twitter
    For Quick Alerts
    ALLOW NOTIFICATIONS  
    For Daily Alerts

    'ಕೆಂಡಸಂಪಿಗೆ' ವಿಕ್ಕಿಯ ಫೇಸ್ ಬುಕ್ ಪೋಸ್ಟ್ ಕನ್ನಡ ಪ್ರೇಕ್ಷಕರು ಓದಬೇಕು

    |

    ಚಿತ್ರಮಂದಿರಲ್ಲಿ ಸಿನಿಮಾ ನೋಡುವುದಕ್ಕೆ ದೂರದ ಊರುಗಳಿಂದ ನಗರಕ್ಕೆ ಬರ್ತಿದ್ದರು. ರಾತ್ರಿ ಮನೆಗೆ ಹಿಂತಿರುಗುವುದು ತಡವಾಗುತ್ತೆ ಎಂದು ಗೊತ್ತಿದ್ದರೂ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಂಡು ಸಿನಿಮಾ ವೀಕ್ಷಿಸಲು ಹೋಗುತ್ತಿದ್ದ ಕಾಲ ಇತ್ತು.

    ಆದ್ರೀಗ, ಜನರನ್ನು ಚಿತ್ರಮಂದಿರಕ್ಕೆ ಬನ್ನಿ ಬನ್ನಿ ಎಂದು ಕೇಳಿಕೊಳ್ಳುವಂತಾಗಿದೆ. ಅದಕ್ಕೆ ಕಾರಣ ಹಲವು. ಆದರೆ ಇಂದಿನ ಪರಿಸ್ಥಿತಿಯಿಂದ ಅನೇಕ ಕನ್ನಡ ಸಿನಿಮಾಗಳು ಪ್ರೇಕ್ಷಕರ ಕೊರತೆ ಅನುಭವಿಸುತ್ತಿದೆ.

    <br>ಕನ್ನಡ ಸಿನಿಮಾ ಮಾಡೋದೆ ತಪ್ಪಾ?: ಕೃಷ್ಣ, ರಘು ದೀಕ್ಷಿತ್ ಬೇಸರ!
    ಕನ್ನಡ ಸಿನಿಮಾ ಮಾಡೋದೆ ತಪ್ಪಾ?: ಕೃಷ್ಣ, ರಘು ದೀಕ್ಷಿತ್ ಬೇಸರ!

    ಈ ವಾರ ಕನ್ನಡದಲ್ಲಿ ಹನ್ನೊಂದು ಸಿನಿಮಾ ತೆರೆಕಂಡಿತ್ತು. ಅದರಲ್ಲಿ ಕೆಲವು ಚಿತ್ರಗಳು ಚೆನ್ನಾಗಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಸಿನಿಮಾ ಚೆನ್ನಾಗಿದ್ದರೂ ಕೆಲವು ಸಿನಿಮಾಗೆ ಚಿತ್ರಮಂದಿರ ಸಿಗುತ್ತಿಲ್ಲ, ಇನ್ನು ಕೆಲವಕ್ಕೆ ಆಡಿಯೆನ್ಸ್ ಬರುತ್ತಿಲ್ಲ. ಈ ಕುರಿತು ಕೆಂಡಸಂಪಿಗೆ ನಟ ವಿಕ್ಕಿ ತಮ್ಮ ಫೇಸ್ ಬುಕ್ ಪೊಸ್ಟ್ ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಆ ಪೋಸ್ಟ್ ನಲ್ಲಿ ಏನಿದೆ? ಮುಂದೆ ಓದಿ....

    ಥಿಯೇಟರ್ ಗೆ ಬನ್ನಿ

    ಥಿಯೇಟರ್ ಗೆ ಬನ್ನಿ

    ''ಕನ್ನಡ ಸಿನಿ ಪ್ರೇಕ್ಷಕರಿಗೆ...

    ಹೃದಯ ವೈಶಾಲ್ಯವುಳ್ಳ ನೀವು ಒಂದೊಳೆಯ ಸಿನಿಮಾ ಬಂದಾಗ ಕೈ ಬಿಟ್ಟ ಉದಾಹರಣೆಯೆ ಇಲ್ಲ ಅಂತ ಸಹೃದಯಿಗಳು. ಇತ್ತೀಚೆಗೆ ಥೇಟರ್ ಕಡೆ ಮುಖ ಮಾಡುತ್ತಿಲ್ಲ, ನೀವು ನಿರೀಕ್ಷೆ ಇಟ್ಟಿದ್ದ ಒಂದೆರೆಡು ಸಿನಿಮಾ ನಿಮ್ ನಿರಿಕ್ಷಿತ ಮಟ್ಟದಲ್ಲಿ ಇಲ್ಲದಿರಬಹುದು ಅಷ್ಡಕ್ಕೆ ನಮ್ಮನ್ನ ಸಾರಾಸಗಟಾಗಿ ನಿರ್ಲಕ್ಷಿಸಿದೆ ಬನ್ನಿ ಚಿತ್ರಮಂದಿರಕ್ಕೆ ನೀವು ನಿರೀಕ್ಷಿಸುವ ಮನರಂಜನೆ ಖಂಡಿತ ಸಿಕ್ಕೆ ಸಿಗುತ್ತದೆ. ಯಾಕಂದ್ರೆ ಈ 4 ಸಿನಿಮಾ ಗಳನ್ನ ತಯಾರಿಸಿರುವುದು ನಿಮ್ಮಂತ ಅಪ್ಪಟ ಸಿನಿಮಾ ಪ್ರೇಮಿಗಳೆ. ತಾವೇ ಕೂಡಿಟ್ಟ ಹಣದಿಂದ ಕಟ್ಟುಕೊಂಡ ಕನಸಿಂದ ಸಿನಿಮಾ ಮಾಡಿದಾರೆ'' - ವಿಕ್ಕಿ

    ಬುಕ್ ಮೈ ಶೋ ದಂಧೆಯ ವಿರುದ್ಧ 'ಯುವರತ್ನ' ನಿರ್ದೇಶಕ, ನಿರ್ಮಾಪಕರ ಆಕ್ರೋಶ ಬುಕ್ ಮೈ ಶೋ ದಂಧೆಯ ವಿರುದ್ಧ 'ಯುವರತ್ನ' ನಿರ್ದೇಶಕ, ನಿರ್ಮಾಪಕರ ಆಕ್ರೋಶ

    ಲಾಭಕ್ಕಾಗಿ ಸಿನಿಮಾ ಮಾಡಿಲ್ಲ

    ಲಾಭಕ್ಕಾಗಿ ಸಿನಿಮಾ ಮಾಡಿಲ್ಲ

    ''ಕಾಣದಂತೆ ಮಾಯವಾದನು' ಸಿನಿಮಾಗೆ ಬಂಡವಾಳ ಹಾಕಿರೋದು ನಿರ್ದೇಶಕರ ಕಸಿನ್ನು, 'ಲವ್ ಮಾಕ್ಟೈಲ್' ನಿರ್ದೇಶನ ಮತ್ತು ನಿರ್ಮಾಣನೂ ಡಾರ್ಲಿಂಗ್ ಕೃಷ್ಣ ಅವರದ್ದೆ ಇನ್ 'ಜಂಟಲ್ ಮನ್' ನಿರ್ದೇಶನ ಜಡೇಶ್ ಕುಮಾರ್ ಹಂಪಿ ಇನ್ನು ನಿರ್ದೇಶಕರಾದ ದೇಶಪಾಂಡೆಯವರೆ ಅನ್ನದಾತರು. 'ದಿಯಾ' ನಿರ್ದೇಶಕ ಅಶೋಕ್ ನಿರ್ಮಾಣ ಕೃಷ್ಣ ಚೈತನ್ಯ. ಇವರಾರು ನೂರಾಕಿ ಕೋಟಿ ಲಾಭ ಮಾಡಬೇಕೆಂಬ ಲೋಭ ದಿಂದ ಸಿನಿಮಾ ಮಾಡಿಲ್ಲ, ನಿಮ್ಮನ್ ರಂಜಿಸಿ ನೀವು ಕೊಡುವ ನೂರು ರೂಗೆ ನ್ಯಾಯ ಒದಗಿಸಿ ತಾವಾಕಿದ ನೂರು ರೂ ವಾಪಸಾದ್ರೆ ಸಾಕೆಂಬ ಮನಸಿಂದ ತಾವು ಕಷ್ಟ ಪಟ್ಟು ನಿಮಗಿಷ್ಟವಾಗುವಂತ ಸಿನಿಮಾ ಮಾಡಿದ್ದಾರೆ...!'' - ವಿಕ್ಕಿ

    ದಯವಿಟ್ಟು ಬೆಂಬಲಕ್ಕೆ ನಿಲ್ಲಿ

    ದಯವಿಟ್ಟು ಬೆಂಬಲಕ್ಕೆ ನಿಲ್ಲಿ

    ''ಖಂಡಿತ ನಿಮಗೆ ನಿರಾಸೆಯಾಗುವುದಿಲ್ಲ. ಅವರ ಪ್ರಯತ್ನ ಕ್ಕೆ ಬೆಂಬಲವಾಗಿ ನಿಲ್ಲಿ. ಯಾಕಂದ್ರೆ ಹಿಂದಿ ತೆಲುಗು ತಮಿಳಲ್ಲಿ ಯಾವುದೆ ಒಳ್ಳೆಯ ಸಿನಿಮಾ ಬಂದಿಲ್ಲ, ಬಂದಿದ್ದನ್ನ ನೀವಾಗಲೆ ನೋಡಿರಬಹುದು. ಮತ್ತೆ #Amazonprime #Netflix ಯಾವುದೆ ಒಳ್ಳೆಯ ವೆಬ್ ಸೀರಿಸ್ ಇಲ್ಲ. ಇನ್ನ #IPL ತುಂಬಾ ದೂರ ಇದೆ. ಎಕ್ಸಾಮು ಮಾರ್ಚಿನ ಕೊನೆಗೆ ದೆಹಲಿ ಎಲೆಕ್ಷನ್ ಗೂ ನಮಗೂ ಸಂಬಂಧ ಇಲ್ಲ, ಮತ್ತೆ ಸರ್ಕಾರ ಸಂಪುಟ ರಚನೆ ಮಾಡಾಯ್ತು ಕೊನೆಗೆ ಕೊರೊನ ವೈರಸ್ಸು ಕರ್ನಾಟಕ ಕ್ಕೆ ತನ್ನ ಎಡಗಾಲು ಇಟ್ಟಿಲ್ಲ...! ಮತ್ಯಾಕ್ ತಡ ಮುನಿಸು ಮರೆತು ಥೇಟ್ರಿಗೆ ಬನ್ನಿ ಸಿನಿಮಾ ನೋಡಿ ಎಂಜಾಯ್ ಮಾಡಿ, ಮನಸಾದ್ರೆ ನಾಲ್ಕು ಜನಕ್ಕೆ ಹೇಳಿ ...'' ಎಂದು ನಟ ವಿಕ್ಕಿ ವಿನಂತಿಸಿಕೊಂಡಿದ್ದಾರೆ.

    ವಿಕ್ಕಿ ಮುಂದಿನ ಸಿನಿಮಾ ಯಾವುದು

    ವಿಕ್ಕಿ ಮುಂದಿನ ಸಿನಿಮಾ ಯಾವುದು

    ದುನಿಯಾ ಸೂರಿ ನಿರ್ದಶನದ ಕೆಂಡಸಂಪಿಗೆ ಸಿನಿಮಾದಲ್ಲಿ ಯಶಸ್ಸು ಕಂಡ ನಟ, ನಂತರ ಕಾಲೇಜ್ ಕುಮಾರ ಎಂಬ ಸಿನಿಮಾ ಮಾಡಿದರು. ಆ ಚಿತ್ರವೂ ಹಿಟ್ ಆಗಿತ್ತು. ಆಮೇಲೆ 'ರಂಗ' ಎಂಬ ಚಿತ್ರ ಶುರು ಮಾಡಿದರು.

    English summary
    'Kendasampige' hero Vikky Varun request to kannada film audience to come and watch kannada movies in theater.
    Sunday, February 9, 2020, 15:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X