Don't Miss!
- News
ಜನರ ಆಕ್ರೋಶಕ್ಕೆ ಮಣಿದ ಸರ್ಕಾರ: ನೇಪಾಳದಲ್ಲಿ ಇಳಿಯಿತು ಪೆಟ್ರೋಲ್, ಡೀಸೆಲ್ ಬೆಲೆ
- Sports
Eng vs NZ 3rd Test: ಪಂದ್ಯಕ್ಕೆ ಮಳೆ ಕಾಟ, ಸಂಕಷ್ಟದಲ್ಲಿ ನ್ಯೂಜಿಲೆಂಡ್
- Technology
ಇನ್ಸ್ಟಾಗ್ರಾಮ್ನಲ್ಲಿ ಬೇರೆಯವರ ಲಾಸ್ಟ್ ಸೀನ್ ನೋಡುವುದು ಹೇಗೆ?
- Finance
ಇಂಡಿಯನ್ ಓವರ್ಸೀಸ್ ಬ್ಯಾಂಕ್ ಮೇಲೆ ದಂಡ ವಿಧಿಸಿದ ಆರ್ಬಿಐ
- Lifestyle
18 ವರ್ಷಗಳ ಬಳಿಕ ಬರಿಗಣ್ಣಿಗೆ ಗೋಚರಿಸುತ್ತಿದೆ 5 ಗ್ರಹಗಳ ಸಂಯೋಗದ ಅಪರೂಪದ ದೃಶ್ಯ: ನೋಡಲು ಮಿಸ್ ಮಾಡದಿರಿ
- Automobiles
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ವಿಕ್ರಾಂತ್ ರೋಣ ಟ್ರೈಲರ್ ವಿಮರ್ಶೆ: ಅದ್ಬುತ ಲೋಕದ ಅನಾವರಣ!
ಕನ್ನಡದ ಬಹುನಿರೀಕ್ಷಿತ ಸಿನಿಮಾ 'ವಿಕ್ರಾಂತ್ ರೋಣ' ರಿಲೀಸ್ಗೆ ದಿನಗಣನೆ ಶುರುವಾಗಿದೆ. ಸಿನಿಮಾ ಜುಲೈ 28ಕ್ಕೆ ಪ್ಯಾನ್ ಇಂಡಿಯಾ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಸದ್ಯ ಟ್ರೈಲರ್ ಮೂಲಕ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಜೂನ್ 23ರ ಸಂಜೆ ಟ್ರೈಲರ್ ರಿಲೀಸ್ ಆಗಲಿದೆ.
ನಿರೀಕ್ಷೆಗೆ ತಕ್ಕ ಹಾಗೆ ಸಿನಿಮಾದ ಟ್ರೈಲರ್ ಮೂಡಿ ಬಂದಿದೆ. ಟ್ರೈಲರ್ ನೋಡಿದರೆ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟು ಆಗೋದು ಖಚಿತ.
'ವಿಕ್ರಾಂತ್
ರೋಣ'
ಪ್ಯಾನ್
ಇಂಡಿಯಾ
ಟ್ರೈಲರ್
ಲಾಂಚ್:
ಸಂಪೂರ್ಣ
ಮಾಹಿತಿ
ಇಲ್ಲಿದೆ!
ಆದರೆ ಕನ್ನಡದಲ್ಲಿ ಈಗಾಗಲೇ 3D ಟ್ರೈಲರ್ ಲಾಂಚ್ ಆಗಿದೆ. ಚಿತ್ರ ತಂಡದಿಂದ ಸುದ್ದಿಗೋಷ್ಠಿ ಮಾಡಿ ಕನ್ನಡದ ಮಧ್ಯಮಗಳಿಗೆ 3D ಟ್ರೈಲರ್ ತೋರಿಸಲಾಗಿದೆ. ಹಾಗಾಗಿ ಟ್ರೈಲರ್ ಹೇಗಿದೆ ಎನ್ನುವ ರಿವ್ಯೂವ್ ಇಲ್ಲಿದೆ ಮುಂದೆ ಓದಿ...

3Dಯಲ್ಲಿ ಫ್ಯಾಂಟಸಿ ಲೋಕದ ಕಥೆ!
ಕನ್ನಡ ಸಿನಿಮಾರಂಗದಲ್ಲಿ 'ವಿಕ್ರಾಂತ್ ರೋಣ' ಸಿನಿಮಾ ವಿಭಿನ್ನವಾದ ಪ್ರಯತ್ನ ಮತ್ತು ಪ್ರಯೋಗ. 'ವಿಕ್ರಾಂತ್ ರೋಣ' 3Dಯಲ್ಲಿ ಮೂಡಿಬರುತ್ತಿದೆ. ಹಾಗಾಗಿ ಚಿತ್ರತಂಡ ಸದ್ಯ 3D ಟ್ರೈಲರ್ ಲಾಂಚ್ ಮಾಡಿದೆ. ಆದರೆ ಯುಟ್ಯೂಬ್ನಲ್ಲಿ 2dಯಲ್ಲಿ ಟ್ರೈಲರ್ ರಿಲೀಸ್ ಮಾಡಲಾಗುತ್ತೆ. 3dಯಲ್ಲಿ ಸಿನಿಮಾ ನೋಡುವುದೇ ಒಂದು ಅದ್ಭುತ ಅನುಭವ. ಅದರಲ್ಲೂ ಕನ್ನಡದ ಟ್ರೈಲರ್ ತೆರೆಯ ಮೇಲೆ ನೋಡಿದರೆ ಮೈ ಝುಮ್ಮ್ ಎನಿಸುತ್ತೆ.
'ವಿಕ್ರಾಂತ್
ರೋಣ'
ಹಿಂದಿ
ಟ್ರೈಲರ್
ಲಾಂಚ್
ಮಾಡಲಿರೋ
ಸಲ್ಮಾನ್
ಖಾನ್:
ಎಷ್ಟೊತ್ತಿಗೆ?

ಪೊಲೀಸ್ ಪಾತ್ರದಲ್ಲಿ ಸುದೀಪ್!
'ವಿಕ್ರಾಂತ್ ರೋಣ' ಚಿತ್ರದ ಟೈಟಲ್ ಕೇಳಿದರೆ ಇದು ಒಬ್ಬ ನಾಯಕ ನಟನ ಮೇಲೆ ಆಧರಿತವಾಗಿರುವ ಸಿನಿಮಾ ಅನಿಸುತ್ತೆ. ಆದರೆ ಇದನ್ನು ಹೊರತುಪಡಿಸಿ 'ವಿಕ್ರಾಂತ್ ರೋಣ' ಚಿತ್ರದಲ್ಲಿ ಅದ್ಭುತವಾದ ಅಂಶಗಳಿವೆ ಎನ್ನುವುದನ್ನು ಟ್ರೈಲರ್ ಹೇಳುತ್ತದೆ. ಒಂದೂರಿನ ರಾಜನ ಕಥೆ ಇದು. ಇದರಲ್ಲಿ ವಿಕ್ರಾಂತ್ ರೋಣ ಯಾರು, ಏನು ಎನ್ನುವುದೇ ಕುತೂಹಲ. ಸುದೀಪ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಳಿದ ಪಾತ್ರಗಳ ಅನಾವರಣ ಆಗಿದೆ. ಜಾಕ್ವೆಲಿನ್ ಕೂಡ ಒಂದು ಡೈಲಾಗ್ ಹೇಳಿ ಹೋಗುತ್ತಾರೆ.

VFX ಅದ್ಬುತ!
ಮುಖ್ಯವಾಗಿ ಈ ಸಿನಿಮಾದಲ್ಲಿ vfx ಕೆಲಸ ಅದ್ಭುತವೆನಿಸುತ್ತದೆ. ಕನ್ನಡದಲ್ಲಿ ಇಂತಹ ಪ್ರಯತ್ನ ಅಥವಾ ಪ್ರಯೋಗ ಇದೇ ಮೊದಲ ಬಾರಿಗೆ ಎನ್ನಬಹುದು. 'ಬಾಹುಬಲಿ' ಸಿನಿಮಾದಲ್ಲಿ ಬಳಸಿದ vfx ಒಂದು ಪ್ರತ್ಯೇಕ ಲೋಕವನ್ನೇ ಸೃಷ್ಟಿಸಿತ್ತು. ಅದೇ ರೀತಿ 'ವಿಕ್ರಂತ್ ರೋಣ' ಕೂಡ ಒಂದು ಪ್ರತ್ಯೇಕವಾದ ಅದ್ಭುತ ಪ್ರಪಂಚ ಎನಿಸುತ್ತೆ. ಜೊತೆಗೆ 'ವಿಕ್ರಾಂತ್ ರೋಣ' ಯಾವ ಹಾಲಿವುಡ್ ಸಿನಿಮಾಗಳಿಗೂ ಕಡಿಮೆ ಇಲ್ಲ. ಅಷ್ಟರ ಮಟ್ಟಿಗೆ ಟ್ರೈಲರ್ ಪರ್ಫೆಕ್ಟ್.
ರಕ್ಷಿತ್
ಶೆಟ್ಟಿ
ಮಾತು
ಕೇಳಿ
ವೇದಿಕೆ
ಮೇಲೇರಿ
ಬಂದು
ತಬ್ಬಿಕೊಂಡ
ಸುದೀಪ್

ವಿಕ್ರಾಂತ್ ರೋಣ ಕನ್ನಡದ ಇತಿಸಾಹ ಸೇರಲಿದೆ!
'ವಿಕ್ರಾಂತ್ ರೋಣ' ಚಿತ್ರದ ಟ್ರೈಲರ್ ತುಣುಕು, ಈ ಸಿನಿಮಾ ಭಾರತೀಯ ಸಿನಿಮಾರಂಗದಲ್ಲಿ ಹೊಸ ಮೈಲಿಗಲ್ಲು ಆಗುತ್ತದೆ ಎನ್ನುವುದನ್ನು ಖಚಿತ ಪಡಿಸಿದೆ. 'ವಿಕ್ರಾಂತ್ ರೋಣ' ಸಿನಿಮಾಗಿ ಸಾಕಷ್ಟು ಖರ್ಚು ಮಾಡಲಾಗಿದೆ ಎನ್ನುವುದು ಗೊತ್ತಾಗುತ್ತದೆ. ಟ್ರೈಲರ್ನಲ್ಲಿ ಕಾಣುವ ದೃಶ್ಯ ವೈಭವದ ಮೇಕಿಂಗ್ ಅದ್ಭುತ. ಇನ್ನು ಈ ಫ್ಯಾಂಟಸಿ ಲೋಕದ ಸೆಟ್ಗಳು ಕೂಡ ಅದ್ಭುತ ಎನಿಸುತ್ತೆ. 'ವಿಕ್ರಾಂತ್ ರೋಣನ' ಅಸಲಿ ಆಟವನ್ನು ನೋಡೋದಕ್ಕೆ ಇನ್ನೊಂದು ತಿಂಗಳು ಬಾಕಿ ಇದೆ ಜುಲೈ 28ಕ್ಕೆ ವಿಕ್ರಾಂತ್ ರೋಣನ್ನು ಕಣ್ತುಂಬಿಕೊಳ್ಳಬಹುದು.