twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣು ಸ್ಮಾರಕಕ್ಕಾಗಿ ಉಪವಾಸ ಮಾಡಲು ಸಿದ್ಧ: ವಿನಯ್ ಗುರೂಜಿ

    |

    Recommended Video

    ವಿಷ್ಣುವರ್ಧನ್ ಗಾಗಿ ಉಪವಾಸ ಕೂರಲು ರೆಡಿ ಅಂದ್ರು ವಿನಯ್ ಗುರೂಜಿ | FILMIBEAT KANNADA

    ಡಾ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ, ಪುಣ್ಯ ಸ್ಮರಣೆ ವರ್ಷದಿಂದ ವರ್ಷಕ್ಕೆ ಬರುತ್ತಲೇ ಇದೆ. ಆದರೆ ವಿಷ್ಣು ಸ್ಮಾರಕ ಕೆಲಸ ಮಾತ್ರ ಅಭಿಮಾನ್ ಸ್ಟುಡಿಯೋದಲ್ಲಿ ಆರಂಭವಾಗಲೇ ಇಲ್ಲ.

    ಪರ್ಯಾಯವಾಗಿ ಮೈಸೂರಿನಲ್ಲಿ ಸಾಹಸ ಸಿಂಹನ ಸ್ಮಾರಕ ನಿರ್ಮಾಣ ಕೆಲಸ ಶುರುವಾಗಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ವಿನಯ್ ಗುರೂಜಿ ಮಾತನಾಡಿದ್ದು, ''ವಿಷ್ಣು ಸ್ಮಾರಕಕ್ಕಾಗಿ ನಾನು ಉಪವಾಸ ಮಾಡಲು ಸಿದ್ಧವಾಗಿದ್ದೇನೆ'' ಎಂದು ತಿಳಿಸಿದ್ದಾರೆ.

    ವಿಷ್ಣುವರ್ಧನ್ ಸ್ಮಾರಕ ಸ್ಥಳಾಂತರದ ಬಗ್ಗೆ ವದಂತಿ ನಂಬಬೇಡಿವಿಷ್ಣುವರ್ಧನ್ ಸ್ಮಾರಕ ಸ್ಥಳಾಂತರದ ಬಗ್ಗೆ ವದಂತಿ ನಂಬಬೇಡಿ

    ಡಾ ವಿಷ್ಣುವರ್ಧನ್ ಅವರ 69ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನ್ ಸ್ಟುಡಿಯೋಗೆ ಭೇಟಿ ನೀಡಿದ ವಿನಯ್ ಗೂರುಜಿ, ವಿಷ್ಣು ಸಮಾಧಿಗೆ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ''ಹುಟ್ಟಿದ ಮೇಲೆ ಯಾರೂ ಸಾರ್ಥಕತೆ ಕಾಣ್ತಾರೋ ಅವರೇ ಹುಟ್ಟೆ ಒಂದು ಹಬ್ಬ. ವಿಷ್ಣುವರ್ಧನ್ ಅವರು ಯಾವಾಗಲೂ ಹುಟ್ಟಿದವರು, ಅವರಿಗೆ ಸಾವಿಲ್ಲ. ಅಂತಹ ಹಬ್ಬ ಇಲ್ಲಿ ಕಾಣ್ತಿದೆ'' ಎಂದು ಸಂತಸ ವ್ಯಕ್ತಪಡಿಸಿದರು.

    Vinay Guruji React on Dr Vishnuvardhan

    ಮೊದಲು ವಿಷ್ಣು ಸ್ಮಾರಕ ಆಗಲಿ, ಆಮೇಲೆ ಅಂಬಿ ಸ್ಮಾರಕ ಮಾಡಲಿ: ಸುಮಲತಾಮೊದಲು ವಿಷ್ಣು ಸ್ಮಾರಕ ಆಗಲಿ, ಆಮೇಲೆ ಅಂಬಿ ಸ್ಮಾರಕ ಮಾಡಲಿ: ಸುಮಲತಾ

    ''ಅಭಿಮಾನಿಗಳು ಅನ್ನೋದಕ್ಕಿಂತ ನೀವೆಲ್ಲ ಅವರ ದತ್ತು ಮಕ್ಕಳು ಎಂದುಕೊಳ್ಳಿ. ಈಗಿನ ಕಾಲದಲ್ಲಿ ನೆಂಟರೇ ಬರಲ್ಲ. ರಕ್ತ ಸಂಬಂಧಿಗಳೇ ಬೇರೆ, ಹೃದಯ ಸಂಬಂಧಿಗಳೇ ಬೇರೆ. ನೀವೆಲ್ಲ ವಿಷ್ಣು ಅವರ ಹೃದಯ ಸಂಬಂಧಿಗಳು'' ಎಂದು ಅಭಿಮಾನಿಗಳಿಗೆ ಸಲಹೆ ನೀಡಿದರು.

    ''ವಿಷ್ಣು ಅವರ ಸಮಾಧಿ ಎನ್ನುವುದಕ್ಕಿಂತ ಇದು ವಿಷ್ಣು ಮಂದಿರವಾಗಲಿ ಎಂಬ ಆಶಯ ನನ್ನದು. ಆ ಜಾಗಕ್ಕಾಗಿ ನಾನು ನಿಮ್ಮೆಲ್ಲರ ಜೊತೆ ಉಪವಾಸ ಮಾಡಲು ಕೂಡ ತಯಾರಿದ್ದೇನೆ. ಇದು ಕೇವಲ ಭರವಸೆ ಅಲ್ಲ'' ಎಂದು ಹೇಳುವ ಮೂಲಕ ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ನಿರ್ಮಾಣವಾಗಲಿ ಎಂಬ ವಾದ ಮಂಡಿಸಿದರು.

    English summary
    'I am Ready to Fight with Vishnuvardhan fans for vishnu memorial in abhiman studio' said vinay guruji.
    Wednesday, September 18, 2019, 18:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X