For Quick Alerts
  ALLOW NOTIFICATIONS  
  For Daily Alerts

  ದಯವಿಟ್ಟು ಸಹಾಯಮಾಡಿ, ಶಿವಣ್ಣನ ಗಮನಕ್ಕೆ ತನ್ನಿ: ನಟಿ ವಿಜಯಲಕ್ಷ್ಮಿ ಅಳಲು

  |

  ಸಹೋದರಿ ಉಷಾದೇವಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಕರ್ನಾಟಕದ ಹಿರಿಯ ಕಲಾವಿದರು ದಯವಿಟ್ಟು ಸಹಾಯಮಾಡಿ, ಈ ವಿಡಿಯೋವನ್ನು ಶಿವಣ್ಣನ ಗಮನಕ್ಕೆ ತನ್ನಿ ಎಂದು ನಟಿ ವಿಜಯಲಕ್ಷ್ಮಿ ಅಳಲು ತೋಡಿಕೊಂಡಿದ್ದಾರೆ.

  ನಟಿ ವಿಜಯಲಕ್ಷ್ಮಿ ಮತ್ತೆ ಸಹಾಯಕೋರಿ ಕನ್ನಡದ ಹಿರಿಯ ಕಲಾವಿದರಲ್ಲಿ ವಿಡಿಯೋ ಮೂಲಕ ಮನವಿ ವಾಡಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ಉಷಾದೇವಿ ಅವರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಜಯಲಕ್ಷ್ಮಿ ಸಹೋದರಿ ಉಷಾದೇವಿ ಗರ್ಭಕೋಶ ಸಮಸ್ಯೆಯಿಂದ ಬಳಲುತ್ತಿದ್ದು ಇತ್ತೀಚಿಗೆ ಸರ್ಜರಿ ಮಾಡಲಾಗಿದೆ. ಆದರೆ ಆಪರೇಷನ್ ಸಕ್ಸಸ್ ಆಗದೆ ಉಷಾದೇವಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಚಿಕಿತ್ಸೆಗೆ ಹಣವಿಲ್ಲ ಯಾರಾದರೂ ಸಹಾಯ ಮಾಡಿ ಎಂದು ವಿಜಯಲಕ್ಷ್ಮಿ ಅಂಗಾಲಾಚಿದ್ದಾರೆ ಮುಂದೆ ಓದಿ...

  ಚೆನ್ನೈನಲ್ಲಿರುವ ವಿಜಯಲಕ್ಷ್ಮಿ

  ಚೆನ್ನೈನಲ್ಲಿರುವ ವಿಜಯಲಕ್ಷ್ಮಿ

  ಉಷಾದೇವಿ ಅವರ ಮುಂದಿನ ಚಿಕಿತ್ಸೆಗೆ ಹಣವಿಲ್ಲ, ಏನು ಮಾಡಬೇಕೆಂದು ತೋಚುತ್ತಿಲ್ಲ ಯಾರಾದರು ಸಹಾಯಮಾಡಿ, ವಿಶೇಷವಾಗಿ ಶಿವಣ್ಣ ಅವರ ಗಮನಕ್ಕೆ ತನ್ನಿ ಎಂದು ವಿಜಯಲಕ್ಷ್ಮಿ ವಿಡಿಯೋ ಮೂಲಕ ಅಂಗಾಲಾಚಿದ್ದಾರೆ. ಸದ್ಯ ಚೆನ್ನೈನಲ್ಲಿರುವ ವಿಜಯಲಕ್ಷ್ಮಿ ಅಲ್ಲೇ ಖಾಸಗಿ ಆಸ್ಪತ್ರೆಯಲ್ಲಿ ಅಕ್ಕನ ಸರ್ಜರಿ ಮಾಡಿಸಿದ್ದಾರೆ.

  ನಟಿ ವಿಜಯಲಕ್ಷ್ಮಿ ಸ್ಥಿತಿ ಗಂಭೀರ: ಸಹಾಯ ಮಾಡಿ ಎಂದ ಸಹೋದರಿನಟಿ ವಿಜಯಲಕ್ಷ್ಮಿ ಸ್ಥಿತಿ ಗಂಭೀರ: ಸಹಾಯ ಮಾಡಿ ಎಂದ ಸಹೋದರಿ

  ಮುಂದೇನು ಮಾಡಬೇಕೆಂದು ಗೊತ್ತಾಗುತ್ತಿಲ್ಲ

  ಮುಂದೇನು ಮಾಡಬೇಕೆಂದು ಗೊತ್ತಾಗುತ್ತಿಲ್ಲ

  'ಕಳೆದ ತಿಂಗಳು ಉಷಾ ಅವರಿಗೆ ಗರ್ಭಕೋಶ ಸರ್ಜರಿ ಮಾಡಿಸಿದ್ದೇವೆ. ಚೆನ್ನೈನಲ್ಲಿ ಮಾಡಿಸಿದ್ದೇವೆ. ಬಳಿಕ ಡಿಸ್ಚಾರ್ಜ್ ಮಾಡಿಸಿದ್ವಿ. ಆದರೆ ಆಪರೇಶನ್ ಸಕ್ಸಸ್ ಆಗಿಲ್ಲ. ಊಷಾಗೆ ಮಾತಾಡಲು ಸಾಧ್ಯವಾಗುತ್ತಿಲ್ಲ. ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಕೋವಿಡ್ ಇದೆ ಕರೆದುಕೊಂಡು ಬರಬೇಡಿ ಎಂದು ವೈದ್ಯರು ಹೇಳಿದ್ರು. ಕಳೆದ ಒಂದು ತಿಂಗಳಿಂದ ಚೆನ್ನೈನಲ್ಲಿ ತುಂಬಾ ಒದ್ದಾಡುತ್ತಿದ್ದೇನೆ. ನನ್ನ ಬಳಿ ಹಣವಿಲ್ಲ. ಮುಂದೆ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ.

  ದಯವಿಟ್ಟು ಶಿವಣ್ಣನ ಗಮನಕ್ಕೆ ತನ್ನಿ

  ದಯವಿಟ್ಟು ಶಿವಣ್ಣನ ಗಮನಕ್ಕೆ ತನ್ನಿ

  'ಈ ವಿಡಿಯೋವನ್ನು ಶಿವಣ್ಣ ಅವರಿಗೆ ತಲುಪಿಸಿ. ಇಲ್ಲಿ (ತಮಿಳುನಾಡು) ದೊಡ್ಡ ನಟರಿದ್ದಾರೆ. ಆದರೆ ಸರ್ಜರಿ ಫೇಲ್ಯೂರ್ ಆಗಿದೆ, ಮುಂದೇನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಅಕ್ಕನ ಆರೋಗ್ಯ ತುಂಬಾ ಕ್ರಿಟಿಕಲ್ ಆಗಿದೆ. ಕನ್ನಡದ ಹಿರಿಯರ ಕಲಾವಿದರು ಯಾರಾದರು ಸಹಾಯ ಮಾಡಿ. ಕರ್ನಾಟಕದ ಹಿರಿಯ ಕಲಾವಿದರು ಇಲ್ಲಿರುವ ಕಲಾವಿದರಿಗೆ ತಿಳಿಸಿ. ನನಗೆ ಒಬ್ಬಳಿಗೆ ಹೇಗೆ ನಿಭಾಯಿಸಬೇಕು ಎನ್ನುವುದು ಗೊತ್ತಿಲ್ಲ ಎಂದಿದ್ದಾರೆ. ದಯವಿಟ್ಟು ಶಿವಣ್ಣನ ಹಿರಿಯ ಗಮನಕ್ಕೆ ತನ್ನಿ' ಎಂದು ಅಂಗಾಲಾಚಿದ್ದಾರೆ.

  ನಟಿ ವಿಜಯಲಕ್ಷ್ಮಿ ಪ್ರಕರಣ: ವಿವಾದದಲ್ಲಿರುವ ಸೀಮನ್ ಯಾರು? ಇಲ್ಲಿದೆ ವಿವರನಟಿ ವಿಜಯಲಕ್ಷ್ಮಿ ಪ್ರಕರಣ: ವಿವಾದದಲ್ಲಿರುವ ಸೀಮನ್ ಯಾರು? ಇಲ್ಲಿದೆ ವಿವರ

  Upendra ಹೆಸರಿಲ್ಲದ Prajakeeya ಪಕ್ಷ ಗೆಲ್ಲುತ್ತಾ?ಇದು ಸಾಧ್ಯಾನಾ? | Uppi's Open Challenge|Filmibeat Kannada
  ಕಳೆದ ವರ್ಷ ಆಸ್ಪತ್ರೆಗೆ ದಾಖಲಾಗಿದ್ದ ವಿಜಯಲಕ್ಷ್ಮಿ

  ಕಳೆದ ವರ್ಷ ಆಸ್ಪತ್ರೆಗೆ ದಾಖಲಾಗಿದ್ದ ವಿಜಯಲಕ್ಷ್ಮಿ

  ಕಳೆದ ವರ್ಷ ನಟಿ ವಿಜಯಲಕ್ಷ್ಮಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಸಮಯದಲ್ಲಿ ವಿಜಯಲಕ್ಷ್ಮಿ ಅವರ ನೆರವಿಗೆ ಬರುವಂತೆ ಸಹೋದರಿ ಉಷಾದೇವಿ ಮನವಿ ಮಾಡಿಕೊಂಡಿದ್ದರು. ವಿಜಯಲಕ್ಷ್ಮಿ ಕಷ್ಟದಲ್ಲಿದ್ದಾಳೆ. ಹಿಂದೆ ಕನ್ನಡಿಗರೇ ಆಕೆಯ ಕೈ ಹಿಡಿದಿದ್ದು, ಈ ಬಾರಿ ಕನ್ನಡಿಗರೇ ಆಕೆಯ ಕೈಹಿಡಿಯಬೇಕೆಂದು ಕೇಳಿಕೊಂಡಿದ್ದರು. ಇದೀಗ ಉಷಾದೇವಿಯವರ ಆರೋಗ್ಯ ಗಂಭೀರವಾಗಿದ್ದು, ವಿಜಯಲಕ್ಷ್ಮಿ ಸಹಾಯ ಕೇಳುತ್ತಿದ್ದಾರೆ. ವಿಜಯಲಕ್ಷ್ಮಿಗೆ ಸಹಾಯ ಮಾಡುತ್ತಾರಾ ಎಂದು ಕಾದುನೋಡಬೇಕು.

  English summary
  Vijayalakshmi requests to Shivarajkumar and Kannada Actors for help her sister Usha Devi's treatment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X