ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ ವಿನಯ್ ರಾಜ್ ಕುಮಾರ್
Recommended Video

ಮುಗೀತು ವಿನಯ್ ರಾಜ್‌ಕುಮಾರ್ ಸಿನಿಮಾ ಶೂಟಿಂಗ್..! | Filmibeat Kannada
'ಅನಂತು ವರ್ಸಸ್ ನುಸ್ರತ್' ವಿನಯ್ ರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾ. ಅದ್ದೂರಿಯಾಗಿ ಮುಹೂರ್ತ ಮಾಡಿ ಸದ್ದಿಲ್ಲದೆ ಚಿತ್ರೀಕರಣ ಆರಂಭ ಮಾಡಿದ್ದ ಸಿನಿಮಾತಂಡ ಹತ್ತು ತಿಂಗಳು ಚಿತ್ರೀಕರಣ ಮಾಡಿ ಮುಗಿಸಿದೆ.
ಸುಧೀರ್ ಶಾನಭಾಗ್ ನಿರ್ದೇಶನದಲ್ಲಿ 'ಅನಂತು ವರ್ಸಸ್ ನುಸ್ರತ್' ಸಿನಿಮಾದಲ್ಲಿ ವಿನಯ್ ರಾಜ್‍ಕುಮಾರ್ ಇದೇ ಮೊದಲ ಬಾರಿಗೆ ವಕೀಲರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿನಯ್ ರಾಜ್‍ಕುಮಾರ್ ಗೆ ಜೊತೆಯಾಗಿ ಲತಾ ಹೆಗಡೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಪರಿಚಿತರಾಗಿರುವ ನಟಿ ನಯನ ಕೂಡ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕಾಗಿ ಅದ್ಬುತವಾದ ಕೋರ್ಟ್ ಸೆಟ್ ಹಾಕಲಾಗಿತ್ತು.

'ಅನಂತು ವರ್ಸಸ್ ನುಸ್ರತ್' ಚಿತ್ರಕ್ಕೆ ಸುನಾದ್ ಗೌತಮ್ ಸಂಗೀತ ಸಂಯೋಜಿಸುತ್ತಿದ್ದು ಅಭಿಶೇಕ್ ಕಾಸರಗೋಡು ಅವರ ಛಾಯಾಗ್ರಹಣವಿದೆ. ಮಾಣಿಕ್ಯ ಪ್ರೊಡಕ್ಷನ್ಸ್ ನಲ್ಲಿ ಸಿನಿಮಾ ನಿರ್ಮಾಣ ಆಗಿದ್ದು ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿ ಬ್ಯುಸಿ ಆಗಿದೆ.
English summary
Actor Vinay Rajkumar's 'Ananth V/s Nusrath' film shooting complete. Sudhir Shanabhag 'is directed 'Ananth V/s Nusrath' movie.


Click it and Unblock the Notifications