'ವಿಕ್ರಾಂತ್ ರೋಣ' ಪಾರ್ಟ್ 2 ಪಕ್ಕಾ!

ಸಿನಿಮಾರಂಗದಲ್ಲಿ ಒಂದು ಕಡೆ ಪ್ಯಾನ್ ಇಂಡಿಯಾ ಸಿನಿಮಾ ಟ್ರೆಂಡ್ ಸೃಷ್ಟಿಯಾಗಿದೆ. ಅದರಲ್ಲೂ ದೊಡ್ಡ ದೊಡ್ಡ ಕಮರ್ಷಿಯಲ್ ಸಿನಿಮಾಗಳ ಸೀಕ್ವೆಲ್ ಬರುತ್ತಿವೆ. ಬಾಹುಬಲಿ ಸಿನಿಮಾದ ಬಳಿಕ ಈ ಟ್ರೆಂಡ್ ದೊಡ್ಡ ಮಟ್ಟದಲ್ಲಿ ಶುರುವಾಗಿದೆ.

ಬಾಹುಬಲಿಗಿಂತಲೂ ಮೊದಲು ಹಲವು ಸಿನಿಮಾಗಳ ಸೀಕ್ವೆಲ್‌ನಲ್ಲಿ ಬಂದಿವೆ. ಆದರೂ ಕೂಡ ಬಾಹುಬಲಿ ಅಷ್ಟು ದೊಡ್ಡ ಮಟ್ಟದ ಪ್ರಭಾವ ಬೀರಿದ ಸಿನಿಮಾ ಮತ್ತೊಂದಿಲ್ಲ. ಬಾಹುಬಲಿ ಭಾಗ-1 ಬಂದಾಗ ಕ್ಲೈಮ್ಯಾಕ್ಸ್ ನಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎನ್ನುವ ದೊಡ್ಡ ಕುತೂಹಲದೊಂದಿಗೆ ಬಾಹುಬಲಿ 2 ಸಿನಿಮಾ ರಿಲೀಸ್ ಆಯ್ತು.

ಅಂತೆಯೇ ಕೆಜಿಎಫ್ ಮೊದಲ ಭಾಗವನ್ನು ನೋಡಿದವರು ಕೆಜಿಎಫ್ 2 ಸಿನಿಮಾ ನೋಡಲು ಹೆಚ್ಚು ಕಾತರರಾಗಿದ್ದರು. ಹಾಗಾಗಿಯೇ ಕೆಜಿಎಫ್ 2 ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡಲು ಸಾಧ್ಯವಾಯಿತು. ಎನ್ನಬಹುದು. ಕೆಜಿಎಫ್ ಸಿನಿಮಾವನ್ನು ಜನ ಮುಗಿಬಿದ್ದು ನೋಡಲು ಕಾರಣ ಕೆಜಿಎಫ್ ಮೊದಲ ಭಾಗವಾಗಿತ್ತು.

ಇದೀಗ ವಿಕ್ರಂತ್ ರೋಣ 2 ಕೂಡ ಬರಲಿದೆಯಂತೆ.

ವಿಕ್ರಾಂತ್ ರಿಲೀಸ್‌ಗೆ ಕ್ಷಣಗಣನೆ!

ವಿಕ್ರಾಂತ್ ರಿಲೀಸ್‌ಗೆ ಕ್ಷಣಗಣನೆ!

ಸದ್ಯ ಭಾರತೀಯ ಬಹುನಿರೀಕ್ಷಿತ ಸಿನಿಮಾ ಎಂದರೆ ಅದು 'ವಿಕ್ರಾಂತ್ ರೋಣ' ಎಂದೇ ಹೇಳಬಹುದು. ಕನ್ನಡದ 'ವಿಕ್ರಾಂತ ರೋಣ' ಸಿನಿಮಾ ದೊಡ್ಡಮಟ್ಟದಲ್ಲಿ ಹವಾ ಕ್ರಿಯೆಟ್ ಮಾಡಿದೆ. ಭಾರತದಾದ್ಯಂತ ಸಿನಿಮಾ ಹಲವು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈ ತನ್ನದೇ ಆದ ರೀತಿಯಲ್ಲಿ ಕ್ರೇಜ್ ಹುಟ್ಟುಹಾಕಿದೆ. ಜುಲೈ 28ಕ್ಕೆ ವಿಕ್ರಾಂತ್ ರೋಣ ಅಬ್ಬರ ವಿಶ್ವಾದ್ಯಂತ ಶುರುವಾಗಲಿದೆ.

ವಿಕ್ರಾಂತ್ ರೋಣ 2!

ವಿಕ್ರಾಂತ್ ರೋಣ 2!

ವಿಕ್ರಾಂತ್ ರೋಣ ಸಿನಿಮಾ ಸದ್ಯ ಟ್ರೇಲರ್ ಮೂಲಕ ಜಾದು ಮಾಡಿದೆ. ಟ್ರೇಲರ್ ಬೇರೆ ರೀತಿಯ ಲೋಕವನ್ನು ತೆರೆದಿಟ್ಟಿದೆ. ಸಿನಿಮಾ ಕೂಡ ಅಷ್ಟೇ ಸ್ವಾರಸ್ಯಕರವಾಗಿರಲಿದೆ ಎನ್ನುವ ನಿರೀಕ್ಷೆ ಹುಟ್ಟು ಹಾಕಿದೆ. ಆದರೆ ಸಿನಿಮಾ ತೆರೆಗೆ ಬಂದ ಮೇಲೆ ನಿರೀಕ್ಷೆ ಮುಟ್ಟುತ್ತಾ ಎನ್ನುವುದನ್ನು ನೋಡಬೇಕಿದೆ. ಇನ್ನು ಇದೇ ಬೆನ್ನಲ್ಲೇ ಮತ್ತೊಂದು ಸುದ್ದಿ ಬಂದಿದ್ದು, ವಿಕ್ರಾಂತ್ ರೋಣ ಭಾಗ 2 ಬರಲಿದೆ ಎನ್ನುವ ಸುಳಿವು ಸಿಕ್ಕಿದೆ.

ವಿಕ್ರಾಂತ್ ರೋಣ 2- ಸುದೀಪ್ ಹೇಳಿಕೆ!

ವಿಕ್ರಾಂತ್ ರೋಣ 2- ಸುದೀಪ್ ಹೇಳಿಕೆ!

ಹೌದು ವಿಕ್ರಾಂತ್ ರೋಣ ಸೀಕ್ವೆಲ್ ಬರುವ ಎಲ್ಲಾ ಸಾಧ್ಯತೆಗಳು ಇವೆ. ಈ ಬಗ್ಗೆ ನಟ ಸುದೀಪ್ ಹೇಳಿಕೊಂಡಿದ್ದಾರೆ. ಇತ್ತೀಚೆಗಿನ ಸಂದರ್ಶನ ಒಂದರಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸೀಕ್ವೆಲ್ ಬಗ್ಗೆ ಸುಳಿವು ಕೊಟ್ಟಿದ್ದಾರೆ. 'ವಿಕ್ರಾಂತ್ ರೋಣ 2 ಮಾಡುವ ಎಲ್ಲಾ ಅವಕಾಶಗಳು ಇದೆ' ಎಂದಿದ್ದಾರೆ ನಟ ಸುದೀಪ್. ಹಾಗಾಗಿ ಈ ಚಿತ್ರದ ಮೇಲಿನ ಕ್ಲೈಮ್ಯಾಕ್ಸ್ ಬಗ್ಗೆಯೂ ಹೆಚ್ಚಿನ ಕುತೂಹಲ ಮೂಡಿದೆ.

ಪುಷ್ಪ, ಕೆಜಿಎಫ್, ಬಾಹುಬಲಿ, ವಿಕ್ರಾಂತ್ ರೋಣ!

ಪುಷ್ಪ, ಕೆಜಿಎಫ್, ಬಾಹುಬಲಿ, ವಿಕ್ರಾಂತ್ ರೋಣ!

ಒಂದೇ ಸಿನಿಮಾದಲ್ಲಿ ಸಂಪೂರ್ಣ ಕಥೆಯನ್ನು ಹೇಳಿ ಮುಗಿಸದೆ, ಮೊದಲ ಸಿನಿಮಾದ ಕ್ಲೈ ಮ್ಯಾಕ್ಸ್‌ನಲ್ಲಿ ಹೆಚ್ಚಿನ ಕುತೂಹಲ ಇಟ್ಟು, ಅದನ್ನು ಭಾಗ ಎರಡಕ್ಕೆ ಮುಂದುವರೆಸಿಕೊಂಡು ಹೋಗ್ತಾರೆ. ಇದು ಯಶಸ್ವಿ ಪ್ರಯತ್ನವು ಆಗಿದೆ. ಕೆಜಿಎಫ್, ಬಾಹುಬಲಿ ಸಿನಿಮಾಗಳು ಎರಡು ಕಂತಿನಲ್ಲಿ ಬಂದು ಗೆದ್ದು ಬೀಗಿವೆ. ಈಗ ಪುಷ್ಪ 2 ಸಿನಿಮಾದ ಮೇಲು ಹೆಚ್ಚಿನ ನಿರೀಕ್ಷೆ ಇದೆ. ಅಂತೆಯೇ ವಿಕ್ರಾಂತ್ ರೋಣ ಕೂಡ ಈ ಮಾರ್ಗದಲ್ಲಿ ಯಶಸ್ಸು ಕಾಣುವ ಸಾಧ್ಯತೆ ಇದೆ. ಆದರೆ ಈ ಚಿತ್ರದ ಸೀಕ್ವೆಲ್ ಖಚಿತವಾಗಿ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿಲ್ಲ. ಈ ಚಿತ್ರ ರಿಲೀಸ್ ಬಳಿಕ ರೆಸ್ಪಾನ್ಸ್ ನೋಡಿಕೊಂಡು, ಪಾರ್ಟ್ 2 ಸಿನಿಮಾ ಮಾಡುವ ಸಾಧ್ಯತೆ ಇದೆ.

More from Filmibeat

English summary
Vikrant Rona Sequel Is Coming, Says Kiccha Sudeep. Know more about the news.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X