Don't Miss!
- Lifestyle
Today Rashi Bhavishya: ಶನಿವಾರದ ದಿನ ಭವಿಷ್ಯ: ತುಲಾ, ಮೇಷ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರಿಗೆ ಶುಭ ದಿನ
- News
Breaking: ಕರ್ನಾಟಕದಲ್ಲಿ 2000 ಗಡಿ ದಾಟಿದ ಕೊರೊನಾ ವೈರಸ್!
- Sports
ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Automobiles
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
1 ಗಂಟೆಯಲ್ಲಿ 'ವಿಕ್ರಾಂತ್ ರೋಣ' ಟ್ರೈಲರ್ ರೆಕಾರ್ಡ್: ಯಾವ ಭಾಷೆಯಲ್ಲಿ ಎಷ್ಟು ವೀಕ್ಷಣೆ?
'ವಿಕ್ರಾಂತ್ ರೋಣ'ನ ಆರ್ಭಟ ಶುರುವಾಗಿದೆ. ಬಹುನಿರೀಕ್ಷೆಯೊಂದಿಗೆ 'ವಿಕ್ರಾಂತ್ ರೋಣ' ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಇದು 3D ಸಿನಿಮಾ ಆದರೂ ಕೂಡ, ಯುಟ್ಯೂಬ್‌ನಲ್ಲಿ 2Dಯಲ್ಲಿ ರಿಲೀಸ್ ಆಗಿದೆ. ಆರು ಭಾಷೆಗಳಲ್ಲಿ 'ವಿಕ್ರಾಂತ್ ರೋಣ' ಟ್ರೈಲರ್ ರಿಲೀಸ್ ಆಗಿದೆ.

ಕನ್ನಡದ 'ವಿಕ್ರಾಂತ್ ರೋಣ'ನ ಬಗ್ಗೆ ದಿನೇ, ದಿನೇ ಕ್ರೇಜ್ ಹೆಚ್ಚಾಗುತ್ತಿದೆ. ಇನ್ನು ಚಿತ್ರದ ಟ್ರೈಲರ್ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆ ನಿರೀಕ್ಷೆಯನ್ನು 'ವಿಕ್ರಾಂತ್ ರೋಣ' ಸುಳ್ಳು ಮಾಡಿಲ್ಲ. ಟ್ರೈಲರ್ ಮೂಲಕ 'ವಿಕ್ರಾಂತ್ ರೋಣ' ಭರ್ಜರಿ ದಾಖಲೆಯ ಬೇಟೆಯನ್ನು ಶುರು ಮಾಡಿದೆ.
'ವಿಕ್ರಾಂತ್
ರೋಣ'
ಟ್ರೈಲರ್
ಲಾಂಚ್‌ನಲ್ಲಿ
ಸುದೀಪ್
ತೊಟ್ಟ್
ಜಾಕೆಟ್
ಎಷ್ಟು
ದುಬಾರಿ
ಗೊತ್ತ?
ಇನ್ನು ಸಿನಿಮಾ ಮತ್ತಷ್ಟು ಸಾಲು, ಸಾಲು ದಾಖಲೆಗಳನ್ನು ಮಾಡಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಮಿಸ್ಟ್ರಿ ಕಥೆಯನ್ನು ಹೇಳಲು 'ವಿಕ್ರಾಂತ್ ರೋಣ' ಸಜ್ಜಾಗಿದ್ದಾನೆ. ಹಾಗಿದ್ದರೆ ಇಂದು (ಜೂನ್ 23)ರಂದು ರಿಲೀಸ್ ಆದ 'ವಿಕ್ರಾಂತ್ ರೋಣ' ಟ್ರೈಲರ್ ಒಂದು ಗಂಟೆಗೆ ಯಾವ ಭಾಷೆಯಲ್ಲಿ ಎಷ್ಟು ವೀವ್ಸ್ ಪಡೆದಿದೆ ಎನ್ನುವ ವಿವರ ಮುಂದೆ ಓದಿ...
ಕನ್ನಡದಲ್ಲಿ ಅತೀ ಹೆಚ್ಚು ವೀಕ್ಷಣೆ!
'ವಿಕ್ರಾಂತ್ ರೋಣ' ಟ್ರೈಲರ್ ರಿಲೀಸ್‌ಗಾಗಿ ಕಾಯುತ್ತಿದ್ದವರಿಗೆ, ಟ್ರೈಲರ್ ರಸದೌತಣ ಬಡಿಸಿದೆ. ಸಿನಿಮಾ ಹೇಗಿರಬಹುದು ಎನ್ನುವ ಹಿಂಟ್ ಕೊಟ್ಟಿದೆ. 5 ಗಂಟೆ 2 ನಿಮಿಷಕ್ಕೆ ರಿಲೀಸ್ ಆದ 'ವಿಕ್ರಾಂತ್ ರೋಣ' ಟ್ರೈಲರ್ ಒಂದು ಗಂಟೆಗೆ ವೀವ್ಸ್ 5 ಲಕ್ಷ ದಾಟಿದೆ. ಒಂದು ಗಂಟೆಯಲ್ಲಿ ಕನ್ನಡದ ಟ್ರೈಲರ್ 522,328 ವೀಕ್ಷಣೆ ಪಡೆದು ದಾಖಲೆ ಬರೆದಿದೆ.
Vikrant
Rona
Trailer
:
ಗುಮ್ಮ
ಗುಮ್ಮ
ಗುಮ್ಮ
ಬಂದ:
'ವಿಕ್ರಾಂತ್
ರೋಣ'
ಟ್ರೈಲರ್
ರಿಲೀಸ್
ಹಿಂದಿಯಲ್ಲಿ 'ವಿಕ್ರಾಂತ್ ರೋಣ' ಟ್ರೈಲರ್ ದಾಖಲೆ !
ಇನ್ನು 'ವಿಕ್ರಾಂತ್ ರೋಣ' ಸಿನಿಮಾದ ಕ್ರೇಜ್ ಹಿಂದಿಯಲ್ಲೂ ಹೆಚ್ಚಾಗಿದೆ. ಹಿಂದಿಯಲ್ಲಿ 'ವಿಕ್ರಾಂತ್ ರೋಣ' ಟ್ರೈಲರ್ ನಟ ಸಲ್ಮಾನ್ ಖಾನ್ ರಿಲೀಸ್ ಮಾಡಿದ್ದು, ಒಂದು ಗಂಟೆಯಲ್ಲಿ 220,297 ವೀಕ್ಷಣೆ ಪಡೆದುಕೊಂಡಿದೆ. ಇನ್ನು ಹಿಂದಿಯಲ್ಲೂ ಚಿತ್ರದ ಬಗ್ಗೆ ಉತ್ತಮ ನಿರೀಕ್ಷೆ ಇದೆ. ಮುಂಬೈಗೆ ತೆರಳಿ ಚಿತ್ರತಂಡ ಅಲ್ಲೂ ಸುದ್ದಿಗೋಷ್ಠಿ ಮಾಡಿ ಮುಗಿಸಿದೆ. ಚಿತ್ರದಲ್ಲಿ ಬಾಲಿವುಡ್ ತಾರೆ ಜಾಕ್ವೆಲಿನ್ ಫರ್ನಾಂಡೀಸ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ತೆಲುಗಿನಲ್ಲಿ 'ವಿಕ್ರಾಂತ್ ರೋಣ' ರೆಕಾರ್ಡ್!
ನಟ ಸುದೀಪ್ ತೆಲುಗು ಮಂದಿಗೆ ಹೊಸಬರೇನಲ್ಲಾ. ಹಾಗಾಗಿ ಅಲ್ಲೂ ಕೂಡ 'ವಿಕ್ರಾಂತ್ ರೋಣ' ಟ್ರೈಲರ್ ಹವಾ ಜೋರಾಗಿದೆ. ಜನ ಮುಗಿ ಬಿದ್ದು ಟ್ರೈಲರ್ ನೋಡುತ್ತಿದ್ದಾರೆ. ತೆಲುಗು ಅವತರಣಿಕೆಯ ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್ ಮಾಡಿದ್ದಾರೆ ರಾಮ್ ಚರಣ್ ತೇಜ. 'ವಿಕ್ರಾಂತ್ ರೋಣ'ದ ತೆಲುಗು ಟ್ರೈಲರ್ ಕೂಡ 118,874 ವೀವ್ಸ್ ಪಡೆದುಕೊಂಡಿದೆ. ಇನ್ನು ಸಿನಿಮಾ ತಂಡ ಜೂನ್ 25ಕ್ಕೆ ಹೈದ್ರಾಬಾದ್‌ನಲ್ಲೂ ಕೂಡ ಸುದ್ಧಿಗೋಷ್ಠಿ ನಡೆಸಲಿದೆ.
'ವಿಕ್ರಾಂತ್
ರೋಣ'
ಟಾರ್ಗೆಟ್
2000
ಕೋಟಿ:
ಸುದೀಪ್
ಹೇಳಿಕೆ!
ತಮಿಳು, ಮಲಯಾಳಂನಲ್ಲಿ ಉತ್ತಮ ರೆಸ್ಪಾನ್ಸ್!
ಪ್ಯಾನ್ ಇಂಡಿಯಾ ರಿಲೀಸ್ ಆಗಿರುವ 'ವಿಕ್ರಾಂತ್ ರೋಣ' ಟ್ರೈಲರ್ ಹೆಚ್ಚು ವೀವ್ಸ್ ಅನ್ನು ಪಡೆದುಕೊಳ್ಳುವುದರ ಮೂಲಕ ದಾಖಲೆ ಮಾಡುತ್ತಿದೆ. ತಮಿಳಿನಲ್ಲಿ ಚಿತ್ರದ ಟ್ರೈಲರ್ ಅನ್ನು ನಟ ಧನುಷ್ ಲಾಂಚ್ ಮಾಡಿದ್ದಾರೆ. ಹಾಗೆ ಮಲಯಾಳಂನಲ್ಲಿ ನಟ ದುಲ್ಖರ್ ಸಲ್ಮಾನ್ ಲಾಂಚ್ ಮಾಡಿದ್ದಾರೆ. ತಮಿಳಿನಲ್ಲಿ ಒಂದು ಗಂಟೆಗೆ 44,344 ವೀವ್ಸ್ ಕಂಡಿದೆ. ಮಲಯಾಳಂನಲ್ಲಿ ಒಂದು ಗಂಟೆಗೆ 32,141 ವೀವ್ಸ್ ಪಡೆದುಕೊಂಡಿದೆ 'ವಿಕ್ರಾಂತ್ ರೋಣ' ಟ್ರೈಲರ್.
'ವಿಕ್ರಾಂತ್ ರೋಣ' ಇಂಗ್ಲಿಷ್ ಟ್ರೈಲರ್ ಹವಾ!
'ವಿಕ್ರಾಂತ್ ರೋಣ' ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾತ್ರ ಎನ್ನಲೂ ಸಾಧ್ಯವಿಲ್ಲ. ಯಾಕೆಂದರೆ, ಈ ಚಿತ್ರ ಭಾರತದ ಹೆಸರಾಂತ 5 ಚಿತ್ರರಂಗಗಳಾದ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಜೊತೆಗೆ ಇಂಗ್ಲಿಷ್‌ನಲ್ಲೂ ಕೂಡ ರಿಲೀಸ್ ಆಗುತ್ತಿದೆ. ಹಾಗಾಗಿ ಇದು ವರ್ಲ್ಡ್ ಕ್ಲಾಸ್ ಸಿನಿಮಾ. ಇನ್ನು ಇಂಗ್ಲಿಷ್‌ನಲ್ಲಿ 'ವಿಕ್ರಾಂತ್ ರೋಣ' ಟ್ರೈಲರ್ ಹವಾ ಜೋರಾಗಿದೆ. ಇಂಗ್ಲಿಷ್‌ನಲ್ಲಿ 1 ಗಂಟೆಗೆ 86,702 ವೀಕ್ಷಣೆ ಪಡೆದುಕೊಂಡಿದೆ.