For Quick Alerts
  ALLOW NOTIFICATIONS  
  For Daily Alerts

  ಬುರ್ಜ್ ಖಲೀಫಾ ಸಂಭ್ರಮ ಬಳಿಕ ಮತ್ತೊಂದು ಭರ್ಜರಿ ಸುದ್ದಿ ನೀಡಿದ ಸುದೀಪ್

  |

  ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಹಾಗೂ ವಿಕ್ರಾಂತ್ ರೋಣ ಚಿತ್ರಗಳು ಶೂಟಿಂಗ್ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ. ಭಾರತೀಯ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ ದುಬೈನ ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಟೈಟಲ್ ಟೀಸರ್ ಬಿಡುಗಡೆಯಾಗಿತ್ತು.

  ನಾನು ಬೆಳೆದ್ದಿದ್ದೀನಿ ಅವನಿನ್ನು ಬೆಳೆದಿಲ್ಲ | Kichcha Sudeep | 25years Celebration

  ದುಬೈನಲ್ಲಿ ಬೆಳ್ಳಿ ಸಂಭ್ರಮ ಮುಗಿಸಿ ಬೆಂಗಳೂರಿಗೆ ಬಂದ ನಟ ಸುದೀಪ್ ಮತ್ತೊಂದು ಭರ್ಜರಿ ಸುದ್ದಿ ನೀಡಿದ್ದಾರೆ. 50ಕ್ಕೂ ದೇಶಗಳು ಆರು ಭಾಷೆಯಲ್ಲಿ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಲಿದೆ. ಹಾಲಿವುಡ್ ಶೈಲಿಯ ಮೇಕಿಂಗ್ ಮೂಲಕ ಥ್ರಿಲ್ ಹುಟ್ಟುಹಾಕಿರುವ ಈ ಚಿತ್ರ ಈಗ ಸ್ಯಾಂಡಲ್‌ವುಡ್ ಪ್ರೇಕ್ಷಕರಿಗೆ ಖುಷಿಯ ವಿಚಾರ ನೀಡಿದೆ. ಏನದು? ಮುಂದೆ ಓದಿ...

  ಕಿಚ್ಚ ಸುದೀಪ್‌ಗೆ 'ಕನ್ನಡ ಕಲಾತಿಲಕ' ಬಿರುದು ನೀಡಿ ಗೌರವಿಸಿದ ದುಬೈ ಕನ್ನಡಿಗರುಕಿಚ್ಚ ಸುದೀಪ್‌ಗೆ 'ಕನ್ನಡ ಕಲಾತಿಲಕ' ಬಿರುದು ನೀಡಿ ಗೌರವಿಸಿದ ದುಬೈ ಕನ್ನಡಿಗರು

  3ಡಿಯಲ್ಲಿ 'ವಿಕ್ರಾಂತ್ ರೋಣ'

  3ಡಿಯಲ್ಲಿ 'ವಿಕ್ರಾಂತ್ ರೋಣ'

  ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಸಿನಿಮಾ ಈಗ 3 ಡಿ ವರ್ಷನ್‌ನಲ್ಲಿ ತೆರೆಕಾಣಲಿದೆ ಎಂಬ ವಿಚಾರ ಬಹಿರಂಗವಾಗಿದೆ. ಈ ವಿಷಯವನ್ನು ಖುದ್ದು ಸುದೀಪ್ ಅವರೇ ತಿಳಿಸಿದ್ದಾರೆ. ''ವಿಕ್ರಾಂತ್ ರೋಣ 3ಡಿ ವರ್ಷನ್ ಬಿಡುಗಡೆಯಾಗಲಿದೆ. ಅದಕ್ಕೆ ಅಗತ್ಯವಾದ ಕೆಲಸ ನಡೆಯುತ್ತಿದೆ'' ಎಂದು ಭಾನುವಾರ ಸಂಜೆ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

  ಜಾಕ್ ಮಂಜು ನಿರ್ಮಾಣದ ವಿಕ್ರಾಂತ್ ರೋಣ

  ಜಾಕ್ ಮಂಜು ನಿರ್ಮಾಣದ ವಿಕ್ರಾಂತ್ ರೋಣ

  'ವಿಕ್ರಾಂತ್ ರೋಣ'ದ ಚಿತ್ರದ ಪ್ರಮೋಷನ್ ಇನ್ನೊಂದು ಮಟ್ಟದಲ್ಲಿದೆ. ಪ್ರಪಂಚದ ಅತ್ಯಂತ ಎತ್ತರದ ಕಟ್ಟಡದ ಮೇಲೆ ಟೈಟಲ್ ಲೋಗೋ ಅನಾವರಣ. ಈಗ 3ಡಿ ವರ್ಷನ್‌ಗೆ ಸಿದ್ಧತೆ. ಜಾಕ್ ಮಂಜು ಅವರ ಧೈರ್ಯ ಮತ್ತು ಸಾಹಸಕ್ಕೆ ಸ್ಯಾಂಡಲ್‌ವುಡ್‌ ಬೆರಗಾಗಿ ನೋಡುವಂತಾಗಿದೆ.

  'ವಿಕ್ರಾಂತ್ ರೋಣ' ಬಳಿಕ ಸುದೀಪ್ ಮುಂದಿನ ಸಿನಿಮಾ ಯಾವುದು? ಯಾವಾಗ ಆರಂಭವಾಗುತ್ತೆ? ಇಲ್ಲಿದೆ ಮಾಹಿತಿ'ವಿಕ್ರಾಂತ್ ರೋಣ' ಬಳಿಕ ಸುದೀಪ್ ಮುಂದಿನ ಸಿನಿಮಾ ಯಾವುದು? ಯಾವಾಗ ಆರಂಭವಾಗುತ್ತೆ? ಇಲ್ಲಿದೆ ಮಾಹಿತಿ

  3ಡಿ ತಂತ್ರಜ್ಞಾನದ ಚಿತ್ರಗಳು

  3ಡಿ ತಂತ್ರಜ್ಞಾನದ ಚಿತ್ರಗಳು

  3ಡಿ ತಂತ್ರಜ್ಞಾನ ಬಳಸಿ ಕನ್ನಡದಲ್ಲಿ ಬಿಡುಗಡೆಯಾಗಿರುವ ಚಿತ್ರಗಳ ಬಹಳ ಕಡಿಮೆ. ಅಂಬರೀಶ್-ಉಪೇಂದ್ರ ನಟಿಸಿದ್ದ ಕಠಾರಿವೀರ ಸುರಸುಂದರಾಂಗಿ ಹಾಗೂ ಮುನಿರತ್ನ ನಿರ್ಮಾಣದಲ್ಲಿ ದರ್ಶನ್ ನಟಿಸಿದ್ದ ಕುರುಕ್ಷೇತ್ರ ಚಿತ್ರಗಳು 3ಡಿ ವರ್ಷನ್‌ನಲ್ಲಿ ರಿಲೀಸ್ ಆಗಿತ್ತು. ಈ ಚಿತ್ರಗಳ ಬಳಿಕ ವಿಕ್ರಾಂತ್ ರೋಣ ಆ ಹಾದಿಯಲ್ಲಿದೆ.

  ಸೆಕೆಂಡ್ ಹಾಫ್‌ನಲ್ಲಿ ಬಿಡುಗಡೆ!

  ಸೆಕೆಂಡ್ ಹಾಫ್‌ನಲ್ಲಿ ಬಿಡುಗಡೆ!

  ಸದ್ಯಕ್ಕೆ ವಿಕ್ರಾಂತ್ ರೋಣ ಸಿನಿಮಾ ಎದುರು ನೋಡುವಂತಿಲ್ಲ. ಸರದಿ ಸಾಲಿನಲ್ಲಿ ಇತರೆ ಸ್ಟಾರ್ ನಟರ ಚಿತ್ರಗಳು ರಿಲೀಸ್ ದಿನಾಂಕ ಘೋಷಣೆ ಮಾಡಿ ಕಾಯುತ್ತಿವೆ. ಮೇ ಅಂತ್ಯದವರೆಗೂ ಡೇಟ್ ಲಾಕ್ ಆಗಿದೆ. ಜುಲೈನಲ್ಲಿ 'ಕೆಜಿಎಫ್-2' ಬರಲಿದೆ. ಏಪ್ರಿಲ್ 29ಕ್ಕೆ 'ಕೋಟಿಗೊಬ್ಬ-3' ರಿಲೀಸ್ ಆಗಲಿದೆ. ಹಾಗ್ನೋಡಿದ್ರೆ ವಿಕ್ರಾಂತ್ ರೋಣ ಸಿನಿಮಾ ವರ್ಷದ ಸೆಕೆಂಡ್ ಹಾಫ್ ಅಂದ್ರೆ ಆಗಸ್ಟ್ ನಂತರ ತೆರೆಗೆ ಬರುವ ಪ್ಲಾನ್ ಮಾಡಬಹದು. ಅಥವಾ ಜೂನ್ ತಿಂಗಳಲ್ಲಿ ಯಾವ ದೊಡ್ಡ ಚಿತ್ರವೂ ಇಲ್ಲದ ಕಾರಣ ಬಂದರೂ ಅಚ್ಚರಿ ಇಲ್ಲ.

  English summary
  Kannada actor Kiccha Sudeep starrer 'Vikranth Rona' movie set to release in 3D Version.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X