ಕನ್ನಡಕ್ಕೆ ಬಂದ ತಮಿಳಿನ 'ಮಾಸ್ಟರ್': ಪೋಸ್ಟರ್ ಬಿಡುಗಡೆ

ತಮಿಳಿನ ಖ್ಯಾತ ನಟ ವಿಜಯ್ ಅವರ ಮುಂಬರುವ ತಮಿಳು ಚಿತ್ರ 'ಮಾಸ್ಟರ್'ನ ಕನ್ನಡ ಅವತರಣಿಕೆಯ ಪೋಸ್ಟರ್ ಇಂದು ಬಿಡುಗಡೆ ಆಗಿದೆ.

Recommended Video

ದುನಿಯಾ ವಿಜಯ್ ಗೆ ತುಂಬಾ ಭಯ ಇತ್ತು..! | Salaga | Manju Masti | Duniya Vijay | Sanjana Anand | Dhananjaya

ವಿಜಯ್ ಮತ್ತು ವಿಜಯ್ ಸೇತುಪತಿ ಜೊತೆಯಾಗಿ ನಟಿಸುತ್ತಿರುವ ಮಾಸ್ಟರ್ ಚಿತ್ರ ಏಪ್ರಿಲ್ 9 ರಂದು ಬಿಡುಗಡೆ ಆಗಲಿದ್ದು, ಚಿತ್ರ ಕನ್ನಡಕ್ಕೆ ಡಬ್ಬಿಂಗ್ ಆಗುತ್ತಿದ್ದು, ಚಿತ್ರದ ಕನ್ನಡ ಪೋಸ್ಟರ್ ಇಂದು ಬಿಡುಗಡೆ ಆಗಿದೆ.

ತಮಿಳಿನಲ್ಲಿ 'ಮಾಸ್ಟರ್' ಕನ್ನಡಕ್ಕೂ 'ಮಾಸ್ಟರ್' ಆಗಿಯೇ ತೆರೆಗೆ ಬರಲಿದೆ. ಹೆಸರಿನಲ್ಲಿ ಬದಲಾವಣೆ ಏನೂ ಮಾಡಲಾಗಿಲ್ಲ. ಮಾಸ್ಟರ್ ಹೆಸರಿನಲ್ಲಿಯೇ ಕನ್ನಡದಲ್ಲೂ ಬಿಡುಗಡೆ ಕಾಣಲಿದೆ.

ಅದೇ ದಿನ ಬಿಡುಗಡೆ ಆಗಲಿದೆ ರಾಬರ್ಟ್

ಅದೇ ದಿನ ಬಿಡುಗಡೆ ಆಗಲಿದೆ ರಾಬರ್ಟ್

ಏಪ್ರಿಲ್ 9 ರಂದೇ ದರ್ಶನ್ ಅಭಿನಯದ ಕನ್ನಡದ ರಾಬರ್ಟ್ ಚಿತ್ರ ತೆರೆಗೆ ಬರಲಿದೆ. ಅದೇ ದಿನ ಮಾಸ್ಟರ್ ಸಹ ಬಿಡುಗಡೆ ಆಗಲಿದ್ದು, ಪೈಪೋಟಿ ಎದುರಾಗಲಿದೆ.

 ಕೊರೊನಾ ಭೀತಿಯಿಂದ ಚಿತ್ರಮಂದಿರಗಳು ಬಂದ್?

ಕೊರೊನಾ ಭೀತಿಯಿಂದ ಚಿತ್ರಮಂದಿರಗಳು ಬಂದ್?

ಆದರೆ ಕೊರೊನಾ ಭೀತಿಯಿಂದಾಗಿ ಚಿತ್ರಮಂದಿರಗಳನ್ನು ಕೆಲ ಕಾಲ ಮುಚ್ಚುವ ಆದೇಶವನ್ನು ಈಗಾಗಲೇ ಕೆಲವು ರಾಜ್ಯಗಳು ಹೊರಡಿಸಿವೆ. ಜನರು ಸಹ ಭೀತಿಯಿಂದ ಚಿತ್ರಮಂದಿರಗಳ ಕಡೆಗೆ ಬರುತ್ತಿಲ್ಲ. ಹಾಗಾಗಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆಯೂ ಇದೆ.

ರಾಬರ್ಟ್ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ

ರಾಬರ್ಟ್ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ

ಕೊರೊನಾ ಭೀತಿಯಿಂದಾಗಿ ರಾಬರ್ಟ್ ಸಿನಿಮಾವು ವಿದೇಶಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿ ದೇಶದಲ್ಲಿಯೇ ಚಿತ್ರೀಕರಣ ನಡೆಸುವ ನಿರ್ಧಾರಕ್ಕೆ ಬಂದಿದೆ. ಹಾಗಾಗಿ ಅದರ ಬಿಡುಗಡೆ ದಿನಾಂಕ ಸಹ ಬದಲಾಗುವ ಸಾಧ್ಯತೆ ಇದೆ.

'ಖೈದಿ' ನಿರ್ದೇಶಕ ಚಿತ್ರ 'ಮಾಸ್ಟರ್'

'ಖೈದಿ' ನಿರ್ದೇಶಕ ಚಿತ್ರ 'ಮಾಸ್ಟರ್'

'ಮಾಸ್ಟರ್' ಚಿತ್ರವನ್ನು ಲೋಕೇಶ್ ಕನಕರಾಜನ್ ನಿರ್ದೇಶಿಸಿದ್ದಾರೆ. ಅವರೇ ನಿರ್ದೇಶಿಸಿದ್ದ 'ಖೈದಿ' ಸಿನಿಮಾದ ದೊಡ್ಡ ಯಶಸ್ಸಿನ ಬಳಿಕ ಈ ಸಿನಿಮಾ ಮೇಲೆ ನಿರೀಕ್ಷೆ ಇನ್ನೂ ಹೆಚ್ಚಾಗಿದೆ.

More from Filmibeat

English summary
Tamil star Vijay's movie Master is going to release in Kannada soon. Poster released today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X