'ವಿಕ್ರಾಂತ್ ರೋಣ' ಟ್ರೈಲರ್ ಬೆಂಕಿ: ರಿಲೀಸ್‌ಗೂ ಮೊದಲೇ ಬಂತು ವಿಮರ್ಶೆ!
'ವಿಕ್ರಾಂತ್ ರೋಣ' ಸಿನಿಮಾ ಸೆಟ್ಟೇರಿದಾಗಿನಿಂದ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಅಂತೆಯೇ ಈಗ ಸಿನಿಮಾದ ರಿಲೀಸ್ ದಿನಾಂಕ ಹತ್ತಿರ ಅಗುತ್ತಿದ್ದ ಹಾಗೆ ಒಂದೊಂದೆ ವಿಚಾರದ ಮೂಲಕ ಸಿನಿಮಾದ ಮೇಲಿನ ಕುತೂಹಲ ಹೆಚ್ಚು ಮಾಡಿದೆ.
ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಚಿತ್ರವು ಒಂದು. 'ವಿಕ್ರಾಂತ್ ರೋಣ' ಸಿನಿಮಾಗಾಗಿ ಕಿಚ್ಚ ಅಭಿಮಾನಿಗಳು, ಸಿನಿಮಾ ಪ್ರಿಯರು ಮಾತ್ರವಲ್ಲ, ಸಿನಿಮಾರಂಗ ಕೂಡ ಕಾದು ಕುಳಿತಿದೆ.
ಸದ್ಯ ಈ ಸಿನಿಮಾ ಟ್ರೈಲರ್ ಬಗ್ಗೆ ಚರ್ಚೆ ಶುರುವಾಗಿದೆ. ಅಷ್ಟೇ ಯಾಕೆ 'ವಿಕ್ರಾಂತ್ ರೋಣ' ಸಿನಿಮಾ ಟ್ರೈಲರ್ ನೋಡಿದ ವಿದೇಶಿ ವಿಮರ್ಶಕ, ಟ್ರೈಲರ್ ಹೇಗಿದೆ ಎನ್ನುವ ಬಗ್ಗೆ, ವಿಮರ್ಶೆ ಕೊಟ್ಟಿದ್ದಾರೆ. ರಿಲೀಸ್‌ಗೂ ಮುನ್ನವೇ ಟ್ರೈಲರ್ ಬಗ್ಗೆ ವಿಮರ್ಶೆ ಇಲ್ಲಿದೆ ಮುಂದೆ ಓದಿ...

'ವಿಕ್ರಾಂತ್ ರೋಣ' ಟ್ರೈಲರ್ ಹೇಗಿದೆ?
'ವಿಕ್ರಾಂತ್ ರೋಣ' ಸಿನಿಮಾದ ಟ್ರೈಲರ್ ಹೇಗಿದೆ ಗೊತ್ತಾ? ನೀವೂ ಟ್ರೈಲರ್ ನೋಡಿದ್ರ?. ಅರೇ 'ವಿಕ್ರಾಂತ್ ರೋಣ' ಸಿನಿಮಾದ ಟ್ರೈಲರ್ ರಿಲೀಸ್ ಆಗಿಲ್ಲ. ಇನ್ನು ಟ್ರೈಲರ್ ಬಗ್ಗೆ ಮಾತನಾಡುವುದು ಹೇಗೆ ಅಂತ ಯೋಚನೆ ಮಾಡ್ತಾ ಇದ್ದೀರ. ಹೌದು 'ವಿಕ್ರಾಂತ್ ರೋಣ' ಚಿತ್ರದ ಟ್ರೈಲರ್ ರಿಲೀಸ್ ಆಗಿಲ್ಲ. ಆದರೆ ಟ್ರೈಲರ್ ಹೇಗಿದೆ ಎನ್ನುವ ಬಗ್ಗೆ ಮೊದಲ ವಿಮರ್ಶೆ ಹೊರಬಿದ್ದಿದೆ. ವಿದೇಶಿ ವಿಮರ್ಶಕ ಉಮೈರ್ ಸಂದು 'ವಿಕ್ರಾಂತ್ ರೋಣ' ಸಿನಿಮಾದ ಟ್ರೈಲರ್ ಅನ್ನು ನೋಡಿ, ಟ್ರೈಲರ್ ಹೇಗಿದೆ ಎನ್ನುವ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವಿಕ್ರಾಂತ್ ರೋಣ ಕನ್ನಡ ಮತ್ತೊಂದು
ಈ ಹಿಂದೆ 'ಕೆಜಿಎಫ್ 2' ಸಿನಿಮಾ ಮೊದಲ ವಿಮರ್ಶೆಯನ್ನು ಉಮೈರ್ ಸಂದು ಕೊಟ್ಟಿದ್ದರು. ಈಗ ವಿಕ್ರಾಂತ್ ರೋಣ ಟ್ರೈಲರ್ ಬಗ್ಗೆ ವಿಮರ್ಶೆ ಕೊಟ್ಟಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರು ಉಮೈರ್ ಸಂದು "ವಿಕ್ರಾಂತ್ ರೋಣ' ಸಿನಿಮಾದ ಫೈನಲ್ ಟ್ರೈಲರ್ ಬೊಂಬಾಟ್ ಆಗಿದೆ. ಸ್ಯಾಂಡಲ್‌ವುಡ್‌ನಿಂದ ಮತ್ತೊಂದು ಮಾಸ್ಟರ್ ಪೀಸ್ ಬರುತ್ತಾ ಇದೆ" ಎಂದು ಬರೆದುಕೊಂಡಿದ್ದಾರೆ.

ಟೀಸರ್ ಮೂಲಕ 'ವಿಕ್ರಾಂತ್ ರೋಣ' ಕುತೂಹಲ!
ಈ ಹಿಂದೆ ರಿವೀಲ್ ಆಗಿರುವ 'ವಿಕ್ರಾಂತ್ ರೋಣ' ಟೀಸರ್, ಸಿನಿಮಾದ ಮೇಲೆ, ನಟ ಸುದೀಪ್ ಪಾತ್ರದ ಮೆಲೆ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಗುಮ್ಮ ಬಂದ ಎನ್ನುವ ಸಾಲುಗಳು, ಆ ಗುಮ್ಮನನ್ನು ತೆರೆಗೆ ಮೇಲೆ ನೋಡು ಕಾತರತೆ ಹೆಚ್ಚು ಮಾಡಿದೆ. ಸಿನಿಮಾ ರಿಲೀಸ್ ಹತ್ತಿರ ಆಗುತ್ತಿದ್ದಂತೆ ಕಿಚ್ಚನ ಅಭಿಮಾನಿಗಳಲ್ಲಿ ಸಿನಿಮಾದ ಕ್ರೇಜ್ ಹೆಚ್ಚಾಗಿದೆ.

ಹಿಟ್ ಲಿಸ್ಟ್ ಸೇರಿದ ರಕ್ಕಮ್ಮ ಹಾಡು!
ಇನ್ನು ಸಿನಿಮಾದ ಮೊದಲ ಹಾಡು ಗಡಂಗ್ ರಕ್ಕಮ್ಮ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಸದ್ಯ ಕನ್ನಡ, ತಮಿಳು, ತೆಲುಗಿನಲ್ಲಿ ಹಾಡು ರಿಲೀಸ್ ಆಗಿದೆ. ಈ ಹಡಿನ ಟ್ಯೂನ್ ವೈರಲ್ ಆಗಿದ್ದು, ಎಲ್ಲರೂ ಕಿಚ್ಚ ಹಾಕಿದ ಸ್ಟೆಪ್ ಹಾಕುತ್ತಾ ಮಜಾ ಮಾಡುತ್ತಾ ಇದ್ದಾರೆ. ಸಿನಿಮಾ ಜುಲೈ 28ಕ್ಕೆ ರಿಲೀಸ್ ಆಗುತ್ತಿದೆ.


Click it and Unblock the Notifications











