For Quick Alerts
  ALLOW NOTIFICATIONS  
  For Daily Alerts

  ಕ್ರೇಜಿಸ್ಟಾರ್ ದ್ವಿತೀಯ ಪುತ್ರ ವಿಕ್ರಮನ 'ತ್ರಿವಿಕ್ರಮ' ಬಿಡುಗಡೆಗೆ ಮುಹೂರ್ತ

  |

  ಕೋವಿಡ್‌ನಿಂದಾಗಿ ಕಂಗಲಾಗಿದ್ದ ಸ್ಯಾಂಡಲ್‌ವುಡ್‌ ಮತ್ತೆ ಚೇತರಿಸಿಕೊಂಡಿದ್ದು, ಈ ವರ್ಷದ ಆರಂಭದಲ್ಲೇ ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ಈಗ ಚಂದನವನದಲ್ಲಿ ಪ್ರೀತಿಯ ಸಿಂಚನ ಮೂಡಿಸಿದ್ದ ಕ್ರೇಜಿಸ್ಟಾರ್‌ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯಿಸಿರುವ 'ತ್ರಿವಿಕ್ರಮ' ಚಿತ್ರದ ರಿಲೀಸ್‌ ಡೇಟ್‌ ಅನ್ನು ಇಂದು (ಮೇ 10) ಚಿತ್ರತಂಡ ಘೋಷಣೆ ಮಾಡಿದೆ.

  ಇಂದು (ಮೇ 10) 'ತ್ರಿವಿಕ್ರಮ' ಚಿತ್ರತಂಡ ಸುದ್ದಿಗೋಷ್ಟಿ ಕರೆದು ಸಿನಿಮಾ ಬಿಡುಗಡೆಯಾಗುವ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಇದೇ ಜೂನ್ 24 ರಂದು ಸಿನಿಮಾ ರಾಜ್ಯಾದ್ಯಂತ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ. ಸುದ್ದಿಗೋಷ್ಟಿಯಲ್ಲಿ ನಟಿ ತಾರಾ, ಸಾಧುಕೋಕಿಲಾ, ಮನುರಂಜನ್, ಶರಣ್, ನಟ ವಿಕ್ರಮ್ ಸೇರಿದಂತೆ ಮೊದಲಾದವರು ಭಾಗಿಯಾಗಿದ್ದರು.

  ರವಿಚಂದ್ರನ್ ಮಗ ವಿಕ್ರಮ್ ಮೊದಲ ಸಿನಿಮಾದ ನಿರೀಕ್ಷೆ ಕಂಡು ಭಯ ಆಗ್ತಿದೆರವಿಚಂದ್ರನ್ ಮಗ ವಿಕ್ರಮ್ ಮೊದಲ ಸಿನಿಮಾದ ನಿರೀಕ್ಷೆ ಕಂಡು ಭಯ ಆಗ್ತಿದೆ

  'ತ್ರಿವಿಕ್ರಮ' ಸಿನಿಮಾ ಕೋವಿಡ್ ಕಾಲದಲ್ಲಿಯೇ ಸಿನಿಮಾ ಸೆಟ್‌ ಏರಿ ಚಿತ್ರೀಕರಣವೂ ನಡೆದಿತ್ತು. ಇನ್ನೇನು ಸಿನಿಮಾವನ್ನು ಥಿಯೇಟರ್‌ಗೆ ಬಿಡುವ ಹೊತ್ತಿಗೆ ಕೊರೊನಾ ಎರಡನೇ ಅಲೆ ಪ್ರಮಾಣ ಹೆಚ್ಚಾದ್ದರಿಂದ ಸಿನಿಮಾ ಬಿಡುಗಡೆಯನ್ನು ಮುಂದೂಡಿಕೆ ಮಾಡಲಾಗಿತ್ತು. ಸದ್ಯ ಈಗ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ರವಿಚಂದ್ರನ್ ಪುತ್ರ ವಿಕ್ರಮ್‌ಗೆ ಇದು ಮೊದಲ ಸಿನಿಮಾವಾಗಿದೆ. ಈಗಾಗಲೇ ಸಿನಿಮಾದ ಹಾಡು, ಟ್ರೈಲರ್‌ಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ 'ಪ್ಲೀಸ್ ಮಮ್ಮಿ' ಹಾಡಂತೂ ಯೂಟ್ಯೂಬ್‌ನಲ್ಲಿ ಭಾರೀ ವೀವ್ಸ್‌ ಪಡೆದುಕೊಂಡಿತ್ತು. ಅಲ್ಲದೆ ಹಾಡಿನಲ್ಲೂ ವಿಕ್ರಮ್ ನಟನೆ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಹೀಗಾಗಿ ಸಿನಿಮಾ ಮೇಲಿನ ನಿರೀಕ್ಷೆಯೂ ಕೂಡ ಹೆಚ್ಚಿದೆ.

  ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್‌ ರವಿಚಂದ್ರನ್ ಮೊದಲ ಸಿನಿಮಾ 'ತ್ರಿವಿಕ್ರಮ' ಆಗಿರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗೆ ಬಂದು ಸಿನಿಮಾ ನೋಡಬೇಕು ಅಂತ ಚಿತ್ರತಂಡ ಮನವಿ ಮಾಡಿಕೊಂಡಿದೆ. ಅಲ್ಲದೆ ಮನೋರಂಜನ್ ನಟನೆಯ 'ಪ್ರಾರಂಭ' ಸಿನಿಮಾ ಕೂಡ ಇನ್ನು ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಹೀಗಾಗಿ ರವಿಚಂದ್ರನ್‌ಗೆ ಡಬಲ್ ಧಮಾಕ ಸಿಕ್ಕಂತಾಗಿದೆ.

  'ತ್ರಿವಿಕ್ರಮ' ಸಿನಿಮಾಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಇದ್ದು, ಸಂತೋಷ್ ರೈ ಛಾಯಾಗ್ರಹಣ ಮಾಡಿದ್ದಾರೆ. ಈಗಾಗಲೇ ಚಿತ್ರದ ಆಡಿಯೋ ರೈಟ್ಸ್‌ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎಂದು ಸುದ್ದಿಯಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ.

  ತೆರೆಮೇಲೆ ತಂದೆ-ಮಗನ ಜುಗಲ್ ಬಂದಿ: ವಿಕ್ರಮ್ ಹೊಸ ಸಿನಿಮಾದಲ್ಲಿ ದೊಡ್ಡ ಬದಲಾವಣೆತೆರೆಮೇಲೆ ತಂದೆ-ಮಗನ ಜುಗಲ್ ಬಂದಿ: ವಿಕ್ರಮ್ ಹೊಸ ಸಿನಿಮಾದಲ್ಲಿ ದೊಡ್ಡ ಬದಲಾವಣೆ

  ಕೇಜ್ರಿಸ್ಟಾರ್ ರವಿಚಂದ್ರನ್ ಮಗನ ಮದುವೆ ಆಮಂತ್ರಣ ಪತ್ರಿಕೆ ವೈರಲ್? ಪತ್ರಿಕೆಯಲ್ಲಿ ಅಂಥದ್ದೇನಿದೆ ?ಕೇಜ್ರಿಸ್ಟಾರ್ ರವಿಚಂದ್ರನ್ ಮಗನ ಮದುವೆ ಆಮಂತ್ರಣ ಪತ್ರಿಕೆ ವೈರಲ್? ಪತ್ರಿಕೆಯಲ್ಲಿ ಅಂಥದ್ದೇನಿದೆ ?

  Vikram Ravichandrans debut Movie Trivikrama Releasing on June 24th
  English summary
  Crazy Star Ravichandran Son Vikram Ravichandran's debut Movie Trivikrama releasing on June 24th. Know more.
  Tuesday, May 10, 2022, 17:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X