For Quick Alerts
  ALLOW NOTIFICATIONS  
  For Daily Alerts

  ನಿಖಿಲ್‌ ದಂಪತಿಗೆ ಯಾವ ಮಗು ಆಗಲಿದೆ? ಭವಿಷ್ಯ ನುಡಿದ ವಿನಯ್ ಗುರೂಜಿ

  |

  ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂತಸದ ಸುದ್ದಿಯನ್ನು ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರೂ ಸಂತಸದಿಂದ ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾರೆ.

  Recommended Video

  ನಿಖಿಲ್ ದಂಪತಿಗೆ ಹುಟ್ಟೋ ಮಗುವಿನ ಬಗ್ಗೆ ಭವಿಷ್ಯ ನುಡಿದ ವಿನಯ್ ಗುರೂಜಿ | Filmibeat Kannada

  ಮೊದಲ ಮಗುವಿನ ಆಗಮನದ ಪುಳಕದಲ್ಲಿ ನಿಖಿಲ್ ಕುಮಾರಸ್ವಾಮಿ ದಂಪತಿ ಇರುವ ಸಮಯದಲ್ಲಿಯೇ ವಿನಯ್ ಗುರೂಜಿ ನಿಖಿಲ್ ದಂಪತಿಗೆ ಯವ ಮಗು ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

  ಜೆಡಿಎಸ್‌ ಪ್ರಮುಖ ಮುಖಂಡ ಟಿ.ಎ.ಶರವಣ ಮನೆಗೆ ಆಗಮಿಸಿದ್ದ ವಿಜಯ್ ಗುರೂಜಿ ಅಲ್ಲಿಯೇ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಕುಮಾರಸ್ವಾಮಿ ಅವರಿಗೆ ಆಶೀರ್ವಚನ ನೀಡುತ್ತಾ ''ನಿಖಿಲ್‌ಗೆ ಗಂಡು ಮಗು ಆಗುತ್ತದೆ ಮುಂದಿನ ದಿನಗಳು ಉಜ್ವಲವಾಗಿದೆ'' ಎಂದಿದ್ದಾರೆ.

  ''ನಿಖಿಲ್‌ ಕುಮಾರಸ್ವಾಮಿ ಮುಂದಿನ ದಿನಗಳು ಉಜ್ವಲವಾಗಿವೆ''

  ''ನಿಖಿಲ್‌ ಕುಮಾರಸ್ವಾಮಿ ಮುಂದಿನ ದಿನಗಳು ಉಜ್ವಲವಾಗಿವೆ''

  ''ನಿಖಿಲ್ ಕುಮಾರಸ್ವಾಮಿಗೆ ಶಾಸಕನಾಗುವ ಯೋಗವಿದೆ. ಅವರ ರಾಜಕೀಯ ಭವಿಷ್ಯವೂ ಉತ್ತಮವಾಗಿದೆ. ನಿಖಿಲ್‌ಗೆ ಗಂಡು ಮಗು ಆಗಲಿದೆ. ಆ ನಂತರದ ಅವರ ದಿನಗಳು ಉಜ್ವಲವಾಗಿವೆ'' ಎಂದು ವಿನಯ್ ಗುರೂಜಿ ಹೇಳಿದ್ದಾರೆ ಎನ್ನಲಾಗಿದೆ.

  ಚಿತ್ರಗಳನ್ನು ಹಂಚಿಕೊಂಡಿರುವ ಟಿ.ಎ.ಶರವಣ

  ಚಿತ್ರಗಳನ್ನು ಹಂಚಿಕೊಂಡಿರುವ ಟಿ.ಎ.ಶರವಣ

  ವಿನಯ್ ಗುರೂಜಿ, ತಮ್ಮ ಮನೆಗೆ ಬಂದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಟಿ.ಎ.ಶರವಣ, ''ಇಂದು ನಮ್ಮ‌ ಮನೆಯಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ನಮ್ಮೆಲ್ಲರ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಆಶೀರ್ವಚನ ನೀಡಿದರು'' ಎಂದಿದ್ದು. ಭೇಟಿಯ ಹಲವು ಚಿತ್ರಗಳನ್ನು ಸಹ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

  ಸಂತಸದ ವಿಷಯ ಹಂಚಿಕೊಂಡಿದ್ದ ಕುಮಾರಸ್ವಾಮಿ

  ಸಂತಸದ ವಿಷಯ ಹಂಚಿಕೊಂಡಿದ್ದ ಕುಮಾರಸ್ವಾಮಿ

  ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ 2020ರ ಏಪ್ರಿಲ್ 17 ರಂದು ವಿವಾಹವಾಗಿದ್ದರು. ಇದೀಗ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಪುತ್ರ ಹಾಗೂ ಸೊಸೆ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಕುಮಾರಸ್ವಾಮಿ ಅವರು ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದರು. ನಂತರ ನಿಖಿಲ್ ಸಹ ಈ ವಿಷಯವನ್ನು ಮಾಧ್ಯಮಗಳಿಗೆ ಖಾತ್ರಿ ಪಡಿಸಿದರು.

  'ರೈಡರ್' ಸಿನಿಮಾ ಬಿಡುಗಡೆಗೆ ರೆಡಿ

  'ರೈಡರ್' ಸಿನಿಮಾ ಬಿಡುಗಡೆಗೆ ರೆಡಿ

  ಸಿನಿಮಾ ವಿಷಯಕ್ಕೆ ಬರುವುದಾದರೆ ನಿಖಿಲ್ ನಟನೆಯ 'ರೈಡರ್' ಸಿನಿಮಾ ಬಹುತೇಕ ತಯಾರಾಗಿದೆ. ಇದರ ನಂತರ ಶಿವರಾಜ್ ಕುಮಾರ್ ಜೊತೆ ನಿಖಿಲ್ ತೆರೆ ಹಂಚಿಕೊಳ್ಳಲಿದ್ದು ಆ ಸಿನಿಮಾವನ್ನು ನಂದ ಕಿಶೋರ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.

  English summary
  Vinay Guruji said Nikhil Kumaraswamy and Revathi will have baby boy soon. Both expecting baby in 4 months.
  Saturday, July 3, 2021, 18:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X