For Quick Alerts
  ALLOW NOTIFICATIONS  
  For Daily Alerts

  ಸತೀಶ್ ನೀನಾಸಂ ಕೈ ಸೇರಿದ ಡಾ.ರಾಜ್ ಮೊಮ್ಮಗನ ಮದುವೆ ಪತ್ರಿಕೆ

  |
  ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮದುವೆ ಸಂಭ್ರಮ

  ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮದುವೆ ಸಂಭ್ರಮ. ಈಗಾಗಲೆ ಕ್ರೇಜಿ ಸ್ಟಾರ್ ರವಿಚಂದ್ರನ್ ಮಗಳ ಮದುವೆಯಲ್ಲಿ ಬ್ಯುಸಿಯಾಗಿದ್ರೆ, ಮತ್ತೊಂದೆಡೆ ಚಂದನವನದ ದೊಡ್ಮನೆ ಡಾ.ರಾಜ್ ಕುಟುಂಬದಲ್ಲೂ ಮದುವೆ ಸಂಭ್ರಮ ಮನೆ ಮಾಡಿದೆ. ವರನಟ ಡಾ.ರಾಜ್ ಕುಮಾರ್ ಮೊಮ್ಮೊಗ ರಾಘವೇಂದ್ರ ರಾಜ್ ಕುಮಾರ್ ಕಿರಿಯ ಪುತ್ರ ಯುವರಾಜ್ ಕುಮಾರ್ ಹೊಸಬಾಳಿಗೆ ಕಾಲಿಡಲು ತಯಾರಾಗಿದ್ದಾರೆ.

  ಈಗಾಗಲೆ ಚಿತ್ರರಂಗದ ಮತ್ತು ಬೇರೆ ಬೇರೆ ಕ್ಷೇತ್ರದ ಗಣ್ಯರಿಗೆ ಮದುವೆಯ ಮಮತೆಯ ಕರೆಯೋಲೆಯಲ್ಲಿ ಬ್ಯುಸಿಯಾಗಿದೆ ರಾಜ್ ಕುಟುಂಬ. ತಮ್ಮನ ಮದುವೆಯ ಆಮಂತ್ರಣ ಪತ್ರಿಕೆ ಹಂಚುವಲ್ಲಿ ಅಣ್ಣ ವಿನಯ್ ರಾಜ್ ಕುಮಾರ್ ನಿರತರಾಗಿದ್ದಾರೆ. ವಿನಯ್ ಇತ್ತೀಚಿಗಷ್ಟೆ ನಟ ಸತೀಶ್ ನೀನಾಸಂ ಮನೆಗೆ ತೆರಳಿ ತಮ್ಮನ ಮದುವೆಗೆ ಆಹ್ವಾನ ನೀಡಿದ್ದಾರೆ.

  ವಿನಯ್ ರಾಜ್ ಕುಮಾರ್ ಮುಂದಿನ ಸಿನಿಮಾದ ನಿರ್ದೇಶಕರು ಇವರೇವಿನಯ್ ರಾಜ್ ಕುಮಾರ್ ಮುಂದಿನ ಸಿನಿಮಾದ ನಿರ್ದೇಶಕರು ಇವರೇ

  ಸುಂದರವಾದ ಮದುವೆ ಪತ್ರಿಕೆ ಜೊತೆಗೆ ಗಿಡವನ್ನು ನೀಡುವ ಮೂಲಕ ಯುವರಾಜ್ ಕುಮಾರ್ ಮದುಗೆ ಆಂತ್ರಣ ನೀಡಿದ್ದಾರೆ ವಿನಯ್. ಸೈಲೆಂಟ್ ಆಗಿ ಮದುವೆ ಪತ್ರಿಕೆ ಹಂಚುವ ಕಾರ್ಯದಲ್ಲಿ ನಿರತವಾಗಿರುವ ರಾಜ್ ಕುಟುಂಬ ಮದುವೆ ಡೇಟ್ ಅನ್ನು ಇನ್ನು ರಿವೀಲ್ ಮಾಡಲಿಲ್ಲ.

  ಯುವರಾಜ್ ಕುಮಾರ್ ಕಳೆದ ವರ್ಷ ಜುಲೈ 5ರಂದು ಶ್ರೀದೇವಿ ಭೈರಪ್ಪ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮೈಸೂರು ಮೂಲದವರಾದ ಶ್ರೀದೇವಿ, ಯುವರಾಜ್ ಕುಮಾರ್ ಏಳು ವರ್ಷದ ಗೆಳೆಯರು. ಈ ಗೆಳೆತನ ಈಗ ಮದುವೆ ವರೆಗು ಕರೆತಂದಿದೆ. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಅದ್ಧೂರಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಗೆ ರಾಜ್ ಕುಟುಂಬ, ಸ್ನೇಹಿತರು ಮತ್ತು ಆಪ್ತರು ಶುಭಹಾರೈಸಿದರು. ಈ ವರ್ಷ ಈ ಸುಂದರ ಜೋಡಿಹಕ್ಕಿ ಹೊಸಬಾಳಿಗೆ ಕಾಲಿಡುತ್ತಿದ್ದಾರೆ.

  English summary
  Kannada actor Dr. Raj Kumar grandson Vinay Rajkumar invite to Ninasam Sathish for his brother Yuvaraj Kumar marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X