For Quick Alerts
ALLOW NOTIFICATIONS  
For Daily Alerts

  ನಿಷ್ಠುರವೆನಿಸಿದರೂ ನವಿರಾದ ಭಾಷಣ : ದಟ್‌ ಈಸ್‌ ವಿಜಯಾನಂದ್‌

  By ಎಸ್ಕೆ. ಶಾಮಸುಂದರ
  |

  ಬೆಂಗಳೂರು : ಹಿಂದಿ ಚಿತ್ರರಂಗದ ಯಯಾತಿ, ಚಿರಯೌವ್ವನಿಗ ದೇವಾನಂದ್‌ ಗೊತ್ತಲ್ಲ. ಅವರ ಸೋದರ ವಿಜಯಾನಂದ್‌ ಹೆಸರಾಂತ ಚಿತ್ರ ನಿರ್ಮಾಪಕರು. ಅಷ್ಟೇ ಅಲ್ಲ ಭಾರತ ರಜತ ಪರದೆಯ ನಟ ಕೂಡ. ಈಹೊತ್ತು ವಿಜಯಾನಂದ್‌ ಸದಾ ಸುಡುತ್ತಲೇ ಇರುವ ಉನ್ನತ ಅಧಿಕಾರದ ಗದ್ದುಗೆಯಲ್ಲಿ ಕುಳಿತಿದ್ದಾರೆ. ಹೌದು... ಅವರು ಮುಂಬಯಿಯಲ್ಲಿರುವ ಕೇಂದ್ರ ಚಲನಚಿತ್ರ ಮಾನ್ಯತೆ ಮಂಡಳಿಯ ಅಧ್ಯಕ್ಷರು.


  ಬುಧವಾರ ಅವರು, ಬೆಂಗಳೂರಿಗೆ ಬಂದಿದ್ದರು. ಕನ್ನಡ ಚಿತ್ರನಗರಿಯ ಚಿಂತಕರ ಚಾವಡಿ ಎನಿಸಿರುವ ಬಾದಾಮಿ ಹೌಸ್‌ನಲ್ಲಿ ಕರ್ನಾಟಕ ಪ್ರದೇಶ ಸೆನ್ಸಾರ್‌ ಮಂಡಳಿಯ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಿದರು. ವಿಜಯಾನಂದ್‌ ಆಡಿದ ಆ ಮಾತುಗಳಾವುವೂ ಬೂಟಾಟಿಕೆಯಿಂದ ಕೂಡಿರಲಿಲ್ಲ. ಭಾರತ ಚಿತ್ರರಂಗದದ ಇಂದಿನ ಸ್ಥಿತಿ ಹಾಗೂ ಸದಾ ಟೀಕೆಗೊಳಗಾಗುವ ಸೆನ್ಸಾರ್‌ ಮಂಡಳಿಯ ಮಹತ್ವದ ಬಗ್ಗೆ ಮನಬಿಚ್ಚಿ ನುಡಿದರು.

  ಬಾಗಿಲುಗಳು ಮುಚ್ಚಿದ ಚಿಂತಕರ ಚಾವಡಿಯ ಗರ್ಭಗುಡಿಯಲ್ಲಿ ವಿಜಯಾನಂದ್‌ ಬಿಚ್ಚು ಮನಸ್ಸಿನಿಂದ ಆಡಿದ ಮಾತುಗಳ ಮುಖ್ಯಾಂಶಗಳನ್ನು ಇಂಡಿಯಾಇನ್‌ಫೋ.ಕಾಂ ಸಾದರಪಡಿಸುತ್ತಿದೆ.

  • ಸುಪ್ರೀಂ ಕೋರ್ಟ್‌ ಹೊರತುಪಡಿಸಿ, ಸೆನ್ಸಾರ್‌ ಮಂಡಳಿ ಕೈಗೊಳ್ಳುವ ನಿರ್ಧಾರಗಳನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ.
  • ಹಾಗೆಂದ ಮಾತ್ರಕ್ಕೆ ಸೆನ್ಸಾರ್‌ ಮಂಡಳಿಯ ಸದಸ್ಯರು ಚಿತ್ರ ನಿರ್ಮಾಪಕರ ವಿಷಯದಲ್ಲಿ ಅತ್ಯಂತ ಕಠೋರವಾಗಿ ನಡೆದುಕೊಳ್ಳಬೇಕು ಎಂದೇನಲ್ಲ.
  • ಮಂಡಳಿಯ ಸದಸ್ಯರು ಚಿತ್ರ ನಿರ್ಮಾಪಕರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಬೇಕು.
  • ಭಾರತೀಯ ಸಮಾಜವು ಇಂದು ಸಾಕಷ್ಟು ಹಾದಿ ಕ್ರಮಿಸಿದೆ. ಈ ಸಂಧಿಕಾಲದಲ್ಲಿ ನಾವು ಚಿತ್ರಗಳ ಗುಣಮಟ್ಟ ಮತ್ತು ಅವುಗಳ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಅದರ ರೂಪರೇಷೆಯನ್ನೇ ಬದಲಾಯಿಸಬೇಕಾಗಿದೆ.
  • ಮಹಿಳೆಯನ್ನು ಸೀತೆ, ಸಾವಿತ್ರಿ, ಅನಸೂಯ ಎಂದು ತಿಳಿಯುವ ಕಾಲ ಇದಲ್ಲ. ಆ ದಿನಗಳು ಕಳೆದು ಹೋದವು.
  • ಅಲ್ಲದೆ ಭಾರತೀಯ ಚಲನಚಿತ್ರ ನಿರ್ಮಾಪಕರು ಕಂಸ ಅಥವಾ ದುಶ್ಯಾಸನರೂ ಏನಲ್ಲ. ಅವರಿಗೆ ತಾವು ರಾಮ, ಲಕ್ಷ್ಮಣರು ಹುಟ್ಟಿದ ನಾಡಿನಲ್ಲಿ ಹುಟ್ಟಿದ್ದೇವೆ ಎಂಬ ಅರಿವಿದೆ.
  • ಈ ಎಲ್ಲದರ ನಡುವೆ ನಾವು ಇಂದಿನ ಜನರ ಒಲವು, ನಿಲುವು ಹಾಗೂ ಬೇಡಿಕೆಗಳನ್ನು ಪೂರೈಸುವ ಚಿತ್ರಗಳ ನಿರ್ಮಾಣಕ್ಕೆ ಇಂಬು ನೀಡಬೇಕಾಗಿದೆ.
  • ನಿಮಗೆ ಗೊತ್ತೆ? ಸ್ವೀಡನ್‌ನಲ್ಲಿ ಸೆನ್ಸಾರ್‌ ಮಂಡಳಿಗೆ ಇರುವುದು ಎರಡೇ ಮಾನದಂಡ.

  1. ಕ್ರೌರ್ಯಕ್ಕೆ ಅಲ್ಲಿ ಆಸ್ಪದವಿಲ್ಲ.
  2. ಮಕ್ಕಳ ಎಳೆಯ ಮನಸ್ಸನ್ನು ಘಾಸಿಗೊಳಿಸುವಂತಹ ಚಿತ್ರಗಳನ್ನು ಪ್ರದರ್ಶಿಸಲು ಅಲ್ಲಿ ಅವಕಾಶವಿಲ್ಲ.

  • ಹೌದು ಇಂದು ನಮ್ಮ ಚಿತ್ರಗಳಲ್ಲಿ ಸ್ವಲ್ಪ ಕ್ರೌರ್ಯ ಹಾಗೂ ಸೆಕ್ಸ್‌ ಇದ್ದೇ ಇರುತ್ತದೆ. ಆದರೂ ಈ ಎಲ್ಲವೂ ಕದ ಮುಚ್ಚಿದ ಚಿತ್ರಮಂದಿರಗಳಲ್ಲಿ ಮಾತ್ರ ಪ್ರದರ್ಶಿಸಲ್ಪಡುತ್ತವೆ. ಯಾರಿಗೆ ಇದು ಬೇಕೋ ಅವರು ಬಂದು ನೋಡುತ್ತಾರೆ. ಯಾರಿಗೆ ಬೇಡವೋ ಅವರಿಗೆ ಚಿತ್ರಮಂದಿರದಿಂದ ಎದ್ದು ಹೊರಹೋಗುವ ಸ್ವಾತಂತ್ರ್ಯ ಇದ್ದೇ ಇದೆ.
  • ಉದಾಹರಣೆಗೆ ಪೂಲನ್‌ ದೇವಿ ಚಿತ್ರವನ್ನೆ ತೆಗೆದುಕೊಳ್ಳಿ. ನಿಜ ಜೀವನದಲ್ಲಿ ಆಕೆ ಎಷ್ಟೆಲ್ಲಾ ಕಷ್ಟ ಕೋಟಲೆ ಅನುಭವಿಸಿದಳು. ನಾವು ಚಲನಚಿತ್ರದಲ್ಲಿ ಆಕೆಯ ನೋವನ್ನು ಪ್ರತಿಬಿಂಬಿಸದಿದ್ದರೆ, ಅದು ನೈಜತೆಗೆ ನಾವು ಮಾಡಿದ ಅನ್ಯಾಯವಾಗುತ್ತದೆ.
  • ಕ್ವೀನ್‌ ಎಲಿಜೆಬೆತ್‌ ಚಿತ್ರ ಅಮೆರಿಕದಲ್ಲಿ ಹೇಗೆ ಸೆನ್ಸಾರ್‌ನಿಂದ ತೇರ್ಗಡೆಯಾಗಿ ಪ್ರದರ್ಶಿತವಾಯಿತು. ಆದರೆ, ಭಾರತದಲ್ಲಿ ಅದು ಪ್ರದರ್ಶಿತವಾಗುವಾಗ ಚಿತ್ರದ ಭಾಗಗಳನ್ನು ಖಂಡತುಂಡವಾಗಿ ಕತ್ತರಿಸಲಾಗಿತ್ತು.
  • ಪ್ರತಿದಿನವೂ ಟಿ.ವಿಗಳಲ್ಲಿ ನಾವು ಏನೆಲ್ಲಾ ನೋಡುತ್ತೇವೆ. ಅವು ಅಲ್ಲಿ ಪ್ರದರ್ಶನ ಯೋಗ್ಯವೆ ಅಲ್ಲ.
  • ಟಿವಿಯಲ್ಲಿ ನೋಡುವುದನ್ನು ಚಲನಚಿತ್ರಗಳಲ್ಲಿ ಮರೆಮಾಡುವ ಪ್ರವೃತ್ತಿಯ ಹಿಂದಡಗಿರುವ ಲಾಜಿಕ್‌ ನನಗೆ ತಿಳಿದಿಲ್ಲ.
  • ನಮ್ಮ ಚಲನಚಿತ್ರಗಳು ಬೋಲ್ಡ್‌ ಅಂಡ್‌ ಬ್ಯೂಟಿಫುಲ್‌ ಆಗಿ ಬರಬೇಕು.

  English summary
  On Wednesday he was in Bangalore. Vijayanand addressed members of Karnataka regional sensor board at Badami House, film Wallas thinking room!

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more