ರಮ್ಯಾ ಜೊತೆ ಕ್ಯಾಮರಾ ಎದುರಿಸಿದ ವಿನಯ್ ರಾಜ್‌ಕುಮಾರ್; ವೀಡಿಯೋ ವೈರಲ್

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ರಮ್ಯಾ. ಒಂದ್ಕಾಲದಲ್ಲಿ ಕನ್ನಡದ ಸ್ಟಾರ್ ನಟರ ಜೊತೆಗೆಲ್ಲಾ ನಟಿಸಿದ್ದ ಚೆಲುವೆ ಬಳಿಕ ಸೈಲೆಂಟ್ ಆಗಿಬಿಟ್ಟರು, ಪಾಲಿಟಿಕ್ಸ್ ಕಡೆ ಹೋಗಿ ಸಿನಿಮಾಗಳಿಂದ ದೂರಾಗಿದ್ದರು. ಬಳಿಕ ಮತ್ತೆ ವಾಪಸ್ ಬರುವ ಸುಳಿವು ಕೊಟ್ಟಿದ್ದರು. ಅದು ಸಾಧ್ಯವಾಗಲಿಲ್ಲ.

ಇದೀಗ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಜೊತೆ ಮೋಹಕ ತಾರೆ ರಮ್ಯಾ ಕ್ಯಾಮರಾ ಮುಂದೆ ನಿಂತಿದ್ದಾರೆ. 'ಅಭಿ' ಸಿನಿಮಾ ಮೂಲಕ ಅಣ್ಣಾವ್ರ ಬ್ಯಾನರ್‌ನಲ್ಲೇ ರಮ್ಯಾ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಹಾಗಾಗಿ ದೊಡ್ಮನೆ ಎಲ್ಲಾ ಸದಸ್ಯರ ಜೊತೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ. 'ಅಪ್ಪು' ರೀ-ರಿಲೀಸ್ ಸಮಯದಲ್ಲಿ ವಿನಯ್ ಹಾಗೂ ರಮ್ಯಾ ಒಟ್ಟಿಗೆ ಸಿನಿಮಾ ವೀಕ್ಷಿಸಿದ್ದರು.

Vinay Rajkumar and Ramya s Stunning Svasa Shoot Sets Internet Abuzz

ನಟಿ ರಮ್ಯಾ ಅವರ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಕೂಡ ಹಿಂದೆ ವಿನಯ್ ಮಿಂಚಿದ್ದರು, ವಿನಯ್ ಸಿನಿಮಾಗಳನ್ನು ನೋಡಿ ಮೆಚ್ಚಿಕೊಂಡಿದ್ದರು. ಅವಕಾಶ ಸಿಕ್ಕರೆ ವಿನಯ್ ಜೊತೆ ನಟಿಸ್ತೀನಿ ಎಂದು ಕೂಡ ಮೋಹಕ ತಾರೆ ಹೇಳಿದ್ದರು. 'ಅಭಿ' ಸಿನಿಮಾ ಸಮಯದಿಂದಲೂ ವಿನಯ್ ಅವರನ್ನು ರಮ್ಯಾ ನೋಡುತ್ತಿದ್ದಾರೆ. ಹಾಗಾಗಿ ಇಬ್ಬರ ನಡುವೆ ಆತ್ಮೀಯ ಒಡನಾಟವಿದೆ.

'ಅಪ್ಪು' ರೀ-ರಿಲೀಸ್ ವೇಳೆ ಚಿತ್ರಮಂದಿರದಲ್ಲಿ ರಮ್ಯಾ ಹಾಗೂ ವಿನಯ್ ಆಪ್ತತೆ ಗೊತ್ತಾಗಿತ್ತು. ಅಭಿಮಾನಿಗಳ ನಡುವೆ ರಮ್ಯಾ ಅವರನ್ನು ವಿನಯ್ ಬಹಳ ಕೇರ್ ಮಾಡಿದ್ದರು. ವಿನಯ್ 10-12 ವರ್ಷದ ಹುಡುಗನಾಗಿದ್ದ ಸಮಯದಿಂದಲೂ ರಮ್ಯಾ ನೋಡುತ್ತಿದ್ದಾರೆ. 'ಅಭಿ' ಹಾಗೂ 'ಆಕಾಶ್' ಸಿನಿಮಾ ಸೆಟ್‌ಗೂ ವಿನಯ್ ಹೋಗುತ್ತಿದ್ದಾರೆ. ಹಾಗಾಗಿ ಇಬ್ಬರ ನಡುವೆ ಉತ್ತಮ ಒಡನಾಟವಿದೆ. ವಿನಯ್ ನಟನೆಯ 'ಒಂದು ಸರಳ ಪ್ರೇಮಕಥೆ' ಸಿನಿಮಾ ಸೆಟ್‌ಗೂ ರಮ್ಯಾ ವಿಸಿಟ್ ಮಾಡಿದ್ದರು.

ಸದ್ಯ ರಮ್ಯಾ ಹಾಗೂ ವಿನಯ್ ಒಟ್ಟಿಗೆ ಕ್ಯಾಮರಾ ಎದುರಿಸಿದ್ದಾರೆ. ಆದರೆ ಯಾವುದೇ ಚಿತ್ರಕ್ಕಾಗಿ ಅಲ್ಲ. ಬದಲಿಗೆ ಸ್ವಾಸ ಮ್ಯಾಗಜೀನ್ ಫೋಟೊಶೂಟ್‌ಗಾಗಿ ಇಬ್ಬರೂ ಸ್ಟೈಲಿಶ್ ಅವತಾರದಲ್ಲಿ ಕ್ಯಾಮರಾ ಮುಂದೆ ನಿಂತಿದ್ದಾರೆ. ಅದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗ್ತಿದೆ. ಇಬ್ಬರೂ ಒಟ್ಟಿಗೆ ಕ್ಯಾಮರಾ ಮುಂದೆ ನಿಂತಿಲ್ಲ. ಒಟ್ಟಿಗೆ ನಡೆದಿರುವ ಫೋಟೊಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಫೋಟೊಶೂಟ್‌ನಲ್ಲಿ ಮೋಹಕ ತಾರೆಯ ಅಂದ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇವತ್ತಿಗೂ ಅದೇ ಚೆಲುವು ಅಂತ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆದಷ್ಟು ಬೇಗ ಸಿನಿಮಾದಲ್ಲಿ ನಟಿಸಿ ಎಂದು ಕೇಳುತ್ತಿದ್ದಾರೆ. ರಮ್ಯಾ ಈಗಾಗಲೇ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ನಿರ್ಮಿಸಿದ್ದರು. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ ಸಣ್ಣ ಝಲಕ್‌ನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಚಿತ್ರತಂಡದ ಜೊತೆ ಭಿನ್ನಾಭಿಪ್ರಾಯ ಮೂಡಿತ್ತು.

'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದಲ್ಲಿ ತಾವೇ ನಾಯಕಿಯಾಗಿ ನಟಿಸುವುದಾಗಿ ಹೇಳಿದ್ದರು. ಆದರೆ ಬಳಿಕ ಹೊರ ಬಂದಿದ್ದರು. ಬಳಿಕ ಸಿರಿ ರವಿಕುಮಾರ್ ಆ ಪಾತ್ರ ಮಾಡುವಂತಾಯಿತು. ಫೋಟೊಶೂಟ್‌ನಲ್ಲಿ ಕೇಸರಿ ಬಣ್ಣದ ಜೆರ್‌ಕಿನ್ ತೊಟ್ಟು ರಮ್ಯಾ ಮೋಹಕವಾಗಿ ಪೋಸ್ ಕೊಟ್ಟಿದ್ದಾರೆ. ಡೆನಿಮ್ ಹಾಗೂ ನೀಲಿ ಬಣ್ಣದ ಶರ್ಟ್‌ನಲ್ಲಿ ವಿನಯ್ ಮಿಂಚಿದ್ದಾರೆ.

ವಿನಯ್ ನಟಿಸಿದ 'ಒಂದು ಸರಳ ಪ್ರೇಮಕಥೆ' ಸಿನಿಮಾ ಕಳೆದ ವರ್ಷ ಹಿಟ್ ಆಗಿತ್ತು. ಸದ್ಯ ದುನಿಯಾ ವಿಜಯ್ ನಿರ್ದೇಶನದ 'ಸಿಟಿಲೈಟ್ಸ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಜಯ್ ಮಗಳು ಮೋನಿಷಾ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಮೇಕಿಂಗ್ ಹಂತದಲ್ಲೇ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಪೋಸ್ಟರ್‌ಗಳು ವೈರಲ್ ಆಗುತ್ತಿದೆ.

More from Filmibeat

English summary
Ramya’s Stunning Comeback Tease with Vinay Rajkumar Wins Hearts Again
Read more about: ramya vinay rajkumar sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X