ಅಂದು ವಿಜಯಲಕ್ಷ್ಮಿಗೆ ಧೈರ್ಯ ತುಂಬಿದ್ರು ಸುದೀಪ್; ಈ ಫೋಟೊ ಹೇಳುತ್ತಿರುವ ಕಥೆಯೇನು?

ದರ್ಶನ್ ಫ್ಯಾನ್ಸ್ ಹಾಗೂ ಸುದೀಪ್ ಫ್ಯಾನ್ಸ್ ನಡುವಿನ ಕೆಸರೆರಚಾಟ ಎಲ್ಲೆ ಮೀರಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕೆಲ ಪೋಸ್ಟ್‌ಗಳು ಬೇಸರ ಮೂಡಿಸುವಂತಿದೆ. ಸೇರಿಗೆ ಸವ್ವಾಸೇರು ಎನ್ನುವಂತೆ ಹಳೆಯ ವಿಷಯಗಳನ್ನು ಕೆಣಸಿ ಅಭಿಮಾನಿಗಳು ರಾದ್ಧಾಂತ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಸುದೀಪ್ ಹಾಗೂ ವಿಜಯಲಕ್ಷ್ಮಿ ಅಂದು ಮಾಧ್ಯಮಗಳ ಮುಂದೆ ಕೂತು ಒಟ್ಟಿಗೆ ಮಾತನಾಡಿದ್ದ ಫೋಟೊ ವೈರಲ್ ಆಗ್ತಿದೆ.

'ಮಾರ್ಕ್' ಸಿನಿಮಾ ಪ್ರೀ ರಿಲೀಸ್ ಈವೆಂಟ್ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದಿತ್ತು. ವೇದಿಕೆಯಲ್ಲಿ ಮಾತನಾಡಿದ್ದ ಕಿಚ್ಚ ಯುದ್ಧಕ್ಕೆ ನಾವು ರೆಡಿ ಎಂದಿದ್ದರು. ಕೆಲವರು 'ಮಾರ್ಕ್' ಚಿತ್ರವನ್ನು ಪೈರಸಿ ಮಾಡಿ ತುಳಿಯಲು ಪ್ಲ್ಯಾನ್ ಮಾಡುತ್ತಿದ್ದಾರೆ. ಅಂಥಹವರನ್ನು ಉದ್ದೇಶಿಸಿ ಸುದೀಪ್ ಈ ಮಾತು ಹೇಳಿದ್ದಾರೆ ಎಂದು ಆಪ್ತಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅತ್ತ ಸುದೀಪ್ ಹೇಳಿಕೆ ವೈರಲ್ ಆಗುತ್ತಿದ್ದಂತೆ ವಿಜಯಲಕ್ಷ್ಮಿ ದರ್ಶನ್ ದಾವಣಗೆರೆಯಲ್ಲಿ ಆಡಿದ ಮಾತುಗಳು ದರ್ಶನ್- ಸುದೀಪ್ ಫ್ಯಾನ್ಸ್ ಮಧ್ಯೆ ಕಿಚ್ಚು ಹಚ್ಚಿದೆ.

Vijayalakshmi Sudeep s Photo Sparks Fresh Fan War Between Darshan and Sudeep Supporters

ಸದ್ಯ ಅಭಿಮಾನಿಗಳು ಈವ ವೈಯಕ್ತಿಕವಾಗಿ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ನಟ ಸುದೀಪ್ ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಹೆಸರು ಎಳೆದು ತಂದು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೊಂದು ಕಡೆ ವಿಜಯಲಕ್ಷ್ಮಿ ಬಗ್ಗೆ ಕೂಡ ಟ್ರೋಲ್ ಮಾಡಲಾಗುತ್ತಿದೆ. ಹಳೇ ವಿಚಾರಗಳನ್ನು ಪ್ರಸ್ತಾಪಿಸಿ ಸುದೀಪ್ ಫ್ಯಾನ್ಸ್ ತಿರುಗೇಟು ನೀಡುತ್ತಿದ್ದಾರೆ. ಒಂದ್ಕಾಲದಲ್ಲಿ ದರ್ಶನ್, ಸುದೀಪ್ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ದರ್ಶನ್ ಪದ ಸುದೀಪ್ ನಿಲ್ಲುತ್ತಿದ್ದರು.

ಸುದೀಪ್ ಹಾಗೂ ವಿಜಯಲಕ್ಷ್ಮಿ ಹೀಗೆ ಒಟ್ಟಿಗೆ ಮಾಧ್ಯಮಗಳ ಮುಂದೆ ಕೂಡ ಹೇಳಿಕೆ ಕೊಟ್ಟಿದ್ದರು. ದರ್ಶನ್ ಕೌಟುಂಬಿಕ ಕಲಹದ ಸಮಯದಲ್ಲಿ ವಿಜಯಲಕ್ಷ್ಮಿ ಬೆಂಬಲಕ್ಕೆ ಸುದೀಪ್ ನಿಂತಿದ್ದರು ಎಂದು ಹೇಳಿ ಈ ಫೋಟೊ ವೈರಲ್ ಮಾಡುತ್ತಿದ್ದಾರೆ. ಆದರೆ ಇದು 'ಬೃಂದಾವನ' ಸಿನಿಮಾ ಸಮಯದಲ್ಲಿ ದರ್ಶನ್ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ಸಮಯದ ಫೋಟೊ ಎನ್ನುವುದು ಗೊತ್ತಾಗುತ್ತಿದೆ.

Vijayalakshmi Sudeep s Photo Sparks Fresh Fan War Between Darshan and Sudeep Supporters

'ಬೃಂದಾವನ' ಚಿತ್ರದ ಚಿತ್ರೀಕರಣದ ವೇಳೆ ಸಾಹಸ ಸನ್ನಿವೇಶದ ಸೆರೆ ಹಿಡಿಯುವಾಗ ದರ್ಶನ್‌ಗೆ ಪೆಟ್ಟಾಗಿತ್ತು. 2 ದಿನ ನೋವು ನುಂಗಿಗೊಂಡು ದರ್ಶನ್ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಬಳಿಕ ತಲೆ ನೋವು ಹೆಚ್ಚಾದಾಗ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ನ್ಯೂರೋಸರ್ಜರಿ ವಿಭಾಗದ ಐಸಿಯುನಲ್ಲಿ ಇರಿಸಿ ನಂತರ ಸ್ಪೆಷಲ್ ವಾರ್ಡ್ ಗೆ ಶಿಫ್ಟ್ ಮಾಡಿದ್ದರು. ಅದೇ ಸಮಯದಲ್ಲಿ ಸುದೀಪ್ ಆಸ್ಪತ್ರೆ ಭೇಟಿ ನೀಡಿ ದರ್ಶನ್ ಆರೋಗ್ಯ ವಿಚಾರಿಸಿದ್ದರು. ಅದೇ ಸಮಯದಲ್ಲಿ ಹೀಗೆ ಮಾಧ್ಯಮಗಳ ಮುಂದೆ ವಿಜಯಲಕ್ಷ್ಮಿ ದರ್ಶನ್ ಹಾಗೂ ಸುದೀಪ್ ಕಾಣಿಸಿಕೊಂಡಿದ್ದರು. ಅಭಿಮಾನಿಗಳು ಆತಂಕಪಡುವ ಅವಶ್ಯಕತೆ ಇಲ್ಲ. ದರ್ಶನ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದಿದ್ದರು. ಅದೇ ಫೋಟೊ ಈಗ ವೈರಲ್ ಆಗ್ತಿದೆ.

ಇನ್ನು ನಟ ದರ್ಶನ್ ಕೌಟುಂಬಿಕ ಕಲಹದ ಸಮಯದಲ್ಲಿ ವಿಜಯಲಕ್ಷ್ಮಿ ಹೋಗಿ ಸುದೀಪ್ ಸಹಾಯ ಕೇಳಿದ್ರಾ? ಎನ್ನುವ ಪ್ರಶ್ನೆ ಕೂಡ ಮೂಡುತ್ತದೆ. ಕಾರಣ ಈ ಫೋಟೊ. ಕೃತಜ್ಞತೆ ಮರೆತ ವಿಜಯಲಕ್ಷ್ಮಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಸೆಪ್ಟೆಂಬರ್ 8, 2011ರಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ್ದಾಗಿ ದೂರು ದಾಖಲಾಗಿತ್ತು. ದರ್ಶನ್ ಜೈಲಿಗೂ ಹೋಗಿದ್ದರು. ಬಳಿಕ ಪ್ರಕರಣದಲ್ಲಿ ದರ್ಶನ್‌ಗೆ ಕ್ಲೀನ್ ಚಿಟ್ ಸಿಕ್ಕಿತ್ತು.

ಕೌಟುಂಬಿಕ ಕಲಹದ ಸಂದರ್ಭದಲ್ಲಿ ಶಿವಣ್ಣ- ಗೀತಾ ದಂಪತಿ ಬಳಿ ವಿಜಯಲಕ್ಷ್ಮಿ ಸಹಾಯ ಕೇಳಿ ಹೋಗಿದ್ದರು. ಬಳಿಕ ಎಲ್ಲಾ ಉಲ್ಟಾ ಪಲ್ಟಾ ಆಗಿತ್ತು. ಇದೇ ವಿಚಾರದ ಬಗ್ಗೆ ನಟ ಸುದೀಪ್ ಸಂದರ್ಶನವೊಂದರಲ್ಲಿ ಪರೋಕ್ಷವಾಗಿ ಮಾತನಾಡಿದ್ದರು ಎನ್ನಲಾಗುತ್ತದೆ. "ಯಾರೋ ಒಬ್ರು ಬಂದು ಅವ್ರು ನಂಗೆ ಹೊಡೆದ್ರು ಅಂತ ಸಹಾಯ ಕೇಳ್ತಾರೆ. ಆ ವ್ಯಕ್ತಿ ಸಹಾಯ ಮಾಡ್ತಾರೆ. ಕೊನೆಗೆ ಹೊಡೆದಾಡಿಕೊಂಡವ್ರು ಒಂದಾಗ್ತಾರೆ. ಸಹಾಯ ಮಾಡಿದವ್ರು ಗೂಬೆ ತರ ಕಾಣ್ತಾರೆ" ಎಂದು ಸುದೀಪ್ ಹೇಳಿದ್ದರು.

More from Filmibeat

Read more about: sudeep darshan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X