KGF-2 Vs Leo: ಬೆಂಗಳೂರಿನಲ್ಲಿ ಯಶ್ 'ಕೆಜಿಎಫ್'-2 ದಾಖಲೆ ಮುರಿದ ವಿಜಯ್ 'ಲಿಯೋ'!

ದಸರಾ ಸಂಭ್ರಮದಲ್ಲಿ ಸಿನಿಮಾ ಹಬ್ಬ ಜೋರಾಗಿದೆ. ಕರ್ನಾಟಕದಲ್ಲಿ 'ಘೋಸ್ಟ್' ಸಿನಿಮಾ ಜೊತೆಗೆ ತಮಿಳು, ತೆಲುಗಿನ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿದೆ. ದಳಪತಿ ವಿಜಯ್ ನಟನೆಯ ತಮಿಳಿನ 'ಲಿಯೋ' ಸಿನಿಮಾ ದೊಡ್ಡಮಟ್ಟದಲ್ಲೇ ತೆರೆಗಪ್ಪಳಿಸುತ್ತಿದೆ.

6 ದಿನ ಮೊದ್ಲೆ ಕರ್ನಾಟಕದಲ್ಲಿ 'ಲಿಯೋ' ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ರಾಜ್ಯದ ಪ್ರಮುಖ ಥಿಯೇಟರ್‌ಗಳಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ 'ಲಿಯೋ' ದರ್ಬಾರ್ ಜೋರಾಗಿದೆ. ಟಿಕೆಟ್ ದರ ಕೂಡ ಹೆಚ್ಚಿಸಿದ್ದರೂ ಕೂಡ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಸಿನಿಮಾ ಬಿಡುಗಡೆಗೆ 2 ದಿನ ಬಾಕಿ ಇರುವಾಗಲೇ ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಸಿನಿಮಾ 7 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿದೆ.

Leo-Surpasses-KGF-2-record-in-Bengaluru

ಗುರುವಾರವೇ ಶಿವಣ್ಣನ ನಟನೆಯ 'ಘೋಸ್ಟ್' ಸಿನಿಮಾ ರಿಲೀಸ್ ಆಗುತ್ತಿದೆ. ಆದರೂ ಕೂಡ 'ಲಿಯೋ' ಚಿತ್ರಕ್ಕೆ ಹೆಚ್ಚು ಶೋಗಳು ಸಿಕ್ಕಿವೆ. ಇನ್ನು ತಮಿಳುನಾಡಿನಲ್ಲಿ ಅರ್ಲಿ ಮಾರ್ನಿಂಗ್ ಶೋಗಳಿಗೆ ಅಲ್ಲಿನ ಸರ್ಕಾರ ಅನುಮತಿ ಕೊಟ್ಟಿಲ್ಲ. 9 ಗಂಟೆ ಬಳಿಕವೇ ಸಿನಿಮಾ ಪ್ರದರ್ಶನ ಮಾಡುವಂತೆ ಆದೇಶ ನೀಡಿದೆ. ಆದರೆ ಕರ್ನಾಟಕದಲ್ಲಿ ಬೆಳ್ಳಂಬೆಳಗ್ಗೆ 4 ಗಂಟೆಗೆ 'ಲಿಯೋ' ಫಸ್ಟ್ ಶೋ ಆರಂಭವಾಗುತ್ತಿದೆ.

ಈಗಾಗಲೇ ಗುರುವಾರದ ಸಾಕಷ್ಟು ಅರ್ಲಿ ಮಾರ್ನಿಂಗ್ ಶೋಗಳು ಸೋಲ್ಡ್‌ಔಟ್ ಆಗಿದೆ. ಕೆಲವು ಶೋಗಳು ಫಾಸ್ಟ್‌ ಫಿಲ್ಲಿಂಗ್ ಇದೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲೂ ಟಿಕೆಟ್ ದರ 500 ರೂ. 1000 ರೂ.ಗೆ ಏರಿಕೆಯಾಗಿದ್ದರೂ ಪ್ರೇಕ್ಷಕರು ಬುಕ್ ಮಾಡಿದ್ದಾರೆ. ಸದ್ಯ ವಿಜಯ್ ನಟನೆಯ 'ಲಿಯೋ' ಕನ್ನಡದ 'KGF-2' ಸಿನಿಮಾ ದಾಖಲೆಯೊಂದನ್ನು ಮುರಿದಿದೆ. ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ.

ಕಳೆದ ವರ್ಷ ಏಪ್ರಿಲ್ 14ರಂದು 'KGF-2' ಸಿನಿಮಾ ರಿಲೀಸ್ ಆಗಿತ್ತು. ಬೆಳಗ್ಗೆ 9 ಗಂಟೆಗೂ ಮುನ್ನ ಬೆಂಗಳೂರಿನಲ್ಲಿ 215 ಶೋಗಳಲ್ಲಿ ಸಿನಿಮಾ ಪ್ರದರ್ಶನವಾಗಿತ್ತು. ಆದರೆ 'ಲಿಯೋ' ಸಿನಿಮಾ 9 ಗಂಟೆಗೂ ಮುನ್ನ 240 ಶೋಗಳಲ್ಲಿ ಪ್ರದರ್ಶನ ಕಾಣುತ್ತಿದೆ. ತಮಿಳು ಚಿತ್ರವೊಂದಕ್ಕೆ ಕರ್ನಾಟಕದಲ್ಲಿ ಈ ಮಟ್ಟಿಗಿನ ಕ್ರೇಜ್ ಇರುವುದು ಅಚ್ಚರಿ ಮೂಡಿಸುತ್ತದೆ. ಇನ್ನು ಬೆಳಗ್ಗೆ 4 ಗಂಟೆ ಹಾಗೂ 7 ಗಂಟೆಯ ಬಹುತೇಕ ಶೋಗಳ ಈಗಾಗಲೇ ಸೋಲ್ಡ್‌ಔಟ್ ಆಗೋಗಿದೆ. ಆದರೆ 'KGF-2' ಶೋಗಳ ಸಂಖ್ಯೆ 250 ದಾಟಿತ್ತು ಎನ್ನುವ ವಾದವೂ ಇದೆ.

'KGF'-2 ಚಿತ್ರಕ್ಕೆ ಪ್ರೀಕ್ವೆಲ್ ಗೆಲುವಿನ ಬೆಂಬಲ ಇತ್ತು. ಆದರೆ 'ಲಿಯೋ' ತಮಿಳು ಸಿನಿಮಾ. ನಟ ವಿಜಯ್ ಈವರೆಗೆ ಒಂದೇ ಒಂದು ಸಂದರ್ಶನ ಕೊಟ್ಟಿಲ್ಲ. ಆಡಿಯೋ ಲಾಂಚ್, ಟ್ರೈಲರ್ ಈವೆಂಟ್ ಮಾಡಲಿಲ್ಲ. ಆದರೂ ಸಿನಿಮಾ ಕರ್ನಾಟಕದಲ್ಲಿ ಈಮಟ್ಟಿಗಿನ ಕ್ರೇಜ್ ಸೃಷ್ಟಿಸಿಕೊಂಡಿರುವುದು ಅಚ್ಚರಿ ಮೂಡಿಸುತ್ತದೆ. ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

ಆಗಸ್ಟ್ 10ಕ್ಕೆ ರಿಲೀಸ್ ಆಗಿದ್ದ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಕೂಡ ಇದೇ ರೀತಿ ಸದ್ದು ಮಾಡಿತ್ತು. ಕರ್ನಾಟಕದಲ್ಲೇ ಸಿನಿಮಾ 50 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಧೂಳೆಬ್ಬಿಸಿತ್ತು. ಇದೀಗ 'ಜೈಲರ್' ಮಾತ್ರವಲ್ಲ ಕನ್ನಡ ಸಿನಿಮಾಗಳನ್ನು ಹಿಂದಿಕ್ಕಿ 'ಲಿಯೋ' ಭರ್ಜರಿ ಓಪನಿಂಗ್ ಪಡೆದುಕೊಳ್ಳುವ ಸುಳಿವು ಸಿಗುತ್ತಿದೆ. ಚಿತ್ರದಲ್ಲಿ ಸಂಜಯ್ ದತ್ ಹಾಗೂ ಅರ್ಜುನ್ ಸರ್ಜಾ ಕೂಡ ಅಬ್ಬರಿಸಿದ್ದಾರೆ.

ಕಳೆದ ವರ್ಷ ವಿಜಯ್ ನಟನೆಯ 'ಬೀಸ್ಟ್' ಸಿನಿಮಾ 'KGF-2' ಎದುರು ಬಂದು ಸೋತಿತ್ತು. ಆದರೆ ಈ ಬಾರಿ ಲೋಕೇಶ್ ಕನಕರಾಜ್ ಮೇಲೆ ಬಹಳ ನಿರೀಕ್ಷೆಯಿದೆ. ಇನ್ನು ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರದ ಮತ್ತೊಂದು ಹೈಲೆಟ್ ಆಗುವ ಸಾಧ್ಯತೆಯಿದೆ. ಶ್ರೀನಿ ನಿರ್ದೇಶನದಲ್ಲಿ ಶಿವಣ್ಣ ನಟನೆಯ 'ಘೋಸ್ಟ್' ಸಿನಿಮಾ ಕೂಡ ಈ ವಾರ ರಿಲೀಸ್ ಆಗುತ್ತಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಆದರೆ ಅರ್ಲಿ ಮಾರ್ನಿಂಗ್ ಶೋ ಬುಕ್ಕಿಂಗ್ ಇನ್ನು ಓಪನ್ ಆಗಿಲ್ಲ.

More from Filmibeat

English summary
240 shows are scheduled before 9am for Leo on day 1 in Bengaluru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X