India
  For Quick Alerts
  ALLOW NOTIFICATIONS  
  For Daily Alerts

  'ವಿಕ್ರಾಂತ್ ರೋಣ' ಪ್ಯಾನ್ ಇಂಡಿಯಾ ಟ್ರೈಲರ್‌ ಲಾಂಚ್: ಸಂಪೂರ್ಣ ಮಾಹಿತಿ ಇಲ್ಲಿದೆ!

  |

  'ವಿಕ್ರಾಂತ್ ರೋಣ' ಸಿನಿಮಾ ಸೆಟ್ಟೇರಿದಾಗಿನಿಂದ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಅಂತೆಯೇ ಈಗ ಸಿನಿಮಾದ ರಿಲೀಸ್ ದಿನಾಂಕ ಹತ್ತಿರ ಆಗುತ್ತಿದ್ದ ಹಾಗೆ ಒಂದೊಂದೆ ವಿಚಾರದ ಮೂಲಕ ಸಿನಿಮಾದ ಮೇಲಿನ ಕುತೂಹಲ ಹೆಚ್ಚು ಮಾಡಿದೆ ಚಿತ್ರತಂಡ.

  ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್​ ರೋಣ' ಚಿತ್ರವೂ ಒಂದು. 'ವಿಕ್ರಾಂತ್ ರೋಣ' ಸಿನಿಮಾಗಾಗಿ ಕಿಚ್ಚನ ಅಭಿಮಾನಿಗಳು, ಸಿನಿಮಾ ಪ್ರಿಯರು ಮಾತ್ರವಲ್ಲ, ಸಿನಿಮಾರಂಗ ಕೂಡ ಕಾಯುತ್ತಿದೆ.

  ಪೊಲೀಸರ ವಿರುದ್ಧ ಸುದೀಪ್ ಹಾಗೂ ಗೆಳೆಯರ ಕ್ರಿಕೆಟ್: ಗೆದ್ದವರು ಯಾರು?ಪೊಲೀಸರ ವಿರುದ್ಧ ಸುದೀಪ್ ಹಾಗೂ ಗೆಳೆಯರ ಕ್ರಿಕೆಟ್: ಗೆದ್ದವರು ಯಾರು?

  ಸದ್ಯ ಈ ಸಿನಿಮಾ ಟ್ರೈಲರ್ ಬಗ್ಗೆ ಚರ್ಚೆ ಶುರುವಾಗಿದೆ. 'ವಿಕ್ರಾಂತ್ ರೋಣ' ಸಿನಿಮಾ ಟ್ರೈಲರ್ ಮೂಲಕ ಸದ್ದು ಮಾಡುತ್ತಿದೆ. ವಿಕ್ರಾಂತ್ ರೋಣ ಸಿನಿಮಾ ಟ್ರೈಲರ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಹಾಗಿದ್ದರೆ 'ವಿಕ್ರಾಂತ್ ರೋಣ' ಚಿತ್ರದ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಟ್ರೈಲರ್ ರಿಲೀಸ್ ಬಗ್ಗೆ ಸಂಪೂರ್ಣ ಮಾಹಿತಿ ಮುಂದೆ ಓದಿ...

  ಬೆಂಗಳೂರಿನಲ್ಲಿ 'ವಿಕ್ರಾಂತ್ ರೋಣ' ಟ್ರೈಲರ್ ಲಾಂಚ್!

  ಬೆಂಗಳೂರಿನಲ್ಲಿ 'ವಿಕ್ರಾಂತ್ ರೋಣ' ಟ್ರೈಲರ್ ಲಾಂಚ್!

  ಇನ್ನೇನು 'ವಿಕ್ರಾಂತ್ ರೋಣ' ಚಿತ್ರದ ಹವಾ ಶುರುವಾಗೇ ಬಿಟ್ಟಿದೆ. ಟ್ರೈಲರ್ ಮೂಲಕ 'ವಿಕ್ರಾಂತ್ ರೋಣ' ಹಚ್ ಚಲ್ ಎಬ್ಬಿಸಿದೆ. ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ಎಲ್ಲೆಡೆ ಸಿನಿಮಾತಂಡ ಅದ್ಧೂರಿಯಾಗಿ ಮಾಡುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಚಿತ್ರದ ಟ್ರೈಲರ್‌ ಲಾಂಚ್ ಕಾರ್ಯಕ್ರಮವನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ. ಸದ್ಯ ಬೆಂಗಳೂರಿನಲ್ಲಿ ಟ್ರೈಲರ್‌ ಲಾಂಚ್ ಕಾರ್ಯಕ್ರಮ ಯಶಸ್ವಿಯಾಗಿ ಮುಗಿದಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ ಒಂದಾಗಿತ್ತು. ರವಿಚಂದ್ರನ್, ಶಿವರಾಜ್‌ಕುಮಾರ್, ರಿಷಬ್ ಶೆಟ್ಟಿ, ರಮೇಶ್ ಅರವಿಂದ್ ಸೇರಿದಂತೆ ಹಲವರು ಭಾಗಿ ಆಗಿದ್ದರು.

  'ವಿಕ್ರಾಂತ್ ರೋಣ' ಹಾಡಿಗೆ ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಶಾಸಕ'ವಿಕ್ರಾಂತ್ ರೋಣ' ಹಾಡಿಗೆ ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಶಾಸಕ

  23ಕ್ಕೆ ಟ್ರೈಲರ್ ರಿಲೀಸ್!

  23ಕ್ಕೆ ಟ್ರೈಲರ್ ರಿಲೀಸ್!

  ಬೆಂಗಳೂರಿನಲ್ಲಿ ಟ್ರೈಲರ್‌ ಲಾಂಚ್ ಕಾರ್ಯಕ್ರಮ ಯಶಸ್ವಿಯಾಗಿ ಮುಗಿದಿದೆ. ಟ್ರೈಲರ್ ಲಾಂಚ್ ಕಾರ್ಯಕ್ರಮ ಜೊತೆಗೆ ಸಿನಿಮಾದ ಸುದ್ದಿಗೋಷ್ಟಿಯನ್ನು ಮಾಡಲಾಗಿದೆ. ಆದರೆ ಚಿತ್ರದ ಟ್ರೈಲರ್ ನೋಡಲು ಸಾಧ್ಯ ಆಗುವುದು ಜೂನ್ 23ಕ್ಕೆ ಮಾತ್ರ. ಜೂನ್ 23 ರಂದು ಸಂಜೆ 5.30ಕ್ಕೆ ವಿಕ್ರಾಂತ್ ರೋಣ ಕನ್ನಡ, ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಟ್ರೈಲರ್ ರಿಲೀಸ್ ಆಗಲಿದೆ.

  ಮುಂಬೈಗೆ 'ವಿಕ್ರಾಂತ್ ರೋಣ' ತಂಡ!

  ಮುಂಬೈಗೆ 'ವಿಕ್ರಾಂತ್ ರೋಣ' ತಂಡ!

  ಟ್ರೈಲರ್‌ ಲಾಂಚ್ ಕಾರ್ಯಕ್ರಮಕ್ಕಾಗಿ ಸಿನಿಮಾತಂಡ ಮುಂಬೈಗೆ ಹಾರಲಿದೆ. ಮುಂಬೈನಲ್ಲಿ ಜೂನ್ 23ಕ್ಕೆ ಟ್ರೈಲರ್‌ ಲಾಂಚ್ ಕಾರ್ಯಕ್ರಮವನ್ನು ಮಾಡಲಾಗುವುದು. ಆದರೆ ಈ ಕಾರ್ಯಕ್ರಮಕ್ಕೂ, ಟ್ರೈಲರ್‌ ರಿಲೀಸ್ ಗೂ ಸಂಬಂಧ ಇಲ್ಲ. ಯಾಕೆಂದರೆ ಚಿತ್ರತಂಡ ಅಲ್ಲಿನ ಮಾಧ್ಯಮಗಳ ಜೊತೆಗೆ ಮಾತನಾಡಲು ಕಾರ್ಯಕ್ರಮ ಏರ್ಪಡಿಸಿದ್ದು, ಸಂಜೆ 5.30ಕ್ಕೆ ನಟ ಸಲ್ಮಾನ್ ಖಾನ್ ಡಿಜಿಟಲ್‌ ಆಗಿ ಟ್ರೈಲರ್ ರಿಲೀಸ್ ಮಾಡಲಿದ್ದಾರೆ.

  'ರಕ್ಕಮ್ಮ' ಹಾಡಿಗೆ ಕುಣಿದ ಪೌರ ಕಾರ್ಮಿಕರನ್ನು ಮನೆಗೆ ಕರೆದು ಉಪಚರಿಸಿದ ಕಿಚ್ಚ!'ರಕ್ಕಮ್ಮ' ಹಾಡಿಗೆ ಕುಣಿದ ಪೌರ ಕಾರ್ಮಿಕರನ್ನು ಮನೆಗೆ ಕರೆದು ಉಪಚರಿಸಿದ ಕಿಚ್ಚ!

  ಕೊಚ್ಚಿ, ಚಿನ್ನೈ, ಹೈದ್ರಾಬಾದ್‌ನಲ್ಲಿ ಕಾರ್ಯಕ್ರಮ!

  ಕೊಚ್ಚಿ, ಚಿನ್ನೈ, ಹೈದ್ರಾಬಾದ್‌ನಲ್ಲಿ ಕಾರ್ಯಕ್ರಮ!

  ಮುಂಬೈ ಮಾತ್ರ ಅಲ್ಲ, 'ವಿಕ್ರಾಂತ್ ರೋಣ' ಚಿತ್ರತಂಡ ಮುಂಬೈ ನಂತರ ನೂನ್ 24ಕ್ಕೆ ಕೊಚ್ಚಿಯ ಲೂಲು ಮಾಲ್‌ನಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಅದೇ ದಿನ ಚೆನ್ನೈನಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಇನ್ನು ಹೈದ್ರಾಬಾದ್‌ನಲ್ಲಿ ಜೂನ್ 25ಕ್ಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

  English summary
  Sudeep's Vikrant Rona Trailer Launch Event in Bengaluru, Mumbai, Hyderabad, Date, Venue, Time and Guests List, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X