ಬುರ್ಜ್ ಖಲೀಫಾ ಮೇಲೆ ಕನ್ನಡ ಧ್ವಜ: ಸುದೀಪ್ ಹೇಳಿದ್ದೇನು?

ಕಿಚ್ಚ ಸುದೀಪ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ ಪ್ರಪಂಚ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ 'ವಿಕ್ರಾಂತ್ ರೋಣ' ಸಿನಿಮಾದ ಟೈಟಲ್ ಲೋಗೋ ಅನಾವರಣಗೊಂಡಿದೆ.

Recommended Video

ಕನ್ನಡದ ಕಂಪನ್ನು ದುಬೈನಲ್ಲಿ ಹಾರಿಸಿದ ಕಿಚ್ಚ | Filmibeat Kannada

ಸುದೀಪ್ ನಡೆದು ಬಂದ ಹಾದಿಯ ಝಲಕ್ ಸಹ ದುಬೈನ ದೊಡ್ಡ ಕಟ್ಟಡದ ಮೇಲೆ ಪ್ರದರ್ಶನವಾಗಿದೆ. ಸಿನಿಮಾಗಳು, ಪಾತ್ರಗಳು, ಕ್ರಿಕೆಟ್, ಗಾಯನ ಹೀಗೆ ಕಿಚ್ಚನ ಜರ್ನಿಯ ಕುರಿತು ವಿಡಿಯೋ ಕ್ಲಿಪ್ ಬಿತ್ತರಿಸಲಾಯಿತು. ಈ ವಿಡಿಯೋ ನಡುವೆ ಬುರ್ಜ್ ಖಲೀಫಾ ಮೇಲೆ ಕನ್ನಡ ಧ್ವಜ ಹಾರಿದ್ದು ನಿಜಕ್ಕೂ ಕನ್ನಡಿಗರಿಗೆ ರೋಮಾಂಚನ ಉಂಟು ಮಾಡಿತು.

ಈ ದೃಶ್ಯ ಕಂಡು ಸ್ವತಃ ಸುದೀಪ್ ಅವರು ಒಂದು ಕ್ಷಣ ರೋಮಾಂಚನಗೊಂಡರು. ಬುರ್ಜ್ ಖಲೀಫಾ ಮೇಲೆ ಕನ್ನಡದ ಧ್ವಜ ಬಿತ್ತರವಾದುದ್ದನ್ನು ಕಂಡ ಕಿಚ್ಚ ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದ ನಡುವೆ ಮಾತನಾಡಿದ ''ಕರ್ನಾಟಕ ಭಾವುಟ ಪ್ರದರ್ಶಿಸಿದ್ದು ಬಹಳ ಹೆಮ್ಮೆ ಆಯಿತು. ಇದು ನಿಜಕ್ಕೂ ಸರ್ಪ್ರೈಸ್ ನನಗೆ, ತುಂಬಾ ಖುಷಿ ಆಯಿತು'' ಎಂದರು.

Vikrant Rona movie team hoisted Karnataka Flag on Burj Khalifa

2 ಸಾವಿರ ಅಡಿಗೂ ಎತ್ತರ ಕಟ್ಟಡದ ಮೇಲೆ ಕರ್ನಾಟಕದ ಧ್ವಜ ಪ್ರದರ್ಶನವಾಗಿದ್ದಕ್ಕೆ ಕನ್ನಡ ಅಭಿಮಾನಿಗಳು ವಿಕ್ರಾಂತ್ ರೋಣ ಚಿತ್ರತಂಡ ಧನ್ಯವಾದ ಅರ್ಪಿಸಿದ್ದಾರೆ.

ಕನ್ನಡ ರಾಜ್ಯೋತ್ಸವ ದಿನದಂದು ಕರ್ನಾಟಕದ ಕೆಲವು ಕಡೆ ಕನ್ನಡ ಧ್ವಜ ಹಾರಿಸಲು ವಿರೋಧ ಮಾಡ್ತಾರೆ. ಅಂತಹದ್ರಲ್ಲಿ ಬುರ್ಜ್ ಖಲೀಫಾದಲ್ಲಿ ಕನ್ನಡ ಧ್ವಜ ಹಾರಿದೆ, ಇದು ನಿಜವಾದ ಖುಷಿ ಎಂದು ನೆಟ್ಟಿಗರು ಸಂಭ್ರಮಿಸಿದ್ದಾರೆ.

More from Filmibeat

English summary
Kiccha Sudeep Starrer Vikrant Rona movie team hoisted Karnataka Flag on world's tallest building Burj Khalifa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X