For Quick Alerts
  ALLOW NOTIFICATIONS  
  For Daily Alerts

  ವಿನಯ್ ರಾಜ್ ಕುಮಾರ್ ಮುಂದಿನ ಸಿನಿಮಾದ ನಿರ್ದೇಶಕರು ಇವರೇ

  |

  'ಅನಂತು ವರ್ಸಸ್ ನುಸ್ರುತ್' ಚಿತ್ರದ ನಂತರ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಟಅನಂತು ವರ್ಸಸ್ ನುಸ್ರುತ್ಟ ಸಿನಿಮಾ ರಿಲೀಸ್ ಆಗಿ ತಿಂಗಳುಗಳೆ ಕಳೆದಿವೆ. ಹಾಗಾಗಿ ರಾಜ್ ಮೊಮ್ಮಗ ಈಗೇನು ಮಾಡುತ್ತಿದ್ದಾರೆ ಎಂದು ಚಿತ್ರಾಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

  ಸದ್ಯ 'ಗ್ರಾಮಾಯಣ' ಚಿತ್ರದಲ್ಲಿ ವಿನಯ್ ಬ್ಯುಸಿಯಾಗಿದ್ದಾರೆ. ಆದ್ರೆ 'ಗ್ರಾಮಾಯಣ' ಕೂಡ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಆದ್ರೂ ವಿನಯ್ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಈ ಹಿಂದೆ ಕೋಟ್ ಧರಿಸಿ ವಕೀಲನಾಗಿ ಮಿಂಚಿದ್ದ ವಿನಯ್ 'ಗ್ರಾಮಾಯಣ' ಮೂಲಕ ಹಳ್ಳಿ ಹೈದನಾಗಿ ಎಂಟ್ರಿಕೊಡುತ್ತಿದ್ದಾರೆ. ಹಾಗಾಗಿ ವಿನಯ್ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.

  ಆದ್ರೀಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಅಳೆದು ತೂಗಿ ಕತೆ ಆಯ್ಕೆ ಮಾಡಿಕೊಳ್ಳುತ್ತಿರುವ ವಿನಯ್ ಈಗ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಖ್ಯಾತ ಸಂಗೀತ ನಿರ್ದೇಶಕರೊಬ್ಬರು ವಿನಯ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರಂತೆ. ಹಾಗಾದ್ರೆ ಯಾವ ಸಿನಿಮಾ? ಯಾರು ಆ ನಿರ್ದೇಶಕ? ಮುಂದೆ ಓದಿ..

  ರವಿ ಬಸ್ರೂರ್ ನಿರ್ದೇಶನದ ಚಿತ್ರದಲ್ಲಿ ವಿನಯ್

  ರವಿ ಬಸ್ರೂರ್ ನಿರ್ದೇಶನದ ಚಿತ್ರದಲ್ಲಿ ವಿನಯ್

  ವಿನಯ್ ರಾಜ್ ಕುಮಾರ್ ಮುಂದಿನ ಚಿತ್ರವನ್ನು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ನಿರ್ದೇಶನ ಮಾಡುತ್ತಿದ್ದಾರಂತೆ. ಈಗಾಗಲೆ ಚಿತ್ರದ ಕತೆ ರೆಡಿಮಾಡಿಕೊಂಡು ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿರುವ ರವಿ ಬಸ್ರೂರ್, ಸಿನಿಮಾ ಅನೌನ್ಸ್ ಮಾಡುವುದೊಂದೆ ಬಾಕಿ ಇದೆ. ಸಾಕಷ್ಟು ಕತೆಗಳನ್ನು ಕೇಳಿರುವ ವಿನಯ್ ಕೊನೆಯದಾಗಿ ರವಿ ಬಸ್ರೂರ್ ಕತೆ ಕೇಳಿ ಸಖತ್ ಇಂಪ್ರೆಸ್ ಆಗಿ, ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಲ್ಲದೆ ರಾಘವೇಂದ್ರ ರಾಜ್ ಕುಮಾರ್ ಅವರಿಗೂ ಕತೆ ತುಂಬ ಇಷ್ಟ ಆಗಿದೆಯಂತೆ

  ವಿನಯ್ ಹುಟ್ಟಹಬ್ಬಕ್ಕೆ ಸಿನಿಮಾ ಅನೌನ್ಸ್

  ವಿನಯ್ ಹುಟ್ಟಹಬ್ಬಕ್ಕೆ ಸಿನಿಮಾ ಅನೌನ್ಸ್

  ವಿನಯ್ ರಾಜ್ ಕುಮಾರ್ ಮುಂದಿನ ಸಿನಿಮಾ ಯಾವಾಗ ಸೆಟ್ಟೇರುತ್ತೆ ಅಂತ ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. ವಿನಯ್ ಮತ್ತು ರವಿ ಬಸ್ರೂರ್ ಕಾಂಬಿನೇಶನ್ ನ ಹೊಸ ಚಿತ್ರ ವಿನಯ್ ಹುಟ್ಟುಹಬ್ಬಕ್ಕೆ ಸೆಟ್ಟೇರಲಿದೆ. ಮುಂದಿನ ತಿಂಗಳು ಮೇ 7ಕ್ಕೆ ವಿನಯ್ ಹುಟ್ಟುಹಬ್ಬ. ಅವತ್ತೆ ಹೊಸ ಸಿನಿಮಾ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಟ್ರೀಟ್ ಕೊಡಲಿದ್ದಾರೆ.

  ಕೆಜಿಎಫ್ ಸಿನಿಮಾದಲ್ಲಿ ಬಸ್ರೂರು ಬ್ಯುಸಿ

  ಕೆಜಿಎಫ್ ಸಿನಿಮಾದಲ್ಲಿ ಬಸ್ರೂರು ಬ್ಯುಸಿ

  ರವಿ ಬಸ್ರೂರು ಸದ್ಯ 'ಕೆಜಿಎಫ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಾಪ್ಟರ್-1ಕ್ಕೆ ಸಂಗೀತ ಸಂಯೋಜನೆ ಮಾಡಿದ್ದ ರವಿ ಬಸ್ರೂರು ಈಗ 'ಕೆಜಿಎಫ್ ಚಾಪ್ಟರ್-2' ಸಂಗೀತ ಸಂಯೋಜನೆಯಲ್ಲಿ ನಿರತರಾಗಿದ್ದಾರೆ. ಈಗಾಗಲೆ ಕೆಲಸ ಪ್ರಾರಂಭಿಸಿರುವ ಬಸ್ರೂರ್ 'ಕೆಜಿಎಫ್' ಮುಗಿಯುತ್ತಿದಂತೆ ವಿನಯ್ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರಂತೆ.

  ರವಿ ಬಸ್ರೂರು ನಿರ್ದೇಶನದ ನಾಲ್ಕನೆ ಸಿನಿಮಾ

  ರವಿ ಬಸ್ರೂರು ನಿರ್ದೇಶನದ ನಾಲ್ಕನೆ ಸಿನಿಮಾ

  ರವಿ ಬಸ್ರೂರು ಸಂಗೀತ ನಿರ್ದೇಶನದ ಜೊತೆಗೆ ಸಿನಿಮಾ ನಿರ್ದೇಶನಕೂಡ ಮಾಡಿದ್ದಾರೆ. 2014ರಲ್ಲಿ ಮೊದಲ ಬಾರಿಗೆ 'ಗರ್ ಗರ್ ಮಂಡ್ಲ' ಸಿನಿಮಾ ನಿರ್ದೇಶನ ಮಾಡುವ ಮೂಲಕ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಕುಂದಾಪುರ ಭಾಷೆಯಲ್ಲಿ ಸಿನಿಮಾ ಮಾಡಿದ ಖ್ಯಾತಿ ರವಿ ಬಸ್ರೂರ್ ಅವರದ್ದು. ಆ ನಂತರ 'ಬ್ಲಿಂಡರ್' ಮತ್ತು 'ಕಟಕ' ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ರು. ಈಗ ವಿನಯ್ ರಾಜ್ ಕುಮಾರ್ ಸಿನಿಮಾ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ಎನ್ ಎಸ್ ರಾಜ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.

  English summary
  Kannada actor Vinay Rajkumar's next to be directed by famous music director Ravi Basrur. Official announcement, which is probably going to be vinay's birtday on may 7th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X