ಹೊಸ ವರ್ಷದ ಪ್ರಯುಕ್ತ ವಿನಯ್ ರಾಜ್‌ಕುಮಾರ್ 'ಪೆಪೆ' ಚಿತ್ರದ ರಗಡ್ ಪೋಸ್ಟರ್ ರಿಲೀಸ್

Vinay Rajkumar starrer Pepe team released a special poster for new year

2022ರಂತಹ ಗೋಲ್ಡನ್ ಇಯರ್ ಕಂಡ ಕನ್ನಡ ಚಲನಚಿತ್ರರಂಗ ವರ್ಷಪೂರ್ತಿ ಭರ್ಜರಿ ಯಶಸ್ವಿ ಚಿತ್ರಗಳನ್ನು ನೀಡಿ ಅಂತಿಮ ತಿಂಗಳಿನಲ್ಲಿ ವೇದ ಹಾಗೂ ಪದವಿ ಪೂರ್ವ ಚಿತ್ರಗಳ ಗೆಲುವಿನ ಮೂಲಕ ವರ್ಷಕ್ಕೆ ತೆರೆ ಎಳೆದಿದೆ. ಇನ್ನು ಈ ವರ್ಷದಲ್ಲಿ ಹಲವು ಸ್ಟಾರ್ ನಟರು ಹಾಗೂ ಯುವ ತಂಡಗಳ ಚಿತ್ರ ಸದ್ದು ಮಾಡಿದ್ದು, ವಿನಯ್ ರಾಜ್‌ಕುಮಾರ್ ನಟನೆಯ ಚಿತ್ರ ಸೋಲನ್ನು ಕಂಡಿತ್ತು.

ಹೌದು, ವಿನಯ್ ರಾಜ್‌ಕುಮಾರ್ ನಟನೆಯ 'ಟೆನ್' ಚಿತ್ರ ಹೀನಾಯವಾಗಿ ಸೋಲುಂಡಿತು. ಇನ್ನು ಈ ಚಿತ್ರದ ಬಳಿಕ ತಯಾರಾಗುತ್ತಿರುವ ವಿನಯ್ ರಾಜ್‌ಕುಮಾರ್ ನಟನೆಯ 'ಪೆಪೆ' ಚಿತ್ರದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಿದೆ. ಈ ಹಿಂದೆ ಟೀಸರ್ ಮೂಲಕ ಸದ್ದು ಮಾಡಿದ್ದ ಈ ಚಿತ್ರ ಒಂದೊಳ್ಳೆ ಕಂಟೆಂಟ್ ಹೊಂದಿರಲಿದೆ ಎಂದು ಟೀಸರ್ ವೀಕ್ಷಿಸಿದ್ದ ಸಿನಿ ರಸಿಕರು ವ್ಯಕ್ತಪಡಿಸಿದ್ದರು.

ಟೀಸರ್ ಬಳಿಕ ಚಿತ್ರದ ಕುರಿತು ಹೆಚ್ಚೇನೂ ಮಾಹಿತಿ ಹಂಚಿಕೊಳ್ಳದಿದ್ದ ಚಿತ್ರತಂಡ ನವೆಂಬರ್ ತಿಂಗಳಿನಲ್ಲಿ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದಿತ್ತು. ಈ ಬಳಿಕ ಚಿತ್ರದ ಟ್ರೈಲರ್ ಯಾವಾಗ ಬಿಡುಗಡೆಯಾಗಬಹುದು ಹಾಗೂ ಚಿತ್ರ ಮತ್ಯಾವ ಅಪ್‌ಡೇಟ್ ನೀಡಬಹುದು ಎಂಬ ಪ್ರಶ್ನೆ ಸಿನಿ ರಸಿಕರಲ್ಲಿ ಮೂಡಿತ್ತು. ಆದರೆ ಇದೀಗ ಚಿತ್ರತಂಡ ಚಿತ್ರದ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ.

ಇಂದು ( ಜನವರಿ 1 ) ಹೊಸ ವರ್ಷದ ಪ್ರಯುಕ್ತ ಪೆಪೆ ಚಿತ್ರತಂಡ ಹೊಸ ವರ್ಷಕ್ಕೆ ಶುಭಾಶಯ ಕೋರಿ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಿದೆ. ಈ ಪೋಸ್ಟರ್‌ನಲ್ಲಿ ವಿನಯ್ ರಾಜ್‌ಕುಮಾರ್ ಸಿಕ್ಕಾಪಟ್ಟೆ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ನಿರೀಕ್ಷೆ ಹಾಗೂ ಕುತೂಹಲ ಮೂಡಿಸಿದೆ. ಇನ್ನು ಈ ಚಿತ್ರಕ್ಕೆ ಶ್ರೀಲೇಶ್ ಎಸ್ ನಾಯರ್ ನಿರ್ದೇಶನವಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿದ್ದಾರೆ ಹಾಗೂ ಉದಯ ಶಂಕರ್ ಎಸ್ ಮತ್ತು ಬಿ ಎಮ್ ಶ್ರೀರಾಮ್ ಬಂಡವಾಳ ಹೂಡಿದ್ದಾರೆ.

English summary
Vinay Rajkumar starrer Pepe team released a special poster for new year
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X