Leo Kannada Poster: ಯಶ್ 'KGF' ದಾಖಲೆ ಉಡೀಸ್: 'ಲಿಯೋ' ಕನ್ನಡ ಫಸ್ಟ್ ಲುಕ್ ಪೋಸ್ಟರ್ ಹೊಸ ದಾಖಲೆ

ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿದ್ದು ಸದ್ಯ ಪೋಸ್ಟರ್ ರಿಲೀಸ್ ಆಗಿ ಸಂಚಲನ ಸೃಷ್ಟಿಸಿದೆ.

ರಜನಿಕಾಂತ್ ಬಿಟ್ಟರೆ ಕಾಲಿವುಡ್‌ನಲ್ಲಿ ಆ ಮಟ್ಟಿಗಿನ ಕ್ರೇಜ್ ಇರುವ ಮತ್ತೊಬ್ಬ ನಟ ವಿಜಯ್. ಲೋಕೇಶ್ ಕನಕರಾಜ್ ನಿರ್ದೇನದಲ್ಲಿ ದಳಪತಿ ನಟನೆಯ 'ಲಿಯೋ' ಸಿನಿಮಾ ದಸರಾ ಸಂಭ್ರಮದಲ್ಲಿ ತೆರೆಗೆ ಬರಲಿದೆ. ಸೆವೆನ್ ಸ್ಕ್ರೀನ್ ಸ್ಟುಡಿಯೋ ಬ್ಯಾನರ್‌ನಲ್ಲಿ ಬಹಳ ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣವಾಗ್ತಿದೆ. ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿ ನಟಿಸಿದ್ದು ಅರ್ಜುನ್ ಸರ್ಜಾ ಹಾಗೂ ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ಅಬ್ಬರಿಸಿದ್ದಾರೆ.

Vijays-Leo-Kannada-Poster-record

ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ 'ಲಿಯೋ' ಸಿನಿಮಾ ಮೂಡಿ ಬರ್ತಿದೆ. ಅಕ್ಟೋಬರ್ 19ಕ್ಕೆ ಸಿನಿಮಾ ತೆರೆಗೆ ಬರಲಿದೆ. ಇತ್ತೀಚೆಗೆ ಬಿಡುಗಡೆಯಾದ 'ಲಿಯೋ' ತೆಲುಗು ಪೋಸ್ಟರ್‌ ವೈರಲ್ ಆಗಿತ್ತು. ಹಬ್ಬದ ಸಂಭ್ರಮದಲ್ಲಿ ಬಂದಿರೋ ಕನ್ನಡ ಪೋಸ್ಟರ್ ಕೂಡ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ನಟ ವಿಜಯ್ ತಮ್ಮ ಟ್ವಿಟ್ಟರ್ ಹಾಗೂ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಿರುವ ಪೋಸ್ಟರ್ ಸದ್ಯ ದಾಖಲೆ ಬರೆದಿದೆ.

ಅತಿ ಹೆಚ್ಚು ಲೈಕ್ಸ್‌ ಪಡೆದ ಕನ್ನಡ ಸಿನಿಮಾ ಫಸ್ಟ್ ಲುಕ್ ಪೋಸ್ಟರ್‌ ಎನ್ನುವ ದಾಖಲೆ 'ಲಿಯೋ' ಪಾಲಾಗಿದೆ. ಲಕ್ಷ ಲಕ್ಷ ಲೈಕ್ಸ್‌ ಸಾಧಿಸಿ ಪೋಸ್ಟರ್ ಸಖತ್ ವೈರಲ್ ಆಗ್ತಿದೆ. ಪಿಸ್ತೂಲಿನ ಮೇಲೆ ಸ್ಟೈಲಿಶ್ ಲುಕ್‌ನಲ್ಲಿ ವಿಜಯ್ ಕುಳಿತಂತೆ ಇರುವ ಪೋಸ್ಟರ್ ಅಭಿಮಾನಿಗಳ ಮನಗೆದ್ದಿದೆ. ಕನ್ನಡ ಸಿನಿಮಾ ಪೋಸ್ಟರ್‌ನ ತಮಿಳು ನೆಟ್ಟಿಗರೇ ಹೆಚ್ಚು ಲೈಕ್, ಶೇರ್ ಮಾಡಿ ವೈರಲ್ ಮಾಡಿಬಿಟ್ಟಿದ್ದಾರೆ.

ಸದ್ಯ ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶ ಇದೆ. ಈ ಹಿಂದೆ ದಳಪತಿ ವಿಜಯ್ ನಟನೆಯ ಯಾವುದೇ ಸಿನಿಮಾ ಕನ್ನಡಕ್ಕೆ ಡಬ್ ಆಗಿ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿರಲಿಲ್ಲ. 'ಲಿಯೋ' ಸಿನಿಮಾ ಮೂಲಕ ಅದು ಸಾಧ್ಯವಾಗುತ್ತಿದೆ. 'ಕೈದಿ', 'ಮಾಸ್ಟರ್', 'ವಿಕ್ರಂ' ರೀತಿಯ ಅದ್ಭುತ ಸಿನಿಮಾಗಳನ್ನು ಕೊಟ್ಟ ಲೋಕೇಶ್ ಕನಕರಾಜ್ ಈ ಬಾರಿ ಯಾವ ಕಥೆ ಹೇಳ್ತಾರೆ ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ.

Vijays-Leo-Kannada-Poster-record

'ಮಾಸ್ಟರ್' ಬಳಿಕ ಇದು ವಿಜಯ್- ಲೋಕೇಶ್ ಕಾಂಬಿನೇಷನ್‌ನ 2ನೇ ಸಿನಿಮಾ. ಕಳೆದ ವರ್ಷ 'ವಿಕ್ರಂ' ಸಿನಿಮಾ ಮೂಲಕ ಕಮಲ್ ಹಾಸನ್‌ಗೆ ಲೋಕೇಶ್ ದೊಡ್ಡ ಬ್ರೇಕ್ ಕೊಟ್ಟಿದ್ದರು. 'ಬೀಸ್ಟ್' ಸಿನಿಮಾದಲ್ಲಿ ಸೋತಿರುವ ದಳಪತಿ ಈಗ 'ಲಿಯೋ' ಆಗಿ ಎದ್ದು ಬರುವ ನಿರೀಕ್ಷೆಯಿದೆ.

ನಟ ವಿಜಯ್‌ಗೆ ಇನ್‌ಸ್ಟಾಗ್ರಾಂ, ಟ್ವಿಟ್ಟರ್‌ನಲ್ಲಿ ದೊಡ್ಡ ಫಾಲೋಯಿಂಗ್ ಇದೆ. ಆತನ ಪ್ರತಿ ಪೋಸ್ಟ್ ಸಖತ್ ಸದ್ದು ಮಾಡುತ್ತದೆ. ಕಳೆದೆರಡು ದಿನಗಳಿಂದ 'ಲಿಯೋ' ಪೋಸ್ಟರ್‌ಗಳ ಆರ್ಭಟ ಜೋರಾಗಿದೆ. ಬರೀ ಇನ್‌ಸ್ಟಾದಲ್ಲಿ 2 ಮಿಲಿಯನ್‌ಗೂ ಹೆಚ್ಚು ಲೈಕ್ಸ್ ಗಿಟ್ಟಿಸಿದೆ. ತೆಲುಗು ಪೋಸ್ಟರ್‌ ಕೂಡ ಗಮನ ಸೆಳೆದಿದೆ. ಇನ್ನು ಅಭಿಮಾನಿಗಳು ಈ ಪೋಸ್ಟರ್ ಬಳಸಿ ತಮ್ಮ ನೆಚ್ಚಿನ ಕಲಾವಿದರ ಪೋಸ್ಟರ್ ಡಿಸೈನ್ ಮಾಡಿ ರಿಲೀಸ್ ಮಾಡ್ತಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಕಲಾವಿದರ ಪಟ್ಟಿಯಲ್ಲಿ ದಳಪತಿ ವಿಜಯ್ ಕೂಡ ಇದ್ದಾರೆ. ಸಿನಿಮಾಗಳ ಕಲೆಕ್ಷನ್, ಸಂಭಾಷಣೆ ವಿಚಾರದಲ್ಲಿ ರಜನಿಕಾಂತ್‌ನ ಕೂಡ ದಳಪತಿ ಮೀರಿಸಿಬಿಟ್ಟಿದ್ದಾರೆ. ಇನ್ನು ರಾಜಕೀಯರಂಗಕ್ಕೆ ಧುಮುಕಲು ಸಹ ದಳಪತಿ ಪ್ಲ್ಯಾನ್ ಮಾಡುತ್ತಿದ್ದಾರೆ. ಈಗಾಗಲೇ ಅದಕ್ಕಾಗಿ ತೆರೆಮರೆಯ ಕೆಲಸಗಳು ಶುರುವಾಗಿದೆ. ಪಾಲಿಟಿಕ್ಸ್‌ಗೆ ಹೋದರೆ ಮತ್ತೆ ಸಿನಿಮಾಗಳಲ್ಲಿ ನಟಿಸೋದು ಅನುಮಾನ. ಅದೇ ಕಾರಣಕ್ಕೆ ಅಭಿಮಾನಿಗಳು ಪ್ರತಿ ಸಿನಿಮಾ ಮೇಲೇ ಭಾರೀ ನಿರೀಕ್ಷೆ ಇಟ್ಟುಕೊಳ್ಳುತ್ತಿದ್ದಾರೆ.

More from Filmibeat

English summary
Leo Kannada Poster Now becomes The Most Liked Kannada First Look In Twitter Within 30 Minutes itself;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X