ವಿಕ್ರಾಂತ್ ರೋಣ ಟ್ರೈಲರ್ ವಿಮರ್ಶೆ: ಅದ್ಬುತ ಲೋಕದ ಅನಾವರಣ!

ಕನ್ನಡದ ಬಹುನಿರೀಕ್ಷಿತ ಸಿನಿಮಾ 'ವಿಕ್ರಾಂತ್ ರೋಣ' ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಸಿನಿಮಾ ಜುಲೈ 28ಕ್ಕೆ ಪ್ಯಾನ್ ಇಂಡಿಯಾ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಸದ್ಯ ಟ್ರೈಲರ್ ಮೂಲಕ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಜೂನ್ 23ರ ಸಂಜೆ ಟ್ರೈಲರ್ ರಿಲೀಸ್ ಆಗಲಿದೆ.

ನಿರೀಕ್ಷೆಗೆ ತಕ್ಕ ಹಾಗೆ ಸಿನಿಮಾದ ಟ್ರೈಲರ್ ಮೂಡಿ ಬಂದಿದೆ. ಟ್ರೈಲರ್ ನೋಡಿದರೆ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟು ಆಗೋದು ಖಚಿತ.

ಆದರೆ ಕನ್ನಡದಲ್ಲಿ ಈಗಾಗಲೇ 3D ಟ್ರೈಲರ್ ಲಾಂಚ್ ಆಗಿದೆ. ಚಿತ್ರ ತಂಡದಿಂದ ಸುದ್ದಿಗೋಷ್ಠಿ ಮಾಡಿ ಕನ್ನಡದ ಮಧ್ಯಮಗಳಿಗೆ 3D ಟ್ರೈಲರ್ ತೋರಿಸಲಾಗಿದೆ. ಹಾಗಾಗಿ ಟ್ರೈಲರ್ ಹೇಗಿದೆ ಎನ್ನುವ ರಿವ್ಯೂವ್ ಇಲ್ಲಿದೆ ಮುಂದೆ ಓದಿ...

3Dಯಲ್ಲಿ ಫ್ಯಾಂಟಸಿ ಲೋಕದ ಕಥೆ!

3Dಯಲ್ಲಿ ಫ್ಯಾಂಟಸಿ ಲೋಕದ ಕಥೆ!

ಕನ್ನಡ ಸಿನಿಮಾರಂಗದಲ್ಲಿ 'ವಿಕ್ರಾಂತ್ ರೋಣ' ಸಿನಿಮಾ ವಿಭಿನ್ನವಾದ ಪ್ರಯತ್ನ ಮತ್ತು ಪ್ರಯೋಗ. 'ವಿಕ್ರಾಂತ್ ರೋಣ' 3Dಯಲ್ಲಿ ಮೂಡಿಬರುತ್ತಿದೆ. ಹಾಗಾಗಿ ಚಿತ್ರತಂಡ ಸದ್ಯ 3D ಟ್ರೈಲರ್ ಲಾಂಚ್ ಮಾಡಿದೆ. ಆದರೆ ಯುಟ್ಯೂಬ್‌ನಲ್ಲಿ 2dಯಲ್ಲಿ ಟ್ರೈಲರ್ ರಿಲೀಸ್ ಮಾಡಲಾಗುತ್ತೆ. 3dಯಲ್ಲಿ ಸಿನಿಮಾ ನೋಡುವುದೇ ಒಂದು ಅದ್ಭುತ ಅನುಭವ. ಅದರಲ್ಲೂ ಕನ್ನಡದ ಟ್ರೈಲರ್ ತೆರೆಯ ಮೇಲೆ ನೋಡಿದರೆ ಮೈ ಝುಮ್ಮ್ ಎನಿಸುತ್ತೆ.

ಪೊಲೀಸ್ ಪಾತ್ರದಲ್ಲಿ ಸುದೀಪ್!

ಪೊಲೀಸ್ ಪಾತ್ರದಲ್ಲಿ ಸುದೀಪ್!

'ವಿಕ್ರಾಂತ್ ರೋಣ' ಚಿತ್ರದ ಟೈಟಲ್ ಕೇಳಿದರೆ ಇದು ಒಬ್ಬ ನಾಯಕ ನಟನ ಮೇಲೆ ಆಧರಿತವಾಗಿರುವ ಸಿನಿಮಾ ಅನಿಸುತ್ತೆ. ಆದರೆ ಇದನ್ನು ಹೊರತುಪಡಿಸಿ 'ವಿಕ್ರಾಂತ್ ರೋಣ' ಚಿತ್ರದಲ್ಲಿ ಅದ್ಭುತವಾದ ಅಂಶಗಳಿವೆ ಎನ್ನುವುದನ್ನು ಟ್ರೈಲರ್ ಹೇಳುತ್ತದೆ. ಒಂದೂರಿನ ರಾಜನ ಕಥೆ ಇದು. ಇದರಲ್ಲಿ ವಿಕ್ರಾಂತ್ ರೋಣ ಯಾರು, ಏನು ಎನ್ನುವುದೇ ಕುತೂಹಲ. ಸುದೀಪ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಳಿದ ಪಾತ್ರಗಳ ಅನಾವರಣ ಆಗಿದೆ. ಜಾಕ್ವೆಲಿನ್ ಕೂಡ ಒಂದು ಡೈಲಾಗ್ ಹೇಳಿ ಹೋಗುತ್ತಾರೆ.

VFX ಅದ್ಬುತ!

VFX ಅದ್ಬುತ!

ಮುಖ್ಯವಾಗಿ ಈ ಸಿನಿಮಾದಲ್ಲಿ vfx ಕೆಲಸ ಅದ್ಭುತವೆನಿಸುತ್ತದೆ. ಕನ್ನಡದಲ್ಲಿ ಇಂತಹ ಪ್ರಯತ್ನ ಅಥವಾ ಪ್ರಯೋಗ ಇದೇ ಮೊದಲ ಬಾರಿಗೆ ಎನ್ನಬಹುದು. 'ಬಾಹುಬಲಿ' ಸಿನಿಮಾದಲ್ಲಿ ಬಳಸಿದ vfx ಒಂದು ಪ್ರತ್ಯೇಕ ಲೋಕವನ್ನೇ ಸೃಷ್ಟಿಸಿತ್ತು. ಅದೇ ರೀತಿ 'ವಿಕ್ರಂತ್ ರೋಣ' ಕೂಡ ಒಂದು ಪ್ರತ್ಯೇಕವಾದ ಅದ್ಭುತ ಪ್ರಪಂಚ ಎನಿಸುತ್ತೆ. ಜೊತೆಗೆ 'ವಿಕ್ರಾಂತ್ ರೋಣ' ಯಾವ ಹಾಲಿವುಡ್ ಸಿನಿಮಾಗಳಿಗೂ ಕಡಿಮೆ ಇಲ್ಲ. ಅಷ್ಟರ ಮಟ್ಟಿಗೆ ಟ್ರೈಲರ್ ಪರ್ಫೆಕ್ಟ್.

ವಿಕ್ರಾಂತ್ ರೋಣ ಕನ್ನಡದ ಇತಿಸಾಹ ಸೇರಲಿದೆ!

ವಿಕ್ರಾಂತ್ ರೋಣ ಕನ್ನಡದ ಇತಿಸಾಹ ಸೇರಲಿದೆ!

'ವಿಕ್ರಾಂತ್ ರೋಣ' ಚಿತ್ರದ ಟ್ರೈಲರ್ ತುಣುಕು, ಈ ಸಿನಿಮಾ ಭಾರತೀಯ ಸಿನಿಮಾರಂಗದಲ್ಲಿ ಹೊಸ ಮೈಲಿಗಲ್ಲು ಆಗುತ್ತದೆ ಎನ್ನುವುದನ್ನು ಖಚಿತ ಪಡಿಸಿದೆ. 'ವಿಕ್ರಾಂತ್ ರೋಣ' ಸಿನಿಮಾಗಿ ಸಾಕಷ್ಟು ಖರ್ಚು ಮಾಡಲಾಗಿದೆ ಎನ್ನುವುದು ಗೊತ್ತಾಗುತ್ತದೆ. ಟ್ರೈಲರ್‌ನಲ್ಲಿ ಕಾಣುವ ದೃಶ್ಯ ವೈಭವದ ಮೇಕಿಂಗ್ ಅದ್ಭುತ. ಇನ್ನು ಈ ಫ್ಯಾಂಟಸಿ ಲೋಕದ ಸೆಟ್‌ಗಳು ಕೂಡ ಅದ್ಭುತ ಎನಿಸುತ್ತೆ. 'ವಿಕ್ರಾಂತ್ ರೋಣನ' ಅಸಲಿ ಆಟವನ್ನು ನೋಡೋದಕ್ಕೆ ಇನ್ನೊಂದು ತಿಂಗಳು ಬಾಕಿ ಇದೆ ಜುಲೈ 28ಕ್ಕೆ ವಿಕ್ರಾಂತ್ ರೋಣನ್ನು ಕಣ್ತುಂಬಿಕೊಳ್ಳಬಹುದು.

More from Filmibeat

English summary
Vikrant Rona Trailer: Vikrant Rona Is Fantastic Fantasy World, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X