For Quick Alerts
  ALLOW NOTIFICATIONS  
  For Daily Alerts

  4 ವರ್ಷಗಳಿಂದ ಬಿಡುಗಡೆಯಾಗಿಲ್ಲ ವಿನಯ್ ಸಿನಿಮಾ; ಇದೇ ಡಿಸೆಂಬರ್‌ಗೆ ನೂತನ ಚಿತ್ರ ತೆರೆಗೆ!

  |

  ಅನುರಾಗದ ಅಲೆಗಳು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಾಲನಟನಾಗಿ ಎಂಟ್ರಿ ಕೊಟ್ಟಿದ್ದ್ ನಟ ವಿನಯ್ ರಾಜ್‌ಕುಮಾರ್ 'ಸಿದ್ಧಾರ್ಥ' ಮೂಲಕ ಪೂರ್ಣ ಪ್ರಮಾಣದ ನಾಯಕನಾದರು. ನಂತರ ರನ್ ಆಂಟನಿ ಮತ್ತು ಅನಂತು ವರ್ಸಸ್ ನುಸ್ರತ್ ರೀತಿಯ ಪ್ರಯೋಗಾತ್ಮಕ ಚಿತ್ರಗಳಲ್ಲಿ ಅಭಿನಯಿಸಿದ್ದ ವಿನಯ್ ರಾಜ್‌ಕುಮಾರ್ ಅವರ ಯಾವುದೇ ಚಿತ್ರಗಳು ಕಳೆದ ನಾಲ್ಕು ವರ್ಷಗಳಿಂದ ತೆರೆ ಕಂಡಿಲ್ಲ.

  ಹೌದು, ಅನಂತು ವರ್ಸಸ್ ನುಸ್ರತ್ ಬಳಿಕ ವಿನಯ್ ರಾಜ್‌ಕುಮಾರ್ ಅಭಿನಯದ ಯಾವ ಚಿತ್ರವೂ ತೆರೆಕಂಡಿಲ್ಲ. ವಿನಯ್ ರಾಜ್‌ಕುಮಾರ್ ಅಭಿನಯದ ಗ್ರಾಮಾಯಣ, ಟೆನ್, ಅಂದೊಂದಿತ್ತು ಕಾಲ ಹಾಗೂ ಪೆಪೆ ಚಿತ್ರಗಳ ಕೆಲವೊಂದಷ್ಟು ಪೋಸ್ಟರ್ ಹಾಗೂ ಟೀಸರ್ ಬಿಡುಗಡೆಗೊಂಡು ಸದ್ದು ಮಾಡಿವೆಯಾದರೂ ಯಾವ ಚಿತ್ರದ ಬಿಡುಗಡೆ ದಿನಾಂಕವೂ ಸಹ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ.

  ಆದರೆ ಇದೀಗ ವಿನಯ್ ರಾಜ್‌ಕುಮಾರ್ ಅಭಿನಯಿಸುತ್ತಿರುವ ಮುಂದಿನ ಚಿತ್ರದ ನಿರ್ಮಾಪಕರೊಬ್ಬರು ಚಿತ್ರದ ಕುರಿತಂತೆ ಅಪ್‌ಡೇಟ್ ಒಂದನ್ನು ನೀಡಿದ್ದು, ನಾಲ್ಕು ವರ್ಷಗಳ ಬಳಿಕ ವಿನಯ್ ಅಭಿನಯದ ಚಿತ್ರವನ್ನು ಸಿನಿ ಪ್ರೇಕ್ಷಕರು ಬೆಳ್ಳಿ ತೆರೆ ಮೇಲೆ ವೀಕ್ಷಿಸುವ ಅವಕಾಶ ಲಭಿಸಲಿದೆ.

  ವಿನಯ್ 'ಟೆನ್' ಬಿಡುಗಡೆ ಸಾಧ್ಯತೆ

  ವಿನಯ್ 'ಟೆನ್' ಬಿಡುಗಡೆ ಸಾಧ್ಯತೆ

  ಹೌದು, ವಿನಯ್ ರಾಜ್‌ಕುಮಾರ್ ಅಭಿನಯದ 'ಟೆನ್' ಚಿತ್ರ ಬಿಡುಗಡೆಯಾಗುವ ಸೂಚನೆ ಸಿಕ್ಕಿದೆ. ಪುಷ್ಕರ್ ಫಿಲ್ಮ್ಸ್ ಅಡಿಯಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬರುತ್ತಿದ್ದು, ಡಿಸೆಂಬರ್ 9ರಂದು ತೆರೆಗೆ ಬರುವ ಸಾಧ್ಯತೆ ಇದೆ. ಇನ್ನು ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಮ್ಮ ಸಂಸ್ಥೆಯ ಮುಂದಿನ ಚಿತ್ರ ಡಿಸೆಂಬರ್ 9ರಂದು ಬಿಡುಗಡೆಯಾಗಲಿದೆ ಎಂದು ಸ್ಟೋರಿ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ. ಸದ್ಯ ಟೆನ್ ಸಿನಿಮಾ ಹೊರತುಪಡಿಸಿ ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣದ ಯಾವ ಚಿತ್ರವೂ ಸಹ ಚಿತ್ರೀಕರಣ ಮುಗಿಸಿರುವ ಹಂತದಲ್ಲಿ ಇಲ್ಲದ ಕಾರಣ ಈ ಚಿತ್ರ ಇದೇ ಡಿಸೆಂಬರ್ 9ಕ್ಕೆ ತೆರೆಗೆ ಬರುವುದು ಖಚಿತ ಎನ್ನಬಹುದು.

  ಅನುಷಾ ರಂಗನಾಥ್ ನಾಯಕಿ

  ಅನುಷಾ ರಂಗನಾಥ್ ನಾಯಕಿ

  ಇನ್ನು ಟೆನ್ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್‌ಗೆ ಆಶಿಕಾ ರಂಗನಾಥ್ ಸಹೋದರಿ ಅನುಷಾ ರಂಗನಾಥ್ ನಾಯಕಿಯಾಗಿ ಅಭಿನಯಿಸಿದ್ದಾರೆ. 'ದಿ ಗ್ರೇಟ್ ಲವ್ ಸ್ಟೋರಿ ಆಫ್ ಸೋಡಾಬುಡ್ಡಿ', ಲವ್ 360 ಹಾಗೂ ಅಂದವಾದ ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ಅನುಷಾ ರಂಗನಾಥ್ ಅಭಿನಯದ ನಾಲ್ಕನೇ ಚಿತ್ರ ಇದಾಗಿದೆ.

  ಬಾಕ್ಸರ್ ಪಾತ್ರದಲ್ಲಿ ವಿನಯ್

  ಬಾಕ್ಸರ್ ಪಾತ್ರದಲ್ಲಿ ವಿನಯ್

  ಕಳೆದೆರಡು ಚಿತ್ರಗಳಲ್ಲಿ ಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದ ನಟ ವಿನಯ್ ರಾಜ್‌ಕುಮಾರ್ ಟೆನ್ ಚಿತ್ರದಲ್ಲಿ ಕಿಕ್ ಬಾಕ್ಸರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆಗೊಂಡಿರುವ ಚಿತ್ರದ ಟೀಸರ್‌ನಲ್ಲಿ ವಿನಯ್ ರಾಜ್‌ಕುಮಾರ್ ಕಿಕ್ ಬಾಕ್ಸಿಂಗ್ ಮಾಡುತ್ತಿರುವ ದೃಶ್ಯಗಳೇ ಹೆಚ್ಚಾಗಿವೆ. ಅಷ್ಟೇ ಅಲ್ಲದೇ ಈ ಚಿತ್ರಕ್ಕಾಗಿ ವಿನಯ್ ರಾಜ್‌ಕುಮಾರ್ ತಯಾರಿಗಳನ್ನೂ ಸಹ ನಡೆಸಿಕೊಂಡಿದ್ದು, ಪಾತ್ರಕ್ಕಾಗಿ ಬಾಕ್ಸರ್ ಬಾಡಿ ಬೆಳೆಸಿದ್ದರು. ಇದಲ್ಲದೇ ವಿನಯ್ ರಾಜ್‌ಕುಮಾರ್ ಅಭಿನಯದ ಹಳ್ಳಿ ಹಿನ್ನೆಲೆಯ ಗ್ರಾಮಾಯಣ ಹಾಗೂ ಕ್ರೈಮ್ ಥ್ರಿಲ್ಲರ್ ಪೆಪೆ ಸಹ ಚಿತ್ರೀಕರಣವನ್ನು ಬಹುತೇಕ ಮುಗಿಸಿ ಬಿಡುಗಡೆಯಾಗಲು ತಯಾರಾಗಿವೆ.

  ಪೆಪೆ ಚಿತ್ರವೂ ಬಹುತೇಕ ರೆಡಿ

  ಪೆಪೆ ಚಿತ್ರವೂ ಬಹುತೇಕ ರೆಡಿ

  ಇನ್ನು ಪೆಪೆ ಚಿತ್ರದ ಅಪ್‌ಡೇಟ್ ಅನ್ನು ಚಿತ್ರದ ನಿರ್ದೇಶಕ ಶ್ರೀಶೈಲ್ ಎಸ್ ನಾಯರ್ ಹಂಚಿಕೊಂಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಗನ್ ಒಂದರ ಫೋಟೊವೊಂದನ್ನು ಟ್ವೀಟ್ ಮಾಡಿರುವ ಶ್ರೀಶೈಲ್ ನಾಯರ್ ಚಿತ್ರದ ಲಾಸ್ಟ್ ಶೆಡೂಲ್‌ನ ಚಿತ್ರೀಕರಣ ನಡೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ.

  English summary
  Vinay Rajkumar and Anusha Ranganath starrer Ten movie likely to hit the big screen on December 9
  Thursday, November 10, 2022, 9:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X