ಎಲ್ಲರೂ ಸಿದ್ಧರಾಗಿ, ದರ್ಶನ್ ಬಿಡುಗಡೆಯ ಕುರಿತು ಮಹತ್ವದ ಸುಳಿವು ನೀಡಿದ್ರಾ ವಿಜಯಲಕ್ಷ್ಮಿ...?

By ಫಿಲ್ಮಿಬೀಟ್ ಡೆಸ್ಕ್

ಅ'ಪವಿತ್ರ ಸಂಬಂಧ'ಕ್ಕೆ ದರ್ಶನ್ ಹಾತೊರೆಯದಿದ್ದರೆ, ದರ್ಶನ್ ಇವತ್ತು ತಮ್ಮ ಅಭಿಮಾನಿಗಳ ನಡುವೆ ಇರುತ್ತಿದ್ದರು. ತಲೆ ಎತ್ತಿ ನಡೆಯುತ್ತಿದ್ದರು. ಇಷ್ಟೇ ಅಲ್ಲ ತಮ್ಮ ಪತ್ನಿ ವಿಜಯಲಕ್ಷ್ಮಿ ಮತ್ತು ಮಗನ ಜೊತೆ ನೆಮ್ಮದಿಯಿಂದ ಇರುತ್ತಿದ್ದರು. ಆದರೆ, ಸಹವಾಸ ದೋಷ. ಇವತ್ತು ದರ್ಶನ್ ಕಂಬಿಯ ಹಿಂದೆ ಇದ್ದಾರೆ.

ಹಾಗಂಥ ಖಾಯಂ ಆಗಿಯೇ ದರ್ಶನ್ ಕಂಬಿ ಹಿಂದೆ ಇರುತ್ತಾರೆ ಎಂದು ಹೇಳಲು ಸಾಧ್ಯ ಇಲ್ಲ. ಯಾಕೆಂದರೆ ದರ್ಶನ್ ಅವರನ್ನು ಹೊರ ಕರೆತರಲು ಕಸರತ್ತು ಆರಂಭವಾಗಿದೆ. ತಮ್ಮ ಪತಿಯನ್ನು ಶತಾಯು ಗತಾಯು ಹೊರ ತಂದೇ ತರುವುದಾಗಿ ಅಧಿಕೃತ ಪತ್ನಿ ವಿಜಯಲಕ್ಷ್ಮಿ ಶಪಥವನ್ನು ಮಾಡಿಯಾಗಿದೆ. ಇದಕ್ಕೆ ಪೂರಕವಾಗಿ ಸದ್ಯ ದರ್ಶನ್ ಜೈಲಿಂದ ಹೊರ ಬರುವ ಎಲ್ಲ ಲಕ್ಷಣ ಕಂಡು ಬರುತ್ತಿವೆ. ಇದರ ನಡುವೆ ಈಗ ವಿಜಯಲಕ್ಷ್ಮಿ ದರ್ಶನ್ ಅವರ ಅಸಂಖ್ಯಾತ.. ಅಗಣಿತ ಅಭಿಮಾನಿಗಳಿಗೆ ಮಹತ್ತರವಾದ ಸಂದೇಶವೊಂದನ್ನು ನೀಡಿದ್ದಾರೆ. ಸಜ್ಜಾಗಿ ಎಂದು ಕರೆಯನ್ನು ಕೊಟ್ಟಿದ್ದಾರೆ.

Vijayalakshmi wife of jailed actor Darshan shared an important update with his celebrity fans

ಹೌದು, ಅಸಲಿಗೆ.. ದರ್ಶನ್ ಆ ಕಡೆ ಜೈಲು ಪಾಲಾಗುತ್ತಿದ್ದಂತೆ ಈ ಕಡೆ ದರ್ಶನ್ ಪ್ರಭಾವಳಿಯನ್ನು ಬಳಸಿಕೊಂಡು ಅವರ ಗತಕಾಲದ ಸಿನಿಮಾಗಳನ್ನು ಕೆಲವರು ಮರು ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಮೂಲಕ ಹಣವನ್ನು ಗಳಿಸುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಕರಿಯ.. ಶಾಸ್ತ್ರೀ.. ಮತ್ತೊಮ್ಮೆ ಚಿತ್ರಮಂದಿರದಲ್ಲಿ ಅಬ್ಬರಿಸಿವೆ. ಭರ್ಜರಿ ಕಮಾಯಿಯನ್ನೂ ಮಾಡಿವೆ.

ಇನ್ನೂ.. ದರ್ಶನ್ ಅಭಿನಯದ ಎಲ್ಲ ಚಿತ್ರಗಳ ತೂಕ ಒಂದು ಕಡೆಯಾದರೆ, ಖುದ್ದು ದರ್ಶನ್ ನಿರ್ಮಾಣ ಮಾಡಿ ಅಭಿನಯಿಸಿದ್ದ ನವಗ್ರಹ ಚಿತ್ರದ ತೂಕ ಮತ್ತೊಂದೆಡೆ ಇದೆ. ಹೀಗಾಗಿಯೇ ನವಗ್ರಹ ಚಿತ್ರವನ್ನು ಮರು ಬಿಡುಗಡೆ ಮಾಡಿಯೆಂಬ ಒತ್ತಾಯದ ಕೂಗು ಕೇಳಿ ಬರುತ್ತಾನೆ ಇರುತ್ತೆ. ಆದರೆ.. ಇಲ್ಲಿಯವರೆಗೆ ಈ ಅಭಿಮಾನದ ಕೂಗಿಗೆ ಬೆಲೆ ಇರಲಿಲ್ಲ. ಆದರೆ ಈಗ ದಸರಾ ಹಬ್ಬದ ಸಡಗರದಲ್ಲಿ ಕರುನಾಡು ಮುಳುಗಿರುವಾಗ ಈ ಕೂಗಿಗೆ ಏಕಾಏಕಿ ಬೆಲೆ ಬಂದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ದರ್ಶನ್ ಸಹೋದರ ದಿನಕರ್ ತೂಗುದೀಪ್ ಭಾರೀ ಜನಾಭಿಪ್ರಾಯದ ಮೇರೆಗೆ ಇಂದು ಮುಂಜಾನೆ ನವಗ್ರಹ ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದಾರೆ.

ವಿಶೇಷ ಅಂದರೆ ದರ್ಶನ್ ಅವರ ಯಾವ ಚಿತ್ರದ ಕುರಿತು ಕೂಡ ಹೆಚ್ಚು ಮಾತನಾಡದ ವಿಜಯಲಕ್ಷ್ಮಿ ತಮ್ಮ ಮನೆಯ ಯಜಮಾನರ ಪುರಾತನ ಕಾಲದ ಚಿತ್ರ ನವಗ್ರಹ ಕುರಿತು ಮಾತನಾಡಿದ್ದಾರೆ. ನವಗ್ರಹ ಮರು ಬಿಡುಗಡೆಯಾಗುತ್ತಿರುವ ಕುರಿತು ತಮ್ ಇನ್ಸ್‌ಟಾಗ್ರಾಮ್‌ನಲ್ಲಿ ಫೋಸ್ಟ್ ಹಂಚಿಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವಿಜಯಲಕ್ಷ್ಮಿ ನಿಮ್ಮೆಲ್ಲರ ಹೃದಯದಲ್ಲಿ ವಿಶೇಷವಾದ ಸ್ಥಾನವನ್ನು ಪಡೆದಿರುವ ನವಗ್ರಹ ಚಿತ್ರ ಮರುಬಿಡುಗಡೆಯಾಗುತ್ತಿದೆ ಎಂದು ಹೇಳಿದ್ದಾರೆ. ಈ ಬಾರಿ ಈ ಚಿತ್ರವನ್ನು ನೋಡುವ ಅನುಭವ ಇನ್ನೂ ವಿಶೇಷವಾಗಿರಲಿದೆ ಎಂದಿದ್ದಾರೆ. ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ನವಗ್ರಹ ಚಿತ್ರವನ್ನು ನೋಡಲು ಸಿದ್ಧರಾಗಿ ಎಂದು ಕರೆಯನ್ನು ಕೂಡ ವಿಜಯಲಕ್ಷ್ಮಿ ನೀಡಿದ್ಧಾರೆ.

ಇದಿಷ್ಟೇ ಅಲ್ಲದೇ ಏನೇ ಆಗಲಿ ಕೊನೆಯಲ್ಲಿ ಕೆಟ್ಟದ್ದು ಅಳಿದು ಹೋಗುತ್ತದೆ, ಒಳ್ಳೆತನಕ್ಕೆ ಜಯವಾಗುತ್ತದೆ ಎಂಬುದನ್ನು ತೋರಿಸಿಕೊಟ್ಟ ದಿನ ಇದು. ಸದಾ ಇದನ್ನು ನಾವು ನೆನಪಿನಲ್ಲಿ ಇಡೋಣ ಎಂದಿರುವ ವಿಜಯಲಕ್ಷ್ಮಿ ಆ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಎಲ್ಲರ ಮೇಲಿರಲಿ ಎಂದಿದ್ದಾರೆ.

Vijayalakshmi wife of jailed actor Darshan shared an important update with his celebrity fans

ಸದ್ಯಕ್ಕೆ ವಿಜಯಲಕ್ಷ್ಮಿ ದರ್ಶನ್ ಅವರ ಈ ಫೋಸ್ಟ್ ನೋಡಿದ ಅನೇಕರು ತಮ್ಮ ಪತಿ ದರ್ಶನ್ ಬಿಡುಗಡೆಯ ಕುರಿತು ವಿಜಯಲಕ್ಷ್ಮಿ ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಗ್ನಲ್ ನೀಡಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ದರ್ಶನ್ ಅಭಿಮಾನಿಗಳು ಕೂಡ ತಮ್ಮ ಡಿ ಬಾಸ್ ಹೊರಗಡೆ ಬರುತ್ತಿರುವ ಸುದ್ದಿಯನ್ನು ವಿಜಯಲಕ್ಷ್ಮಿ ಅತ್ತಿಗೆ ಹೀಗೆ ಸೂಚ್ಯವಾಗಿ ನೀಡಿದ್ದಾರೆ ಎಂದುಕೊಂಡು ಸಂಭ್ರಮ ಪಡುತ್ತಿದ್ದಾರೆ. ಈ ಸೋಮವಾರ ದರ್ಶನ್‌ಗೆ ಜಾಮೀನು ಸಿಗುವುದು ಖಚಿತವೆನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

More from Filmibeat

Read more about: darshan vijayalakshmi sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X