ಖ್ಯಾತ ನಟಿಯ ಸಹೋದರನನ್ನು ಮದುವೆಯಾಗಿದ್ದ ಉಷಾ ಪತಿಯಿಂದ ದೂರ ಆಗಿದ್ದೇಕೆ? ವಿಜಯಲಕ್ಷ್ಮಿ ಹೇಳಿದ್ದೇನು?

ಸಹೋದರಿ ಉಷಾದೇವಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಕರ್ನಾಟಕದ ಹಿರಿಯ ಕಲಾವಿದರು ದಯವಿಟ್ಟು ಸಹಾಯಮಾಡಿ, ಈ ವಿಡಿಯೋವನ್ನು ಶಿವಣ್ಣನ ಗಮನಕ್ಕೆ ತನ್ನಿ ಎಂದು ನಟಿ ವಿಜಯಲಕ್ಷ್ಮಿ ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾರೆ.

ಇದರ ಬೆನ್ನಲ್ಲೇ 'ಒನ್ ಇಂಡಿಯಾ ಕನ್ನಡ'ದ ಜೊತೆ ಮಾತನಾಡಿದ ವಿಜಯಲಕ್ಷ್ಮಿ, ತಮಿಳಿನಲ್ಲಿ ಯಾರು ಸಹಾಯಕ್ಕೆ ಬರುತ್ತಿಲ್ಲ, ಇದಕ್ಕೆ ಕಾರಣ ಸೀಮನ್, ಸಂಘಟನೆ ಕಟ್ಟಿಕೊಂಡು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಜೊತೆಗೆ ಉಷಾ ಅವರಿಗೆ ಮಗನನ್ನು ನೋಡಬೇಕು ಎನ್ನುವ ದೊಡ್ಡ ಅಸೆ ಇದೆ, ಪತಿಯ ಮನೆಯವರು ಬಿಡುತ್ತಿಲ್ಲ ಎಂದು ಆರೋಪಿದ್ದಾರೆ. ಅಷ್ಟಕ್ಕೂ ಉಷಾ ಪತಿ ಯಾರು? ಈಗ ಎಲ್ಲಿದ್ದಾರೆ? ಉಷಾ ಪತಿಯಿಂದ ದೂರ ಆಗಿದ್ದೇಕೆ? ಮುಂದೆ ಓದಿ...

ಜಯಪ್ರದಾ ಸಹೋದರನನ್ನು ಮದುವೆಯಾಗಿದ್ದ ಉಷಾ

ಜಯಪ್ರದಾ ಸಹೋದರನನ್ನು ಮದುವೆಯಾಗಿದ್ದ ಉಷಾ

ವಿಜಯಲಕ್ಷ್ಮಿ ಸಹೋದರಿ ಉಷಾ ಪತಿ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಜಯಪ್ರದಾ ಅವರ ಸಹೋದರ ರಾಜ ಬಾಬು ಅವರ ಪತ್ನಿ. ಆದರೆ ಅನೇಕ ವರ್ಷಗಳ ಹಿಂದೆಯೇ ಉಷಾದೇವಿ ಪತಿಯಿಂದ ದೂರ ಆಗಿದ್ದಾರೆ. ಆದರೆ ಇನ್ನೂ ವಿಚ್ಛೇದನ ನೀಡಿಲ್ಲ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.

ಉಷಾ ಮಗನನ್ನು ನೋಡಲು ಬಿಡುತ್ತಿಲ್ಲ

ಉಷಾ ಮಗನನ್ನು ನೋಡಲು ಬಿಡುತ್ತಿಲ್ಲ

'ಕಳೆದ ಅನೇಕ ದಿನಗಳಿಂದ ಜಯಪ್ರದಾ ಅವರನ್ನು ಸಂಪರ್ಕ ಮಾಡುತ್ತಿದ್ದೇನೆ. ಆದರೆ ಸಿಗುತ್ತಿಲ್ಲ. ಉಷಾ ಪುತ್ರ ದೆಹಲಿಯಲ್ಲಿ ಓದುತ್ತಿದ್ದಾನೆ. ಕಳೆದ 10 ವರ್ಷಗಳಿಂದ ಪುತ್ರನನ್ನು ನೋಡಿಲ್ಲ. ಮಗನನ್ನು ಭೇಟಿ ಮಾಡುವ ಉದ್ದೇಶಕ್ಕಾಗಿ ಜಯಪ್ರದಾ ಅವರಿಗೆ ಫೋನ್ ಮಾಡಿದರು ಸಂಪರ್ಕಕ್ಕೆ ಸಿಗುತ್ತಿಲ್ಲ, ಯಾರು ಅವರನ್ನು ಭೇಟಿಯಾಗಲು ಬಿಡುತ್ತಿಲ್ಲ ಇದೊಂದು ಅನ್ಯಾಯವಾಗಿದೆ' ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.

ರಾಜ್ ಬಾಬು ಬೇರೆ ಮದುವೆ ಆಗಿದ್ದರೆ ದೊಡ್ಡ ಕ್ರೈಮ್

ರಾಜ್ ಬಾಬು ಬೇರೆ ಮದುವೆ ಆಗಿದ್ದರೆ ದೊಡ್ಡ ಕ್ರೈಮ್

'ವಿಚ್ಛೇದನ ನೀಡಬೇಕಂದ್ರೆ ಅವರನ್ನು ಭೇಟಿಯಾಗಬೇಕು. ಆದರೆ ಜಯಪ್ರದಾ ಸಂಪರ್ಕಕ್ಕೆ ಸಿಗುತ್ತಿಲ್ಲ. ರಾಜ್ ಬಾಬು ಬೇರೆ ಮದುವೆ ಆಗಿದ್ದಾರಾ ಎನ್ನುವುದು ಗೊತ್ತಿಲ್ಲ. ಒಂದು ಹಾಗೆ ಮಾಡಿದ್ದರೆ ಅದು ದೊಡ್ಡ ಕ್ರೈಮ್ ಆಗುತ್ತೆ. ಉಷಾ ಅವರಿಗೆ ಮಗನನ್ನು ಭೇಟಿ ಮಾಡಬೇಕು, ಮಾತನಾಡಬೇಕು ಎನ್ನುವ ದೊಡ್ಡ ಆಸೆ ಇದೆ. ಅದಕ್ಕೆ ಪ್ರಯತ್ನ ಪಡುತ್ತಿದ್ದೇನೆ ಆದರೂ ಬಿಡುತ್ತಿಲ್ಲ' ಎಂದಿದ್ದಾರೆ.

ಪತಿ ವಿರುದ್ಧ ದೂರು ದಾಖಲಿಸಿದ್ದ ಉಷಾ

ಪತಿ ವಿರುದ್ಧ ದೂರು ದಾಖಲಿಸಿದ್ದ ಉಷಾ

ಕಳೆದ 11 ವರ್ಷಗಳ ಹಿಂದೆ ಉಷಾ ದೇವಿ ರಾಜ್ ಬಾಬು ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿ ದೂರು ದಾಖಲಿಸಿದ್ದರು. ಮಗನನ್ನು ಕರೆದುಕೊಂಡು ಹೋಗಿದ್ದಾರೆ ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪ ಮಾಡಿದ್ದರು. ನನ್ನ ಮಗ ರಾಜಮುತ್ತು ಸಾಮ್ರಾಟ್ ನನ್ನು ಭೇಟಿಯಾಗಲು ಕೇಳಿದರೆ ಅವನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಚೆನ್ನೈನಲ್ಲಿ ದೂರು ದಾಖಲಿಸಿದ್ದರು.

Recommended Video

Ambareesh ಗೆ 69ನೇ ಹುಟ್ಟುಹಬ್ಬ: ಅಂಬಿಯ ನೆನಪು ಹಂಚಿಕೊಂಡ ದಚ್ಚು,Kichcha | Filmibeat Kannada
ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದ ಉಷಾ

ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದ ಉಷಾ

1999ರಲ್ಲಿ ರಾಜ್ ಬಾಬು ಜೊತೆ ಹಸೆಮಮೆ ಏರಿದ್ದ ಉಷಾ 2000ರಲ್ಲಿ ಮಗನಿಗೆ ಜನ್ಮ ನೀಡಿದ್ದರು. 2006ರಲ್ಲಿ ಉಷಾ ವರದಕ್ಷಿಣೆ ಕಿರುಕುಳ ತಡೆಯಲು ಸಾಧ್ಯವಿಲ್ಲ ಎಂದು ಆರೋಪಿಸಿ ಗಂಡನ ಮನೆಯಿಂದ ಹೊರಬಂದಿದ್ದರು. ತಂದೆ 6 ಲಕ್ಷ ವರದಕ್ಷಿಣೆ ನೀಡಿದ್ದರು. ಆದರೂ ರಾಜ್ ಬಾಬು ತಾಯಿ ಕಿರುಕುಳ ನೀಡುತ್ತಿದ್ದರು. ಮಗನಿಗಾಗಿ ಎಲ್ಲಾ ಸಹಿಸಿಕೊಂಡಿದ್ದೆ, ಆದರೆ ರಾಜ್ ಬಾಬು ಕುಡಿದು ಹೊಡೆಯುತ್ತಿದ್ದರು. ಮಗನನ್ನು ಕರೆದುಕೊಂಡು ತಂದೆ ಮನೆಗೆ ಬಂದೆ. ಬಳಿಕ ಬಲವಂತವಾಗಿ ಮಗನನ್ನು ಕರೆದುಕೊಂಡು ಹೋಗಿದ್ದಾರೆ' ಎಂದು ಉಷಾ ದೂರು ನೀಡಿದ್ದರು.

ಇದೀಗ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಉಷಾ ಸಹಾಯಕ್ಕೆ ಪತಿ ರಾಜ್ ಬಾಬು ಬರ್ತಾರಾ? ಮಗನನ್ನು ನೋಡಲು, ಭೇಟಿಯಾಗಲು ಅವಕಾಶ ಮಾಡಿಕೊಡುತ್ತಾರಾ ಎಂದು ಕಾದು ನೋಡಬೇಕು.

More from Filmibeat

English summary
Actress Vijayalakshmi sister Usha Devi health is critical. Usha Devi wife of Famous Actress Jayapradha brother Raj Babu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X