ರಮ್ಯಾ- ದರ್ಶನ್ ಫ್ಯಾನ್ಸ್ ವಾರ್; ವಿಜಯಲಕ್ಷ್ಮಿ ಮಾರ್ಮಿಕ ಪೋಸ್ಟ್

ನಟ ದರ್ಶನ್ ವಿರುದ್ಧ ನಟಿ, ಮಾಜಿ ಸಂಸದೆ ರಮ್ಯಾ ತಿರುಗಿಬಿದ್ದಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ಅರ್ಜಿ ಮೇಲ್ವಿಚಾರಣೆ ಆದೇಶವನ್ನು ಕಾಯ್ದಿರಿಸಿದೆ. ಈ ಸಂಬಂಧ ನಟಿ ರಮ್ಯಾ ಮಾಡಿದ್ದ ಪೋಸ್ಟ್‌ಗೆ ಪ್ರತಿಯಾಗಿ ದರ್ಶನ್ ಫ್ಯಾನ್ಸ್ ಕೆಟ್ಟದಾಗಿ ಆಕೆಗೆ ಮೆಸೇಜ್ ಮಾಡಿದ್ದರು. ಅದನ್ನು ರಮ್ಯಾ ಬಹಿರಂಗ ಪಡಿಸಿದ್ದರು. ರೇಣಕಾಸ್ವಾಮಿ ಮಾಡಿದ ಮೇಸೇಜ್‌ಗೂ ದರ್ಶನ್ ಅಭಿಮಾನಿಗಳ ಮೆಸೇಜ್‌ಗೂ ಯಾವುದೇ ವ್ಯತ್ಯಾಸ ಇಲ್ಲ ಎಂದಿದ್ದರು.

ಮಾಧ್ಯಮಗಳಿಗೂ ಪ್ರತಿಕ್ರಿಯಿಸಿ ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ಆಕ್ರೋಶ ಹೊರ ಹಾಕಿದ್ದರು. ಇದೆಲ್ಲರ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಕಿರುವ ಇನ್‌ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗುತ್ತಿದೆ. ಪರೋಕ್ಷವಾಗಿ ರಮ್ಯಾ ಅವರನ್ನು ಉದ್ದೇಶಿಸಿ ಈ ಕೋಟ್ ಹಾಕಿದ್ದಾರೆ ಎಂದು ಚರ್ಚೆ ಶುರುವಾಗಿದೆ. "ಮೂರ್ಖನನ್ನು ಅವನ ಮಾತಿನಿಂದ ಗುರುತಿಸಲಾಗುತ್ತದೆ.. ಅದೇ ರೀತಿ ಬುದ್ಧಿವಂತನನ್ನು ಮೌನದಿಂದ ಗುರುತಿಸಲಾಗುತ್ತದೆ" ಎಂದು ಬುದ್ಧನ ಮಾತನ್ನು ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮಾಡಿದ್ದಾರೆ.

Vijayalakshmi Darshan s Buddha Quote Post Sparks Debate Amid Ramya Darshan Fans Clash

ಕಳೆದ ಮೂರ್ನಾಲ್ಕು ದಿನಗಳಿಂದ ನಟಿ ರಮ್ಯಾ ಹಾಗೂ ನಟ ದರ್ಶನ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾ ವಾರ್ ನಡೀತಿದೆ. ನಟಿ ರಮ್ಯಾ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ನನ್ನನ್ನು ಯಾರು ಏನು ಮಾಡೋಕೆ ಆಗಲ್ಲ, ಹೆಣ್ಣಿಗೆ ಗೌರವ ಸಿಗದೇ ಇದ್ದಾಗ, ಈ ಕಿರುಕುಳ ನೀಡಿದಾಗ ಸುಮ್ಮನಿರುವುದು ಸರಿಯಲ್ಲ. ನಾನಂತೂ ಸುಮ್ಮನಿರಲ್ಲ ಎಂದು ರಮ್ಯಾ ಕೆಂಡ ಕಾರಿದ್ದಾರೆ.

ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ನಟಿ ರಮ್ಯಾ ಮೊದಲಿನಿಂದಲೂ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಹೈಕೋರ್ಟ್ ಆರೋಪಿಗಳಿಗೆ ಜಾಮೀನು ನೀಡಿರುವ ಬಗ್ಗೆ ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಈ ಕುರಿತು ಪ್ರಕಟವಾಗಿದ್ದ ಆರ್ಟಿಕಲ್ ಹಂಚಿಕೊಂಡು "ಭಾರತದಲ್ಲಿ ಜನಸಾಮಾನ್ಯರಿಗೆ ಸುಪ್ರೀಂ ಕೋರ್ಟ್‌ ಭರವಸೆಯ ಬೆಳಕು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಇದೆ" ಎಂದು ರಮ್ಯಾ ಪೋಸ್ಟ್ ಮಾಡಿದ್ದರು.

Vijayalakshmi Darshan s Buddha Quote Post Sparks Debate Amid Ramya Darshan Fans Clash

ರಮ್ಯಾ ಪೋಸ್ಟ್‌ ಬೆನ್ನಲ್ಲೇ ಆಕೆಯನ್ನು ಟ್ರೋಲ್ ಮಾಡಲಾಯಿತು. ನೇರವಾಗಿ ಆಕೆಗೆ ಕೆಟ್ಟ ಕೊಳಕ ಮೆಸೇಜ್‌ಗಳನ್ನು ಕೆಲವರು ಕಳುಹಿಸಿದ್ದಾರೆ. ಈ ಬಗ್ಗೆ ರಮ್ಯಾ ಪ್ರತಿಕ್ರಿಯಿಸಿ "ಎಲ್ಲಾ ಡಿಬಾಸ್ ಫ್ಯಾನ್ಸ್‌ಗೆ - ನನ್ನ ಇನ್ಸ್ಟಾಗ್ರಾಮ್‌ಗೆ ಸ್ವಾಗತ. ರೇಣುಕಾಸ್ವಾಮಿ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಅನ್ನೋದಕ್ಕೆ ನಿಮ್ಮ ಕಾಮೆಂಟ್‌ಗಳೇ ಸಾಕ್ಷಿ" ಎಂದು ಪೋಸ್ಟ್ ಮಾಡಿದ್ದರು. ಅಲ್ಲಿಗೆ ಟ್ರೋಲ್ ನಿಲ್ಲಲಿಲ್ಲ. ಹಾಗಾಗಿ ತಮಗೆ ಬಂದಿದ್ದ ಅಂತಹ ಕೆಟ್ಟ ಕಾಮೆಂಟ್‌ಗಳನ್ನು ಸ್ಕ್ರೀನ್‌ ಶಾಟ್ ಸಮೇತ ಪ್ರಪಂಚದ ಮುಂದಿಟ್ಟಿದ್ದರು.

ನಟಿ ರಮ್ಯಾ ಇತ್ತೀಚೆಗೆ ಟಿವಿ9 ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದರು. ಈ ವೇಳೆ ವಿಜಯಲಕ್ಷ್ಮಿ ನನಗೆ ಒಳ್ಳೆ ಸ್ನೇಹಿತೆ ಎಂದು ಕೂಡ ಹೇಳಿದ್ದರು. "ವಿಜಯಲಕ್ಷ್ಮಿ ಅಂದರೆ, ನನಗೆ ಬಲು ಇಷ್ಟ. ಆದರೆ, ನನಗೆ ಸತ್ಯವೇ ಮುಖ್ಯ. ನಾನು ನ್ಯಾಯದ ಪರವಾಗಿಯೇ ನಿಲ್ಲುವವಳು" ಎಂದು ಖಡಕ್ ಆಗಿಯೇ ಪ್ರತಿಕ್ರಿಯಿಸಿದ್ದರು. 'ದತ್ತ' ಚಿತ್ರದಲ್ಲಿ ನಟ ದರ್ಶನ್ ಹಾಗೂ ರಮ್ಯಾ ನಾಯಕ- ನಾಯಕಿಯಾಗಿ ನಟಿಸಿದ್ದರು. 'ಅರಸು' ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ಮಿಂಚಿದ್ದರು. ರಮ್ಯಾ ಜೊತೆ ಮದುವೆ ಆಗುವ ಸನ್ನಿವೇಶದಲ್ಲಿ ಕಾಣಿಸಿಕೊಂಡಿದ್ದರು.

ಇನ್ನು ರಮ್ಯಾ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾ ಸಮರದ ನಡುವೆ ನಟಿ ರಕ್ಷಿತಾ ಪ್ರೇಮ್ ಪೋಸ್ಟ್ ವೈರಲ್ ಆಗ್ತಿದೆ. ರೇಣುಕಾಸ್ವಾಮಿ ಪ್ರಕರಣ ಸಂಬಂಧ ಮೊದಲಿನಿಂದಲೂ ದರ್ಶನ್ ಪರ ರಕ್ಷಿತಾ ನಿಂತಿದ್ದಾರೆ. ಇದೀಗ ದರ್ಶನ್ ಅಭಿಮಾನಿಗಳಿಗೆ ರಕ್ಷಿತಾ ಕಿವಿಮಾತು ಹೇಳಿದಂತೆ ಕಾಣ್ತಿದೆ. "ನಿಮಗೆ ವ್ಯಕ್ತಿಗಳ ಮಾನಸಿಕ ಆರೋಗ್ಯ ನೋಡಲು ಸಾಧ್ಯವಿಲ್ಲ. ಯಾವಾಗಲೂ ದಯೆ ಇರಲಿ" ಎಂದು ಇಂಗ್ಲೀಷ್ ಕೋಟ್ ಇನ್‌ಸ್ಟಾಗ್ರಾಮ್‌ನಲ್ಲಿ ರಕ್ಷಿತಾ ಹಂಚಿಕೊಂಡಿದ್ದಾರೆ. "ನಾನು ನಿಜವಾಗಿಯೂ ಏನು ವೈರಲ್ ಆಗಬೇಕೆಂದು ಬಯಸುತ್ತೇನೆ ಎಂದು ನಿಮಗೆ ತಿಳಿದಿದ್ಯಾ? ಮೂಲಭೂತ ಮಾನವೀಯ ಸಭ್ಯತೆ" ಎಂದು ಮತ್ತೊಂದು ಕೋಟ್ ಪೋಸ್ಟ್ ಮಾಡಿ

More from Filmibeat

English summary
Ramya and Darshan fans war, vijayalakshmi Darshan cryptic post viral
Read more about: darshan ramya fans
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X