For Quick Alerts
  ALLOW NOTIFICATIONS  
  For Daily Alerts

  ಪ್ರೀ ರಿಲೀಸ್ ಬುಕಿಂಗ್‌ನಲ್ಲಿಯೇ ಕೋಟ್ಯಂತರ ಬಾಚಿದ 'ವಿಕ್ರಾಂತ್ ರೋಣ'

  |

  ಈಗ ಎಲ್ಲೆಲ್ಲೂ 'ವಿಕ್ರಾಂತ್ ರೋಣ'ನದ್ದೇ ಹವಾ. ಕಿಚ್ಚ ಸುದೀಪನನ್ನು 'ವಿಕ್ರಾಂತ್ ರೋಣ'ನ ಅವತಾರದಲ್ಲಿ ಕಣ್ಣು ತುಂಬಿಕೊಳ್ಳಲು ಕೆಲ ಗಂಟೆಗಳಷ್ಟೆ ಬಾಕಿ ಇದೆ.

  'ವಿಕ್ರಾಂತ್ ರೋಣ'ನ ಹವಾ ದೇಶದೆಲ್ಲೆಡೆಡೆ ಹಬ್ಬಿದೆ. ರಾಜ್ಯದಲ್ಲಂತು 'ವಿಕ್ರಾಂತ್ ರೋಣ'ನನ್ನು ಅದ್ಧೂರಿಯಾಗಿ ಸ್ವಾಗತಿಸಲು ಕಿಚ್ಚನ ಅಭಿಮಾನಿಗಳು ತಯಾರಾಗಿ ನಿಂತಿದ್ದಾರೆ. ಸಿನಿ ಪ್ರೇಮಿಗಳಂತೂ ಮುಂಗಡವಾಗಿ ಟಿಕೆಟ್ ಬುಕ್ ಮಾಡಿಕೊಂಡು ಮಾರ್ನಿಂಗ್ ಶೋಗಾಗಿ ಕಾತರದಿಂದ ಕಾಯುತ್ತಿದ್ದಾರೆ.

  ಕೆಲವು ದಿನಗಳ ಹಿಂದೆಯೇ ದೇಶದೆಲ್ಲೆಡೆ 'ವಿಕ್ರಾಂತ್ ರೋಣ' ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್ ಅನ್ನು ತೆರೆಯಲಾಗಿತ್ತು. ಸಿನಿಮಾಕ್ಕೆ ನಿರುವ ನಿರೀಕ್ಷೆಯ ಮಟ್ಟ ಈ ಟಿಕೆಟ್ ಬುಕಿಂಗ್‌ನಿಂದಲೇ ತಿಳಿಯುತ್ತದೆ. ಜೊತೆಗೆ ಸಿನಿಮಾವು ಮೊದಲ ದಿನ ಮಾಡಬಹುದಾದ ಅಂದಾಜು ಕಲೆಕ್ಷನ್ ಅನ್ನು ಈ ಮುಂಗಡ ಟಿಕೆಟ್ ಮೂಲಕ ಅಂದಾಜಿಸಬಹುದು ಸಹ. ಇದೀಗ 'ವಿಕ್ರಾಂತ್ ರೋಣ' ಸಿನಿಮಾ ಮುಂಗಡ ಟಿಕೆಟ್‌ನಿಂದ ಗಳಿಸಿದ್ದೆಷ್ಟು ಎಂಬುದರ ಅಂದಾಜು ಮಾಹಿತಿ ಇಲ್ಲಿದೆ.

  ಅಡ್ವಾನ್ಸ್ ಬುಕಿಂಗ್‌ನಿಂದಾದ ಕಲೆಕ್ಷನ್ ಎಷ್ಟು?

  ಅಡ್ವಾನ್ಸ್ ಬುಕಿಂಗ್‌ನಿಂದಾದ ಕಲೆಕ್ಷನ್ ಎಷ್ಟು?

  ಅಡ್ವಾನ್ಸ್ ಬುಕಿಂಗ್ ಮಾಹಿತಿಯಂತೆ ಸಿನಿಮಾ ಬಿಡುಗಡೆಗೆ ಎರಡು ದಿನ ಮುಂಚಿತವಾಗಿ ಕರ್ನಾಟಕದಲ್ಲಿ 3.20 ಕೋಟಿ ಮೌಲ್ಯದ ಸಿನಿಮಾ ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿದೆ. ಸಿನಿಮಾದ ಹಿಂದಿ ಆವೃತ್ತಿಯ ಮುಂಗಡ ಟಿಕೆಟ್‌ ಮೌಲ್ಯ 40 ಲಕ್ಷ, ತೆಲುಗು ರಾಜ್ಯದಲ್ಲಿ 35 ಲಕ್ಷ ಮೌಲ್ಯದ ಟಿಕೆಟ್‌, ತಮಿಳಿನಲ್ಲಿ 12 ಲಕ್ಷ, ಮಲಯಾಳಂನ ಎರಡು ಲಕ್ಷ ಮೌಲ್ಯದ ಟಿಕೆಟ್‌ಗಳು ಮಾರಾಟವಾಗಿದೆ. ಅಲ್ಲಿ ಒಟ್ಟು ಆರು ಕೋಟಿ ಮೌಲ್ಯದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಆಗಿದೆ.

  ಬೆಂಗಳೂರಿನಲ್ಲಿ ಎಷ್ಟು ಗಳಿಸಬಹುದು 'ವಿ.ರೋಣ'?

  ಬೆಂಗಳೂರಿನಲ್ಲಿ ಎಷ್ಟು ಗಳಿಸಬಹುದು 'ವಿ.ರೋಣ'?

  ಇನ್ನು ಅಡ್ವಾನ್ಸ್‌ ಬುಕಿಂಗ್‌ಗಿಂತಲೂ ದುಪ್ಪಟ್ಟು ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಿನ ಕಲೆಕ್ಷನ್ ಮೊದಲ ದಿನ ಆಗುವುದು ಸಾಮಾನ್ಯ. ಅಲ್ಲಿಗೆ ವಿಕ್ರಾಂತ್ ರೋಣ ಸಿನಿಮಾ ಮೊದಲ ದಿನ ದೇಶದಾದ್ಯಂತ ಸುಮಾರು 15 ರಿಂದ 20 ಕೋಟಿ ಹಣ ಗಳಿಸುವ ಸಾಧ್ಯತೆ ಇದೆ. ಬೆಂಗಳೂರು ನಗರವೊಂದರಲ್ಲಿಯೇ ಸುಮಾರು 7-9 ಕೋಟಿ ಹಣವನ್ನು ಈ ಸಿನಿಮಾ ಮೊದಲ ದಿನ ಗಳಿಸುವ ಸಾಧ್ಯತೆ ಇದೆ.

  ಸುಮಾರು 970 ಶೋಗಳು ಬೆಂಗಳೋಂದರಲ್ಲೇ

  ಸುಮಾರು 970 ಶೋಗಳು ಬೆಂಗಳೋಂದರಲ್ಲೇ

  ಬೆಂಗಳೂರು ಒಂದರಲ್ಲಿಯೇ ಸುಮಾರು 970 ಶೋಗಳು ಪ್ರದರ್ಶಿತಗೊಳ್ಳಲಿವೆ. ವಿಶ್ವದಾದ್ಯಂತ ಸುಮಾರು 9000 ಶೋಗಳು ಪ್ರದರ್ಶನಗೊಳ್ಳಲಿವೆ. ವಿದೇಶಗಳಲ್ಲಿಯೂ 'ವಿಕ್ರಾಂತ್ ರೋಣ' ಸಿನಿಮಾದ ಹವಾ ಜೋರಾಗಿದ್ದು, ವಿದೇಶಗಳಲ್ಲಿಯೂ ಈ ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಅನ್ನು ಮಾಡುವ ನಿರೀಕ್ಷೆ ಇದೆ. ಇನ್ನು ಹಿಂದಿ ಬೆಲ್ಟ್‌ ಹಾಗೂ ತೆಲುಗು ರಾಜ್ಯಗಳಲ್ಲಿ ದೊಡ್ಡ ಮಟ್ಟದ ಮೊದಲ ದಿನದ ಕಲೆಕ್ಷನ್ ಅನ್ನು ನಿರೀಕ್ಷಿಸಲಾಗುತ್ತಿದೆ. ಹಿಂದಿ ಹಾಗೂ ತೆಲುಗಿನಲ್ಲಿ ಕಿಚ್ಚನಿಗೆ ದೊಡ್ಡ ಅಭಿಮಾನಿ ಬಳಗವಿದೆ.

  ಅನುಪ್ ಭಂಡಾರಿ ನಿರ್ದೇಶನ

  ಅನುಪ್ ಭಂಡಾರಿ ನಿರ್ದೇಶನ

  'ವಿಕ್ರಾಂತ್ ರೋಣ' ಸಿನಿಮಾವನ್ನು ಅನುಪ್ ಭಂಡಾರಿ ನಿರ್ದೇಶನ ಮಾಡಿದ್ದು ಸಿನಿಮಾದಲ್ಲಿ ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್ ಬಾಲಿವುಡ್‌ನ ಜಾಕ್ವೆಲಿನ್ ಫರ್ನಾಂಡೀಸ್ ಇನ್ನೂ ಹಲವು ಕಲಾವಿದರು ನಟಿಸಿದ್ದಾರೆ. ಊರೊಂದರಲ್ಲಿ ನಡೆವ ಚಿತ್ರ ವಿಚಿತ್ರ ಘಟನೆಗಳು, ಅದಕ್ಕೆ ಕಾರಣನಾದ ವ್ಯಕ್ತಿ ಹಾಗೂ ಅದನ್ನು ಕಂಡು ಹಿಡಿಯಲು ಬಂದ ವ್ಯಕ್ತಿಯ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ನಿರ್ಮಾಣ ಮಾಡಿರುವುದು ಜಾಕ್ ಮಂಜು ಹಾಗೂ ಅಲಂಕಾರ್ ಪಾಂಡಿಯನ್.

  Recommended Video

  Vikrant Rona Public Reaction | ಈ ಥಿಯೇಟರ್ ರಿವ್ಯೂ ಸುದೀಪ್ ಗೆ ತುಂಬಾ ಸ್ಪೆಷಲ್ | Chitradurga Fans | Sudeep
  English summary
  Vikrant Rona movie advance booking collections report is here. Vikrant Rona already collected more that 6 crore rs only from advance booking.
  Thursday, July 28, 2022, 10:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X