ನಟಿ ವಿಜಯಲಕ್ಷ್ಮಿ ಸ್ಥಿತಿ ಗಂಭೀರ: ಸಹಾಯ ಮಾಡಿ ಎಂದ ಸಹೋದರಿ

ನಾಗಮಂಡಲ, ಸೂರ್ಯವಂಶ ಖ್ಯಾತಿಯ ನಟಿ ವಿಜಯಲಕ್ಷ್ಮಿ ಫೇಸ್‌ಬುಕ್‌ನಲ್ಲಿ ವಿಡಿಯೋ ಮಾಡಿ ಆತ್ಮಹತ್ಯೆ ಯತ್ನ ಮಾಡಿ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು.

Recommended Video

Madagaja ಚತ್ರೀಕರಣ ನಡೆದಿದ್ದು ಹೇಗೆ , ನಿರ್ದೇಶಕ Mahesh ಹೇಳ್ತಾರೆ ಕೇಳಿ | Filmibeat Kannada

ವಿಜಯಲಕ್ಷ್ಮಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ನಿನ್ನೆಗಿಂತಲೂ ಇಂದು ಅವರ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ವಿಜಯಲಕ್ಷ್ಮಿ ನೆರವಿಗೆ ಬರುವಂತೆ ಕನ್ನಡಿಗರಲ್ಲಿ ವಿಜಯಲಕ್ಷ್ಮಿ ಸಹೋದರಿ ಉಷಾದೇವಿ ಮನವಿ ಮಾಡಿದ್ದಾರೆ.

ನಟ ಸಿಮನ್ ತಮಗೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದ ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿ ಫೇಸ್‌ಬುಕ್‌ನಲ್ಲಿ ಹಾಕಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

'ಆರೋಗ್ಯ ಸ್ಥಿತಿ ನಿನ್ನೆಗಿಂತಲೂ ಹದಗೆಟ್ಟಿದೆ'

'ಆರೋಗ್ಯ ಸ್ಥಿತಿ ನಿನ್ನೆಗಿಂತಲೂ ಹದಗೆಟ್ಟಿದೆ'

ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ವಿಜಯಲಕ್ಷ್ಮಿ ಸಹೋದರಿ ಉಷಾದೇವಿ, ವಿಜಯಲಕ್ಷ್ಮಿ ಆರೋಗ್ಯ ಸ್ಥಿತಿ ನಿನ್ನೆಗಿಂತಲೂ ಹದಗೆಟ್ಟಿಗೆ. ಮಾನಸಿಕವಾಗಿ ಪೂರ್ಣವಾಗಿ ಕುಗ್ಗಿಹೋಗಿದ್ದಾರೆ. ಕೆಲವು ತಮಿಳು, ಕನ್ನಡದ ನಟ-ನಟಿಯರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ' ಎಂದು ಹೇಳಿದ್ದಾರೆ.

ವಿಜಯಲಕ್ಷ್ಮಿ ಗೂ ಸಿಮನ್‌ಗೂ ಸಂಬಂಧವಿತ್ತು: ಉಷಾದೇವಿ

ವಿಜಯಲಕ್ಷ್ಮಿ ಗೂ ಸಿಮನ್‌ಗೂ ಸಂಬಂಧವಿತ್ತು: ಉಷಾದೇವಿ

'ವಿಜಯಲಕ್ಷ್ಮಿಯ ಇಂದಿನ ಪರಿಸ್ಥಿತಿಗೆ ನಟ, ನಿರ್ದೇಶಕ ಸಿಮನ್ ಕಾರಣ ಎಂದಿರುವ ಉಷಾದೇವಿ. ಸಿಮನ್ ಮತ್ತು ವಿಜಯಲಕ್ಷ್ಮಿಗೆ ಕಳೆದ ಹತ್ತು ವರ್ಷಗಳಿಂದ ಸಂಬಂಧವಿತ್ತು, ವಿಜಯಲಕ್ಷ್ಮಿಯನ್ನು ಮದುವೆಯಾಗಿ ಹೇಳಿದ್ದ ಸಿಮನ್ ವಂಚಿಸಿದ್ದಾನೆ' ಎಂದು ಉಷಾದೇವಿ ಆರೋಪಿಸಿದ್ದಾರೆ.

'ಸಿಮನ್ ವಿರುದ್ಧ ದೂರು ನೀಡಿದ್ದೇವೆ, ಆದರೆ ಬಂಧನವಾಗಿಲ್ಲ'

'ಸಿಮನ್ ವಿರುದ್ಧ ದೂರು ನೀಡಿದ್ದೇವೆ, ಆದರೆ ಬಂಧನವಾಗಿಲ್ಲ'

ಸಿಮನ್, ವಿಜಯಲಕ್ಷ್ಮಿಯ ಬಗ್ಗೆ ಅಪಪ್ರಚಾರ ಮಾಡಿದ್ದಾನೆ, ಆಕೆಗೆ ಅವಕಾಶಗಳು ಬರದಂತೆ ತಡೆಹಿಡಿದಿದ್ದಾನೆ. ಅವನ ಮೇಲೆ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದೇವೆ ಆದರೂ ಅವನನ್ನು ಬಂಧಿಸಲಾಗಿಲ್ಲ. ಅವನ ಕಡೆಯವರು ನಮಗೆ ಬೆದರಿಕೆ ಕರೆ ಸಹ ಮಾಡಿದ್ದಾರೆ ಎಂದು ಉಷಾದೇವಿ ಹೇಳಿದ್ದಾರೆ.

ಕನ್ನಡಿಗರು ವಿಜಯಲಕ್ಷ್ಮಿ ಕೈಬಿಡಬೇಡಿ: ಉಷಾದೇವಿ

ಕನ್ನಡಿಗರು ವಿಜಯಲಕ್ಷ್ಮಿ ಕೈಬಿಡಬೇಡಿ: ಉಷಾದೇವಿ

ವಿಜಯಲಕ್ಷ್ಮಿ ಕಷ್ಟದಲ್ಲಿದ್ದಾಳೆ. ಹಿಂದೆ ಕನ್ನಡಿಗರೇ ಆಕೆಯ ಕೈ ಹಿಡಿದಿದ್ದು, ಈ ಬಾರಿ ಕನ್ನಡಿಗರೇ ಆಕೆಯ ಕೈಹಿಡಿಯಬೇಕು. ಸಿನಮ್‌ಗೆ ಶಿಕ್ಷೆ ಆಗುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ನಿನ್ನೆ ಮಾಡಿದ್ದ ವಿಡಿಯೋದಲ್ಲಿ ಸಹ ವಿಜಯಲಕ್ಷ್ಮಿ ಇದೇ ಮಾತುಗಳನ್ನು ಹೇಳಿದ್ದರು.

More from Filmibeat

English summary
Actress Vijayalakshmi health is critical says her sisiter Ushadevi. She said Actor, Director Simon cheated Vijayalakshmi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X