ವಿಜಯಲಕ್ಷ್ಮಿ ದರ್ಶನ್ ಇನ್‌ಸ್ಟಾಗ್ರಾಮ್ ಅಕೌಂಟ್ ಮತ್ತೆ ಆಕ್ಟೀವ್ ಆಯ್ತು.. ಆದ್ರೆ..
ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಸಿಲುಕಿದ್ದು ಭಾರೀ ಆರೋಪಗಳು ಕೇಳಿಬಂದಿದೆ. ರೇಣುಕಾಸ್ವಾಮಿ ಕಿಡ್ನ್ಯಾಪ್ & ಹತ್ಯೆ ಪ್ರಕರಣದಲ್ಲಿ ದರ್ಶನ್ ಎ2 ಎನ್ನಲಾಗುತ್ತಿದೆ. 13 ಜನ ಆರೋಪಿಗಳನ್ನು 6 ದಿನಗಳಿಂದ ಪೊಲೀಸರು ಕಸ್ಟಡಿಗೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಸ್ವತಃ ವಿಜಯಲಕ್ಷ್ಮಿ ದರ್ಶನ್ ಪ್ರಕರಣದ ಸಂಬಂಧ ಇಬ್ಬರು ವಕೀಲರನ್ನು ನೇಮಿಸಿದ್ದಾರೆ.
ಪತಿ ಬಂಧನದ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಈವೆರೆಗೆ ಪ್ರತಿಕ್ರಿಯಿಸಿಲ್ಲ. ಪುತ್ರ ವಿನೀಶ್ ಮಾತ್ರ ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ. ಇನ್ನು 4 ದಿನಗಳ ಹಿಂದೆ ವಿಜಯಲಕ್ಷ್ಮಿ ದರ್ಶನ್ ತಮ್ಮ ಇನ್‌ಸ್ಟಾಗ್ರಾಮ್ ಡಿಪಿ ತೆಗೆದಿದ್ದರು. ತಾವು ಫಾಲೋ ಮಾಡುತ್ತಿದ್ದ ಎಲ್ಲರನ್ನು ಅನ್‌ಫಾಲೋ ಮಾಡಿದ್ದರು. ಬಳಿಕ ತಮ್ಮ ಇನ್‌ಸ್ಟಾ ಅಕೌಂಟ್ ಅನ್ನು ಕೂಡ ಡಿ ಆಕ್ಟಿವೇಟ್ ಮಾಡಿದ್ದರು.

ಇದೀಗ ವಿಜಯಲಕ್ಷ್ಮಿ ದಿಢೀರ್ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್ ಅನ್ನು ಆಕ್ಟಿವೇಟ್ ಮಾಡಿಕೊಂಡಿದ್ದಾರೆ. ಆದರೆ ಇಷ್ಟು ದಿನ ತಾವು ಮಾಡಿದ್ದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ವಿಜಿ ದರ್ಶನ್ ಎನ್ನುವ ಖಾತೆ ಹೆಸರು ಹಾಗೆಯೇ ಇದ್ದು ಬಯೋದಲ್ಲಿ ವಿಜಯಲಕ್ಷ್ಮಿ ದರ್ಶನ್ ಎನ್ನುವುದು ಮುಂದುವರೆದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಆಕ್ಟೀವ್ ಇದ್ದ ವಿಜಯಲಕ್ಷ್ಮಿ ಯಾವುದೇ ವಿಚಾರದ ಬಗ್ಗೆ ಅಲ್ಲೇ ಪ್ರತಿಕ್ರಿಯಿಸುತ್ತಿದ್ದರು.
ಇದೀಗ ಮತ್ತೆ ವಿಜಯಲಕ್ಷ್ಮಿ ಇನ್‌ಸ್ಟಾ ಅಕೌಂಟ್ ಆಕ್ಟೀವ್ ಆಗಿದ್ದು ಆಕೆ ಪತಿ ದರ್ಶನ್ ಕೊಲೆ ಆರೋಪ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಬಗ್ಗೆ ಪ್ರತಿಕ್ರಿಯಿಸುವ ಸಾಧ್ಯತೆಯಿದೆ. ಇನ್ನು ದರ್ಶನ್ ಪರ ರಂಗನಾಥ ರೆಡ್ಡಿ ಮತ್ತು ಅನಿಲ್ ಬಾಬು ಎಂಬ ವಕೀಲರನ್ನು ವಿಜಯಲಕ್ಷ್ಮಿ ನೇಮಿಸಿದ್ದಾರೆ.
ಮೊನ್ನೆ ವಕೀಲ ಅನಿಲ್ ಬಾಬು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. "ಪೊಲೀಸ್ ಆಯುಕ್ತರು ಹಾಗೂ ಕೆಲವು ಮಾಧ್ಯಮಗಳಲ್ಲಿ ಪವಿತ್ರಾ ಗೌಡ ಅವರನ್ನು ದರ್ಶನ್ 2ನೇ ಪತ್ನಿ ಎಂದು ಹೇಳುತ್ತಿರುವುದು ವಿಜಯಲಕ್ಷ್ಮಿ ಅವರಿಗೆ ಬೇಸರ ತಂದಿದೆ. ವಿಜಯಲಕ್ಷ್ಮಿ ಮಾತ್ರ ದರ್ಶನ್ ಪತ್ನಿ, ಪವಿತ್ರಾ ಗೌಡ ಅಲ್ಲ, ಮಾಧ್ಯಮಗಳು ಪವಿತ್ರಾ ಅವರನ್ನು ದರ್ಶನ್ ಪತ್ನಿ ಎಂದು ಸಂಭೋದಿಸಬಾರದು" ಎಂದು ಮನವಿ ಮಾಡಿದ್ದರು.

"ವಿಜಯಲಕ್ಷ್ಮಿ ಅವರು ಮಾನಸಿಕವಾಗಿ ನೊಂದಿದ್ದಾರೆ. ಅವರಿಗೆ ಕೊಂಚ ಸಮಯದ ಅಗತ್ಯವಿದೆ. ಶೀಘ್ರದಲ್ಲೇ ಹೊರ ಬರುತ್ತಾರೆ" ಎಂದಿದ್ದರು. ಇದೀಗ ವಿಜಯಲಕ್ಷ್ಮಿ ಇನ್‌ಸ್ಟಾ ಅಕೌಂಟ್ ಆಕ್ಟೀವ್ ಆಗಿದ್ದು ಆಕೆ ಅಲ್ಲೇ ಪ್ರತಿಕ್ರಿಯಿಸುವ ಸಾಧ್ಯತೆಯಿದೆ. ವಿಜಯಲಕ್ಷ್ಮಿ ಕಿರುತೆರೆ ನಿರೂಪಕಿಯಾಗಿ ಕೆಲಸ ಮಾಡಿದ್ದರು. ಹಿರಿಯರು ನಿಶ್ಚಯಿಸಿ ಇಬ್ಬರ ಮದುವೆ ಮಾಡಿದ್ದರು. 21 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಇಬ್ಬರ ಮದುವೆ ನಡೆದಿತ್ತು.
12 ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಟ ದರ್ಶನ್ ಸಂಕಷ್ಟ ಎದುರಿಸಿದ್ದರು. ಪತ್ನಿ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ 28 ದಿನ ಸೆರೆವಾಸ ಅನುಭವಿಸಿ ಬಂದಿದ್ದರು. ಇನ್ನು ಪವಿತ್ರಾ ಗೌಡ ಕಳೆದ 10 ವರ್ಷಗಳಿಂದ ದರ್ಶನ್ ಜೊತೆ ರಿಲೇಷನ್‌ಶಿಪ್‌ನಲ್ಲಿ ಇರುವುದಾಗಿ ಇತ್ತೀಚೆಗೆ ಪೋಸ್ಟ್ ಮಾಡಿದ್ದರು. ಈ ಬಗ್ಗೆ ವಿಜಯಲಕ್ಷ್ಮಿ ಅಸಮಾಧಾನ ಹೊರ ಹಾಕಿದ್ದರು.
ಇಬ್ಬರ ನಡುವೆ ಇನ್‌ಸ್ಟಾಮ್‌ನಲ್ಲಿ ವಾಗ್ದಾಳಿ ನಡೆದಿತ್ತು. ಬಳಿಕ ಇಬ್ಬರು ಸೈಲೆಂಟ್ ಆಗಿದ್ದರು. 'ಜಗ್ಗುದಾದ' ಸಿನಿಮಾ ಸಮಯದಲ್ಲಿ ದರ್ಶನ್‌ಗೆ ಪವಿತ್ರಾ ಗೌಡ ಪರಿಚಯವಾಗಿತ್ತು. ಅದು ಬಳಿಕ ಸ್ನೇಹಕ್ಕೆ ತಿರುಗಿ ಇಬ್ಬರೂ ಹತ್ತಿರವಾಗಿದ್ದರು ಎನ್ನಲಾಗುತ್ತದೆ.


Click it and Unblock the Notifications











