For Quick Alerts
  ALLOW NOTIFICATIONS  
  For Daily Alerts

  ಅರೆ ವಾಹ್! ಜಾನ್ ಜೊತೆ 3G ಮೆಗಾ ಪವರ್ ಸ್ಟಾರ್

  By Harshitha
  |

  ಅಣ್ಣಾವ್ರ ಮೊಮ್ಮಗ ವಿನಯ್ ರಾಜ್ ಕುಮಾರ್ ಅಭಿನಯಿಸಲಿರುವ ಎರಡನೇ ಚಿತ್ರ 'R The King' ಅನೌನ್ಸ್ ಆಗಿದೆ. ಸ್ಕ್ರಿಪ್ಟ್ ತಯಾರಿಯಲ್ಲಿ 'ಜೋಗಿ' ಪ್ರೇಮ್ ತೊಡಗಿದ್ದರೆ, ನಟನಾ ಕೌಶಲ್ಯದ ತಯಾರಿಯಲ್ಲಿ '3G ಮೆಗಾ ಪವರ್ ಸ್ಟಾರ್' ವಿನಯ್ ರಾಜ್ ಕುಮಾರ್ ಬಿಜಿಯಿದ್ದಾರೆ.

  ಬಾಲಿವುಡ್ ನಟ ಅನುಪಮ್ ಖೇರ್ ನಡೆಸುತ್ತಿರುವ 'ಆಕ್ಟರ್ ಪ್ರಿಪೇರ್ಸ್' ಆಕ್ಟಿಂಗ್ ಸ್ಕೂಲ್ ನಲ್ಲಿ ವಿನಯ್ ತರಬೇತಿ ಪಡೆಯುತ್ತಿದ್ದಾರೆ. ಜೊತೆಗೆ ಬಾಡಿ ಬಿಲ್ಡಿಂಗ್ ನಲ್ಲೂ ಆಸಕ್ತಿ ತೋರಿರುವ ವಿನಯ್ ರಾಜ್ ಕುಮಾರ್, ಹಗಲು ರಾತ್ರಿ ಅನ್ನದೆ ಪ್ರತಿ ದಿನ ಜಿಮ್ ನಲ್ಲಿ ಬೆವರು ಹರಿಸುತ್ತಿದ್ದಾರೆ. [ವಿನಯ್ ಬರ್ಥ್ ಡೇ ಸ್ಪೆಷಲ್, ಆರ್ ದಿ ಕಿಂಗ್ ಟ್ರೈಲರ್]

  ಅದರ ಎಕ್ಸ್ ಕ್ಲೂಸಿವ್ ಮಾಹಿತಿ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭಿಸಿದೆ. ಮುಂಬೈನ ಪ್ರಖ್ಯಾತ ಜಿಮ್ ನಲ್ಲಿ ಬಾಡಿ ಬಿಲ್ಡ್ ಮಾಡುತ್ತಿರುವ ರಾಜವಂಶದ ಕುಡಿ, ವರ್ಕ್ ಔಟ್ ಮಾಡುತ್ತಿರುವುದು ಯಾರ ಜೊತೆ ಗೊತ್ತಾ? ಬಾಲಿವುಡ್ ನ ಹ್ಯಾಂಡ್ಸಮ್ ಹಂಕ್ ಜಾನ್ ಅಬ್ರಹಾಂ ಜೊತೆ..! ನೀವು ನಂಬಲ್ಲಾ ಅಂದ್ರೆ, ಒಮ್ಮೆ ಈ ಫೋಟೋನ ನೋಡಿ....

  ಹೌದು, ಜಿಮ್ ನಲ್ಲಿ ವರ್ಕ್ ಔಟ್ ಮಾಡುವ ಮಧ್ಯೆ ಸಿಕ್ಕ ಬ್ರೇಕ್ ನಲ್ಲಿ ವಿನಯ್ ರಾಜ್ ಕುಮಾರ್, ಜಾನ್ ಅಬ್ರಹಾಂ ಮತ್ತು ಟ್ರೈನರ್ ಜೊತೆ ಕ್ಲಿಕ್ ಮಾಡಿರುವ ಸೆಲ್ಫಿ ಇದು.

  ಪ್ರತಿದಿನ ಜಾನ್ ಅಬ್ರಹಾಂ ಮತ್ತು ವಿನಯ್ ರಾಜ್ ಕುಮಾರ್ ಒಟ್ಟಿಗೆ ದೇಹವನ್ನ ದಂಡಿಸುತ್ತಿದ್ದಾರೆ. ಸಾಲದಕ್ಕೆ ಆಗಾಗ ಕರೀನಾ ಕಪೂರ್ ಕೂಡ ವಿಸಿಟ್ ಹಾಕುತ್ತಿದ್ದಾರಂತೆ. ಹೀಗಾಗಿ ಕರೀನಾ ಕಪೂರ್ ಮತ್ತು ಜಾನ್ ಅಬ್ರಹಾಂಗೆ ವಿನಯ್ ರಾಜ್ ಕುಮಾರ್ ಬೆಸ್ಟ್ ಫ್ರೆಂಡ್ ಆಗಿದ್ದಾರೆ. [ಅಲ್ಲು ಅರ್ಜುನ್ ಜೊತೆ ವಿನಯ್ ಗ್ರ್ಯಾಂಡ್ ಪಾರ್ಟಿ]

  ವಿನಯ್, ಡಾ.ರಾಜ್ ಕುಮಾರ್ ಕುಟುಂಬದ ಕುಡಿ ಅಂತ ಗೊತ್ತಾದ ಮೇಲಂತೂ ಬಾಲಿವುಡ್ ತಾರೆಯರು ವಿನಯ್ ರನ್ನ ಎಕ್ಸ್ ಟ್ರಾ ಕೇರ್ ನಿಂದ ನೋಡಿಕೊಳ್ಳುತ್ತಿದ್ದಾರಂತೆ. ಅದ್ರಲ್ಲೂ ಜಾನ್ ಅಬ್ರಹಾಂ ಜೊತೆ ಆಪ್ತರಾಗಿರುವ ವಿನಯ್, ಜಾನ್ ನೆಲೆಸಿರುವ ಅಪಾರ್ಟ್ಮೆಂಟ್ ನಲ್ಲೇ ವಾಸವಿದ್ದಾರೆ. (ಫಿಲ್ಮಿಬೀಟ್ ಕನ್ನಡ ಎಕ್ಸ್ ಕ್ಲೂಸಿವ್)

  English summary
  Looks like Kannada Actor Vinay Rajkumar has become best buddy to Bollywood Actor John Abraham and Bollywood Actress Kareena Kapoor. Vinay Rajkumar, John Abraham and Kareena Kapoor works out together in a famous gym in Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X