಿಮಾನಿಗಳಿಗೆ ಕೇಕ್, ಹಾರ ಹಾಗೂ ಉಡುಗೊರೆ ತಂದು ದುಂದು ವೆಚ್ಚ ಮಾಡುವ ಬದಲು ದಿನಸಿ ಸಾಮಗ್ರಿಗಳನ್ನು ತನ್ನಿ ಎಂದು ತಿಳಿಸಿದ್ದು, ಅಭಿಮಾನಿಗಳು ದಾಸನ ಮಾತಿನಂತೆ ಮೂಟೆಗಟ್ಟಲೆ ದಿನಸಿ ಸಾಮಗ್ರಿಗಳನ್ನು ದರ್ಶನ್ ಮನೆಗೆ ತಲುಪಿಸಿದ್ದಾರೆ.

ಹೀಗೆ ಅಭಿಮಾನಿಗಳ ಜತೆ ಹುಟ್ಟುಹಬ್ಬದ ದಿನ ಕಳೆಯುತ್ತಿರುವ ದರ್ಶನ್ ಅವರಿಗೆ ಅಭಿಮಾನಿಗಳ ಪ್ರೀತಿಯ ಶುಭಾಶಯಗಳ ಜತೆಗೆ ಇಂಡಸ್ಟ್ರಿಯ ಹಲವು ಸ್ಟಾರ್‌ಗಳು, ಕಲಾವಿದರು, ನಿರ್ದೇಶಕರು ಹಾಗೂ ಪ್ರೊಡಕ್ಷನ್ ಹೌಸ್‌ಗಳೂ ಸಹ ಶುಭ ಕೋರಿದ್ದಾರೆ. ಜತೆಗೆ ದರ್ಶನ್ ನಟನೆಯ ಮುಂದಿನ ಪ್ರಾಜೆಕ್ಟ್‌ಗಳು ಯಾವುವು ಎಂಬದೂ ಸಹ ಬಹಿರಂಗೊಂಡಿವೆ. ಹೀಗೆ ಸ್ಯಾಂಡಲ್‌ವುಡ್ ದರ್ಶನ್ ಹುಟ್ಟುಹಬ್ಬದ ಅಂಗವಾಗಿ ಶುಭ ಕೋರಿದ್ದರೆ, ದರ್ಶನ್ ಮಡದಿ ವಿಜಯಲಕ್ಷ್ಮಿ ದರ್ಶನ್ ಸಹ ವಿಶೇಷ ಫೋಟೊ ಶೇರ್ ಮಾಡಿಕೊಳ್ಳುವ ಮೂಲಕ ಪತಿಗೆ ಶುಭ ಕೋರಿದ್ದಾರೆ.

ಪತಿ ಜತೆಗಿನ ಫೋಟೊ ಹಂಚಿಕೊಂಡ ವಿಜಯಲಕ್ಷ್ಮಿ ದರ್ಶನ್

ಪತಿ ಜತೆಗಿನ ಫೋಟೊ ಹಂಚಿಕೊಂಡ ವಿಜಯಲಕ್ಷ್ಮಿ ದರ್ಶನ್

ವಿಜಯಲಕ್ಷ್ಮಿ ದರ್ಶನ್ ತನ್ನ ಪತಿ ದರ್ಶನ್ ತೂಗುದೀಪ ತೋಳನ್ನು ತಬ್ಬಿ ಕುಳಿತು ನಗುಮೊಗದ ಪೋಸ್ ನೀಡಿರುವ ಫೋಟೊವನ್ನು ಹಂಚಿಕೊಂಡು ಪತಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಸದ್ಯ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜೋಡಿಯ ಈ ಕ್ಯೂಟ್ ಫೋಟೊಗೆ ಫಿದಾ ಆಗಿದ್ದಾರೆ.

ಮನೆ ಮುಂದೆ ಅಭಿಮಾನಿಗಳ ಸಾಗರ

ಮನೆ ಮುಂದೆ ಅಭಿಮಾನಿಗಳ ಸಾಗರ

ಇನ್ನು ದರ್ಶನ್ ಹುಟ್ಟುಹಬ್ಬದ ಅಂಗವಾಗಿ ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ದರ್ಶನ್ ಮನೆ ಮುಂದೆ ಜಮಾಯಿಸಿದ್ದಾರೆ. ನೆಚ್ಚಿನ ನಟನಿಗಾಗಿ ಭಿನ್ನ ವಿಭಿನ್ನ ಉಡುಗೊರೆಗಳನ್ನು ತಂದಿರುವ ಅಭಿಮಾನಿಗಳು ಜೈ ಡಿ ಬಾಸ್ ಎಂದು ಜೈಕಾರ ಕೂಗಿ ಸಂಭ್ರಮಿಸಿದ್ದಾರೆ. ಅತ್ತ ಮನೆಗೆ ಬಂದ ಅಭಿಮಾನಿಗಳಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಿರುವ ದರ್ಶನ್ ತನ್ನ ಸೆಲೆಬ್ರಿಟಿಗಳ ಅತಿಥಿ ಸತ್ಕಾರ ಮಾಡಿದ್ದಾರೆ. ನಿನ್ನೆ ರಾತ್ರಿ ಅನ್ನ ಸಾಂಬಾರ್ ಹಾಗೂ ಮೈಸೂರು ಪಾಕ್ ಸವಿದಿದ್ದ ದರ್ಶನ್ ಅಭಿಮಾನಿಗಳಿಗೆ ಇಂದು ಬೆಳಗ್ಗೆ ಪಲಾವ್ ಹಾಗೂ ಬಜ್ಜಿಯನ್ನು ತಿಂಡಿಯಾಗಿ ನೀಡಲಾಗಿದೆ.

ಕುತೂಹಲ ಮೂಡಿಸಿದ ತೆಲುಗು ಪ್ರೊಡಕ್ಷನ್ ಹೌಸ್ ಪೋಸ್ಟ್‌ಗಳು

ಕುತೂಹಲ ಮೂಡಿಸಿದ ತೆಲುಗು ಪ್ರೊಡಕ್ಷನ್ ಹೌಸ್ ಪೋಸ್ಟ್‌ಗಳು

ದರ್ಶನ್ ಹುಟ್ಟುಹಬ್ಬಕ್ಕೆ ಕನ್ನಡದ ಹಲವಾರು ಪ್ರೊಡಕ್ಷನ್ ಹೌಸ್‌ಗಳು ಶುಭ ಕೋರಿ ಟ್ವೀಟ್ ಮಾಡಿದ್ದು, ಇವುಗಳ ಜತೆಗೆ ತೆಲುಗಿನ ಎರಡು ಬಿಗ್ಗೆಸ್ಟ್ ಪ್ರೊಡಕ್ಷನ್ ಸಂಸ್ಥೆಗಳು ಹುಟ್ಟುಹಬ್ಬಕ್ಕಾಗಿ ಶುಭ ಕೋರಿರುವುದು ವಿಶೇಷವೆನಿಸಿದೆ. ಸರಿಲೇರು ನೀಕೆವ್ವರು ಸೇರಿದಂತೆ ಚಾಣಕ್ಯ, ಸೀತ, ಕಿರ್ರಾಕ್ ಪಾರ್ಟಿ ರೀತಿಯ ಹಲವು ತೆಲುಗಿನ ಸ್ಟಾರ್ ಚಿತ್ರಗಳಿಗೆ ಬಂಡವಾಳ ಹೂಡಿರುವ ಎ ಕೆ ಎಂಟರ್‌ಟೈನ್‌ಮೆಂಟ್ಸ್ ದರ್ಶನ್ ಹುಟ್ಟಿಹಬ್ಬದ ಅಂಗವಾಗಿ ಶುಭಾಶಯವನ್ನು ಕೋರಿದೆ. ಅಲ್ಲದೇ ಪವನ್ ಕಲ್ಯಾಣ್ ಸಿನಿ ಕೆರಿಯರ್‌ನ ಅತಿದೊಡ್ಡ ಹಿಟ್ ಚಿತ್ರವಾದ ಅತ್ತಾರಿಂಟಿಕಿ ದಾರೇದಿ ಸಿನಿಮಾಗೆ ಬಂಡವಾಳ ಹೂಡಿದ್ದ ನಿರ್ಮಾಪಕ ಬಿ ವಿ ಎಸ್ ಎನ್ ಪ್ರಸಾದ್ ಒಡೆತನದ ಶ್ರಿ ವೆಂಕಟೇಶ್ವರ ಸಿನಿ ಚಿತ್ರ ಪ್ರೊಡಕ್ಸನ್ ಹೌಸ್ ಸಹ ದರ್ಶನ್ ಹುಟ್ಟುಹಬ್ಬಕ್ಕೆ ಶುಭಕೋರಿದೆ.

More from Filmibeat

English summary
Vijayalakshmi Darshan wished her husband Darshan on his birthday by posting a special photo. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X