ಗಾಜನೂರಿನ ಗ್ರಾಮದಲ್ಲಿ ಮರುಹುಟ್ಟು ಪಡೆದ ವಿನಯ್ ರಾಜ್ ಕುಮಾರ್

By Pavithra

Recommended Video

GRAAMAAYANA : ಗ್ರಾಮಾಯಣ ಸಿನಿಮಾ ಬಗ್ಗೆ ಲೇಟೆಸ್ಟ್ ಸುದ್ದಿ..! | Filmibeat kannada

'ಸಿದ್ದಾರ್ಥ' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ನಾಯಕನಾಗಿ ಎಂಟ್ರಿಕೊಟ್ಟ ನಟ ವಿನಯ್ ರಾಜ್ ಕುಮಾರ್. ಈಗಾಗಲೇ ಎರಡು ಸಿನಿಮಾಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿರುವ ವಿನಯ್ ರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾದ ಚಿತ್ರೀಕರಣ ಶುರುವಾಗಿದೆ.

'ಸಿದ್ದಾರ್ಥ' ಹಾಗೂ 'ರನ್ ಆಂಟನಿ' ಸಿನಿಮಾ ನೋಡಿದ ಅಭಿಮಾನಿಗಳು ಏನೋ ಮಿಸ್ ಆಗುತ್ತಿದೆ ಎನ್ನುವ ಅಭಿಪ್ರಾಯವನ್ನು ಕೊಟ್ಟಿದ್ದರು. ಈ ರೀತಿಯ ಮಾತುಗಳನ್ನ ಪಾಸಿಟಿವ್ ಆಗಿ ಸ್ವೀಕರಿಸಿದ ವಿನಯ್ ರಾಜ್ ಕುಮಾರ್ ಈಗ ವಿಭಿನ್ನ ಕಥೆಗಳ ಆಯ್ಕೆ ಮಾಡಲು ನಿರ್ಧಾರ ಮಾಡಿರುವಂತಿದೆ.

ಅದಕ್ಕೆ ಮೊದಲ ಉದಾಹರಣೆ 'ಗ್ರಾಮಾಯಣ' ಸಿನಿಮಾ, 'ಗ್ರಾಮಾಯಣ' ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಮನಸ್ಸು ಮುಟ್ಟುವಂತ ಟೀಸರ್ ರಿಲೀಸ್ ಮಾಡಿರುವ ನಿರ್ದೇಶಕರು ವಿನಯ್ ರಾಜ್ ಕುಮಾರ್ ಅವರನ್ನು 6th ಸೆನ್ಸ್ ಸೀನನಾಗಿ ಪರಿಚಯ ಮಾಡುತ್ತಿದ್ದಾರೆ. ಟೀಸರ್ ನೋಡಿದ ಪ್ರತಿಯೊಬ್ಬರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹಾಗಾದರೆ ಟೀಸರ್ ನ ವಿಶೇಷತೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ವಿನಯ್ ಈಗ 6th ಸೆನ್ಸ್ ಸೀನ

ವಿನಯ್ ಈಗ 6th ಸೆನ್ಸ್ ಸೀನ

ವಿನಯ್ ರಾಜ್ ಕುಮಾರ್ ಅಭಿನಯದ ಗ್ರಾಮಾಯಣ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಸಿನಿಮಾ ಬಗ್ಗೆ ಮಾಹಿತಿ ನೀಡಲು ಮತ್ತು ಕುತೂಹಲ ಮೂಡಿಸಲು ಸಿನಿಮಾ ತಂಡ ಇತ್ತೀಚಿಗಷ್ಟೆ ಚಿತ್ರದ ಟೀಸರ್ ಬಿಡುಗಡೆ ಮಾಡಿದೆ. ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ 6th ಸೆನ್ಸ್ ಸೀನನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹಳ್ಳಿ ನಡುವಿನ ಬಾಂದವ್ಯದ ಕಥೆ

ಹಳ್ಳಿ ನಡುವಿನ ಬಾಂದವ್ಯದ ಕಥೆ

'ಗ್ರಾಮಾಯಣ' ಸಿನಿಮಾದ ಪೋಸ್ಟರ್ ಬಿಡುಗಡೆ ಆದಾಗ ಚಿತ್ರದ ಬಗ್ಗೆ ಕುತೂಹಲ ಮೂಡಿಸಿತ್ತು. ಹಳ್ಳಿ ಬಿಟ್ಟು ಬಂದ ಜನರು ಹಾಗೂ ಹಳ್ಳಿ ಬಿಟ್ಟು ಹೋದವರನ್ನ ಅಲ್ಲಿ ವಾಸವಿರುವವರು ಎಷ್ಟು ಮಿಸ್ ಮಾಡಿಕೊಳ್ಳುತ್ತಾರೆ ಎನ್ನುವುದರ ಬಗ್ಗೆ ಟೀಸರ್ ನಲ್ಲಿ ಸಣ್ಣದಾಗಿ ತಿಳಿಸಿದ್ದಾರೆ.

ವಿನಯ್ ಅವತಾರಕ್ಕೆ ಮೆಚ್ಚುಗೆ

ವಿನಯ್ ಅವತಾರಕ್ಕೆ ಮೆಚ್ಚುಗೆ

ವಿನಯ್ ರಾಜ್ ಕುಮಾರ್ ಕಂಪ್ಲೀಟ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಸೂಚನೆ 'ಗ್ರಾಮಾಯಣ' ಟೀಸರ್ ನಲ್ಲಿ ಸಿಕ್ಕಿದೆ. ಈ ಹಿಂದಿನ ಸಿನಿಮಾ ನೋಡಿದ ಅಭಿಮಾನಿಗಳ ಅಭಿಪ್ರಾಯದಂತೆ ವಿನಯ್ ರಾಜ್ ಕುಮಾರ್ ಈ ಬಾರಿ ಪಕ್ಕಾ ಲೋಕಲ್ ಸ್ಟೈಲ್ ನಲ್ಲಿ ಎಂಟ್ರಿಕೊಡಲಿದ್ದಾರೆ.

ಸಿನಿಮಾ ಬಗ್ಗೆ ಮಾಹಿತಿ

ಸಿನಿಮಾ ಬಗ್ಗೆ ಮಾಹಿತಿ

'ಗ್ರಾಮಾಯಣ' ಸಿನಿಮಾವನ್ನು ನವ ನಿರ್ದೇಶಕ ದೇವನೂರು ಚಂದ್ರು ಡೈರೆಕ್ಟ್ ಮಾಡುತ್ತಿದ್ದಾರೆ. ವಿನಯ್ ನಾಯಕನಾದರೆ ಅಮೃತಾ ಅಯ್ಯರ್ ಸಿನಿಮಾಗೆ ನಾಯಕಿ. ಪೂರ್ಣಚಂದ್ರ ತೇಜಸ್ವಿ ಸಂಗೀತ, ಅಭಿಷೇಕ್ ಜಿ ಕಾಸರಗೋಡು ಕ್ಯಾಮೆರಾ ವರ್ಕ್ ಟೀಸರ್ ನಲ್ಲಿ ಹೈಲೆಟ್. ಇನ್ನು ಚಿತ್ರವನ್ನು ಎನ್, ಎಲ್, ಎನ್ ಮೂರ್ತಿ ನಿರ್ಮಾಣ ಮಾಡುತ್ತಿದ್ದಾರೆ.

More from Filmibeat

English summary
Kannada actor Vinay Raj Kumar' starrer 'Gramayana' movie teaser release. vinay rajkumar is appearing in Mass Look in the film. Devanur Chandru is directing the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X