ಶೂಟಿಂಗ್ ಮುಗಿಸಿದ ಖುಷಿಯಲ್ಲಿ ಕಣ್ಣೀರು ಹಾಕಿದ 'ರನ್ ಆಂಟನಿ' ತಂಡ
'ದೊಡ್ಮನೆಯ' ಮತ್ತೊಂದು ಕುಡಿಯ ಸಿನಿಮಾದ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದ್ದು, ಕೊನೆ ಕ್ಷಣದಲ್ಲಿ ಇಡೀ ಚಿತ್ರತಂಡದ ಕನ್ನಾಲಿಗಳಲ್ಲಿ ಸಂತಸದ ಕಣ್ಣೀರು ಉಕ್ಕಿ ಬಂದ ಪ್ರಸಂಗ ಇತ್ತೀಚೆಗೆ ನಡೆದಿದೆ.
ಹೌದು ರಾಜ್ ಕುಟುಂಬದ ಮತ್ತೊಂದು ಕುಡಿಯಾದ ವಿನಯ್ ರಾಜ್ ಕುಮಾರ್ ಅವರ ಎರಡನೇ ಚಿತ್ರ 'ರನ್ ಆಂಟನಿ' ಚಿತ್ರದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿ ನಿರ್ದೇಶಕ ರಘು ಅವರು ಸಂತಸದ ನಿಟ್ಟುಸಿರು ಬಿಟ್ಟಿದ್ದಾರೆ.['ರನ್ ಆಂಟನಿ' ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಡಾ.ರಾಜ್ ಮೊಮ್ಮಗ.!]
ಡಿಸೆಂಬರ್ 14 ರಂದು ಸೆಟ್ಟೇರಿದ 'ರನ್ ಆಂಟನಿ' ಸಿನಿಮಾದ ಚಿತ್ರೀಕರಣ ಡಿಸೆಂಬರ್ 29ರಿಂದ ಆರಂಭವಾಗಿತ್ತು. ಮೇ ತಿಂಗಳ ಅಂತ್ಯಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.[ಚಿತ್ರಗಳು: 'ರನ್ ಆಂಟನಿ' ಸೆಟ್ ನಲ್ಲಿ ಒಂದು ರೌಂಡ್ ಹೋಗಿ ಬನ್ನಿ]

'ರನ್ ಆಂಟನಿ' ಮೂಲಕ ಚೊಚ್ಚಲ ನಿರ್ದೇಶನಕ್ಕೆ ಕೈ ಹಾಕಿರುವ ನಿರ್ದೇಶಕ ರಘು ಶಾಸ್ತ್ರಿ ಅವರು 'ನಾನು ಮುಂದೆ 100 ಸಿನಿಮಾ ಮಾಡಿದರೂ ಮೊದಲನೆಯ ಸಿನಿಮಾ ನೆನಪಿನಲ್ಲಿ ಉಳಿಯುವಂತದ್ದು. ಚಿತ್ರೀಕರಣ ಪೂರ್ಣಗೊಂಡಿದ್ದರು ಭಾವನಾತ್ಮಕವಾಗಿ ಚಿತ್ರತಂಡ ಒಟ್ಟಿಗೆ ಇದೆ'.
ಸುಮಾರು 55 ದಿನಗಳಲ್ಲಿ ಸಿನಿಮಾ ಶೂಟಿಂಗ್ ಮಾಡಿ ಮುಗಿಸುವ ಯೋಜನೆ ಹಾಕಿಕೊಂಡಿದ್ದೆವು. ಆದರೂ ಸ್ವಲ್ಪ ಕಾಲ ಮುಂದುವರೆಯಿತು. ಕೊನೆಯ ದಿನ ಎಲ್ಲರೂ ಎಮೋಷನಲ್ ಆಗಿದ್ದೆವು' ಎಂದು ನಿರ್ದೇಶಕ ರಘು ನೆನಪಿಸಿಕೊಳ್ಳುತ್ತಾರೆ.[ವಿನಯ್ ರಾಜ್ ಕುಮಾರ್ 'ರನ್ ಆಂಟನಿ' ಸ್ಪೆಷಾಲಿಟೀಸ್ ಗೊತ್ತಾ?]
ನಿರ್ದೇಶಕ ರಘು ಶಾಸ್ತ್ರಿ ಅವರೇ ಕಥೆ ಬರೆದು ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ನಟಿಯರಾದ ರುಕ್ಷಾರ್ ಮೀರ್ ಮತ್ತು ನಟಿ ಸುಶ್ಮಿತಾ ಜೋಶಿ ಅವರು ವಿನಯ್ ರಾಜ್ ಕುಮಾರ್ ಅವರ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ.[ವಿನಯ್ ರಾಜ್ 'ರನ್ ಆಂಟನಿ'ಗೆ ನಿರ್ಮಾಪಕರು ಯಾರು ಗೊತ್ತಾ?]
ಚಿತ್ರೀಕರಣ ಮುಗಿಸಿರುವ 'ರನ್ ಆಂಟನಿ' ಚಿತ್ರದ ಶೂಟಿಂಗ್ ಸ್ಟಿಲ್ಸ್ ನೋಡಲು ಕೆಳಗಿನ ಫೊಟೋ ಗ್ಯಾಲರಿ ನೋಡಿ... (ಚಿತ್ರಕೃಪೆ: ಫೇಸ್ ಬುಕ್ಕ್ ಮತ್ತು ಚಂದನ್ ಫೊಟೋಗ್ರಫಿ).


Click it and Unblock the Notifications