India
  For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಬಿಡುಗಡೆಗೆ 20 ದಿನ ಮುನ್ನ ಕೊನೆಯ ಸಾಂಗ್ ಶೂಟ್ ಮುಗಿಸಿದ 'ತ್ರಿವಿಕ್ರಮ್'!

  |

  ಕ್ರೇಜಿಸ್ಟಾರ್ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್‌ಗೋಸ್ಕರ್ ಅಖಾಡ ರೆಡಿಯಾಗಿದೆ. 'ತ್ರಿವಿಕ್ರಮ್‌' ಆಗಿ ವಿಕ್ರಮ್ ಥಿಯೇಟರ್‌ಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದ್ದಾರೆ. ಒಂದ್ಕಡೆ ಸಿನಿಮಾದ ಪ್ರಮೋಷನ್ ನಡೆಯುತ್ತಿದ್ದರೆ, ಇನ್ನೊಂದು ಕೊನೆಯ ಹಾಡಿನ ಶೂಟಿಂಗ್ ನಡೆಯುತ್ತಿತ್ತು.

  ಅದ್ಧೂರಿ ಸೆಟ್‌ ಹಾಕಿ ತ್ರಿವಿಕ್ರಮ್ ಸಿನಿಮಾದ ಕೊನೆಯ ಹಾಡನ್ನು ಶೂಟ್ ಮಾಡಲಾಗಿದೆ. ಈ ಸದ್ಯ ಈ ಹಾಡಿನ ಚಿತ್ರೀಕರಣ ಮುಗಿದಿದ್ದು, ಇನ್ನು ಉಳಿದ ದಿನಗಳನ್ನು ಸಿನಿಮಾ ಪ್ರಚಾರಕ್ಕೆ ಮೀಸಲಿರಿಸಿದೆ. ಸದ್ಯ 'ತ್ರಿವಿಕ್ರಮ್' ಸಿನಿಮಾ ಬಗ್ಗೆ ಸ್ಯಾಂಡಲ್‌ವುಡ್‌ನಿಂದ ಹಿಡಿದು, ಕ್ರೇಜಿಸ್ಟಾರ್ ಅಭಿಮಾನಿಗಳವರೆಗೂ ನಿರೀಕ್ಷೆ ಬೆಟ್ಟದಷ್ಟಿದೆ.

  ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್ ಎಂಟ್ರಿ ನೋಡಲು ಸ್ಯಾಂಡಲ್‌ವುಡ್ ಕಾಯುತ್ತಿದೆ. ಅದಕ್ಕೆ ತಕ್ಕಂತೆ ಚಿತ್ರತಂಡ ಕೂಡ ಶತಪ್ರಯತ್ನ ನಡೆಸಿದೆ. ವಿಕ್ರಮ್ ನಟನೆಯ ಚೊಚ್ಚಲ ಸಿನಿಮಾ 'ತ್ರಿವಿಕ್ರಮ' ಗೆಲ್ಲಲೇ ಬೇಕು ಪಣ ತೊಟ್ಟಿದೆ. ಆ ಕಾರಣಕ್ಕೆ ಇತ್ತೀಚೆಗೆ ಹಾಡಿನ ಚಿತ್ರೀಕರಣವನ್ನು ಅದ್ಧೂರಿಯಾಗಿ ನಡೆಸಿದೆ. ಈ ಹಾಡಿನ ಮೂಲಕ ಶೂಟಿಂಗ್ ಮುಗಿದಿದ್ದು, ಜೂನ್ 24ರಂದು ರಾಜ್ಯಾದ್ಯಂತ 'ತ್ರಿವಿಕ್ರಮ'ನನ್ನ ನೋಡಬಹುದು.

  ಅಂದ್ಹಾಗೆ, ಈ ಯಂಗ್ ಅಂಡ್ ಎನೆರ್ಜೆಟಿಕ್ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. 'ಶಕುಂತಲಾ ಶೇಕ್ ಎ ಬಾಡಿ ಪ್ಲೀಸ್...' ಎಂಬ ಈ ಹಾಡನ್ನು ಮೋಹನ್ ಬಿ ಕೆರೆ ಸ್ಟೂಡಿಯೋದಲ್ಲಿ ಬೃಹತ್ ಸೆಟ್ ಹಾಕಿ ರಂಗು ರಂಗಿನ ಕಾಸ್ಟ್ಯೂಮ್‌ಗಳಲ್ಲಿ ಶೂಟ್ ಮಾಡಲಾಗಿದೆ. ಅರ್ಜುನ್ ಜನ್ಯ ಈ ಹಾಡಿಗೆ ಟ್ಯೂನ್ ಹಾಕಿದ್ದು, ಭೂಷಣ್ ಕೊರಿಯೋಗ್ರಫಿ ಮಾಡಿದ್ದಾರೆ.

  ವಿಕ್ರಮ್ ಹಾಗೂ ಆಕಾಂಕ್ಷಾ ಶರ್ಮಾ 'ಶಕುಂತಲಾ ಶೇಕ್ ಎ ಬಾಡಿ ಪ್ಲೀಸ್...' ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನೂರಕ್ಕೂ ಅಧಿಕ ದಿನಗಳ ಕಾಲ ತ್ರಿವಿಕ್ರಮ್ ಸಿನಿಮಾದ ಶೂಟಿಂಗ್ ನಡೆಸಿರುವ ಬಿಗ್ ಬಜೆಟ್ ಸಿನಿಮಾವಿದು, ಈ ಕಾರಣಕ್ಕೆ ದೊಡ್ಡ ಮಟ್ಟದಲ್ಲಿಯೇ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಸಿದ್ಧತೆಗಳನ್ನು ಮಾಡಿಕೊಂಡಿದೆ.

  ತ್ರಿವಿಕ್ರಮ್ ಸಿನಿಮಾಗೆ 'ರೋಸ್', 'ಮಾಸ್ ಲೀಡರ್' ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಸಹನಾ ಮೂರ್ತಿ 'ನಿರ್ದೇಶನ ಮಾಡಿದ್ದಾರೆ. ಸೋಮಣ್ಣ ರಾಮ್ಕೋ ಸೋಮಣ್ಣ ವಿಕ್ರಮ್‌ಗಾಗಿ ತ್ರಿವಿಕ್ರಮ್ ಸಿನಿಮಾಗೆ ಹಣ ಹೂಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಟ್ಯೂನ್ ಹಾಕಿದ್ದು, 'ಪ್ಲೀಸ್ ಮಮ್ಮಿ' ಹಾಡಿಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದ್ದು ಟ್ರೆಂಡಿಂಗ್'ನಲ್ಲಿದೆ. ಡಾ.ವಿ.ನಾಗೇಂದ್ರ ಪ್ರಸಾದ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ವಿಜಯಪ್ರಕಾಶ್ ಹಾಡಿದ್ದಾರೆ.

  Vikram Collection | ವೀಕೆಂಡ್‌ನಲ್ಲಿ ವಿಕ್ರಂ ಸಿನಿಮಾದ ಕಲೆಕ್ಷನ್ ಎಷ್ಟು?
  Vikram Ravichandran Starrer Trivikram Movie Shooting Completed With Song

  ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮರಾವರ್ಕ್ ಈ ಸಿನಿಮಾಗಿದೆ.

  English summary
  Vikram Ravichandran Starrer Trivikram Movie Shooting Completed With Song, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X