For Quick Alerts
  ALLOW NOTIFICATIONS  
  For Daily Alerts

  'ವಿಕ್ರಾಂತ್ ರೋಣ' ರಿಲೀಸ್ ಯಾವಾಗ? ಡಿಸೆಂಬರ್ 7ಕ್ಕೆ ಕಿಚ್ಚನ ಅಭಿಮಾನಿಗಳಿಗೆ ಹಬ್ಬ

  |

  ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಸುದೀಪ್ ಎಲ್ಲರ ಕಣ್ಣು ನೆಟ್ಟಿದೆ. ಕಿಚ್ಚನ ಪ್ಯಾನ್ ಇಂಡಿಯಾ ಸಿನಿಮಾ ಸಿನಿಮಾ 'ವಿಕ್ರಾಂತ್ ರೋಣ' ರಿಲೀಸ್ ಬಗ್ಗೆನೇ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತೋ? ನಾವು ಯಾವಾಗ ಸಿನಿಮಾ ನೋಡುತ್ತೇವೋ ಅಂತ ಅಭಿಮಾನಿಗಳು ಕಾದು ಕೂತಿದ್ದಾರೆ. ಆದರೆ, ಇದರೂವರೆಗು ಸಿನಿಮಾ ಬಗ್ಗೆ ಸುಳಿವೇ ಇರಲಿಲ್ಲ. ಆದ್ರೀಗ ಕಿಚ್ಚನ ಅಡ್ಡಾದಿಂದ ಅಭಿಮಾನಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.

  ಕಿಚ್ಚನ ಅಭಿಮಾನಿಗಳು ಈ ಸಿಹಿ ಸುದ್ದಿಗಾಗಿಯೇ ಬೆಳಗ್ಗೆಯಿಂದ ಕಾದು ಕೂತಿದ್ದರು. ಸಿನಿಮಾ ಬಿಡುಗಡೆ ಬಗ್ಗೆ ಬಿಗ್ ಅನೌನ್ಸ್‌ಮೆಂಟ್ ಮಾಡುತ್ತಾರೆ ಅನ್ನುವ ನಿರೀಕ್ಷೆಯನ್ನು ಹೊತ್ತು ಕೂತಿದ್ದರು. ಅದರಂತೆ ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಕಿಚ್ಚ ಸುದೀಪ್ ಅಪ್‌ಡೇಟ್ ಒಂದನ್ನು ಕೊಟ್ಟಿದ್ದಾರೆ. ಇದನ್ನು ನೋಡಿ ಸ್ಯಾಂಡಲ್‌ವುಡ್ ಬಾದ್‌ಷಾ ಅಭಿಮಾನಿಗಳು ಹಿರಿಹಿರಿ ಹಿಗ್ಗಿ ಸಂಭ್ರಮ ಪಡುತ್ತಿದ್ದಾರೆ. ಹಾಗಿದ್ದರೆ, ಬಹು ನಿರೀಕ್ಷಿತ ಸಿನಿಮಾ ಬಗ್ಗೆ ಕಿಚ್ಚ ಬಿಟ್ಟು ಕೊಟ್ಟ ಗುಟ್ಟೇನು? ಅನ್ನುವುದನ್ನು ತಿಳಿಯಲು ಎಲ್ಲರಿಗೂ ಕುತೂಹಲ ಮುಂದೆ ಓದಿ...

  ಕಿಚ್ಚ ಡ್ಯೂಟಿ ರಿಪೋರ್ಟ್ ಯಾವಾಗ?

  ಕಿಚ್ಚ ಡ್ಯೂಟಿ ರಿಪೋರ್ಟ್ ಯಾವಾಗ?

  'ವಿಕ್ರಾಂತ್ ರೋಣ' ಪೋಸ್ಟರ್ ನೋಡಿನೇ ಅಭಿಮಾನಿಗಳು ಥಿಲ್ ಆಗಿದ್ದರು. ಕಿಚ್ಚ ಗೆಟಪ್, ಲುಕ್, ಕಾಸ್ಟ್ಯೂಮ್ ಕಂಡು ಥ್ರಿಲ್ ಆಗಿದ್ದರು. ಸಿನಿಮಾ ಯಾವಾಗ ರಿಲೀಸ್ ಆಗುತ್ತೋ ಅಂತ ಕಾದು ಕೂತಿದ್ದರು. ಆದರೆ, ಕೊರೊನಾ, ಲಾಕ್‌ಡೌನ್‌ ಅಂತ ಸಿನಿಮಾ ಬಿಡುಗಡೆ ತಡವಾಯ್ತು. ಹೀಗಾಗಿ ಈಗಾಗಲೇ ರಿಲೀಸ್ ಆಗಬೇಕಿದ್ದ 'ವಿಕ್ರಾಂತ್ ರೋಣ' ಬಿಡುಗಡೆ ಮತ್ತೆ ಮುಂದೂಡಬೇಕಾಗಿದೆ. ಸಿನಿಮಾ ನೋಡಲಾರದ ಬೇಸರದಲ್ಲಿರುವ ಅಭಿಮಾನಿಗಳಿಗೆ ಕಿಚ್ಚ ಅಂಡ್ ಟೀಮ್ ರಿಲೀಸ್ ಡೇಟ್ ಅನೌನ್ಸ್ ಮಾಡುವ ದಿನವನ್ನು ಇಂದು ಘೋಷಿಸಿದ್ದಾರೆ.

  ಡಿಸೆಂಬರ್ 7 ರಂದು ಕಿಚ್ಚನ ಫ್ಯಾನ್ಸ್‌ಗೆ ಹಬ್ಬ

  ಡಿಸೆಂಬರ್ 7 ರಂದು ಕಿಚ್ಚನ ಫ್ಯಾನ್ಸ್‌ಗೆ ಹಬ್ಬ

  ಅನೂಪ್ ಭಂಡಾರಿ ನಿರ್ದೇಶಿಸಿ, ಜಾಕ್ ಮಂಜು ನಿರ್ಮಿಸಿರುವ ಸಿನಿಮಾ 'ವಿಕ್ರಾಂತ್ ರೋಣ'. ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನುವುದು ಡಿಸೆಂಬರ್ 7ರಂದು ಘೋಷಣೆಯಾಗಲಿದೆ. ಈ ವಿಷಯವನ್ನು ಕಿಚ್ಚ ಸುದೀಪ್ ಟ್ವಿಟರ್ ಮೂಲಕ ಘೋಷಿಸಿದ್ದಾರೆ. ಇವರ ಜೊತೆ ಅನುಪ್ ಭಂಡಾರಿ ಕೂಡ ಟ್ವಿಟರ್‌ನಲ್ಲಿ ಡಿಸೆಂಬರ್ 7ರ ಬೆಳಗ್ಗೆ 11.05ಕ್ಕೆ ಸರಿಯಾಗಿ ವಿಕ್ರಾಂತ್ ರೋಣ ಬಿಡುಗಡೆ ದಿನವನ್ನು ಘೋಷಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಅಂದು ಬಾದ್‌ಷಾ ಅಭಿಮಾನಿಗಳಿಗೆ ಹಬ್ಬ ಅಂತಲೇ ಹೇಳಬಹುದು.

  3ಡಿಯಲ್ಲಿ ವಿಕ್ರಾಂತ್ ರೋಣ ರಿಲೀಸ್

  'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಲು ಚಿತ್ರತಂಡ ಮುಂದಾಗಿರುವುದಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಯಾಕಂದ್ರೆ, ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇತಿಹಾಸ ಬರೆಯುತ್ತೆ ಎಂದು ನಂಬಲಾಗಿದೆ. ಅದಕ್ಕೆ ಕಾರಣ, ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ 3ಡಿಯಲ್ಲಿ ಬಿಡುಗಡೆಯಾಗುತ್ತಿರುವುದು. ಕಿಚ್ಚ ಹಾಗೂ ತಂಡ ಇಬ್ಬರೂ ಸಿನಿಮಾ ಬಗ್ಗೆ ಕಾನ್ಫಿಡೆಂಟ್ ಆಗಿರುವುದರಿಂದ 3ಡಿಯಲ್ಲಿ ನಿರ್ಮಾಣ ಮಾಡಿದ್ದು, ಬಹುಭಾಷೆಯಲ್ಲಿ ಬಿಡುಗಡೆಯಾಗಲಿದೆ.

  ಜಾಕ್ವೆಲಿನ್ ಹೆಜ್ಜೆಗೆ ಕಿಚ್ಚನ ಕಿಚ್ಚು

  ಜಾಕ್ವೆಲಿನ್ ಹೆಜ್ಜೆಗೆ ಕಿಚ್ಚನ ಕಿಚ್ಚು

  'ವಿಕ್ರಾಂತ್ ರೋಣ' ಬಿಗ್ ಬಜೆಟ್ ಪ್ಯಾನ್‌ ಇಂಡಿಯಾ ಸಿನಿಮಾ. ಹೀಗಾಗಿ ಸಿನಿಮಾ ಪ್ರಚಾರವನ್ನು ಆರಂಭದಿಂದಲೇ ಭರ್ಜರಿಯಾಗಿ ಮಾಡುತ್ತಾ ಬಂದಿದೆ. ಈಗಾಗಲೇ ದುಬೈನ ಬುರ್ಜ್‌ ಖಲೀಫಾದ ಮೇಲೆ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ ವಿಶ್ವದ ಗಮನ ಸೆಳೆದಿದ್ದರು. ಬಳಿಕ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ಕರೆತಂದು ಹಾಡೊಂದಕ್ಕೆ ಹೆಜ್ಜೆ ಹಾಕಿಸಿದ್ದರು. ಹೀಗಾಗಿ ಸಿನಿಮಾ ಬಗ್ಗೆ ಕುತೂಹಲ ದುಪ್ಪಟ್ಟಾಗಿದ್ದು, ಅಭಿಮಾನಿಗಳು ರಿಲೀಸ್ ಡೇಟ್‌ಗಾಗಿ ಕಾಯುತ್ತಿದ್ದಾರೆ.

  English summary
  Vikranth rona Pan India movie release date announcement by Kichcha Sudeep. December 7th Kichcha Sudeep will announce the release date on Vikranth Rona.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X