'ಸರ್ಕಾರ್' ಕಲೆಕ್ಷನ್ ಬ್ರೇಕ್ ಮಾಡುವಲ್ಲಿ ಸೋತ 'ಬಿಗಿಲ್'
ಕಾಲಿವುಡ್ ಸ್ಟಾರ್ ನಟ ವಿಜಯ್ ಅಭಿನಯದ ಬಹು ನಿರೀಕ್ಷೆಯ ಬಿಗಿಲ್ ಸಿನಿಮಾ ನಿನ್ನೆ(ಅಕ್ಟೋಬರ್ 25) ಅದ್ದೂರಿಯಾಗಿ ತೆರೆಗೆ ಬಂದಿದೆ. ಸೂಪರ್ ಹಿಟ್ ಸರ್ಕಾರ್ ಸಿನಿಮಾ ನಂತರ ವಿಜಯ್ ಬಿಗಿಲ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಬಾರಿ ನಿರೀಕ್ಷೆ ಮತ್ತು ಕುತೂಹಲಗಳೊಂದಿಗೆ ತೆರೆಗೆ ಬಂದಿರುವ ಬಿಗಿಲ್ ನೋಡಿ ಚಿತ್ರಪ್ರಿಯರು ಕುಣಿದು ಕುಪ್ಪಳಿಸಿದ್ದಾರೆ.
ಗ್ರ್ಯಾಂಡ್ ಎಂಟ್ರಿ ಕೊಟ್ಟ ಬಿಗಿಲ್ ತಮಿಳುನಾಡಿನಲ್ಲಿ ಮೊದಲ ದಿನ ಬರೋಬ್ಬರಿ 22 ಕೋಟಿ ಬಾಚಿಕೊಂಡಿದೆ. ಆದರೆ ವಿಜಯ್ ಅಭಿನಯದ ಸರ್ಕಾರ್ ಸಿನಿಮಾದ ಕಲೆಕ್ಷನ್ ಬ್ರೇಕ್ ಮಾಡುವಲ್ಲಿ ಬಿಗಿಲ್ ಸೋತಿದೆ. ಚೆನ್ನೈ ಸಿಟಿಯಲ್ಲಿ ಬಿಗಿಲ್ 1.80 ಕೋಟಿ ಬಾಚಿಕೊಂಡಿದೆ. ಈ ವರ್ಷದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಇದಾಗಿದೆ.
ಕಳೆದ ವರ್ಷ ತೆರೆಗೆ ಬಂದ ಸರ್ಕಾರ್ ಸಿನಿಮಾ ಮೊದಲ ದಿನ 31.5 ಕೋಟಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತ್ತು. ಮೆರ್ಸೆಲ್ ಸಿನಿಮಾ 24.8 ಕೋಟಿ ಕಲೆಕ್ಷನ್ ಮಾಡಿತ್ತು. ಬಿಗಿಲ್ 22 ಕೋಟಿ ಬಾಚಿಕೊಂಡಿದೆ. ಬಿಗಿಲ್ ನಿರ್ದೇಶಕ ಆಟ್ಲೀ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ಮತ್ತೊಮ್ಮೆ ಆಟ್ಲೀ ಮತ್ತು ವಿಜಯ್ ಕಾಂಬಿನೇಷನ್ ಅಭಿಮಾನಿಗಳ ಮನಗೆದ್ದಿದೆ.

ಈಗಾಗಲೆ ಸಾಕಷ್ಟು ಚಿತ್ರಮಂದಿರಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಇನ್ನೂ ದೀಪಾವಳಿ ಕೂಡ ಇರುವುದರಿಂದ ಸಾಲು ಸಾಲು ರಜೆ ಇದೆ. ಇದರಿಂದ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ತೆಲುಗಿನಲ್ಲಿಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿ ವಿಜಯ್ ದ್ವಿಪಾತ್ರದಲ್ಲಿ ಮಿಂಚಿದ್ದಾರೆ. ವಿಜಯ್ ಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ.


Click it and Unblock the Notifications











