Don't Miss!
- News
Breaking: ಕರ್ನಾಟಕದಲ್ಲಿ 2000 ಗಡಿ ದಾಟಿದ ಕೊರೊನಾ ವೈರಸ್!
- Sports
ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!
- Lifestyle
Surya Gochar 2022 : ಆ. 17ಕ್ಕೆ ಸಿಂಹದಲ್ಲಿ ಸೂರ್ಯ ಸಂಚಾರ: ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವವೇನು?
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Automobiles
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ದ್ವಿಪಾತ್ರದಲ್ಲಿ ಸುದೀಪ್: 'ವಿಕ್ರಾಂತ್ ರೋಣ' ಆ ವಿಲನ್ ಯಾರು?
'ವಿಕ್ರಾಂತ್ ರೋಣ' ಟ್ರೈಲರ್ ನೋಡಲು ಎಲ್ಲರೂ ಕ್ಷಣಗಣನೆ ಎಣಿಸುತ್ತಿದ್ದಾರೆ. ಆದರೆ ಯುಟ್ಯೂಬ್ನಲ್ಲಿ 2D ಟ್ರೈಲರ್ ಮಾತ್ರವೇ ಲಭ್ಯವಿದೆ. 3D ಅನುಭವಕ್ಕಾಗಿ ಸಿನಿಮಾವನ್ನೇ ನೋಡ ಬೇಕಾಗುತ್ತದೆ. ಸದ್ಯ ಟ್ರೈಲರ್ ಬಗ್ಗೆ ಒಂದಷ್ಟು ಮಾಹಿತಿ ಹೊರ ಬಿದ್ದಿದೆ.
ಬೆಂಗಳೂರಿನಲ್ಲಿ ಟ್ರೈಲರ್ ಲಾಂಚ್ ಮಾಡಲಾಗಿದ್ದು, ಮಾಧ್ಯಮಗಳ ಮುಂದೆ ಟ್ರೈಲರ್ ಅನಾವರಣವಾಗಿದೆ. 3Dಯಲ್ಲಿ ಟ್ರೈಲರ್ ವಾವ್ ಎನಿಸುವಂತಿದೆ. ಜೊತೆಗೆ ಈ ಸಣ್ಣ ತುಣುಕುಗಳು ಟ್ರೈಲರ್ ಬಗ್ಗೆ ಮಾತಾಡುತ್ತವೆ. ಚಿತ್ರದಲ್ಲಿ ನಟಿಸಿದ ಹಲವು ಪಾತ್ರಗಳನ್ನು ಟ್ರೈಲರ್ನಲ್ಲಿ ಪರಿಚಯ ಮಾಡಿಕೊಡಲಾಗಿದೆ.
ವಿಕ್ರಾಂತ್
ರೋಣ
ಟ್ರೈಲರ್
ವಿಮರ್ಶೆ:
ಅದ್ಬುತ
ಲೋಕದ
ಅನಾವರಣ!
ಆದರೆ ಟ್ರೈಲರ್ನ ಕೊನೆಯ ತನಕ ಉಳಿಯುವ ಕುತೂಹಲ ಒಂದೇ. ಈ ಚಿತ್ರದಲ್ಲಿ ವಿಲನ್ ಯಾರು ಎನ್ನುವುದು. ಟ್ರೈಲರ್ನಲ್ಲಿ ವಿಲನ್ ಇರುವಿಕೆ ಇದೆ. ಆದರೆ ಯಾರು ಎನ್ನುವುದು ಮಾತ್ರ ಸಸ್ನೆನ್ಸ್ ಆಗಿ ಇಡಲಾಗಿದೆ.

ದ್ವಿಪಾತ್ರದಲ್ಲಿ ನಟ ಸುದೀಪ್?
'ವಿಕ್ರಾಂತ್ ರೋಣ' ಸಿನಿಮಾದಲ್ಲಿ ನಟ ಸುದೀಪ್ ಪಾತ್ರ ಏನು ಎನ್ನುವುದು ಟ್ರೈಲರ್ನಲ್ಲಿ ರಿವೀಲ್ ಆಗಿದೆ. ಪೊಲೀಸ್ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಆದರೆ ಸುದೀಪ್ ಬಗ್ಗೆ ಈ ಟ್ರೈಲರ್ ಹೊಸ ಕುತೂಹಲ ಕೆರಳಿಸುತ್ತೆ. ಚಿತ್ರದಲ್ಲಿ ನಟ ಸುದೀಪ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಸುಳಿವು ಕೊಡುತ್ತೆ. ಆದರೆ ಅದು ಅಸ್ಪಷ್ಟ. ಆದರೂ ಸುದೀಪ್ ಎರಡೂ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಮಾತ್ರ ಟ್ರೈಲರ್ ಮೂಲಕ ಸಿಗುವ ಸುಳಿವು.
'ವಿಕ್ರಾಂತ್
ರೋಣ'
ಪ್ಯಾನ್
ಇಂಡಿಯಾ
ಟ್ರೈಲರ್
ಲಾಂಚ್:
ಸಂಪೂರ್ಣ
ಮಾಹಿತಿ
ಇಲ್ಲಿದೆ!

ವಿಲನ್ ಕೂಡ ಸುದೀಪ್?
ಟ್ರೈಲರ್ ನೋಡಿದಾಗ, ಇಲ್ಲಿ ವಿಲನ್ ಪಾತ್ರ ಸೀಕ್ರೆಟ್ ಆಗಿದೆ. ಆದರೆ ಈ ವಿಲನ್ ಸುದೀಪ್ ಇರಬಹುದೇನೋ ಎನ್ನುವ ಸಂಶಯ ಕೊನೆಯ ತನಕ ಉಳಿಯುತ್ತದೆ. ಇದಕ್ಕೆ ಉತ್ತರ ಸಿನಿಮಾದಲ್ಲೇ ಸಿಗಲಿದೆ. ಇನ್ನು ಇಲ್ಲಿ ತನಕ ಸುದೀಪ್ ಜೊತೆಗೆ 'ವಿಕ್ರಾಂತ್ ರೋಣ' ಚಿತ್ರದಲ್ಲಿ ಕಾದಾಡುವ ಖಳನಾಯಕ ಯಾರು ಎನ್ನುವುದನ್ನು ಇಲ್ಲಿ ತನಕ ಚಿತ್ರತಂಡ ರಿವೀಲ್ ಮಾಡಿಲ್ಲ. ಹಾಗಾಗಿ ಸುದೀಪ್ ವಿರುದ್ಧ ಕಾದಾಡುವುದು, ಸುದೀಪ್ ಅವ್ರೆನಾ ಎನ್ನುವ ಶಂಕೆ ಮೂಡಿದೆ.
ವಿಕ್ರಾಂತ್ ಯಾರು? ರೋಣ ಯಾರು?
ಟ್ರೈಲರ್ ಕೊಟ್ಟ ಹಿಂಟ್ ಪ್ರಕಾರ, ವಿಕ್ರಾಂತ್ ಬೇರೆ, ರೋಣ ಬೇರೆ ಎನ್ನುವ ಸುಳಿವು ಸಿಕ್ಕಿದೆ. ಹಾಗಾಗಿ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಸುದೀಪ್ ವಿಕ್ರಾಂತ್ ಮತ್ತು ರೋಣನಾಗಿ ಕಾಣಿಸಿಕೊಳ್ಳಬಹುದು. ಇನ್ನು ಈ ಹಿಂದೆ ಬಂದ 'ಕೋಟಿಗೊಬ್ಬ 3' ಚಿತ್ರದಲ್ಲೂ ಕೂಡ ಸುದೀಪ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಗಾಗಿ ಸುದೀಪ್ ಪಾತ್ರದ ಮೇಲೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ.
'ವಿಕ್ರಾಂತ್
ರೋಣ'
ಹಿಂದಿ
ಟ್ರೈಲರ್
ಲಾಂಚ್
ಮಾಡಲಿರೋ
ಸಲ್ಮಾನ್
ಖಾನ್:
ಎಷ್ಟೊತ್ತಿಗೆ?
ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡ ಸುದೀಪ್!
'ವಿಕ್ರಾಂತ್ ರೋಣ' ಜರ್ನಿಯನ್ನು ಗಮನಿಸಿದರೆ, ನಟ ಸುದೀಪ್ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ನಲ್ಲಿ ಬರುವ ಒಂದು ಶೇಡ್ನಲ್ಲಿ ಆಫೀಸರ್ ಲುಕ್ ಇದೆ. ಮತ್ತೊಂದು ಶೇಡ್ನಲ್ಲಿ ಗುಮ್ಮನ ರೀತಿ, ಡೆಡ್ ಮ್ಯಾನ್ಸ್ ಆಂಥಮ್ ಎನ್ನುತ್ತಾ, ಕೈಯಲ್ಲಿ ಆಯುಧ ಹಿಡಿದು ಅಬ್ಬರಿಸಿದ್ದಾರೆ. ಹಾಗಾಗಿ ಇಲ್ಲಿ ವಿಕ್ರಾಂತ್ ನಾಯಕ ಮತ್ತು ರೋಣ ಖಳನಾಯಕ ಇರಬಹುದು ಎನ್ನುವ ಸೂಚನೆ ಇದೆ. ಆದರೆ ನಿರ್ದೇಶಕ ಅನುಪ್ ಭಂಡಾರಿ ಯಾವ ರೀತಿ ಕಥೆಯನ್ನು ಕಟ್ಟಿ ಕೊಟ್ಟಿದ್ದಾರೆ ಎನ್ನುವುದು ಚಿತ್ರ ರಿಲೀಸ್ ಆದ ಬಳಿಕವೇ ಗೊತ್ತಾಗಲಿದೆ.