For Quick Alerts
  ALLOW NOTIFICATIONS  
  For Daily Alerts

  ಕೆಸಿಸಿ ಕಪ್ ಚಾಂಪಿಯನ್ಸ್ ಆದ ಶಿವಣ್ಣ ಮತ್ತು ತಂಡ

  By Pavithra
  |

  ಸ್ಯಾಂಡಲ್​​ವುಡ್​ ಕಲಾವಿದರೆಲ್ಲರೂ ಸೇರಿ‌ ಆಡುತ್ತಿರುವ ಕನ್ನಡ ಚಲನಚಿತ್ರ ಕಪ್​ ಯಶಸ್ವಿಯಾಗಿದೆ. ಆರಂಭದಲ್ಲಿಯೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್​ ಟೀಂ ಗೆಲುವಿನ ಮೂಲಕ ವಿಜಯ ಪತಾಕೆ ಹಾರಿಸಿದೆ.

  ಶಿವರಾಜ್​ಕುಮಾರ್​ ಸ್ಟಾರ್ ಪ್ಲೇಯರ್​ ಆಗಿದ್ದ 'ವಿಜಯನಗರ ಪೇಟ್ರಿಯಾಟ್ಸ್'​ ತಂಡ ಈ ಬಾರಿಯ ಕಪ್​ ಗೆದ್ದು ವಿಜೇತರಾಗಿದ್ದಾರೆ. ಮೊದಲ ದಿನವೇ ಕಿಚ್ಚ ​​​ಸ್ಟಾರ್​ ಪ್ಲೇಯರ್​ ಆಗಿದ್ದ 'ಹೊಯ್ಸಳ ಈಗಲ್ಸ್'​ನ ವಿರುದ್ಧ ಟೂರ್ನಿಯ ಮೊದಲ ಗೆಲುವು ಸಾದಿಸಿತ್ತು ಶಿವಣ್ಣ ಮತ್ತು ತಂಡ.

  ಕಿಚ್ಚ ಸುದೀಪ್ ಬ್ಯಾಟಿಂಗ್, ಸೆಂಚುರಿ ಸ್ಟಾರ್ ಶಿವಣ್ಣ ಬೌಲಿಂಗ್ಕಿಚ್ಚ ಸುದೀಪ್ ಬ್ಯಾಟಿಂಗ್, ಸೆಂಚುರಿ ಸ್ಟಾರ್ ಶಿವಣ್ಣ ಬೌಲಿಂಗ್

  ಎರಡನೇ ಮ್ಯಾಚ್​ನಲ್ಲಿ ಇಂದ್ರಜಿತ್​ ಲಂಕೇಶ್​ ಅವರ 'ರಾಷ್ಟ್ರಕೂಟ ಪ್ಯಾಂಥರ್ಸ್'​ ಎದುರು ಗೆಲುವು‌ ಸಾಧಿಸಿ ಫೈನಲ್​ ತಲುಪಿದ್ದರು. ಫಿನಾಲೆಯಲ್ಲಿ ಸಿನಿಮಾ ಪತ್ರಕರ್ತ ಸದಾಶಿವ ಶೆಣೈ ಅವರ 'ಒಡೆಯರ್​ ಚಾರ್ಜರ್ಸ್'​ ವಿರುದ್ಧ ಗೆಲ್ಲುವ ಮೂಲಕ ಪ್ರಶಸ್ತಿಯನ್ನು ಪಡೆದುಕೊಂಡಿದೆ.

  ಕನ್ನಡ ಚಲನಚಿತ್ರ ಕಪ್​​​​​​​ ನ ಮೊದಲ ಸೀಸನ್ ಯಶಸ್ವಿಯಾಗಿದ್ದು, ಇಡೀ ಸಿನಿಮಾರಗಕ್ಕೆ ಖುಷಿತಂದಿದೆ. ಕಿಚ್ಚನ ಮೊದಲ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಟೂರ್ನಿ ಮುಗಿದ ನಂತರ ಅಲ್ಲೇ ಗೆಲುವು ಸಾಧಿಸಿದ ತಂಡಕ್ಕಾಗಿ ಅಭಿನಂದನಾ ಸಮಾರಂಭವನ್ನೂ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಿಚ್ಚ ಹಾಡು ಹಾಡಿ ಅಭಿಮಾನಿಗಳನ್ನ ರಂಜಿಸಿದ್ರೆ, ಶಿವರಾಜ್ ಕುಮಾರ್ ಟಗರು ಸಿನಿಮಾದ ಹಾಡಿಗೆ ನೃತ್ಯ ಮಾಡುವ‌ ಮೂಲಕ ಸಂಭ್ರಮವನ್ನ ಆಚರಣೆ ಮಾಡಿದರು.

  ಕೆಸಿಸಿ ಕ್ರಿಕೆಟ್ ಟೂರ್ನಿಗೆ ಸಿದ್ಧರಾಮಯ್ಯ ಚಾಲನೆ : ಶಿವಣ್ಣ - ಸುದೀಪ್ ನಡುವೆ ಮೊದಲ ಪಂದ್ಯಕೆಸಿಸಿ ಕ್ರಿಕೆಟ್ ಟೂರ್ನಿಗೆ ಸಿದ್ಧರಾಮಯ್ಯ ಚಾಲನೆ : ಶಿವಣ್ಣ - ಸುದೀಪ್ ನಡುವೆ ಮೊದಲ ಪಂದ್ಯ

  English summary
  Vijayanagara Patriots won the KCC Cup, which was led by Kannada actor Shivaraj Kumar , in finals shivaraj kumar and team, Vijayanagar Patriots won the KCC Cup, defeating the Wodeyar Chargers in the final round.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X