'ವಿಕ್ರಂವೇದ' ವಿಜಯ್ ಸೇತುಪತಿಯ ಚೊಚ್ಚಲ ಕನ್ನಡ ಸಿನಿಮಾ ರೆಡಿ
Recommended Video

ತಮಿಳಿನ ಸೂಪರ್ ಹಿಟ್ ಸಿನಿಮಾ 'ವಿಕ್ರಂವೇದ' ನಂತರ 'ಸ್ಟಾರ್' ನಟನಾಗಿ ಮಿಂಚುತ್ತಿರುವ ವಿಜಯ್ ಸೇತುಪತಿ ಈಗ ಬಹುಬೇಡಿಕೆ ಹೊಂದಿರುವ ನಟ.
ಈ ಸ್ಟಾರ್ ನಟ ಅಭಿನಯದ ಚೊಚ್ಚಲ ಕನ್ನಡ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಅರೇ, ವಿಜಯ್ ಸೇತುಪತಿ ಕನ್ನಡ ಸಿನಿಮಾ ಯಾವಾಗ ಮಾಡಿದ್ರು, ಅಷ್ಟು ಬೇಗ ರಿಲೀಸ್ ಆಗ್ತಿದೆ ಎಂಬ ಕುತೂಹಲ, ಅನುಮಾನ ಎಲ್ಲವೂ ಸಹಜ.
ಆದ್ರೂ, ನೀವು ನಂಬಲೇಬೇಕು. 'ವಿಕ್ರಂ ವೇದ' ಸ್ಟಾರ್ ವಿಜಯ್ ಸೇತುಪತಿ ಅಭಿನಯದ ಮೊದಲ ಕನ್ನಡ ಸಿನಿಮಾ ತೆರೆಗೆ ಬರ್ತಿದೆ. ಅಷ್ಟಕ್ಕೂ, ತಮಿಳು ನಟ ಅಭಿನಯದ ಚೊಚ್ಚಲ ಸ್ಯಾಂಡಲ್ ವುಡ್ ಸಿನಿಮಾ ಯಾವುದು.? ಯಾವಾಗ ಬಿಡುಗಡೆ ಎಂದು ಮುಂದೆ ಓದಿ.....

ಮೂರು ವರ್ಷದ ಹಿಂದೆಯೇ ಅಭಿನಯಿಸಿದ್ರು
ಅಂದ್ಹಾಗೆ, ವಿಜಯ್ ಸೇತುಪತಿ ಕನ್ನಡದಲ್ಲಿ ಈಗ ಅಭಿನಯಿಸಿರುವುದಲ್ಲ. ಮೂರು ವರ್ಷಗಳ ಹಿಂದೆಯೇ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಮಾಡಿ ಹೋಗಿದ್ದಾರೆ ತಮಿಳು ನಟ. ಆ ಸಿನಿಮಾದ ಹೆಸರು 'ಅಖಾಡ'

'ಅಖಾಡ'ದಲ್ಲಿ 'ವಿಕ್ರಂವೇದ' ಸ್ಟಾರ್
'ಜಿಗರ್ ಥಂಡಾ' ಸಿನಿಮಾ ನಿರ್ದೇಶನ ಮಾಡಿದ್ದ ಶಿವಗಣೇಶ್ ನಿರ್ದೇಶನದ ಚಿತ್ರ 'ಅಖಾಡ'. 'ಜಗರ್ ಥಂಡಾ' ಸಿನಿಮಾ ಮಾಡುವ ಮೊದಲೇ ಈ ಚಿತ್ರವನ್ನ ಮಾಡಿ ಮುಗಿಸಿದ್ದರು. ಆದ್ರೆ, ಕಾರಾಣಾಂತರಗಳಿಂದ ಈ ಚಿತ್ರ ಬಿಡುಗಡೆಯಾಗಲಿಲ್ಲ. ಪೊಸ್ಟ್ ಪ್ರೊಡಕ್ಷನ್ ಮುಗಿಸದೇ ನಿಂತು ಹೋಗಿತ್ತು.

ಕನ್ನಡ ಮತ್ತು ತಮಿಳಿನಲ್ಲಿ ಸಿನಿಮಾ
ಅಂದ್ಹಾಗೆ, 'ಅಖಾಡ' ಸಿನಿಮಾ ಕನ್ನಡ ಮತ್ತು ತಮಿಳಿನಲ್ಲಿ ಸಿದ್ಧವಾಗಿದೆ. ಮೊದಲು ಕನ್ನಡದಲ್ಲಿ ಬಿಡುಗಡೆಯಾಗಲಿದ್ದು, ನಂತರ ತಮಿಳಿನಲ್ಲೂ ತೆರೆಕಾಣಲಿದೆ. ವಸಂತ್ ವಿಷ್ಣು ಈ ಚಿತ್ರದ ನಾಯಕನಾಗಿದ್ದು, ನಯನ ಕೃಷ್ಣ ನಾಯಕಿಯಾಗಿ ಅಭಿನಯಿಸಿದ್ದಾರೆ. ಷಣ್ಮುಖ ಸುಂದರಂ ನಿರ್ಮಾಣ ಮಾಡಿದ್ದು, ಧರ್ಮ ಪ್ರಕಾಶ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ನೆಗಿಟೀವ್ ಶೇಡ್ ನಲ್ಲಿ ವಿಜಯ್
ಅಖಾಡ ಚಿತ್ರದಲ್ಲಿ ವಿಜಯ್ ಸೇತುಪತಿ ಅವರದ್ದು ಮುಖ್ಯ ಪಾತ್ರವಾಗಿದೆ. ನಾಯಕ ವಸಂತ್ ವಿಷ್ಣು ಅವರ ಜೊತೆ ನೆಗಿಟೀವ್ ಶೇಡ್ ನಲ್ಲಿ ಬಣ್ಣ ಹಚ್ಚಿದ್ದಾರೆ ಎನ್ನಲಾಗಿದೆ. ಎಲ್ಲ ಅಂದುಕೊಂಡಂತರೆ ಆದ್ರೆ, ಅಗಸ್ಟ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ.


Click it and Unblock the Notifications











