twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರಲ್ಲಿ 'ವಿಕ್ರಾಂತ್ ರೋಣ' 1st ಡೇ, 1st ಶೋ ಎಲ್ಲಿ, ಎಷ್ಟು ಹೊತ್ತಿಗೆ?

    |

    'ವಿಕ್ರಾಂತ್ ರೋಣ' ರಿಲೀಸ್‌ಗೆ ಇನ್ನೊಂದು ದಿನ ಮಾತ್ರವೇ ಇದೆ. ನಾಳೆ (ಜುಲೈ 28)ರಂದು ವಿಕ್ರಾಂತ್ ರೋಣನಾಗಿ ನಟ ಸುದೀಪ್ ತೆರೆಯ ಮೇಲೆ ಅಪ್ಪಳಿಸಲಿದ್ದಾರೆ. ಸಿನಿಮಾವನ್ನು ಮೊದಲ ದಿನ ನೋಡಲು ಹೆಚ್ಚಿನ ಪ್ರೇಕ್ಷಕರು ಕಾತರದಿಂದ ಕಾಯುತ್ತಾ ಇದ್ದಾರೆ.

    ಇನ್ನು ಮೊದಲ ದಿನದ ಟಿಕೆಟ್ ಬುಕ್ಕಿಂಗ್ ಆಧಾರಾದ ಮೇಲೆ ಕಲೆಕ್ಷನ್ ರಿಪೋರ್ಟ್ ಕೂಡ ಬಂದಿದೆ. ಇನ್ನು ಮೊದಲ ದಿನ ಗುರುವಾರ ಆದ ಕಾರಣ ಶುಕ್ರವಾರದ ಬಳಿಕ ವಿಕ್ರಾಂತ್ ರೋಣ ಸಿನಿಮಾದ ಅಸಲಿ ಆಟ ಶುರುವಾಗಲಿದೆ ಎನ್ನಬಹುದು.

    'ವಿಕ್ರಾಂತ್ ರೋಣ' ಪಾರ್ಟ್ 2 ಪಕ್ಕಾ!'ವಿಕ್ರಾಂತ್ ರೋಣ' ಪಾರ್ಟ್ 2 ಪಕ್ಕಾ!

    'ವಿಕ್ರಾಂತ್ ರೋಣ' ಸಿನಿಮಾ ವಿಶ್ವದಾದ್ಯಂತ ಘರ್ಜಿಲಿದ್ದಾನೆ. ಇದು ಕನ್ನಡದ, ಸೌತ್ ಚಿತ್ರರಂಗದ ಬಹು ನಿರೀಕ್ಷೆಯ ಸಿನಿಮಾ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಈ ಚಿತ್ರದ ಮೇಲು ಹೆಚ್ಚಿನ ನಿರೀಕ್ಷೆಗಳು ಮನೆ ಮಾಡಿವೆ. ಚಿತ್ರದ ಕಂಟೆಂಟ್ ಕೂಡ 'ವಿಕ್ರಾಂತ್ ರೋಣ' ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಇನ್ನು ವಿಕ್ರಾಂತ್ ರೋಣ ಮೊದಲ ದಿನದ, ಮೊದ ಶೋ ಎಲ್ಲಿ ಎಷ್ಟು ಹೊತ್ತಿಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ...

    ಬೆಂಗಳೂರಿನಲ್ಲಿ ವಿಕ್ರಾಂತ್ ರೋಣ ಅಬ್ಬರ!

    ಬೆಂಗಳೂರಿನಲ್ಲಿ ವಿಕ್ರಾಂತ್ ರೋಣ ಅಬ್ಬರ!

    ಬೆಂಗಳೂರಿನಲ್ಲಿ ವಿಕ್ರಾಂತ್ ರೋಣ ಸಿನಿಮಾದ ಹವಾ ಬಲು ಜೋರಾಗಿದೆ. ಕಿಚ್ಚ ಸುದೀಪ್ ಸಿನಿಮಾ ಬೆಂಗಳೂರಿನಲ್ಲಿ ಜುಲೈ 28ಕ್ಕೆ ಘರ್ಜಿಸಲಿದೆ. ಮೊದಲ ದಿನ ಬೆಂಗಳೂರಿನಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಶೋಗಳು ನಡೆಯಲಿವೆ. ಬೆಂಗಳೂರಿನ 40 ಮಲ್ಟಿಪ್ಲೆಕ್ಸ್​ ಸ್ಕ್ರೀನ್‌ಗಳಲ್ಲಿ 800 ಶೋ, ಒಟ್ಟು 70 ಸಿಂಗಲ್ ಸ್ಕ್ರೀನ್​ನಲ್ಲಿ 400 ಶೋಗಳೂ ಪ್ರದರ್ಶನ ಗೊಳ್ಳಲಿವೆ.

    'ವಿಕ್ರಾಂತ್ ರೋಣ' ಟಿಕೆಟ್ ದರ ₹150 ರಿಂದ ₹10,000!'ವಿಕ್ರಾಂತ್ ರೋಣ' ಟಿಕೆಟ್ ದರ ₹150 ರಿಂದ ₹10,000!

    'ವಿಕ್ರಾಂತ್ ರೋಣ' ಮೊದಲ ಶೋ- ಶಂಕರ್‌ ನಾಗ್ ಥಿಯೇಟರ್!

    'ವಿಕ್ರಾಂತ್ ರೋಣ' ಮೊದಲ ಶೋ- ಶಂಕರ್‌ ನಾಗ್ ಥಿಯೇಟರ್!

    ವಿಕ್ರಾಂತ್ ರೋಣ ಸಿನಿಮಾವನ್ನು ಅಭಿಮಾನಿಗಳು ಮೆರೆಸಲು ಸಿದ್ಧವಾಗಿದ್ದಾರೆ. ಬೆಳಗ್ಗೆಯಿಂದಲೇ ಅಬ್ಬರ ಶುರುವಾಗಲಿದೆ. ಇನ್ನು ಮೊದಲ ಶೋ ಎನ್ನುವ ಕುತೂಹಲಕ್ಕೂ ತೆರೆ ಬಿದ್ದಿದೆ. ಎಂ.ಜಿ ರಸ್ತೆಯಲ್ಲಿ ಇರುವ ಶಂಕರ್ ನಾಗ್ ಚಿತ್ರಮಂದಿರದಲ್ಲಿ ಬೆಳಗ್ಗೆ​ 5.30ಕ್ಕೆ ಮೊದಲ ಶೋ ಆರಂಭವಾಗಲಿದೆ. ಭಾರತದಾದ್ಯಂತ ಬೆಂಗಳೂರಿನಲ್ಲಿಯೇ ಮೊದಲ ಪ್ರದರ್ಶನ ಶುರುವಾಗಲಿದೆ. ಈ ಮೊಟ್ಟ ಮೊದಲ ಶೋ ಶಂಕರ್ ನಾಗ್ ಚಿತ್ರಮಂದಿರದಲ್ಲಿ ನಡೆಯಲಿದೆ.

    6 ಗಂಟೆಯಿಂದ ಎಲ್ಲಾ ಕಡೆ ಶೋ ಶುರು!

    6 ಗಂಟೆಯಿಂದ ಎಲ್ಲಾ ಕಡೆ ಶೋ ಶುರು!

    ಇನ್ನು ಎಲ್ಲಾ ಕಡೆಗಳಲ್ಲೂ ಬೆಳಗ್ಗೆ 6 ಗಂಟೆಗೆಯಿಂದ ಸಹಜವಾಗಿ 'ವಿಕ್ರಾಂತ್ ರೋಣ' ಶೋಗಳು ಶುರುವಾಗಲಿವೆ.

    ವಿಕ್ರಾಂತ್ ರೋಣ ಚಿತ್ರಮಂದಿರಕ್ಕೆ ಮುಖ್ಯ ಚಿತ್ರಮಂದಿರ ಎನ್ನುವ ಕಾನ್ಸೆಪ್ಟ್ ಇಲ್ಲ. ಎಲ್ಲಾ ಕಡೆಗಳಲ್ಲೂ ಗಂಟೆ, ಗಂಟೆಗೂ ಶೋಗಳು ಪ್ರಾರಂಭವಾಗಲಿವೆ. ಕೆಲವು ಚಿತ್ರಮಂದಿರಗಳಲ್ಲಿ ವಿಶೇಷ ಆಚರಣೆ ಇರಲಿದೆ. ವೀರೇಶ್ ಥಿಯೇಟರ್‌ನಲ್ಲಿ ಸಹ ದೊಡ್ಡ ಮಟ್ಟದ ಸೆಲೆಬ್ರೇಷನ್ ಮಾಡಲು ನಡೆಯಲಿದ್ದು ಬೆಳಗ್ಗೆ 6 ರಿಂದಲೇ ಶೋ ಪ್ರಾರಂಭವಾಗಲಿದೆ.

    ಕರ್ನಾಟಕದಲ್ಲಿ ಎಷ್ಟು ಪ್ರದರ್ಶನ!

    ಕರ್ನಾಟಕದಲ್ಲಿ ಎಷ್ಟು ಪ್ರದರ್ಶನ!

    ಕರುನಾಡಿನಲ್ಲಿ ಮೊದಲ ದಿನ 325 ಸಿಂಗಲ್ ಸ್ಕ್ರೀನ್​ ಮತ್ತು 65 ಮಲ್ಟಿಪ್ಲೆಕ್ಸ್​ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಮೊದಲ ದಿನ ರಾಜ್ಯದಲ್ಲಿ ಬರೋಬ್ಬರಿ 2500 ಶೋಗಳು ನಡೆಯುವ ಸಾಧ್ಯತೆ ಇದೆ. ಜಗತ್ತಿನಾದ್ಯಂತ ಇನ್ನು ವಿಶ್ವಾದ್ಯಂತ ಮೊದಲ ದಿನ 9000ಕ್ಕೂ ಅಧಿಕ ಪ್ರದರ್ಶನ ಕಾಣುವ ಲೆಕ್ಕಾಚಾರ ವ್ಯಕ್ತವಾಗಿದೆ.

    ಬಿಟೌನ್‌ನಲ್ಲಿ ವಿಕ್ರಾಂತ್ ರೋಣ ಅಬ್ಬರ!

    ಬಿಟೌನ್‌ನಲ್ಲಿ ವಿಕ್ರಾಂತ್ ರೋಣ ಅಬ್ಬರ!

    ಮೊದಲೆಲ್ಲಾ ಸೌತ್‌ನಲ್ಲಿ ನಾರ್ತ್ ಸಿನಿಮಾಗಳಿಗೆ ಬೇಡಿಕೆ ಇತ್ತು. ಈಗ ನಾರ್ತ್‌ನಲ್ಲಿ ಸೌತ್‌ನಿಂದ ಯಾವ ಉತ್ತಮ ಸಿನಿಮಾ ಬರುತ್ತದೆ ಎನ್ನುವುದನ್ನು ಕಾಯುವಂತಾಗಿದೆ. ಸದ್ಯ ವಿಕ್ರಾಂತ್ ರೋಣ ಸಿನಿಮಾಗೆ ನಾರ್ತ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. 'ಶಂಶೇರಾ' ಸಿನಿಮಾ ಎತ್ತಂಗಡಿ ಆಗುತ್ತಿದೆ, ಬದಲಿಗೆ ವಿಕ್ರಾಂತ್ ರೋಣ ಸಿನಿಮಾಗೆ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ 1000 ಸ್ಕ್ರೀನ್‌ಗಳು ವಿಕ್ರಾಂತ್ ರೋಣ ಸಿನಿಮಾಗೆ ನಿಗದಿ ಆಗಿದ್ದವು. ಆದರೆ ಈ ಸಂಖ್ಯೆ ಈಗ ಮತ್ತಷ್ಟು ಹೆಚ್ಚಾಗುತ್ತಿದ್ದು, ಈ ಬಾರಿ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸುದೀಪ್ ಅಬ್ಬರಿಸಲಿದ್ದಾರೆ.

    Recommended Video

    Vikrant Rona Public Reaction | ಮೊದಲ ದಿನ ಪ್ರೇಕ್ಷಕ ಹೇಳಿದ್ದೇನು | Filmibeat Kannada

    English summary
    Vikrant Rona First Day First Show On 5.30 AM In Bengaluru Shankar Nag Theatre, Know More
    Wednesday, July 27, 2022, 18:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X