Raghanna: 'ಒಂದು ಸರಳ ಪ್ರೇಮಕಥೆ'ಯಲ್ಲಿ ರಾಘಣ್ಣ ಆಸೆ ಈಡೇರಿತು

ತಮ್ಮ ವಿಭಿನ್ನ ಸಿನಿಮಾಗಳಿಂದ ನಿರ್ದೇಶಕ ಸಿಂಪಲ್ ಸುನಿ ಗಮನ ಸೆಳೆಯುತ್ತಾ ಬರ್ತಿದ್ದಾರೆ. 'ಅವತಾರ್ ಪುರುಷ' ಬಳಿಕ ಸುನಿ 'ಗತವೈಭವ' ಸಿನಿಮಾ ಕೈಗೆತ್ತಿಕೊಂಡಿದ್ದರು. ಬಳಿಕ ಸದ್ದಿಲ್ಲದೇ 'ಒಂದು ಸರಳ ಪ್ರೇಮಕಥೆ' ಎನ್ನುವ ಸಿನಿಮಾ ಆರಂಭಿಸಿದ್ದರು. ವಿನಯ್ ರಾಜ್‌ಕುಮಾರ್ ನಟನೆಯ ಈ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ.

ಮೈಸೂರಿನಲ್ಲಿ ಕೊನೆಯ ಹಂತದ ಚಿತ್ರೀಕರಣ ಮುಗಿಸಿ ಚಿತ್ರತಂಡ ಕುಂಬಳಕಾಯಿ ಹೊಡೆದಿದೆ. ವಿಶೇಷ ಅಂದರೆ ವಿನಯ್ ಸಿನಿಮಾದಲ್ಲಿ ಅಪ್ಪ ರಾಘಣ್ಣ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರೀಕರಣ ಮುಗಿಸಿ ಮಾಧ್ಯಮದವರೊಂದಿಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನಿರ್ದೇಶಕ ಸುನಿ ಮಾತನಾಡಿ, ಟೈಟಲ್ ಹೇಳುವಂತೆ ಇದೊಂದು ಸರಳ ಪ್ರೇಮಕಥೆ. ಸಂಗೀತ ನಿರ್ದೇಶಕನ ಪ್ರೇಮಕಥೆಯಾಗಿರುವುದರಿಂದ ಮ್ಯೂಸಿಕಲ್ ಜರ್ನಿ ಎಂದಿದ್ದಾರೆ.

ondu-sarala-prema-kathe-shooting-wrapped

"ನಮ್ಮ ಆಲ್ಬಂ ತೆಗೆದುಕೊಂಡು ಹಾಕಿಕೊಂಡರೆ ಮೈಸೂರಿನಿಂದ ಬೆಂಗಳೂರು ತಲುಪುತ್ತೀರಾ. ಸಿನಿಮಾದಲ್ಲಿ ಒಟ್ಟು 11 ಸಾಂಗ್‌ಗಳಿವೆ. ಎಲ್ಲಾ ಪ್ರಕಾರದ ಸಂಗೀತ ಹಾಡಿನಲ್ಲಿದೆ. ಖುಷಿ ವಿಷಯ ಏನಂದರೆ ಮೊದಲ ದಿನ ವಿನಯ್ ಸರ್ ಚಿತ್ರೀಕರಣ ಮಾಡಿದೆ. ಕೊನೆಯ ದಿನ ರಾಘಣ್ಣ ಅವರು ಚಿತ್ರೀಕರಣ ಮಾಡಿದ್ದೇನೆ. ದೊಡ್ಮನೆ ಕುಟುಂಬದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ಒಟ್ಟು 83 ದಿನ ಶೂಟ್ ನಡೆಸಿದ್ದೇವೆ. ಮುಂಬೈ, ರಾಜಸ್ತಾನ, ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ಮಾಡಿದ್ದೇನೆ ಎಂದು ಸುನಿ ಮಾಹಿತಿ ನೀಡಿದರು.

'ಒಂದು ಸರಳ ಪ್ರೇಮಕಥೆ' ಚಿತ್ರದಲ್ಲಿ ನಟಿಸಿದ ಅನುಭವ ತುಂಬಾ ಚೆನ್ನಾಗಿತ್ತು. ಶೂಟಿಂಗ್‌ಗೆ ಯಾವುದೇ ತೊಂದರೆ ಆಗದಂತೆ ನಿರ್ಮಾಪಕರಾದ ರಮೇಶ್ ಅವರು ಮಾಡಿಕೊಟ್ಟರು. ಸುನಿ ಅವರ ಜೊತೆ ಕೆಲಸ ಮಾಡಲು ಖುಷಿ ಆಯಿತು. ಸುನಿ ಅವರಂತೂ ಒಬ್ಬ ಕಲಾವಿದನಿಗೆ ನಟಿಸಲು ತುಂಬ ಕಂಪರ್ಟ್ ಫೀಲ್ ಕೊಡ್ತಾರೆ. ಆಕ್ಟಿಂಗ್ ಮಾಡಲು ಟ್ರೈ ಮಾಡುವುದು ಬೇಡ. ಅದು ತಾನಾಗಿಯೇ ಬರುತ್ತದೆ. ಇಡೀ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಎಲ್ಲಾ ಕಲಾವಿದರ ಅದ್ಭುತವಾಗಿ ನಟಿಸಿದ್ದಾರೆ ಎಂದು ವಿನಯ್ ರಾಜ್‌ಕುಮಾರ್ ಹೇಳಿದರು.

ondu-sarala-prema-kathe-shooting-wrapped

ರಾಘಣ್ಣ ಮಾತನಾಡಿ, "ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ' ಸಿನಿಮಾ ನೋಡಿದ ಮೇಲೆ ಸುನಿ ನಿರ್ದೇಶನದ ಸಿನಿಮಾದಲ್ಲಿ ನಟಿಸಬೇಕು ಎನಿಸಿತ್ತು. ನನ್ನ ಮಗ ನಟಿಸುತ್ತಿದ್ದೇನೆ ಎಂದಾಗ ದೊಡ್ಡ ವಿಷಯ ಎನಿಸಿತು. ನನಗೆ ಟೈಟಲ್ ತುಂಬಾ ಇಷ್ಟವಾಯಿತು. ಸಂಗೀತ ಅಂದರೆ ಏಳು ಸ್ವರಗಳು ಇರುತ್ತವೆ. ನನ್ನ ಒಂದು ಸ್ವರವಾಗಿ ಸೇರಿಸಿಕೊಂಡಿದ್ದಾರೆ. ಅದು ನನಗೆ ಸಂತೋಷ ಕೊಡುತ್ತದೆ" ಎಂದರು.

ಸಂಗೀತ ನಿರ್ದೇಶಕ ವೀರ್ ಸಮರ್ಥ್ ಮಾತನಾಡಿ, ನನ್ನ ಎರಡನೇ ಸಿನಿಮಾದಲ್ಲಿ 10 ಹಾಡುಗಳಿದ್ದವು. ತುಂಬ ದೊಡ್ಡ ಹೆಸರು ತಂದುಕೊಟ್ಟಿತ್ತು. ಆ ನಂತರ 'ದೇವ್ರೇ' ಅಂತಾ ಮಾಡಿದ್ದೆ. ಅದು ಒಳ್ಳೆ ಹೆಸರು ತಂದುಕೊಟ್ಟಿತ್ತು. ಈಗ ಈ ಸಿನಿಮಾ. ಆ ಎರಡು ಸಿನಿಮಾಗಳನ್ನು ಈ ಚಿತ್ರ ಮೀರಿಸುತ್ತದೆ ಅನಿಸುತ್ತಿದೆ. ಯಾಕಂದರೆ ಈ ಸಿನಿಮಾದಲ್ಲಿ 11 ಹಾಡುಗಳಿವೆ. ಸಿನಿಮಾದ ನಡುವೆ ಚಿಕ್ಕ ಚಿಕ್ಕ ಬೀಟ್ ಬರುತ್ತದೆ. 2 ಗಂಟೆ 20 ನಿಮಿಷ ಸಿನಿಮಾದಲ್ಲಿ ಮ್ಯೂಸಿಕ್ ಜೊತೆ ಕನೆಕ್ಟ್ ಆಗುತ್ತದೆ ಎಂದರು.

ಅಂದಹಾಗೆ 'ಒಂದು ಸರಳ ಪ್ರೇಮಕಥೆ' ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಜೊತೆ ಸ್ವಾತಿಷ್ಠ ಕೃಷ್ಣನ್ ಹಾಗೂ 'ರಾಧಾ ಕೃಷ್ಣ' ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ನಾಯಕಿಯರಾಗಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ತಾರಾಬಳಗದಲ್ಲಿದ್ದಾರೆ. ಆದಿ ಸಂಕಲನ, ಕಾರ್ತಿಕ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಮುಂದಿನ ವರ್ಷ ಮಾರ್ಚ್ ವೇಳೆಗೆ 'ಒಂದು ಸರಳ ಪ್ರೇಮಕಥೆ' ತೆರೆಮೇಲೆ ಅನಾವರಣ ಆಗಲಿದೆ.

More from Filmibeat

English summary
Vinay Rajkumar, Simple Suni's ondu sarala prema kathe Shooting Completed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X