Don't Miss!
- Lifestyle
ಮಂಕಿಪಾಕ್ಸ್ vs ಕೊರೊನಾವೈರಸ್: ಈ ಎರಡು ವೈರಸ್ನಲ್ಲಿ ಮೈ ಮೇಲೆ ಏಳುವ ಗುಳ್ಳೆಗಳು ಹೇಗೆ ಭಿನ್ನವಾಗಿವೆ?
- Technology
ಇನ್ಮುಂದೆ ನಿಮ್ಮ ಕೆಮ್ಮು ಮತ್ತು ಗೊರಕೆಗಳನ್ನು ಕೂಡ ಟ್ರ್ಯಾಕ್ ಮಾಡಲು ಗೂಗಲ್ ಪ್ಲಾನ್!
- Automobiles
ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!
- Sports
RCB vs RR: ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ಹೀನಾಯ ಸೋಲಿಗೆ ಈ 6 ಆಟಗಾರರೇ ಕಾರಣ!
- News
ಪಂಕ್ಚರ್ ಅಂಗಡಿ ಅನಕ್ಷರಸ್ಥನಿಂದ ವರ್ಷಕ್ಕೆ 7 ಕೋಟಿ ಸಂಪಾದನೆ
- Finance
ಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆ
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಿನಿಮಾದಲ್ಲಿ ಚೆನ್ನಾಗಿ ಡ್ಯಾನ್ಸ್ ಮಾಡಬೇಕು, ಇಲ್ಲಾದ್ರೆ ಹೋಡಿತಿನಿ ಅಂದಿದ್ರು ಅಪ್ಪು: ವಿಕ್ರಮ್
ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಈಗ ಅವರ ಇಬ್ಬರು ಮಕ್ಕಳು ಕೂಡ ಬಣ್ಣದ ಲೋಕಕ್ಕೆ ಪ್ರವೇಶ ಮಾಡ್ತಿದ್ದಾರೆ. ಮನುರಂಜನ್ ರವಿಚಂದ್ರನ್ ಹಾಗೂ ವಿಕ್ರಮ್ ಇಬ್ಬರ ಸಿನಿಮಾಗಳು ಕೂಡ ಬೆಳ್ಳಿತೆರೆ ಮೇಲೆ ಬರಲು ಸಜ್ಜಾಗಿದೆ.
ವಿಕ್ರಮ್ ರವಿಚಂದ್ರನ್ ಅಭಿನಯಿಸಿರುವ ಮೊದಲ ಸಿನಿಮಾ 'ತ್ರಿವಿಕ್ರಮ' ಇದೇ ಜೂನ್ 24ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಸಿನಿಮಾ ದಿನಾಂಕವನ್ನು ಘೋಷಿಸಲೆಂದೇ ಚಿತ್ರತಂಡ ಮಾಧ್ಯಮಗೋಷ್ಟಿಯನ್ನು ಆಯೋಜಿಸಿತ್ತು. ಈ ಸಮಾರಂಭದಲ್ಲೇ ಚಿತ್ರತಂಡ ಅಧಿಕೃತವಾಗಿ ಸಿನಿಮಾ ರಿಲೀಸ್ ಡೇಟ್ನ್ನು ಘೋಷಣೆ ಮಾಡಿದೆ.
ಕ್ರೇಜಿಸ್ಟಾರ್
ದ್ವಿತೀಯ
ಪುತ್ರ
ವಿಕ್ರಮನ
'ತ್ರಿವಿಕ್ರಮ'
ಬಿಡುಗಡೆಗೆ
ಮುಹೂರ್ತ
'ತ್ರಿವಿಕ್ರಮ' ಚಿತ್ರತಂಡ ಸುದ್ದಿಗೋಷ್ಟಿಯಲ್ಲಿ ಭಾಗಿಯಾಗಿದ್ದ ಸಾಧುಕೋಕಿಲಾ, ತಾರಾ, ಶರಣ್ ಮುಂತಾದ ನಟ ನಟಿಯರು ಸಿನಿಮಾಗೆ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದ್ದರು. ಅಲ್ಲದೆ ಇದೇ ಸಂದರ್ಭದಲ್ಲಿ ಸಿನಿಮಾ ಕುರಿತು ಮಾತನಾಡಿದ ನಟ ವಿಕ್ರಮ್ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮೊಂದಿಗೆ ಮಾತನಾಡಿದ್ದ ಕೆಲ ನೆನಪುಗಳನ್ನು ಹಂಚಿಕೊಂಡರು.

ಅಪ್ಪು ಹೇಳಿದ್ದ ಮಾತುಗಳನ್ನು ಹಂಚಿಕೊಂಡ ವಿಕ್ರಮ್
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಕ್ರಮ್ ರವಿಚಂದ್ರನ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ನ ನೆನಪು ಮಾಡಿಕೊಂಡಿದ್ದಾರೆ. ಈ ಚಿತ್ರದ ಕತೆ ಪುನೀತ್ ಹಾಗೂ ಶಿವಣ್ಣ ಅವರಿಗೆ ಗೊತ್ತಿದೆ. ನಾನು ಸಿನಿಮಾ ಮಾಡ್ತೀನಿ ಅಂದ ಕೂಡಲೇ ಕತೆ ಏನು ಅಂತ ಪುನೀತ್ ಕೇಳಿದ್ಧರು. ಅಲ್ಲದೆ ಕತೆ ಕೇಳಿ ನನ್ನ ಬೆನ್ನು ತಟ್ಟಿ, ನಾನೇ ನಿಂಗೆ ಒಂದು ಹಾಡು ಹಾಡ್ತೀನಿ, ನೀನು ಅದಕ್ಕೆ ಚೆನ್ನಾಗಿ ಡ್ಯಾನ್ಸ್ ಮಾಡಬೇಕು. ಇಲ್ಲಾಂದ್ರೆ ಹೋಡಿತೀನಿ ಅಂತ ಹೇಳಿದ್ರು. ಈಗಲೂ ಕೂಡ ಪುನೀತ್ ಅವರಿಂದ ಹಾಡಿಸಬೇಕು ಅಂದು ಕೊಂಡಿದ್ದ ಹಾಡನ್ನು ಈವರೆಗೂ ಶೂಟ್ ಮಾಡಲಾಗಲಿಲ್ಲ ಎಂದು ಭಾವುಕವಾಗಿ ಅಪ್ಪುವಿನ ಸರಳತೆಯ ಬಗ್ಗೆ ನಟ ವಿಕ್ರಮ್ ಹೇಳಿಕೊಂಡರು.
ಕೇಜ್ರಿಸ್ಟಾರ್
ರವಿಚಂದ್ರನ್
ಮಗನ
ಮದುವೆ
ಆಮಂತ್ರಣ
ಪತ್ರಿಕೆ
ವೈರಲ್?
ಪತ್ರಿಕೆಯಲ್ಲಿ
ಅಂಥದ್ದೇನಿದೆ
?

ವಿಕ್ರಮ್ ರವಿಚಂದ್ರನ್ ಹೊಗಳಿದ್ದ ಪುನೀತ್
ಕ್ರೇಜಿಸ್ಟಾರ್ ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಬಗ್ಗೆ ಅಪ್ಪು ಸರ್ ಒಳ್ಳೆಯ ಮಾತುಗಳನ್ನು ಹೇಳಿದ್ದರು ಅಂತ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೇಳಿದ್ದಾರೆ. 'ತ್ರಿವಿಕ್ರಮ' ಸಿನಿಮಾಕ್ಕೆ ಪುನೀತ್ ಸರ್ ಕ್ಲ್ಯಾಪ್ ಮಾಡಿ, ಸಿನಿಮಾ ಸಕ್ಸಸ್ ಆಗಲಿ ಎಂದು ಶುಭ ಕೋರಿದ್ದರು. ಅಲ್ಲದೆ ವಿಕ್ರಮ್ ಬಗ್ಗೆ ಪುನೀತ್ ಸರ್ ತುಂಬಾ ಭರವಸೆಯ ಮಾತುಗಳನ್ನು ಹೇಳುತ್ತಿದ್ದರು. ಮನುರಂಜನ್ ಮತ್ತು ವಿಕ್ಕಿಗೆ ಚಿತ್ರರಂಗದಲ್ಲಿ ಹೇಗೆ ಇರಬೇಕು ಅನ್ನೋದು ಗೊತ್ತಿದೆ. ಕನ್ನಡ ಚಿತ್ರರಂಗಕ್ಕೆ ಈಗ ಭರವಸೆಯ ನಟರು ಬೇಕು, ರವಿಚಂದ್ರನ್ ಸರ್ ಫ್ಯಾಮಿಲಿಯ ನಟನನ್ನು ನಿರ್ದೇಶಕ ಸಹನಮೂರ್ತಿ ಲಾಂಚ್ ಮಾಡ್ತಾ ಇದ್ದಾರೆ. ಎಲ್ಲರಿಗೂ ಈ ಸಿನಿಮಾದಿಂದ ಒಳ್ಳೆಯದಾಗಲಿ ಎಂದು ಹೇಳಿದ್ದರು ಅಂತ ಪುನೀತ್ ಮಾತುಗಳನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ನೆನಪಿಸಿಕೊಂಡಿದ್ದಾರೆ.

'ಮನು, ವಿಕ್ರಮ್ ಪಡೆಯಲು ರವಿ ಸರ್ ಪುಣ್ಯ ಮಾಡಿದ್ದಾರೆ'
ಇನ್ನು ಸಿನಿಮಾ ರಿಲೀಸ್ ಡೇಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ತಾರಾ ಕೂಡ ಮಾತನಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಮನು, ವಿಕ್ರಮ್ ಮತ್ತು ಗೀತಾಂಜಲಿ ಈ ಮೂರು ಜನ ತಂದೆಗೆ ತಕ್ಕ ಮಕ್ಕಳು, ರವಿ ಸರ್ ಬಗ್ಗೆ ನನಗೆ ಸ್ವಲ್ಪ ಮುನಿಸಿದೆ. ಅವರು ಮಕ್ಕಳ ಹಿಂದೆ ನಿಲ್ಲಬೇಕು. ಮಕ್ಕಳನ್ನು ಶ್ರೀಮಂತವಾಗಿ ತೋರಿಸಬೇಕು. ಮನು ಮತ್ತು ವಿಕ್ರಮ್ ಇಬ್ಬರಿಗೂ ದೊಡ್ಡ ಯಶಸ್ಸು ಸಿಗಬೇಕು. ಇವರು ತಂದೆಯನ್ನು ಮೀರಿಸುವಂತೆ ಬೆಳೆಯಬೇಕು. ಮನು ಮತ್ತು ವಿಕ್ರಮ್ ಥರದ ಮಕ್ಕಳನ್ನು ಪಡೆಯಲು ರವಿಚಂದ್ರನ್ ಸರ್ ಪುಣ್ಯ ಮಾಡಿದ್ದಾರೆ ಎಂದರು.
ಕ್ರೇಜಿಸ್ಟಾರ್
ರವಿಚಂದ್ರನ್
ಇನ್ನು
ಮುಂದೆ
ಡಾಕ್ಟರ್
ರವಿಚಂದ್ರನ್:
ಬೆಂಗಳೂರು
ವಿವಿಯಿಂದ
ಗೌರವ

'ತ್ರಿವಿಕ್ರಮ' ಯಶಸ್ಸು ಕಾಣಲಿ ಎಂದ ನಟ ನಟಿಯರು
ವಿಕ್ರಮ್ ನಟಿಸುತ್ತಿರುವ ಮೊದಲ ಸಿನಿಮಾ 'ತ್ರಿವಿಕ್ರಮ'. ಈ ಕಾರಣಕ್ಕೆ ಸಿನಿಮಾ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಸ್ಯಾಂಡಲ್ವುಡ್ ಸೆಲೆಬ್ರೆಟಿಗಳು ಶುಭಾಶಯ ಕೋರಿದ್ದಾರೆ. ಚಿತ್ರತಂಡ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಭಾಗಿಯಾಗಿದ್ದ ಶರಣ್, ಸಾಧುಕೋಕಿಲಾ, ಆದಿ ಲೋಕೇಶ್, ಬಹದ್ದೂರ್ ಚೇತನ್, ಶಿವಮಣಿ ಚಿತ್ರತಂಡಕ್ಕೆ ಶುಭಕೋರಿದ್ದರು. ಶರಣ್ ಕೂಡ ಮಾತನಾಡಿ 'ತ್ರಿವಿಕ್ರಮ' ಅನ್ನೋದು ಯಶಸ್ಸಿನ ಸಿಂಬಲ್ ಈ ಸಿನಿಮಾ ಮೂಲಕ ಮತ್ತೊಬ್ಬ ಸ್ಟಾರ್ ಹುಟ್ಟಿಕೊಂಡಿದ್ದಾನೆ ಎಂದರು. ಒಟ್ಟಿನಲ್ಲಿ ಸಿನಿಮಾ ಜೂನ್ 24 ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಸಿನಿಮಾ ಯಶಸ್ವಿಯಾಗಲಿ ಅಂತ ಅಭಿಮಾನಿಗಳು ಕೂಡ ಶುಭ ಹಾರೈಸ್ತಿದ್ದಾರೆ.