For Quick Alerts
  ALLOW NOTIFICATIONS  
  For Daily Alerts

  'ವಿಕ್ರಾಂತ್ ರೋಣ' ರಿಲೀಸ್ ಹೊಸ್ತಿಲಲ್ಲಿ ವಾಟ್ಸಾಪ್ ನಂಬರ್ ಕೊಟ್ಟು ಅನೂಪ್ ಏನಂದ್ರು?

  |

  ಬಹುನಿರೀಕ್ಷಿತ 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಲಿದೆ. ಇಂದೇ ವಿದೇಶಗಳಲ್ಲಿ ಪ್ರೀಮಿಯರ್ ಶೋಗಳು ಶುರುವಾಗ್ತಿದ್ದು, ನಾಳೆ ಬೆಳ್ಳಂಬೆಳಗ್ಗೆ ದೇಶಾದ್ಯಂತ ಸಿಲ್ವರ್‌ ಸ್ಕ್ರೀನ್‌ ಮೇಲೆ ಅಭಿನಯ ಚಕ್ರವರ್ತಿ ಆರ್ಭಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ. ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಪ್ರೇಕ್ಷಕರಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

  ಜಾಕ್ ಮಂಜು ಹಾಗೂ ಅಲಂಕಾರ್ ಪಾಂಡಿಯನ್ ನಿರ್ಮಾಣದ ಅದ್ಧೂರಿ ಸಿನಿಮಾ 'ವಿಕ್ರಾಂತ್ ರೋಣ'. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ಹಿಟ್ ಆಗಿ ಸಿಕ್ಕಾಪಟ್ಟೆ ಬಝ್ ಕ್ರಿಯೇಟ್ ಮಾಡಿದೆ. ಏಕಕಾಲಕ್ಕೆ 6 ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸ್ತಿದ್ದು, ಅಭಿಮಾನಿಗಳು ಟಿಕೆಟ್ ಬುಕ್ ಮಾಡಿಕೊಂಡು ಸಿನಿಮಾ ನೋಡಲು ಎದುರು ನೋಡುತ್ತಿದ್ದಾರೆ. ನಿರೂಪ್ ಭಂಡಾರಿ ಹಾಗೂ ನೀತಾ ಅಶೋಕ್ ಚಿತ್ರದಲ್ಲಿ ಬಾದ್‌ಶಾ ಸುದೀಪ್‌ಗೆ ಸಾಥ್ ಕೊಟ್ಟಿದ್ದಾರೆ.

  'ಕೆಜಿಎಫ್‌- 2' ಹಾಗೂ 'RRR'ಗಿಂತ 'ವಿಕ್ರಾಂತ್‌ ರೋಣ' ಚಿಕ್ಕ ಸಿನಿಮಾ?'ಕೆಜಿಎಫ್‌- 2' ಹಾಗೂ 'RRR'ಗಿಂತ 'ವಿಕ್ರಾಂತ್‌ ರೋಣ' ಚಿಕ್ಕ ಸಿನಿಮಾ?

  'ವಿಕ್ರಾಂತ್ ರೋಣ' ರಿಲೀಸ್ ಸಮಯ ಹತ್ತಿರ ಬರ್ತಿದ್ದಂತೆ ನಿರ್ದೇಶಕ ಅನೂಪ್ ಭಂಡಾರಿ ಸಿನಿಮಾ ಪೈರಸಿ ಮಾಡಬೇಡಿ ಅಂತ ಸೋಶಿಯಲ್ ಮೀಡಿಯಾ ಕೇಳಿಕೊಂಡಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗವನ್ನು ಪೈರಸಿ ಭೂತ ಬೆಂಬಿಡದೇ ಕಾಡುತ್ತಿದೆ. ದೊಡ್ಡ ದೊಡ್ಡ ಸಿನಿಮಾಗಳು ಪೈರಸಿಯಿಂದ ಭಾರೀ ಪೆಟ್ಟು ತಿಂದಿವೆ. ಸಿನಿಮಾ ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಸೋರಿಕೆ ಆಗಿಬಿಡುತ್ತದೆ. 'ವಿಕ್ರಾಂತ್ ರೋಣ' ಚಿತ್ರಕ್ಕೂ ಇದೇ ಆತಂಕ ಶುರುವಾಗಿದ್ದು, ಅದರ ವಿರುದ್ಧ ಹೋರಾಟಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಚಿತ್ರತಂಡ. ಇದಕ್ಕೆ ಪ್ರೇಕ್ಷಕರು ಕೈ ಜೋಡಿಸಬೇಕು ಎಂದು ಅನೂಪ್ ಭಂಡಾರಿ ಟ್ವೀಟ್ ಮಾಡಿ ಕೇಳಿಕೊಂಡಿದ್ದಾರೆ.

   'ವಿಕ್ರಾಂತ್ ರೋಣ' ಪೈರಸಿ ಬಗ್ಗೆ ನಮಗೆ ಮಾಹಿತಿ ಕೊಡಿ

  'ವಿಕ್ರಾಂತ್ ರೋಣ' ಪೈರಸಿ ಬಗ್ಗೆ ನಮಗೆ ಮಾಹಿತಿ ಕೊಡಿ

  ಪೈರಸಿ ಆಗದಂತೆ ತಡೆಯಲು ಪ್ರೇಕ್ಷಕರ ಸಹಾಯ ಕೇಳಿರುವ ನಿರ್ದೇಶಕ ಅನೂಪ್ ಭಂಡಾರಿ, 'ನಿಮಗೆ ಅತ್ಯುತ್ತಮ ಸಿನಿಮಾ ಅನುಭವವನ್ನು ನೀಡಲು ನಾವು ಬಹಳ ಶ್ರಮಿಸಿದ್ದೇವೆ. ಸಿನಿಮಾವನ್ನು ಎಲ್ಲರೂ ದೊಡ್ಡಪರದೆಯಲ್ಲಿ ಮಾತ್ರ ವೀಕ್ಷಿಸಿ. ದಯವಿಟ್ಟು ಚಿತ್ರದ ಕ್ಲಿಪ್‌ಗಳು ಅಥವಾ ದೃಶ್ಯಗಳನ್ನು ಎಲ್ಲೂ ಪೋಸ್ಟ್ ಮಾಡಬೇಡಿ ಅಥವಾ ಹಂಚಿಕೊಳ್ಳಬೇಡಿ. ಅಂತಹ ಚಟುವಟಿಕೆಗಳನ್ನು ನೀವು ನೋಡಿದರೆ, ಕೆಳಗಿನ ವಾಟ್ಸಾಪ್ ಸಂಖ್ಯೆಗೆ ಅಥವಾ ಇಮೇಲ್ IDಗೆ ವರದಿ ಮಾಡಿ' ಎಂದು ಬರೆದುಕೊಂಡಿದ್ದಾರೆ.

  'ವಿಕ್ರಾಂತ್ ರೋಣ' ಟಿಕೆಟ್ ದರ ₹150 ರಿಂದ ₹10,000!'ವಿಕ್ರಾಂತ್ ರೋಣ' ಟಿಕೆಟ್ ದರ ₹150 ರಿಂದ ₹10,000!

   ಪೈರಸಿ ವಿರುದ್ಧ ಹೋರಾಟಕ್ಕೆ ಸರ್ವ ಸನ್ನದ್ಧ

  ಪೈರಸಿ ವಿರುದ್ಧ ಹೋರಾಟಕ್ಕೆ ಸರ್ವ ಸನ್ನದ್ಧ

  ಆನ್‌ಲೈನ್‌ ಜಮಾನದಲ್ಲಿ ಎಷ್ಟೇ ಮನವಿ ಮಾಡಿಕೊಂಡರೂ, ಎಷ್ಟೇ ಮುಂಜಾಗ್ರತೆ ವಹಿಸಿದರೂ ಸಿನಿಮಾಗಳು ಪೈರಸಿ ಆಗಿಬಿಡುತ್ತವೆ. ಅದೇ ಕಾರಣಕ್ಕೆ ದೊಡ್ಡ ಸಿನಿಮಾಗಳು ರಿಲೀಸ್ ಆದಾಗ ನಿರ್ಮಾಪಕರು ಬಹಳ ಎಚ್ಚರಿಕೆ ವಹಿಸುತ್ತಾರೆ. 'ವಿಕ್ರಾಂತ್ ರೋಣ' ತಂಡ ಪೈರಸಿ ಲಿಂಕ್‌ಗಳನ್ನು ಪತ್ತೆ ಮಾಡುವ ಜವಾಬ್ದಾರಿಯನ್ನು ಐಪ್ಲೆಕ್ಸ್ ಎಂಬ ಆಂಟಿ ಪೈರಸಿ ಸಂಸ್ಥೆಗೆ ವಹಿಸಿದ್ದಾರೆ. ಒಂದು ವೇಳೆ 'ವಿಕ್ರಾಂತ್ ರೋಣ' ಸಿನಿಮಾ ಪೈರಸಿ ಆದರೆ ಈ ಸಂಸ್ಥೆಯ ವಾಟ್ಸಾಪ್ಸ್‌ ಅಥವಾ ಇಮೇಲ್ ಐಡಿಗೆ ಮಾಹಿತಿ ನೀಡಿದರೆ ಕೂಡಲೇ ಆ ಲಿಂಕ್‌ಗಳನ್ನು ಡಿಲೀಟ್ ಮಾಡುತ್ತಾರೆ.

   3000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ರೋಣನ' ಹವಾ

  3000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ರೋಣನ' ಹವಾ

  'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಹಳ ಅದ್ಧೂರಿಯಾಗಿ ರಿಲೀಸ್ ಆಗ್ತಿದ್ದು, ಚಿತ್ರತಂಡ ಮೊದಲ ದಿನವೇ ಭರ್ಜರಿ ಕಲೆಕ್ಷನ್ ನಿರೀಕ್ಷೆಯಲ್ಲಿದೆ. ಸಿನಿಮಾ ಕ್ರೇಜ್‌ ನೋಡುತ್ತಿದ್ದರೆ ಮೊದಲ ದಿನವೇ 50 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡುವ ಸಾಧ್ಯತೆಯಿದೆ. ಪ್ರೇಕ್ಷಕರು ತ್ರೀಡಿಯಲ್ಲೂ ಈ ಫ್ಯಾಂಟಸಿ ಆಕ್ಷನ್ ಅಡ್ವೆಂಚರಸ್ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.

   ಸಿನಿಮಾ ನೋಡಿದವರು ಎಷ್ಟು ಮಾರ್ಕ್ಸ್ ಕೊಟ್ರು?

  ಸಿನಿಮಾ ನೋಡಿದವರು ಎಷ್ಟು ಮಾರ್ಕ್ಸ್ ಕೊಟ್ರು?

  'ವಿಕ್ರಾಂತ್ ರೋಣ' ಚಿತ್ರವನ್ನು ನಟ- ನಿರ್ದೇಶಕ ರಮೇಶ್ ಅರವಿಂದ್, ಖ್ಯಾತ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಸೇರಿದಂತೆ ಸುದೀಪ್ ಆಪ್ತರು ನೋಡಿ ಮೆಚ್ಚಿಕೊಂಡಾಡಿದ್ದಾರೆ. ಇನ್ನು ಓವರ್‌ಸೀನ್ ಸೆನ್ಸಾರ್‌ ಬೋರ್ಡ್‌ ಸದಸ್ಯನಾಗಿರು ಉಮೈರ್ ಸಂಧು ಕೂಡ 'ವಿಕ್ರಾಂತ್ ರೋಣ'ನ ಆರ್ಭಟಕ್ಕೆ ಫಿದಾ ಆಗೋಗಿದ್ದಾರೆ. ಎಲ್ಲಾ ವಿಭಾಗಗಳಲ್ಲೂ ಸೂಪರ್ ಸಿನಿಮಾ ಎಂದಿರುವ ಉಮೈರ್ ಸಂಧು 5 ಕ್ಕೆ 4 ಸ್ಟಾರ್ ಕೊಟ್ಟಿದ್ದಾರೆ.

  Recommended Video

  ತನ್ನ ಕೈಯಾರೆ ಮಾಡಿದ ಜಾಕೆಟ್ ಗಿಫ್ಟ್ ಮಾಡಿದ ಅಭಿಮಾನಿ | Vikrant Rona | Upendra | Kiccha Sudeep *Press Meet
  English summary
  Vikrant Rona Team's Sincere Request Against Piracy. Know More.
  Wednesday, July 27, 2022, 15:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X