ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ವಿಕ್ರಾಂತ್ ರೋಣ' ಗಳಿಕೆ: 2 ಚಿತ್ರಗಳ ದಾಖಲೆ ಉಡೀಸ್!
ಕನ್ನಡದ ಬಹುನೀಕ್ಷಿತ ಸಿನಿಮಾ 'ವಿಕ್ರಾಂತ್ ರೋಣ' ರಿಲೀಸ್ ಆಗಿದೆ. ನಿರೀಕ್ಷೆಯಂತೆ ಮೊದಲ ದಿನ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ 'ವಿಕ್ರಾಂತ್ ರೋಣ' ಸಿನಿಮಾ ಯಶಸ್ವಿಯಾಗಿದೆ. 'ವಿಕ್ರಾಂತ್ ರೋಣ' ಚಿತ್ರಕ್ಕೆ ಮೊದಲ ದಿನ ಬಾಕ್ಸಾಫೀಸ್ ಗಳಿಕೆ ಏನು ಎನ್ನುವ ಲೆಕ್ಕಚಾರಗಳು ಕೂಡ ಶುರುವಾಗಿವೆ.
ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಇದು. ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಆರ್ಭಟ ಜುಲೈ 28ಕ್ಕೆ ಶುರುವಾಗಿದೆ. ವಿಶ್ವದಾದ್ಯಂತ ಸಿನಿಮಾ ಎರಡನೆ ದಿನದ ಆಟ ಶುರು ಮಾಡಿದೆ. ಸೌತ್ ಸಿನಿಮಾಗಳಿಗೆ ಉತ್ತರದಲ್ಲಿ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ 'ವಿಕ್ರಾಂತ್ ರೋಣ' ಗಳಿಕೆ ಮೇಲೂ ನಿರೀಕ್ಷೆ ಹೆಚ್ಚಿದೆ.
'ವಿಕ್ರಾಂತ್ ರೋಣ' ಸಿನಿಮಾದ ಮೊದಲ ದಿನ ವಿಶ್ವದಾದ್ಯಂತ ಗಳಿಸಿದ ಲೆಕ್ಕಾಚಾರ ಹೊರ ಬಿದ್ದಿದೆ. ಸುಮಾರು 30 ಕೋಟಿಗೂ ಅಧಿಕ ಮೊತ್ತವನ್ನು ಈ ಸಿನಿಮಾ ಕಲೆ ಹಾಕಿದೆ. ಇನ್ನು ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಈ ಚಿತ್ರದ ಗಳಿಕೆಯ ಮಟ್ಟ ಹೇಗಿದೆ. ಯಾವೆಲ್ಲಾ ಸಿನಿಮಾಗಳನ್ನು ಬೀಟ್ ಮಾಡಿದೆ ಎನ್ನುವುದನ್ನು ಮುಂದೆ ಓದಿ..

'ವಿಕ್ರಾಂತ್ ರೋಣ' ಹಿಂದಿ ಬಾಕ್ಸಾಫೀಸ್ ಗಳಿಕೆ!
'ವಿಕ್ರಾಂತ್ ರೋಣ' ಸಿನಿಮಾ ವಿಶ್ವದಾದ್ಯಂತ ತೆರೆಗೆ ಬಂದಿದೆ. ತೆಲುಗು ದೇಶಗಳಲ್ಲಿ ಹಲವು ಭಾಷೆಗಳಲ್ಲಿ 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್ ಆಗಿದೆ. ಮೊದಲ ದಿನದ ಬಾಕ್ಸಾಫೀಸ್ ಲೆಕ್ಕಾಚಾರ ಕೂಡಾ ಹೊರಬಂದಿದೆ. ಇನ್ನು 'ವಿಕ್ರಾಂತ್ ರೋಣ' ಸಿನಿಮಾ ಬಾಲಿವುಡ್ ಬಾಕ್ಸಾಫೀಸಿನಲ್ಲಿ ಯಾವ ರೀತಿ ಗಳಿಕೆ ಕಾಣಲಿದೆ ಎನ್ನುವ ಕುತೂಹಲ ಇತ್ತು. ಅದಕ್ಕೂ ಈಗ ಉತ್ತರ ಸಿಕ್ಕಿದೆ. ಹಿಂದಿ ಬಾಕ್ಸಾಫೀಸಿನಲ್ಲಿ ವಿಕ್ರಂ ತಕ್ಕಮಟ್ಟಿಗೆ ಸದ್ದು ಮಾಡಿದೆ. ಮೊದಲ ದಿನ ಸೌತ್ ಇಂಡಿಯಾದ ಸಿನಿಮಾದ ಹಿಂದಿ ಬಾಕ್ಸಾಫೀಸ್‌ನಲ್ಲಿ ಈ ಮಟ್ಟಿಗೆ ಗಳಿಗೆ ಕಾಣುವುದು ಉತ್ತಮವೇ. ಬಾಲಿವುಡ್ ಬಾಕ್ಸಾಫೀಸಿನಲ್ಲಿ ವಿಕ್ರಾಂತ್ ರೋಣ ಸಿನಿಮಾ ಮೊದಲ ದಿನ 1 ಕೋಟಿ ರೂ. ಗಳಿಕೆ ಕಂಡಿದೆ. ಇದು ಬಾಲಿವುಡ್‌ನಲ್ಲಿ ವರದಿಯಾಗಿರುವ ಲೆಕ್ಕಾಚಾರ.

ವಿಕ್ರಂ, ಬೀಸ್ಟ್ ದಾಖಲೆ ಮುರಿದ 'ರೋಣ'!
'ವಿಕ್ರಾಂತ್ ರೋಣ' ಸಿನಿಮಾ ಹಿಂದಿ ಗಳಿಕೆ ಈ ಬಂದ ಎರಡು ಬಿಗ್ ಸಿನಿಮಾಗಳ ದಾಖಲೆಯನ್ನು ಮುರಿದಿದೆ. ಪ್ಯಾನ್ ಇಂಡಿಯಾ ಹೆಸರಲ್ಲಿ ಬಂದ ವಿಜಯ್ ಅಭಿನಯದ 'ಬೀಸ್ಟ್' ಮತ್ತು ಕಮಲ್ ಹಾಸನ್ ನಟನೆಯ 'ವಿಕ್ರಂ' ಸಿನಿಮಾದ ದಾಖಲೆಯನ್ನ 'ವಿಕ್ರಾಂತ್ ರೋಣ' ಮುರಿದಿದೆ. 'ಬೀಸ್ಟ್' ಸಿನಿಮಾ ರಿಲೀಸ್ ಆದ ಮೊದಲ ದಿನ ಹಿಂದಿಯಲ್ಲಿ ಗಳಿಸಿದ್ದು 50 ಲಕ್ಷ ರೂ. ಹಾಗೆ ಕಲಮ್ ಹಾಸನ್ ನಟನೆಯ 'ವಿಕ್ರಂ' ಸಿನಿಮಾ ಹಿಂದಿಯಲ್ಲಿ ಮೊದಲ ದಿನ 30 ಲಕ್ಷ ರೂ. ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಈ ಸಿನಿಮಾ ಗಳಿಗಿಂತಲೂ ದುಪ್ಪಟ್ಟು ಗಳಿಕೆ ಕಂಡು 1 ಕೋಟಿ ರೂ. ಗಡಿಯನ್ನು ಮುಟ್ಟಿ, ಈ ಚಿತ್ರಗಳ ದಾಖಲೆ ಮುರಿದಿದೆ 'ವಿಕ್ರಾಂತ್ ರೋಣ'.

ವಿಶ್ವದಾದ್ಯಂತ 30 ಕೋಟಿ ರೂ.!
'ವಿಕ್ರಾಂತ್ ರೋಣ' ಸಿನಿಮಾ ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂತು. ಅದರಂತೆಯೇ ಮೊದಲ ದಿನ ಸಮಾಧಾನಕರ ಓಪನಿಂಗ್ ಪಡೆದುಕೊಂಡಿದೆ. ಈ ಸಿನಿಮಾ ವಿಶ್ವದಾದ್ಯಂತ ಎಷ್ಟು ಗಳಿಕೆ ಕಂಡಿದೆ ಎನ್ನುವ ಬಾಕ್ಸಾಫೀಸ್ ಲೆಕ್ಕಾಚಾರ ಹೊರ ಬಿದ್ದಿದೆ. ಮೊದಲ ದಿನ ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಸರಿ ಸುಮಾರು 30 ಕೋಟಿ ರೂ.ಗಿಂತಲೂ ಅಧಿಕ ಮೊತ್ತ ಕಲೆ ಹಾಕಿದೆ ಎನ್ನುವ ಲೆಕ್ಕಾಚಾರ ಹೊರ ಬಿದ್ದಿದೆ.

ಇಂಡಿಯಾದಲ್ಲಿ 'ವಿಕ್ರಾಂತ್ ರೋಣ' ₹25 ಕೋಟಿ ಪ್ಲಸ್!
ಇನ್ನು ಭಾರತದಾದ್ಯಂತ ವಿಕ್ರಾಂತ್ ರೋಣ ಅಬ್ಬರ ಮೊದಲ ದಿನ ಸದ್ದು ಮಾಡಿದೆ. ಮೊದಲ ದಿನ ಸಿನಿಮಾದ ಗಳಿಕೆ ಭಾರತದಲ್ಲಿಯೂ ತಕ್ಕಮಟ್ಟಿಗೆ ಇದೆ. ಪ್ಯಾನ್ ಇಂಡಿಯಾ ಈ ಸಿನಿಮಾ ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಒಂದು ರೇಂಜಿಗೆ ಗಳಿಕೆ ಕಂಡಿದೆ. 'ವಿಕ್ರಾಂತ್ ರೋಣ' ಮೊದಲ ದಿನ ಭಾರತದಾದ್ಯಂತ ಸುಮಾರು 25 ಕೋಟಿ ರೂ ತನಕ ಗಳಿಕೆ ಕಂಡಿದೆ ಎನ್ನುವ ವರದಿ ಬಂದಿದೆ.

ವೀಕೆಂಡ್‌ನಲ್ಲಿ ಹೆಚ್ಚಿನ ಗಳಿಕೆ ಸಾಧ್ಯತೆ!
ವಿಕ್ರಾಂತ್ ರೋಣ ಸಿನಿಮಾ ಗುರುವಾರ ತೆರೆಗೆ ಬಂದಿದೆ. ಹಾಗಾಗಿ ಗಳಿಕೆಯಲ್ಲಿ ದೊಡ್ಡ ಮಟ್ಟದ ದಾಖಲೆ ಕಂಡುಬಂದಿಲ್ಲ. ಆದರೆ ಈ ಸಿನಿಮಾ ಮೊದಲ ವೀಕೆಂಡ್‌ನಲ್ಲಿ ಬಾಕ್ಸಾಫೀಸ್‌ನಲ್ಲಿ ಜಾದು ಮಾಡುವ ಅವಕಾಶವಿದೆ. ಮೊದಲ ವೀಕೆಂಡ್ ಬಳಿಕ ಸಿನಿಮಾದ ಗಳಿಕೆ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಇನ್ನು ಈ ಚಿತ್ರಕ್ಕೆ ಸುಮಾರು ₹94 ಕೋಟಿ ತನಕ ಬಂಡವಾಳ ಹೂಡಲಾಗಿದೆ ಎನ್ನಲಾಗಿದೆ. ಮೊದಲ ವಾರಂತ್ಯದಲ್ಲಿ ಈ ಚಿತ್ರ ಬಂಡವಾಳವನ್ನು ಹಿಂದಿರುಗಿಸುವ ಸಾಧ್ಯತೆ ಇದೆ.


Click it and Unblock the Notifications











