For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರರಂಗಕ್ಕೆ ಮತ್ತೊಂದು ರಾಜ್ ಕುಡಿ!

  By Srinath
  |

  ವರನಟ ಡಾ. ರಾಜ್‌ಕುಮಾರ್ ಕುಟುಂಬದ ಮೂರನೇ ಪೀಳಿಗೆಯೊಂದು ಗಾಂಧಿನಗರದ ಅಂಗಳದಲ್ಲಿ ಅಂಬೆಗಾಲಿಡುತ್ತಿದೆ. ಹೌದು, ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ವಿನಯ್ ರಾಜ್ ಅವರೇ ಕನ್ನಡ ಚಿತ್ರರಂಗದಲ್ಲಿ ಹೀರೊ ಆಗಿ ಮಿನುಗಲಿರುವ ತಾರೆ.

  ಮುಂದಿನ ವರ್ಷದ ವೇಳೆಗೆ ತಮ್ಮ ಪುತ್ರನನ್ನು ನಾಯಕನ ಪಟ್ಟಕ್ಕೇರಿಸುವುದು ಖಚಿತ ಎಂದು ಸ್ವತಃ ರಾಘವೇಂದ್ರ ಅವರೇ ಹೇಳಿದ್ದಾರೆ. 2012ಕ್ಕೆ ಮಗ ವಿನಯ್ ರಾಜ್‌ನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತೇನೆ. ಅದೇ ವರ್ಷ ಪ್ರಳಯ ಆಗುತ್ತದೆಂಬ ಎಂದು ಜನ ಮಾತಾನಾಡಿಕೊಳ್ಳುತ್ತಿದ್ದಾರೆ. ಆಗಲೇ ಮಗನ ವೃತ್ತಿ ಜೀವನಕ್ಕೆ ನಾಂದಿ ಹಾಡುವ ಬಯಕೆ ನನ್ನದಾಗಿದೆ. ಏನಾಗುತ್ತದೋ ನೋಡೋಣ ಎಂದು ರಾಘಣ್ಣ ನುಡಿದಿದ್ದಾರೆ.

  ಅಂದಹಾಗೆ ವಿನಯ್ ಸದ್ದಿಲ್ಲದೆ ನಟನೆಯ ಓನಾಮಗಳನ್ನು ಕಲಿತಿದ್ದಾರೆ. ಫೈಟಿಂಗ್, ಡ್ಯಾನ್ಸಿಂಗ್ ಎಲ್ಲ ಇವರಿಗೆ ಸಲೀಸು. ಜಿಮ್ ಅಂತೂ ದೈನಂದಿನ ಕಸರತ್ತು. ಇನ್ನು, ಕನ್ನಡ ಚಿತ್ರರಂಗಕ್ಕೆ ಆರಂಗೇಟ್ರಂ ಹಾಕೋದೊಂದೇ ಬಾಕಿ. ಮೇಲಿಂದ ತಾತ ಮತ್ತುರಾಜ್‌ರ ಆಶೀರ್ವಾದ ಧಾರಾಳವಾಗಿದೆ. ಏನಂತೀರಿ!?

  English summary
  Late Dr. Rajkumar's Grandson making an entry into the Sandalwood. Son of Raghavendra Rajkumar Vinay entering Kannada film industry in 2012.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X