ನಟ ಸತ್ಯಜಿತ್ ವಿರುದ್ಧ ಮಗಳಿಂದಲೇ ದೂರು ದಾಖಲು

ಕನ್ನಡದ ಖ್ಯಾತ ಖಳನಟ ಸತ್ಯಜಿತ್ ಪುತ್ರಿಯೇ ತಂದೆಯ ವಿರುದ್ಧ ನಗರದ ಪೊಲೀಸ್ ಠಾಣೆಯಲ್ಲಿ ಮಾನಸಿಕ ಹಿಂಸೆ ಆರೋಪ ಹೊರಿಸಿ ದೂರು ನೀಡಿದ್ದಾರೆ.

ನಟ ಸತ್ಯಜಿತ್ ಪುತ್ರಿ ಅಖ್ತರ್ ಸ್ವಹಾನಾ 'ನನ್ನ ತಂದೆ ಹಾಗೂ ಅಣ್ಣಂದಿರು ನನ್ನನ್ನು ಹಣಕ್ಕಾಗಿ ಪೀಡುತ್ತಿದ್ದಾರೆ. ನಾನು ಗರ್ಭಿಣಿ ಆಗಿದ್ದು ಈ ಸಮಯದಲ್ಲಿ ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ' ಎಂದು ಆರೋಪಿಸಿ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಎನ್‌ಸಿಆರ್ ದಾಖಲಿಸಿಕೊಂಡು ಇಬ್ಬರನ್ನೂ ಕರೆಸಿ ಬುದ್ಧಿಹೇಳಿ ಕಳಿಸಿದ್ದಾರೆ ಪೊಲೀಸರು.

ಘಟನೆ ಬಗ್ಗೆ ಮಾಧ್ಯಮಗಳಲ್ಲಿ ವಿವರಣೆ ನೀಡಿದ ಸತ್ಯಜಿತ್ ಪುತ್ರ ಆಕಾಶ್ ಸತ್ಯಜಿತ್, 'ಅಪ್ಪ ಹಣಕ್ಕಾಗಿ ಬೇಡಿಕೆ ಇಟ್ಟಿರಲಿಲ್ಲ. ಆಕೆಯೇ ತಂದೆಯ ಮೇಲೆ ನಮ್ಮ ಮೇಲೆ ಸುಳ್ಳು ದೂರು ದಾಖಲಿಸಿದ್ದಾಳೆ' ಎಂದಿದ್ದಾರೆ.

ಮಾಹಿತಿ ನೀಡಿದ ಸತ್ಯಜಿತ್ ಮಗ ಆಕಾಶ್

ಮಾಹಿತಿ ನೀಡಿದ ಸತ್ಯಜಿತ್ ಮಗ ಆಕಾಶ್

'ಆಕೆಯ ಶಿಕ್ಷಣದ ಸಾಲ ತೀರಿಸಲು ಸುಮಾರು ಮನೆ ಮಾರಿ 50 ಲಕ್ಷ ಹಣ ಪಾವತಿಸಿದ್ದಾರೆ ನಮ್ಮ ತಂದೆ. ಆದರೆ ಈಗ ತುಸು ಸಹಾಯ ಕೇಳಿದ್ದಕ್ಕೆ ಆಕೆ ಅಪ್ಪನ ವಿರುದ್ಧ ತಿರುಗಿ ಬಿದ್ದಿದ್ದಾಳೆ, ಅಪ್ಪನ ವಿರುದ್ಧ ಸುಳ್ಳು ಕೇಸು ದಾಖಲಿಸಿ, ಈ ವಯಸ್ಸಿನಲ್ಲಿ ಅವರನ್ನು ಪೊಲೀಸ್ ಠಾಣೆಗೆ ಕರೆಸಿದ್ದಾಳೆ' ಎಂದಿದ್ದಾರೆ ಆಕಾಶ್.

ಮನೆ ಮಾರಿ 50 ಲಕ್ಷ ಸಾಲ ತೀರಿಸಿದ್ದರು: ಆಕಾಶ್

ಮನೆ ಮಾರಿ 50 ಲಕ್ಷ ಸಾಲ ತೀರಿಸಿದ್ದರು: ಆಕಾಶ್

ಆಕೆ ಬ್ರಿಟನ್‌ ಗೆ ಹೋಗಿ ಪೈಲೆಟ್ ಶಿಕ್ಷಣ ಕಲಿತು ಬಂದಳು, ಆ ನಂತರ ಐದು ವರ್ಷ ಮನೆಯಲ್ಲೇ ಇದ್ದಳು, ಆಗೆಲ್ಲಾ ಶಿಕ್ಷಣ ಸಾಲದ ಇಎಂಐ ಕಟ್ಟಿದ್ದು ಅಪ್ಪ. ಆ ನಂತರ ಮನೆ ಮಾಡಿ ಒಟ್ಟಿಗೆ 50 ಲಕ್ಷ ಸಾಲ ತೀರಿಸಿದರು. ಆ ನಂತರ ಆಕೆ ಐರ್ಲೆಂಡ್‌ಗೆ ಹೋಗುತ್ತೀನಿ ಎಂದಾಗ ಅದಕ್ಕೆ 10 ಲಕ್ಷ ಸಾಲ ಮಾಡಿ ತಂದು ಕೊಟ್ಟರು. ಆದರೆ ಈಕೆ ಈಗ ಅಪ್ಪನ ಕಡೆಗೆ ಕಣ್ಣೆತ್ತಿ ಸಹ ನೋಡುತ್ತಿಲ್ಲ ಎಂದಿದ್ದಾರೆ ಆಕಾಶ್.

ಸಾಲ ತೀರಿಸಿ ನಿಮಗೆ ಮನೆ ಕೊಡಿಸುತ್ತೇನೆ ಎಂದಿದ್ದ ಮಗಳು

ಸಾಲ ತೀರಿಸಿ ನಿಮಗೆ ಮನೆ ಕೊಡಿಸುತ್ತೇನೆ ಎಂದಿದ್ದ ಮಗಳು

ಮನೆ ಮಾರುವಾಗ ಆಕೆ ಹೇಳಿದ್ದಳು, ನನ್ನ ಸಾಲ ತೀರಿಸಿಕೊಡಿ ನಾನು ಕೆಲಸಕ್ಕೆ ಸೇರಿದ ಮೇಲೆ ಮನೆ ಕೊಡಿಸಿಕೊಡುತ್ತೇನೆ ಎಂದು. ಈಗ ಕೆಲಸಕ್ಕೆ ಸೇರಿ, ಅಪ್ಪನ ವಿರುದ್ಧ ಮಾಡಿಕೊಂಡು ಮದುವೆಯೂ ಮಾಡಿಕೊಂಡಿದ್ದಾಳೆ. ಈಗ ತನಗಾಗಿ ಮನೆ ತೆಗೆದುಕೊಂಡಿದ್ದಾಳೆ. ಆದರೆ ಆ ವಿಷಯವನ್ನು ಅಪ್ಪನಿಂದ ಮುಚ್ಚಿಟ್ಟಿದ್ದಳು ಇದು ಅಪ್ಪನಿಗೆ ಸಿಟ್ಟು ಬಂದು ಆಕೆಯನ್ನು ಮನೆಗೆ ಕರೆದು ಪ್ರಶ್ನೆ ಮಾಡಿದ್ದಕ್ಕೆ ನಮ್ಮ ಮೇಲೆ ದೂರು ನೀಡಿದ್ದಾಳೆ ಎಂದರು ಆಕಾಶ್.

Recommended Video

Sudeep ಜೊತೆ ಭಾರತದಲ್ಲಿ ಯಾರು ಮಾಡದ ಸಿನಿಮಾ ಮಾಡ್ತೀನಿ ಅಂದ್ರು ಪ್ರೇಮ್..!? | Filmibeat Kannada
'ಅಪ್ಪ ಕಾಲು ಕಳೆದುಕೊಂಡಾಗ ಅವರನ್ನು ಕಡೆಗಣಿಸಿದಳು'

'ಅಪ್ಪ ಕಾಲು ಕಳೆದುಕೊಂಡಾಗ ಅವರನ್ನು ಕಡೆಗಣಿಸಿದಳು'

ಆಕೆಯ ಪತಿ ತೌಸಿಫ್ ತನ್ನನ್ನು ತಾನು ಆರ್ಕಿಟೆಕ್ಚರ್ ಎಂಜಿನಿಯರ್ ಎಂದು ಹೇಳಿಕೊಂಡಿದ್ದ ಆದರೆ ಆತನೊಬ್ಬ ದೊಡ್ಡ ಫ್ರಾಡ್. ಮದುವೆ ಆದ ಹೊಸದರಲ್ಲಿ ಅಪ್ಪನೇ ಅವರ ಸಂಸಾರಕ್ಕೆ ಹಣ ಕೊಟ್ಟಿದ್ದಾರೆ. ಆ ನಂತರ ಅಪ್ಪನಿಗೆ ಗ್ಯಾಂಗ್ರಿನ್ ಸಮಸ್ಯೆ ಆಗಿ ಕಾಲು ಕಳೆದುಕೊಂಡಾಗ ಆಕೆ ಅಪ್ಪನನ್ನು ನೋಡಿಕೊಳ್ಳಲಿಲ್ಲ. ಇದೂ ಸಹ ಅಪ್ಪನಿಗೆ ವಿಷಾಧವಾಗಿ ಕಾಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

More from Filmibeat

English summary
Villain Sathyajit's daughter Akhthar Swahana gave complaint against his father.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X