ಒಂದೇ ಹೀರೊಯಿನ್ ಗೆ ಸಾಹೇಬ, ಸಿದ್ಧಾರ್ಥ್ ಇಬ್ಬರು ಫಿಧಾ
Recommended Video

ಕನ್ನಡ ಸಿನಿಮಾರಂಗದ ಬಿಗ್ ಸ್ಟಾರ್ ಗಳ ಪುತ್ರರಾದ ವಿನಯ್ ರಾಜ್ ಕುಮಾರ್ ಹಾಗೂ ಮನೋರಂಜನ್ ರವಿಚಂದ್ರನ್ ಇಬ್ಬರು ಕನ್ನಡ ಚಿತ್ರರಂಗದಲ್ಲಿ ಈಗಷ್ಟೇ ಭರವಸೆ ಮೂಡಿಸುತ್ತಿರುವ ಕಲಾವಿದರು. ಕನ್ನಡ ಸಿನಿಮಾ ಪ್ರೇಕ್ಷಕರನ್ನ ರಂಜಿಸಲು ಇಬ್ಬರು ಕೂಡ ತಮ್ಮದೇ ಆದ ರೀತಿಯಲ್ಲಿ ತಯಾರಿ ಮಾಡಿಕೊಂಡಿರುವ ಇಬ್ಬರಿಗೂ ಒಂದೇ ನಾಯಕಿಯ ಜೊತೆ ಅಭಿನಯಿಸುವ ಆಸೆ ಇದೆಯಂತೆ.
ಇದೇ ಮೊದಲ ಬಾರಿಗೆ ವಿನಯ್ ರಾಜ್ ಕುಮಾರ್ ಹಾಗೂ ಮನೋರಂಜನ್ ರವಿಚಂದ್ರನ್ ಮಯೂರ ರಾಘವೇಂದ್ರ ನಡೆಸಿಕೊಡುವ 'ಸಿನಿಮಾ ಸೂತ್ರ' ಸಂದರ್ಶನದಲ್ಲಿ ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ಕನ್ನಡದ ಯಾವ ನಾಯಕಿ ಜೊತೆ ಅಭಿನಯಿಸಬೇಕು ಎನ್ನುವ ಆಸೆ ಇದೆ ಎನ್ನುವ ಪ್ರಶ್ನೆ ಕೇಳಲಾಯ್ತು. ಈ ಪ್ರಶ್ನೆಗೆ ಇಬ್ಬರ ಉತ್ತರವೂ ಒಂದೇ ಆಗಿತ್ತು.

ಮನು ಹಾಗೂ ವಿನಯ್ ಇಬ್ಬರು ಅಭಿನಯಿಸಬೇಕು ಎನ್ನುವ ಆಸೆ ಇರುವ ನಟಿ ರಮ್ಯಾ. ಹೌದು ಕನ್ನಡ ಸಿನಿಮಾರಂಗದಲ್ಲಿ ದಶಕಗಳ ಕಾಲ ನಂಬರ್ ಒನ್ ನಾಯಕಿ ಪಟ್ಟವನ್ನ ಪಡೆದುಕೊಂಡಿದ್ದ ರಮ್ಯಾ ಅವರನ್ನ ತೆರೆ ಮೇಲೆ ನೋಡಲು ಕೇವಲ ಪ್ರೇಕ್ಷಕರಿಗೆ ಮಾತ್ರವಲ್ಲದೆ ಚಿತ್ರರಂಗದ ನಾಯಕರಿಗೂ ಆಸೆ ಇದೆ ಎನ್ನುವುದು ಈಗ ಗೊತ್ತಾಗುತ್ತಿದೆ.

ರಮ್ಯಾ ಅಭಿನಯವನ್ನ ಬಿಟ್ಟು ಸಾಕಷ್ಟು ದಿನಗಳು ಕಳೆದಿವೆ. ನಾನು ಇನ್ನು ಮುಂದೆ ಬಣ್ಣ ಹಚ್ಚುವುದಿಲ್ಲ ಎಂದು ಹೇಳಿ ಆಗಿದೆ. ಆದರೆ ಕನ್ನಡ ಸಿನಿಮಾರಂಗ ಹಾಗೂ ಪ್ರೇಕ್ಷಕರ ಮಾತ್ರ ಸ್ಯಾಂಡಲ್ ಕ್ವೀನ್ ರನ್ನ ತೆರೆ ಮೇಲೆ ಕಾಣಲು ಕಾತುರರಾಗಿಯೇ ಇದ್ದಾರೆ.


Click it and Unblock the Notifications











