'ರುಸ್ತುಂ' ಶಿವಣ್ಣನಿಗೆ ಖಡಕ್ ಖಳನಾಯಕ ಯಾರಾಗಬಹುದು.?

By Bharath Kumar

Recommended Video

ಶಿವಣ್ಣನ ಎದುರು ನಿಲ್ತಾರಾ ಅನಿಲ್ ಕಪೂರ್, ಸಂಜಯ್ ದತ್ತ್ ? | Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯಿಸಲಿರುವ 'ರುಸ್ತಂ' ಸಿನಿಮಾ ಅಣ್ಣಾವ್ರ ಹುಟ್ಟುಹಬ್ಬಕ್ಕೆ ಸೆಟ್ಟೇರಲಿದೆ. ಸಾಹಸ ನಿರ್ದೇಶಕ ರವಿವರ್ಮ ಆಕ್ಷನ್ ಕಟ್ ಹೇಳಲಿರುವ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಲಿದ್ದಾರೆ.

ಈಗಾಗಲೇ ಫೋಟೋಶೂಟ್ ಮುಗಿಸಿರುವ ಚಿತ್ರತಂಡ ಕಲಾವಿದರ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ, ಚಿತ್ರಕ್ಕಾಗಿ ಖಳನಾಯಕನ ಹುಡುಕಾಟ ಜೋರಾಗಿದೆ. ಶಿವಣ್ಣನ ಎದುರು ಖಡಕ್ ವಿಲನ್ ಬೇಕು ಎಂಬ ಕಾರಣಕ್ಕೆ ದೊಡ್ಡ ವಿಲನ್ ಒಬ್ಬರನ್ನ ಕರೆತರುವ ಪ್ರಯತ್ನ ಸಾಗುತ್ತಿದೆಯಂತೆ.

ತಮಿಳು, ತೆಲುಗು, ಹಿಂದಿ ಸಿನಿಮಾರಂಗದಲ್ಲಿ ಕೆಲಸ ಮಾಡಿರುವ ರವಿವರ್ಮ ಎಲ್ಲ ಭಾಷೆಯಲ್ಲಿಯೂ ವಿಲನ್ ಗಾಗಿ ಹುಡುಕುತ್ತಿದ್ದಾರಂತೆ. ಬಾಲಿವುಡ್ ಸ್ಟಾರ್ ನಟರಾದ ಅನಿಲ್ ಕಪೂರ್, ಸಂಜಯ್ ದತ್, ಸುನೀಲ್ ಶೆಟ್ಟಿ, ಮನೋಜ್ ಬಾಜಪೇಯಿ ಸೇರಿದಂತೆ ಹಲವರಿಗೆ ಕಥೆ ಹೇಳಿದ್ದರಂತೆ. ಇವರೆಲ್ಲರಿಗೂ ಕಥೆ ಇಷ್ಟವಾಗಿದ್ದರೂ, ಡೇಟ್ ಸಮಸ್ಯೆಯಾಗುತ್ತಿದೆಯಂತೆ.

Villain searching for shivaraj kumars rustom

ಹೀಗಾಗಿ, ವಿಲನ್ ಯಾರೂ ಎಂಬುದು ಇನ್ನು ಅಂತಿಮವಾಗಿಲ್ಲ. ಇನ್ನುಳಿದಂತೆ ಜಯಣ್ಣ-ಭೋಗೇಂದ್ರ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಏಪ್ರಿಲ್ 24ರಂದು ಸೆಟ್ಟೇರಲಿದ್ದು, ಮೇ 10ರಿಂದ ಚಿತ್ರೀಕರಣ ಶುರುವಾಗಲಿದೆ. ಬೆಂಗಳೂರು, ಬಿಹಾರ ಸೇರಿದಂತೆ ದೇಶದ ಹಲವೆಡೆ ಚಿತ್ರೀಕರಣ ನಡೆಯಲಿದೆ.

ಸದ್ಯ, ಶಿವರಾಜ್ ಕುಮಾರ್ ಅವರು 'ಕವಚ' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಮಲಯಾಳಂ ಭಾಷೆಯ 'ಒಪ್ಪಂ' ಚಿತ್ರದ ರೀಮೇಕ್ ಇದಾಗಿದ್ದು, ಈ ಚಿತ್ರದಲ್ಲಿ ಶಿವಣ್ಣ ಕುರುಡನ ಪಾತ್ರ ನಿಭಾಯಿಸುತ್ತಿದ್ದಾರೆ.

More from Filmibeat

English summary
Stunt choreographer-turned-director Ravi Varma is leaving no stone unturned to create right kind of buzz for his first directorial Rustum starring Shivarajkumar. the movie is going to starts at dr rajkumar's birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X